ಯಕೃತ್ ರೋಗದ ವಿರುದ್ಧ 'ಲಿವ್ಕೇರ್' ಪ್ರಚಾರಾಂದೋಲನ
ಹಿಮಾಲಯ ಡ್ರಗ್ ಕಂಪನಿ, ಯಕೃತ್ ರೋಗದಿಂದ ಬಳಲುತ್ತಿರುವವರಿಗೆ 'ಲಿವ್ಕೇರ್' ಎಂಬ ಹೆಸರಿನಲ್ಲಿ ರಾಷ್ಟ್ರೀಯ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದೆ....
ಹಿಮಾಲಯ ಡ್ರಗ್ ಕಂಪನಿ, ಯಕೃತ್ ರೋಗದಿಂದ ಬಳಲುತ್ತಿರುವವರಿಗೆ 'ಲಿವ್ಕೇರ್' ಎಂಬ ಹೆಸರಿನಲ್ಲಿ ರಾಷ್ಟ್ರೀಯ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಂಪನಿಯ ಔಷಧ ಆವಿಷ್ಕರಣೆಯ ಮುಖ್ಯಸ್ಥ ಡಾ. ರಂಗೇಶ್, 'ನಮಗೆ ಬಂದ ಮಾಹಿತಿಯ ಅನ್ವಯ ದೇಶದಲ್ಲಿ ಶೇ.90ರಷ್ಟು ಮಂದಿಗೆ ಯಕೃತ್ ರೋಗದಿಂದ ಬಳಲುತ್ತಿರುವುದರ ಬಗ್ಗೆ ಸರಿಯಾದ ಅರಿವೇ ಇಲ್ಲ. ಈ ನಿಟ್ಟಿನಲ್ಲಿ ಕೊನೆಯ ಹಂತದಲ್ಲಿ ಮಾಡುವ ಯಾವುದೇ ತೆರನಾದ ಔಷಧೋಪಚಾರ ರೋಗಿಯ ನೆರವಿಗೆ ಬರುವುದು ಕಷ್ಟ. ಅದಕ್ಕಾಗಿ ನಮ್ಮ ಸಂಸ್ಥೆ ಇದನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಪಣತೊಟ್ಟಿದ್ದು ಅದಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಆ ಮುಖೇನ ಸ್ಥಳೀಯ ವೈದ್ಯರ ನೆರವು ಪಡೆದು ವರ್ಷದಿಂದ ವರ್ಷಕ್ಕೆ ಈ ಚಿಕಿತ್ಸೆಯನ್ನು ಎಲ್ಲೆಡೆ ಪಸರಿಸಲು ಯೋಜಿಸಿದೆ' ಎಂದರು.
ಡಾ. ಬಾತ್ರಾಸ್ ಪಾಸಿಟಿವ್ ಹೆಲ್ತ್ ಪ್ರಶಸ್ತಿಗೆ ಅರ್ಜಿ
ಭಾರತದ ಆಟೋಮೊಬೈಲ್ ದೈತ್ಯ ಬಜಾಜ್ ಡಿಸ್ಕವರ್ ವತಿಯಿಂದ ಡಾ. ಬಾತ್ರಾಸ್ ಪಾಸಿಟೀವ್ ಹೆಲ್ತ್ ಪ್ರಶಸ್ತಿಗಳ 8ನೇ ಆವೃತ್ತಿಗೆ ನಾಮಾಂಕನಗಳನ್ನು ಅಹ್ವಾನಿಸುತ್ತಿದೆ. ಆವೃತ್ತಿಯು ಮುಂಬೈ, ನವದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಭಾರತದಲ್ಲಿ ಪ್ರಥಮ ಹಾಗೂ ಏಕೈಕ ಆರೋಗ್ಯ ಸನ್ಮಾನ ಇದಾಗಿದ್ದು, ಗಂಭೀರವಾದ ಕಾಯಿಲೆಗಳು ಮತ್ತು ವಿಕಲತೆಗಳನ್ನು ಮೀರಿ ನಿಂತು ಕೇವಲ ತಮ್ಮ ಸ್ಥೈರ್ಯ, ಕೆಚ್ಚು ಮತ್ತು ಇತ್ಯಾತ್ಮಕತೆಗಳಿಂದಲೇ ಸಾಮಾನ್ಯರಂತೆ ಮತ್ತು ಬದುಕನ್ನು ಸಾಗಿಸುವವರನ್ನು ಗುರುತಿಸಿ ಸನ್ಮಾನಿಸಲೆಂದೇ ಈ ಪ್ರಶಸ್ತಿಗಳ ಸ್ಥಾಪನೆಯಾಗಿದೆ. ಇಂತಹ ನಿಜವಾದ ಹೀರೋಗಳನ್ನು ಪತ್ತೆ ಮಾಡುವಲ್ಲಿ ನಮಗೆ ಈ ವರ್ಷವೂ ನೆರವಾಗುತ್ತಿರುವುದು ಭಾರತದ ಆಟೊಮೊಬೈಲ್ ಉದ್ಯಮದ ಹರಿಕಾರರಲ್ಲಿ ಒಬ್ಬರಾದ 'ಬಜಾಜ್ ಡಿಸ್ಕವರ್' ಎಂದು ಸಂಸ್ಥೆ ತಿಳಿಸಿದೆ. ಢಿಢಿಢಿ.ಜ್ಠಛಿಛಡ್ಠಿಛಡ.್ಛ್ಟಟ ಸಂದರ್ಶಿಸಿ.
