ಕೇಂದ್ರ ಬಜೆಟ್

ಸಾಂಪ್ರದಾಯಿಕ ಹಲ್ವಾ ತಯಾರಿಸಿ 2020-21ನೇ ಸಾಲಿನ ಬಜೆಟ್ ಪ್ರತಿ ಮುದ್ರಣಕ್ಕೆ ವಿತ್ತ ಸಚಿವೆ ಚಾಲನೆ

Manjula VN

ನವದೆಹಲಿ: 2020-21ನೇ ಸಾಲಿನ ಬಜೆಟ್ ಪ್ರತಿಗಳನ್ನು ತಯಾರಿಸುವ ಪ್ರಕ್ರಿಯೆಗೆ ಸೋಮವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಾಲನೆ ನೀಡಿದ್ದಾರೆ. 

ರಾಜ್ಯ ಖಾತೆ ಸಚಿವ ಅನುರಾಗ್ ಠಾಗೂರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಸಾಂಪ್ರದಾಯಿಕ ಹಲ್ವಾ ತಯಾರಿಸಿ ಬಜೆಟ್ ಪ್ರತಿ ಮುದ್ರಣಕ್ಕೆ ಚಾಲನೆ ನೀಡಿದ್ದಾರೆ. 

ಹಣಕಾಸು ಸಚಿವಾಲಯದ ಎಲ್ಲಾ ಸಿಬ್ಬಂದಿಗೆ ಈ ಸಿಹಿಯನ್ನು ಹಂಚಿದ ಬಳಿಕ, ನಾರ್ತ್ ಬ್ಲಾಕ್ ನಲ್ಲಿರುವ ಬಜೆಟ್ ಪ್ರಿಂಟಿಂಗ್ ಪ್ರೆಸ್'ನ ಸಿಬ್ಬಂದಿಗಳ ಲಾಕ್ ಇನ್ ಪ್ರಕ್ರಿಯೆ ನಡೆಯಿತು. ಫೆ.1ರಂದು ಬಜೆಟ್ ಮಂಡನೆಯಾಗುವವರೆಗೂ ಸಿಬ್ಬಂದಿ ಅಲ್ಲಿಯೇ ಉಳಿಯಲಿದ್ದು, ಸ್ನೇಹಿತರು, ಕುಟುಂಬಸ್ಥರ ಭೇಟಿಗೂ ಅವಕಾಶವಿರುವುದಿಲ್ಲ. ಸಿಬ್ಬಂದಿಗಳನ್ನು ಮೊಬೈಲ್ ಅಥವಾ ಇಮೇಲ್ ಮುಖಾಂತರ ಕೂಡ ಸಂಪರ್ಕಿಸುವಂತಿಲ್ಲ. 

ಬಜೆಟ್ ಪ್ರತಿಗಳು 1950ರವರೆಗೆ ರಾಷ್ಟ್ರಪತಿ ಭವನದಲ್ಲಿ ಮುದ್ರಣಗೊಳ್ಳುತ್ತಿದ್ದವು. ಅದೇ ವರ್ಷ ಪ್ರತಿಗಳು ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಉತ್ತರ ಬ್ಲಾಕ್'ಗೆ ಮುದ್ರಣಕಾರ್ಯ ಸ್ಥಳಾಂತರಗೊಂಡಿತ್ತು. ಅಂದಿನಿಂದಲೂ ಮುದ್ರಣ ಅಲ್ಲಿಯೇ ನಡೆಯುತ್ತಿದೆ. ೃ

SCROLL FOR NEXT