ಬೆಂಗಳೂರು: ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-2024ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಶಿಕ್ಷಣ ಇಲಾಖೆ, ಕೃಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ವಲಯವಾರು ವಿಂಗಡಣೆ ಮಾಡಿ ಸಿಎಂ ಬೊಮ್ಮಾಯಿಯವರು ಬಜೆಟ್ ಮಂಡನೆ ಮಾಡಿದ್ದು, ಯಾವ ವಲಯಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ...
- ಶಿಕ್ಷಣ ಕ್ಷೇತ್ರಕ್ಕೆ 37 ಸಾವಿರದ 960 ಕೋಟಿ ರೂಪಾಯಿ ಅನುದಾನ
- ಜಲಸಂಪನ್ಮೂಲ ಇಲಾಖೆಗೆ 22 ಸಾವಿರದ 854 ರೂ ಅನುದಾನ
- ಗ್ರಾಮೀಣಾಭಿವೃದ್ಧಿ,ಪಂಚಾಯತ್ ರಾಜ್ಗೆ 20 ಸಾವಿರದ 494 ರೂ ಅನುದಾನ
- ನಗರಾಭಿವೃದ್ಧಿ ಇಲಾಖೆಗೆ 17 ಸಾವಿರದ 938 ಕೋಟಿ ರೂ ಅನುದಾನ
- ಕಂದಾಯ ಇಲಾಖೆಗೆ 15 ಸಾವಿರದ 943 ಕೋಟಿ ರೂ ಅನುದಾನ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 15 ಸಾವಿರದ 151 ಕೋಟಿ ಅನುದಾನ
- ಸಾರಿಗೆ ಇಲಾಖೆಗೆ 14 ಸಾವಿರದ 509 ಕೋಟಿ ಅನುದಾನ
- ಇಂಧನ ಇಲಾಖೆಗೆ 13 ಸಾವಿರದ 803 ಕೋಟಿ ರೂ ಅನುದಾನ
- ಸಮಾಜಕಲ್ಯಾಣ ಇಲಾಖೆಗೆ 11 ಸಾವಿರದ 163 ಕೋಟಿ ರೂ ಅನುದಾನ
- ಲೋಕೋಪಯೋಗಿ ಇಲಾಖೆಗೆ 10 ಸಾವಿರದ 741 ಕೋಟಿ ಅನುದಾನ
- ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 9 ಸಾವಿರದ 456 ಕೋಟಿ ರೂ ಅನುದಾನ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5 ಸಾವಿರದ 676 ಕೋಟಿ ಅನುದಾನ
- ಆಹಾರ ಇಲಾಖೆಗೆ 4 ಸಾವಿರದ 600 ಕೋಟಿ ರೂ ಅನುದಾನ
- ಮೀಸಲು ವಸತಿ ಇಲಾಖೆಗೆ 3,787 ಕೋಟಿ ರೂಪಾಯಿ ಅನುದಾನ.