ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(ಸಂಗ್ರಹ ಚಿತ್ರ) 
ಕೇಂದ್ರ ಬಜೆಟ್

ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ: ಆ್ಯಪ್ ಮೂಲಕ ಸುಲಭ-ಸರಳವಾಗಿ ಬಜೆಟ್ ವೀಕ್ಷಿಸಿ

ದೇಶದ ಹಿಂದಿನ ವರ್ಷದ ಆರ್ಥಿಕತೆ, ಮುಂದಿನ ವರ್ಷದಲ್ಲಿ ಸರ್ಕಾರದ ಆರ್ಥಿಕ ಲೆಕ್ಕಾಚಾರಗಳೇನು, ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ, ಸರ್ಕಾರದ ಯೋಜನೆಗಳೇನು, ತೆರಿಗೆ ಎಷ್ಟೆಷ್ಟು ಎಂಬುದನ್ನು ತೋರಿಸುವ ವಿಧಾನವೇ ವಾರ್ಷಿಕ ಬಜೆಟ್.

ನವದೆಹಲಿ: ದೇಶದ ಹಿಂದಿನ ವರ್ಷದ ಆರ್ಥಿಕತೆ, ಮುಂದಿನ ವರ್ಷದಲ್ಲಿ ಸರ್ಕಾರದ ಆರ್ಥಿಕ ಲೆಕ್ಕಾಚಾರಗಳೇನು, ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ, ಸರ್ಕಾರದ ಯೋಜನೆಗಳೇನು, ತೆರಿಗೆ ಎಷ್ಟೆಷ್ಟು ಎಂಬುದನ್ನು ತೋರಿಸುವ ವಿಧಾನವೇ ವಾರ್ಷಿಕ ಬಜೆಟ್. 

ಸಾಮಾನ್ಯವಾಗಿ ನಾಗರಿಕರು ಬಜೆಟ್ ಎಂದಾಕ್ಷಣ ಆದಾಯದ ಮೇಲೆ ಎಷ್ಟು ತೆರಿಗೆ ಹಾಕಿದ್ದಾರೆ, ವಿನಾಯ್ತಿ ನೀಡಿದ್ದಾರೆಯೇ, ತಮಗೆ ಅಗತ್ಯವಿರುವ ಕ್ಷೇತ್ರಕ್ಕೆ ಸರ್ಕಾರ ಏನು ಯೋಜನೆ ಪ್ರಕಟಿಸಿದೆ, ಉದ್ಯೋಗಸ್ಥರಾದರೆ ವೇತನ ಮೇಲೆ ಎಷ್ಟು ತೆರಿಗೆ ಇತ್ಯಾದಿಗಳನ್ನು ನೋಡುತ್ತಾರೆ.

2023-24ನೇ ಆರ್ಥಿಕ ಸಾಲಿನ ಕೇಂದ್ರ ಸಾಮಾನ್ಯ ಬಜೆಟ್ ನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಕರ್ನಾಟಕದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆ, ಮುಂದಿನ ವರ್ಷ ಕೇಂದ್ರದಲ್ಲಿ ಲೋಕಸಭೆ ಚುನಾವಣೆ ಈ ಎಲ್ಲಾ ದೃಷ್ಟಿಯನ್ನಿಟ್ಟುಕೊಂಡು ಈ ಬಾರಿಯ ಬಜೆಟ್ ಮಹತ್ವದ್ದಾಗಿದೆ. ಕರ್ನಾಟಕಕ್ಕೆ ಈ ಬಾರಿ ಭರಪೂರ ಯೋಜನೆಗಳು, ಅನುದಾನ ಸಿಗಬಹುದೆಂಬ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣಪ್ರಮಾಣದ ಬಜೆಟ್ ಇದಾಗಿದೆ. 