ಹ್ಯಾವೆಲ್ ಇಂಡಿಯಾ ಲಿಮಿಟೆಡ್ನ ಮಾರುಕಟ್ಟೆ ವಿಸ್ತರಣೆ
ವಿದ್ಯುತ್ ವಸ್ತುಗಳ ಉತ್ಪಾದನಾ ಕಂಪನಿ ಹ್ಯಾವೆಲ್ ಇಂಡಿಯಾ ಲಿಮಿಟೆಡ್ ಕಂಪನಿಯು ಕರ್ನಾಟಕ ರಾಜ್ಯದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸುವ ಬಗ್ಗೆ ಯೋಜನೆ ರೂಪಿಸಿದೆ. ಕಂಪನಿಯು ಮುಂದಿನ ಎರಡು ವರ್ಷದಲ್ಲಿ 500 ಕೋಟಿ ಆದಾಯವನ್ನು ಗಳಿಸುವ ಗುರಿ ಹೊಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ನ ಸುನಿಲ್ ಸಿಕ್ಕಾ 'ಕರ್ನಾಟಕವು ಹ್ಯಾವೆಲ್ಸ್ ಉತ್ಪಾದನೆಗಳಿಗೆ ಅತೀ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ ಹಾಗೂ ಅದ್ಭುತ ಬೆಳವಣಿಗೆಯ ನಿರೀಕ್ಷೆಯನ್ನು ಹೊಂದಿದೆ. ಖಊಕ ಸ್ವಿಚ್ಗಳೊಂದಿಗೆ ನಮ್ಮ ಇತರೆ ಎಲ್ಲಾ ಹೊಸ ಉತ್ಪಾದನೆಗಳು ರಾಜ್ಯದಲ್ಲಿ ನಮ್ಮ ಕಂಪನಿಯ ಬೆಳವಣಿಗೆಗೆ ಕಾರಣವಾಗಲಿದೆ. ಬಲಿಷ್ಠ ಹಾಗೂ ಅತ್ಯಂತ ಸಮರ್ಥ ಆರ್ ಅಂಡ್ ಡಿ ವ್ಯವಸ್ಥೆಯನ್ನು ಹೊಂದಿದ್ದು, ನಮ್ಮ ವಿಶ್ವಮಟ್ಟದ ಉತ್ಪಾದನೆಗಳ ಮೂಲಕ ಗ್ರಾಹಕರು ಬಯಸುವಂತಹ ಅತ್ಯುತ್ತಮ ಉತ್ಪಾದನೆಗಳನ್ನು ತಯಾರಿಸಿ ತಲುಪಿಸಲು ಶ್ರಮಿಸುತ್ತೇವೆ' ಎಂದು ತಿಳಿಸಿದರು.
