ರಾಜ್ಯ ಬಜೆಟ್

ಬೊಮ್ಮಾಯಿ ಬಜೆಟ್ 2022-23: ಅಲ್ಪಸಂಖ್ಯಾತ ಸಮುದಾಯಗಳಿಗೆ ಸಿಕ್ಕಿದ್ದೇನು?

Lingaraj Badiger

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ 2022-23ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಬಜೆಟ್ ಗಾತ್ರ ೨,೫೩,೧೬೫ ಕೋಟಿ ಇದ್ದು, ಕಳೆದ ಬಾರಿಗಿಂತ ಈ ಬಾರಿ ಶೇ. ೭.೭ರಷ್ಟು ಹೆಚ್ಚಳ ಮಾಡಲಾಗಿದೆ. ಶಿಕ್ಷಣ, ಉದ್ಯೋಗ, ಸಂಬಲೀಕರಣ ಅಂದರೆ ೩ಇ ಸೂತ್ರ ಅಳವಡಿಸಿಕೊಂಡು ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆಗೆ ಹೆಚ್ಚು ಒತ್ತು ನೀಡಲಾಗಿದೆ. ರೈತರು, ಮಹಿಳೆಯರ, ದುರ್ಬಲ ವರ್ಗ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಬಜೆಟ್ ನಲ್ಲಿ ವಿವಿಧ ಘೋಷಣೆ
– ಮುಸ್ಲಿಂ ಸಮುದಾಯಕ್ಕೆ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಘೋಷಣೆ ಜತೆಗೆ ಪದವಿ ಪೂರ್ವ ತರಗತಿಯೂ ಪ್ರಾರಂಭ
– ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಸಮುದಾಯಗಳ ಅಭಿವೃದ್ಧಿಗೆ 50 ಕೋಟಿ ರೂ.
-ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಪ್ರತೀ ಜಿಲ್ಲೆಯ ಕನಿಷ್ಠ ಒಂದು ಶಾಲೆಯಲ್ಲಿ ಪಿಯುಸಿ ತರಗತಿಗಳು ಆರಂಭಕ್ಕೆ ಕ್ರಮ
– ಇಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯಗಳನ್ನು ಒದಗಿಸಲು ಕ್ರಮ
– ಈ ಶಾಲೆಗಳನ್ನು ಎಪಿಜೆ ಅಬ್ದುಲ್ ಕಲಾಂ ಶಾಲೆಗಳೆಂದು ನಾಮಕರಣ ಮಾಡಿ ಸಿಬಿಎಸ್ಇ ಮಾನ್ಯತೆ ಪಡೆಯಲು 25 ಕೋಟಿ ರೂಪಾಯಿ ಅನುದಾನ
– ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ 100 ವಿದ್ಯಾರ್ಥಿನಿಲಯಗಳಲ್ಲಿ ತಲಾ 25 ದಾಖಲಾತಿ ಸಂಖ್ಯೆ ಹೆಚ್ಚಳಕ್ಕೆ 10 ಕೋಟಿ ಅನುದಾನ
– ವಕ್ಫ್ ಆಸ್ತಿಗಳ ರಕ್ಷಣೆಗೆ ಕ್ರಮ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ, ಡ್ರೋಣ್ ತಂತ್ರಜ್ಞಾನ ಬಳಸಿ ಸರ್ವೆ
– ಶಾಸ್ತ್ರೀಯ ಭಾಷೆಗಳ ಉತ್ಕೃಷ್ಟ ಸಾಹಿತ್ಯಿಕ ಪುಸ್ತಕಗಳನ್ನು ಉರ್ದು ಭಾಷೆಗೆ ಅನುವಾದ. ಉರ್ದು ಅಕಾಡೆಮಿಯಿಂದ ಕ್ರಮ
– ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನೋಂದಾಯಿತ ಬೀದಿ ಬದಿ, ತಳ್ಳುಗಾಡಿ, ಹೂ ಹಣ್ಣು ತರಕಾರಿ ಮಾರಾಟಗಾರರು, ಆಟೋ ಚಾಲಕರಿಗೆ ಆರ್ಥಿಕ ಸಹಾಯಧನ
– ಅಲ್ಪಸಂಖ್ಯಾತ ಸಮುದಾಯವಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ

SCROLL FOR NEXT