5ನೇ ಬಾರಿ ಬಜೆಟ್ ಮಂಡನೆ: ವಿತ್ತ ಸಚಿವೆಯಾಗಿ ಇಂದು ನಿರ್ಮಲಾ ಸೀತಾರಾಮನ್ 5ನೇ ಬಾರಿಗೆ ಲೋಕಸಭೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ಇತ್ತೀಚೆಗೆ ಬಜೆಟ್ (Union Budget 2023-24)​ ಮಂಡನೆಯದ್ದೇ ಸುದ್ದಿಯಾಗುತ್ತಿದೆ. ಅದೇ ರೀತಿ 2023-24 ರ ಬಜೆಟ್​ ಮಂಡನೆಯ ಬಗ್ಗೆ ಹೆಚ್ಚಿನ ಜನರಿಗೆ ಕುತೂಹಲ ಇದ್ದೇ ಇರುತ್ತದೆ. ಇನ್ನು ಈ ಬಜೆಟ್​ ಮಂಡನೆಯ ವಿಚಾರದಲ್ಲಿ ಹಲವಾರು ರೀತಿಯಲ್ಲಿ ಚರ್ಜೆಗಳು, ಮಾತುಕತೆಗಳು ಜನಸಾಮಾನ್ಯರ ನಡುವೆ ನಡೆಯುತ್ತಿರುತ್ತದೆ.

ಆದರೆ ಕೇಂದ್ರ ಸರ್ಕಾರದ ಬಜೆಟ್​ ಮಂಡನೆ ಯಾರಿಗೆ ಮತ್ತು ಯಾವ ವಿಭಾಗಕ್ಕೆ ಯಾವ ರೀತಿಯೆಲ್ಲಾ ಬಜೆಟ್​ಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬ ಕುತೂಹಲ ಮೂಡುತ್ತದೆ. ಕೇಂದ್ರ ಬಜೆಟ್ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಲು ಒಂದು ಆಪ್ ಇದೆ. ಅದನ್ನು ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಯಾವಾಗ ಬೇಕಾದರೂ ವೀಕ್ಷಿಸಬಹುದು. 

ಕೇಂದ್ರ ಬಜೆಟ್​ ಮೊಬೈಲ್ ಆ್ಯಪ್​

ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ ಭಾಷಣದ ನಂತರ ಸಂಪೂರ್ಣ ಬಜೆಟ್ ವಿವರವನ್ನು ಸಾರ್ವಜನಿಕರಿಗೆ ಮೊಬೈಲ್ ಆ್ಯಪ್​ ಮೂಲಕ ನೋಡಬಹುದಾಗಿದೆ. ಈ ಮಾಹಿತಿ 'ಯೂನಿಯನ್ ಬಜೆಟ್ ಮೊಬೈಲ್ ಆಪ್‌' ( Union Budget Mobile App) ನಲ್ಲಿ ಲಭ್ಯವಾಗಲಿದ್ದು, ಭಾರತದ ಪ್ರತಿಯೊಬ್ಬರು ಅತ್ಯಂತ ಸರಳವಾಗಿ ಬಜೆಟ್‌ನ ಸಂಪೂರ್ಣ ವಿವರಗಳನ್ನು ನೋಡಬಹುದಾಗಿದೆ. ಇನ್ನು ಈ ಬಜೆಟ್​ಗೆ ಸಂಬಂಧಿಸಿದ ಅಪ್ಲಿಕೇಶನ್​ ಆಂಡ್ರಾಯ್ಡ್​ ಮತ್ತು ಐಓಎಸ್​ ಸಾಧನಗಳೆರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ತಮಗೆ ಅನುಕೂಲವಾಗುವಂತಹ ಆ್ಯಪ್​ ಸ್ಟೋರ್​ಗಳಲ್ಲಿ ಡೌನ್​ಲೋಡ್​ ಮಾಡಿಟ್ಟುಕೊಳ್ಳಬಹುದು.

ಯೂನಿಯನ್​ ಬಜೆಟ್​ ಮೊಬೈಲ್​ ಆ್ಯಪ್​ ಇನ್​​​ಸ್ಟಾಲ್​​ ಮಾಡುವುದು ಹೇಗೆ?