ರತ್ನಗಿರಿ ಇಂಪೆಕ್ಸ್ ಪ್ರೈ. ಲಿನಿಂದ ಹೊಸ ಯಂತ್ರ ಪರಿಚಯ
ತೋಟಗಾರಿಕೆ ಆರೈಕೆ ಉಪಕರಣಗಳ ತಯಾರಿಕಾ ಸಂಸ್ಥೆ ರತ್ನಗಿರಿ ಇಂಪೆಕ್ಸ್ ಪ್ರೈ. ಲಿ. 4 ವಿವಿಧ ಕೃಷಿ ವಿಭಾಗಗಳನ್ನು ಅಗತ್ಯಗಳನ್ನು ಪೂರೈಸಲು ನೆರವಾಗುವ ಹೊಸ ತಲೆಮಾರಿನ ಕೃಷಿಯಂತ್ರಗಳನ್ನು ಪರಿಚಯಿಸುವುದಾಗಿಘೋಷಿಸಿದೆ. ತಾನು ಮುಂಬರುವ ಅವಧಿಯಲ್ಲಿ ಭಾರತೀಯ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಲು ಮತ್ತು ತ್ವರಿತವಾಗಿ ಮುಂದೊಯ್ಯಲು ಅನುಕೂಲವಾಗುವಂತೆ ಉಪಕರಣಗಳನ್ನು ತಯಾರಿಸುತ್ತಿದ್ದು, ಕೃಷಿ ಭೂಮಿಯ ಉಳುಮೆ, ಗಾರ್ಡನ್ ಮತ್ತು ತೋಟಗಾರಿಕೆ ಯಂತ್ರಗಳು, ನೀರಾವರಿ ಮತ್ತು ಬೆಳೆ ಸಂರಕ್ಷಣೆ ಈ ನಾಲ್ಕು ವಿಭಾಗಗಳು ತನ್ನ ಮಾರುಕಟ್ಟೆ ವಿಸ್ತರಣೆಯ ಪ್ರಮುಖ ಆಧ್ಯತೆಗಳಲ್ಲಿ ಸೇರಿಕೊಂಡಿವೆ ಎಂದು ರತ್ನಗಿರಿ ಇಂಪೆಕ್ಸ್ ಪ್ರಕಟಿಸಿದೆ.
ಟಿ.ಜಾನ್ ಸಮೂಹಕ್ಕೆ ಒರೇಕಲ್ ಸಹಯೋಗ
ಟಿ.ಜಾನ್ ಸಮೂಹ ಸಂಸ್ಥೆಯು, ಒರೇಕಲ್ನ ಪೀಪಲ್ಸಾಫ್ಟ್ ಕ್ಯಾಂಪಸ್ ಸಲ್ಯೂಷನ್ಸ್ ಅಪ್ಲಿಕೇಷನ್ನ ಸಹಯೋಗ ಪಡೆಯುತ್ತಿರುವುದಾಗಿ ಘೋಷಣೆ ಮಾಡಿದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವುದರಿಂದ ಹಿಡಿದು ಕಾಲೇಜಿನಲ್ಲಿ ಕಳೆಯುವ ಸಂಪೂರ್ಣ ಅವಧಿಯ ಚಟುವಟಿಕೆಗಳ ವಿವರಗಳನ್ನು ನಿರ್ವಹಿಸಲು, ವಿದ್ಯಾರ್ಥಿಯ ಶಿಕ್ಷಣ ಅವಧಿಯ ಲೈಫ್ಸೈಕಲ್ ನಿರ್ವಹಣೆ ಹಾಗೂ ವ್ಯಾಪಾರ ಪ್ರಕ್ರಿಯೆಗಳನ್ನು ಸುಧಾರಿಸುವುದು ಪೀಪಲ್ಸಾಫ್ಟ್ ಅಪ್ಲಿಕೇಷನ್ನ ಪ್ರಮುಖ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಟಿ. ಜಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಥಾಮಸ್ ಪಿ. ಜಾನ್ ಅವರು, ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಸಿಬ್ಬಂದಿಗೆ ಯಾವಾಗಲೂ ಉತ್ತಮ ಸೇವೆಗಳನ್ನು ಒದಗಿಸುವುದನ್ನೇ ನಮ್ಮ ಸಂಸ್ಥೆ ಬಯಸುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ಹೊಂದುವುದು ಅನಿವಾರ್ಯವಾಗಿದೆ. ಪೀಪಲ್ಸಾಫ್ಟ್ ಅಪ್ಲಿಕೇಷನ್ನ ಅಳವಡಿಕೆಯೊಂದಿಗೆ ನಮ್ಮ ಆಡಳಿತ ಹಾಗೂ ಕಾರ್ಯಾಚರಣೆಗಳ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಎಂದು ನಂಬಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಹೊಸ ಔಷಧ ಐಎನ್ಡಿ ಅರ್ಜಿ ಎಫ್ಡಿಎ ಸ್ವೀಕಾರ
