ಬಜೆಟ್ ಹಿನ್ನೆಲೆ 'ಹಲ್ವಾ' ಸಮಾರಂಭದಲ್ಲಿ ನಿರ್ಮಲಾ ಸೀತರಾಮನ್ ಭಾಗಿ! 
ಕೇಂದ್ರ ಬಜೆಟ್

ಬಜೆಟ್ ಹಿನ್ನೆಲೆ 'ಹಲ್ವಾ' ಸಮಾರಂಭದಲ್ಲಿ ನಿರ್ಮಲಾ ಸೀತರಾಮನ್ ಭಾಗಿ!

ಹಲ್ವಾ ಕಾರ್ಯಕ್ರಮ ಮುಗಿದ ನಂತರ ಬಜೆಟ್ ಪ್ರತಿಗಳ ಮುದ್ರಣದ ಜವಾಬ್ದಾರಿಯನ್ನು ಸಚಿವಾಲಯದ ಅಧಿಕಾರಿಗಳಿಗೆ ವಹಿಸಲಾಗುತ್ತದೆ.

ನವದೆಹಲಿ: 2019-20 ನೇ ಸಾಲಿನ ಕೇಂದ್ರ ಬಜೆಟ್ ಗೆ  ಸಂಬಂಧಿಸಿದ ದಾಖಲೆಗಳ ಮುದ್ರಣ ಆರಂಭದ ಶುಭ  ಸಂಕೇತವಾಗಿ  ಸಂಪ್ರದಾಯಿಕ  “ಹಲ್ವಾ ತಯಾರಿಸುವ”  ಸಮಾರಂಭದಲ್ಲಿ  ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್  ಪಾಲ್ಗೊಂಡಿದ್ದರು
ಹಣಕಾಸು ಖಾತೆ ರಾಜ್ಯಸಚಿವ  ಅನುರಾಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಸುಭಾಷ್  ಚಂದ್ರ ಗರ್ಗ್, ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್, ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್  ಪಾಂಡೆ ಹಾಗೂ ವೆಚ್ಚ ಕಾರ್ಯದರ್ಶಿ ಜಿ.ಸಿ. ಮರ್ಮು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಪ್ರದಾಯದಂತೆ  ಬೃಹತ್ ಕಡಾಯಿಯಲ್ಲಿ ಹಲ್ವಾ ಸಿದ್ಧಪಡಿಸಿ, ನಂತರ ಹಣಕಾಸು ಸಚಿವಾಲಯದ ಅಧಿಕಾರಿಗಳಿಗೆ  ವಿತರಿಸಲಾಗುತ್ತದೆ. 
ಮುಂಬರಲಿರುವ ಕೇಂದ್ರ ಬಜೆಟ್  ಪ್ರತಿಗಳ ಮುದ್ರಣ ಪ್ರಕ್ರಿಯೆ ಆರಂಭದ ಸಂಕೇತ ಇದಾಗಿದೆ. ಹಣಕಾಸು ಸಚಿವೆ  ನಿರ್ಮಲಾ ಸೀತರಾಮನ್  ಜುಲೈ 5 ರಂದು  ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವೆಯಾಗಿ  ನಿರ್ಮಲಾ ಅವರು ಮೊದಲ  ಬಜೆಟ್ ಮಂಡಿಸಲಿದ್ದಾರೆ.
ಹಲ್ವಾ ಕಾರ್ಯಕ್ರಮ ಮುಗಿದ ನಂತರ  ಬಜೆಟ್  ಪ್ರತಿಗಳ ಮುದ್ರಣದ ಜವಾಬ್ದಾರಿಯನ್ನು  ಸಚಿವಾಲಯದ ಅಧಿಕಾರಿಗಳಿಗೆ ವಹಿಸಲಾಗುತ್ತದೆ.  ನಾರ್ತ್ ಬ್ಲಾಕ್  ನೆಲ ಮಹಡಿ ಕಟ್ಟಡವನ್ನು ಬಂದ್ ಮಾಡಿ ಯಾರೂ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತದೆ. 
ಬಜೆಟ್ ಮಂಡನೆಯಾಗುವವರೆಗೆ ಬಜೆಟ್ ಪ್ರತಿ ಮುದ್ರಿಸುವವರು, ಬಜೆಟ್ ತಯಾರಿಸುವ ಸರ್ಕಾರಿ ಸಿಬ್ಬಂದಿಗಳ ಮೊಬೈಲ್, ಲ್ಯಾಂಡ್ ಫೋನ್ ಸ್ಥಗಿತಗೊಳಿಸಲಾಗಿರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT