ಕೇಂದ್ರ ಬಜೆಟ್

ಈ ಬಾರಿಯ ಬಜೆಟ್ ನಲ್ಲಿ 'ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆಗೆ ಏನೂ ಅನುದಾನ ಇಲ್ಲ!

Srinivas Rao BV

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ, 2015 ರಲ್ಲಿ ಜಾರಿಗೆ ಬಂದಿದ್ದ 'ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆಗೆ ಈ ಬಾರಿಯ ಬಜೆಟ್ ನಲ್ಲಿ ಏನೂ ಅನುದಾನವನ್ನು ನೀಡಲಾಗಿಲ್ಲ.

2021-22 ರ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24,435 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ ಕಳೆದ ವರ್ಷ ಈ ಮೊತ್ತ 30,001 ಕೋಟಿ ರೂಪಾಯಿಗಳಿಗೆ ನಿಗದಿಯಾಗಿತ್ತು. ಆದರೆ ನಂತರ ಅದನ್ನು 21,008 ಕೋಟಿಗಳಿಗೆ ಇಳಿಕೆ ಮಾಡಲಾಗಿತ್ತು. 

ಈ ಬಾರಿ ಇಲಾಖೆಗೆ ನೀಡಲಾಗಿರುವ 24,435 ಕೋಟಿ ರೂಪಾಯಿಗಳ ಪೈಕಿ ಬಹುಪಾಲು ಅನುದಾನವನ್ನು ಅಂದರೆ 20,105 ಕೋಟಿ ರೂಪಾಯಿಗಳನ್ನು ಹೊಸದಾಗಿ ಘೋಷಣೆ ಮಾಡಲಾಗಿರುವ ಸಕ್ಷಮ್ ಅಂಗನವಾಡಿ ಹಾಗೂ ಮಿಷನ್ ಪೋಷಣ್ 2.0 ಯೋಜನಗೆ 20,105 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. 

ಮಿಷನ್ 2.0 ಸಮಗ್ರ ಶಿಶು ಅಭಿವೃದ್ಧಿ ಯೋಜನೆಮ್ ಅಂಗನವಾಡಿ ಸೇವೆಗಳು, ಪೋಷಣೆ ಅಭಿಯಾನ,  ಒಳಗೊಂಡ ಯೋಜನೆಯಾಗಿದ್ದು, ಹದಿಹರೆಯದ ಬಾಲಕಿಯರಿಗಾಗಿ ಇರುವ ಯೋಜನೆ, ರಾಷ್ಟ್ರೀಯ ಕ್ರೀಚ್ ಯೋಜನೆಗಳನ್ನು ಒಳಗೊಂಡಿದೆ.

'ಬೇಟಿ ಬಚಾವೋ, ಬೇಟಿ ಪಡಾವೋ' ಯೋಜನೆಗಳಷ್ಟೇ ಅಲ್ಲದೇ, ಒನ್ ಸ್ಟಾಪ್ ಸೆಂಟರ್, ಸ್ವಧರ್ ಗೃಹ್, ಮಕ್ಕಳ ರಕ್ಷಣೆ, ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ, ಉಜ್ವಲ ಯೋಜನೆಗಳಿಗೂ ಯಾವುದೇ ಅನುದಾನವನ್ನೂ ನೀಡಲಾಗಿಲ್ಲ.

ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆಗಳಂತಹ ಸ್ವಾಯತ್ತ ಸಂಸ್ಥೆಗಳಿಗೂ ಅನುದಾನವನ್ನು ಯಥಾ ಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ ಅಥವಾ ಸಣ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. 

SCROLL FOR NEXT