ಜೂಬಿಲಿಯೆಂಟ್ ಬಯೋಸಿಸ್ ಅಮೆರಿಕದ 'ಎಂಡೋ ಫಾರ್ಮಸ್ಯೂಟಿಕಲ್ಸ್' ಜತೆಗೂಡಿ ಪರೀಕ್ಷೆಯಲ್ಲಿರುವ ಹೊಸ ಔಷಧಿಯ ಐಎನ್ಡಿ ಅರ್ಜಿಯನ್ನು ಎಫ್ಡಿಎ ಸ್ವೀಕರಿಸಿದೆ ಎಂದು ಪ್ರಕಟಿಸಿದೆ. ಈ ಅಣು ಈಗ ಮುಂದಿನ ಅಭಿವೃದ್ಧಿ ಹಂತಕ್ಕೆ ಹೋಗುತ್ತದೆ ಮತ್ತು 2013ರ ಕೊನೆಯಲ್ಲಿ ಚಿಕಿತ್ಸಕ ಪರೀಕ್ಷೆಗಳಿಗೆ ಹೋಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಜೂಬಿಲಿಯಂಟ್ ಲೈಫ್ ಸೈನ್ಸಸ್ನ ಜಾಗತಿಕ ಔಷಧ ಅನ್ವೇಷಣಾ ಸೇವೆಗಳ ಅಧ್ಯಕ್ಷ ಡಾ. ಸುಬೀರಕುಮಾರ್ ಬಸಕ್ ಮಾತನಾಡಿ, 'ಎಂಡೋ ಮತ್ತು ಜೂಬಿಲಿಯೆಂಟ್ ಬಯೋಸಿಸ್ ವಿಜ್ಞಾನಿಗಳ ಅತ್ಯುತ್ತಮ ಸಹಯೋಗದ ಫಲ ಇದಾಗಿದೆ. ಔಷಧಿಗಳಲ್ಲಿ, ಜೀವ ವಿಜ್ಞಾನಗಳಲ್ಲಿ ಮತ್ತು ಆರೋಗ್ಯ ರಕ್ಷಣೆಯ ನಾವೀನ್ಯಗಳಲ್ಲಿ ಮುಂಚೂಣಿಯಲ್ಲಿರುವ ಜೂಬಿಲಿಯೆಂಟ್, ವಿಶ್ವಾದ್ಯಂತ ರೋಗಿಗಳಿಗೆ ಕೈಗೆಟುಕುವ ದರಗಳಲ್ಲಿ ಆರೋಗ್ಯ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ' ಎಂದರು.
ಇಂದಿನಿಂದ ಈಟಿವಿ ಕನ್ನಡದಲ್ಲಿ 'ಇಂಡಿಯನ್' ರಿಯಾಲಿಟಿ ಶೋ
ಈ ಟಿವಿ ಕನ್ನಡ 'ಇಂಡಿಯನ್' ಎಂಬ ನೂತನ ರಿಯಾಲಿಟಿ ಶೋ ಆರಂಭಿಸುತ್ತಿದೆ. ಆ.12ರಿಂದ ರಾತ್ರಿ 8ರಿಂದ 9ರವರೆಗೆ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಈ ಕುರಿತು ಮಾತನಾಡಿದ ಕಾರ್ಯಕ್ರಮ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ 'ಇಂಡಿಯನ್ ಇದು ಪ್ರವಾಸ ಮತ್ತು ಸಾಹಸದ ಆಕರ್ಷಕ ಸಂಯೋಜನೆಯಾಗಿದ್ದು ಇದು ಎಲ್ಲಾ ವಯಸ್ಸಿನವರಿಗೂ ಸೂಕ್ತವಾಗಿರುತ್ತದೆ. ಕಾರ್ಯಕ್ರಮವನ್ನು ಭಾರತದ ಉದ್ದಕ್ಕೂ 7 ಬೇರೆ ಬೇರೆ ರಾಜ್ಯಗಳಾದ ಜಮ್ಮು ಕಾಶ್ಮೀರ, ಗುಜರಾತ್, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳಗಳಲ್ಲಿ ಛಾಯಗ್ರಹಣ ಮಾಡಲಾಗುತ್ತದೆ. ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ ಎಂದರು.