ಈ ಯೂನಿಯನ್ ಬಜೆಟ್​ ಮೊಬೈಲ್ ಅಪ್ಲಿಕೇಶನ್​ ಅನ್ನು ನೀವು ಬೇರೆ ಅಪ್ಲಿಕೇಶನ್​ಗಳನ್ನು ಡೌನ್​ಲೋಡ್​ ಮಾಡುವಂತಹ ಆ್ಯಪ್​ ಸ್ಟೋರ್​ಗಳಲ್ಲಿ ಡೌನ್​ಲೋಡ್​ ಮಾಡಬಹುದು. ಆಂಡ್ರಾಯ್ಡ್​ ಮೊಬೈಲ್​ ಬಳಕೆದಾರರಾದರೆ ಗೂಗಲ್​ ಪ್ಲೇ ಸ್ಟೋರ್​ ಮೂಲಕ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಐಫೋನ್ ಬಳಕೆದಾರರು ಆ್ಯಪಲ್​ ಸ್ಟೊರ್​ಗಳಲ್ಲಿ ಡೌನ್​ಲೋಡ್​ ಮಾಡಬಹುದು.

ವೆಬ್​ಸೈಟ್​ನಲ್ಲೂ ಡೌನ್​ಲೋಡ್​ ಮಾಡಬಹುದು

ಇನ್ನು ಈ ಆ್ಯಪ್​ ಸ್ಟೋರ್​ಗಳಲ್ಲಿ ಮಾತ್ರವಲ್ಲದೇ ಯೂನಿಯನ್ ಬಜೆಟ್​ ಪೋರ್ಟಲ್​ ಆಗಿರುವ www.Indiabudget.Gov.In ಗೆ ಭೇಟಿ ನೀಡಬಹುದಾಗಿದೆ. ಈ ಪೋರ್ಟಲ್​ನಲ್ಲಿ 2021-22 ಮತ್ತು ಬಜೆಟ್ 2022-23 ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಹ ನೋಡುವ ಅವಕಾಶವಿದೆ. ಇನ್ನು ಬಳಕೆದಾರರಿಗೆ ಇನ್ನಷ್ಟು ಸುಲಭವಾಗಿ ದೃಷ್ಟಿಯಿಂದ ಬೇರೆ ಬೇರೆ ವಿಭಾಗಗಳಾಗಿ ಬಜೆಟ್​ನ ವಿವರಗಳನ್ನು ವಿವರಿಸಲಾಗಿದೆ.

ಬಜೆಟ್​ ಡಾಕ್ಯುಮೆಂಟ್​ ನ್ನು ಪೋರ್ಟಲ್ ಮೂಲಕ ವೀಕ್ಷಣೆ

ನಿಮಗೆ ಈ ವರ್ಷದ ಬಜೆಟ್​ನ ವಿವರಗಳನ್ನು ನೋಎಬೇಕೆಂದಾದರೆ ನೀವು https://www.indiabudget.gov.in/ ನ ಅಧಿಕೃತ ಸೈಟ್‌ಗೆ ಭೇಟಿ ನೀಡಿ. ಇದಾದ ನಂತರ ಅಲ್ಲಿ ನಿಮಗೆ ಬಜೆಟ್‌ ಭಾಷಣಗಳು (Budget Speeches) ಎಂಬ ಆಯ್ಕೆ ಕಾಣಸಿಗುತ್ತದೆ.

ಅದರ ಮೇಲೆ ಕ್ಲಿಕ್‌ ಮಾಡಬೇಕು. ನಂತರ ಅಲ್ಲಿ ವಿವಿಧ ವರ್ಷಗಳ ಬಜೆಟ್‌ ವಿವರದೊಂದಿಗೆ ಈ ವರ್ಷದ ಬಜೆಟ್‌ ಮಾಹಿತಿ ಸಹ ಲಭ್ಯವಾಗುತ್ತದೆ. ಅಂದರೆ, ಅದರಲ್ಲಿ 2023-2024 PDF ಡಾಕ್ಯುಮೆಂಟ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಈ ಸಾಲಿನ ಸಂಪೂರ್ಣ ಬಜೆಟ್‌ ವಿವರವನ್ನು ನೀವು ಓದಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT