ಬೆಂಗಳೂರು: ರಾಜ್ಯ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2023-2024ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಇಂಧನ, ನೀರಾವರಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.
ವಲಯವಾರು ವಿಂಗಡಣೆ ಮಾಡಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದು, ಯಾವ ವಲಯಕ್ಕೆ ಎಷ್ಟು ಅನುದಾನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ...
- ಶಿಕ್ಷಣ – 37,587 ಕೋಟಿ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ – 24,166 ಕೋಟಿ
- ಇಂಧನ – 22,773 ಕೋಟಿ
- ನೀರಾವರಿ – 19,044 ಕೋಟಿ
- ಗ್ರಾಮೀಣಾಭಿವೃದ್ಧಿ – 18,038 ಕೋಟಿ
- ಒಳಾಡಳಿತ ಮತ್ತು ಸಾರಿಗೆ – 16,638 ಕೋಟಿ
- ಕಂದಾಯ – 16,167 ಕೋಟಿ
- ಆರೋಗ್ಯ – 14,950 ಕೋಟಿ
- ಸಮಾಜ ಕಲ್ಯಾಣ – 11,173 ಕೋಟಿ
- ಆಹಾರ ಮತ್ತು ನಾಗರೀಕ ಪೂರೈಕೆ – 10,460 ಕೋಟಿ
- ಲೋಕೋಪಯೋಗಿ – 10,143 ಕೋಟಿ
- ಕೃಷಿ – 5,860 ಕೋಟಿ
- ಪಶುಸಂಗೋಪನೆ ಮತ್ತು ಮೀನುಗಾರಿಕೆ – 3,024 ಕೋಟಿ
- ಇತರೆ – 1,09,639 ಕೋಟಿ