ಜಿಂದಾಲ್ ಸ್ಟೀಲ್ ನೂತನ ಪ್ಯಾಂಥರ್ ಆರಂಭ
ಉಕ್ಕು ಮತ್ತು ವಿದ್ಯುತ್ ಸಂಸ್ಥೆಗಳಲ್ಲಿ ಒಂದಾದ ಜಿಂದಾಲ್ ಸ್ಟೀಲ್ ಮತ್ತು ವಿದ್ಯುತ್ ನಿಗಮಿತವು ಭಾರತದಲ್ಲಿ ತನ್ನ ನೂತನ ಬ್ರ್ಯಾಂಡ್ ಆದ ಜಿಂದಾಲ್ ಪ್ಯಾಂಥರ್ನ ಪ್ರಾರಂಭವನ್ನು ಘೋಷಿಸಿದೆ. ಈ ಬ್ರ್ಯಾಂಡ್ ಶಕ್ತಿ ಚುರುಕುತನ ಮತ್ತು ಪುನರ್ಜನ್ಮಕ್ಕೆ ಹೆಸರಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಜಿಂದಾಲ್ ಪ್ಯಾಂಥರ್ನ ಬಿಡುಗಡೆ ಸಮಾರಂಭದಲ್ಲಿ ಜಿಂದಾಲ್ ಸ್ಟೀಲ್ ಮತ್ತು ವಿದ್ಯುತ್ ನಿಯಮಿತದ ನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಉಪ್ಪಲ್ ಮಾತನಾಡಿ, 'ಜೆಎಸ್ಪಿಎಲ್ನಲ್ಲಿ, ನಮ್ಮ ಮೌಲ್ಯಗಳು, ನಮ್ಮ ಸಂಸ್ಥಾಪಕರಾದ ಓ.ಪಿ. ಜಿಂದಾಲ್ರವರ ಅಭಿವ್ಯಕ್ತಿಯಂತೆ, ಶ್ರೇಷ್ಠತೆ, ಆವಿಷ್ಕಾರತೆ ಮತ್ತು ವಿಶ್ವಮಟ್ಟದ ಗುಣಮಟ್ಟದ ಉತ್ಪನ್ನವನ್ನು ನೀಡುವ ಬದ್ಧತೆ ಹೊಂದಿದೆ. ಈ ಕ್ಷೇತ್ರಕ್ಕೆ ಅತ್ಯುತ್ತಮ ಗುಣಮಟ್ಟದ ಬಾರ್ಗಳನ್ನು ಒದಗಿಸುವ ಗುರಿಯಿಂದ ಪ್ರಚೋದಿತವಾಗಿದೆ' ಎಂದರು.
ತಲ್ವಾಕರ್ಸ್ ಬೆಟರ್
ವ್ಯಾಲ್ಯೂ ಫಿಟ್ನೆಸ್ನಿಂದ ವಾರ್ಷಿಕ ರಿಯಾಯಿತಿ
ಭಾರತದ 75ಕ್ಕೂ ಹೆಚ್ಚು ನಗರದಲ್ಲಿ 145 ಜಿಮ್ಗಳನ್ನು ಹೊಂದಿರುವ ಅತಿದೊಡ್ಡ ಫಿಟ್ನೆಸ್ ಸರಣಿ ತಲ್ವಾಕರ್ಸ್ ಬೆಟರ್ ವ್ಯಾಲ್ಯೂ ಫಿಟ್ನೆಸ್ ಲಿಮಿಟೆಡ್ ತನ್ನ ಯಶಸ್ವಿ ಮತ್ತು ಜನಪ್ರಿಯ ವಾರ್ಷಿಕ ಡಿಸ್ಕೌಂಟ್ ಸ್ಕೀಂ ಪ್ರಕಟಿಸಿದೆ. ಕಳೆದ ಕೆಲವು ವರ್ಷಗಳಿಂದ ತಲ್ವಾಕರ್ಸ್ ವಾರ್ಷಿಕ ರಿಯಾಯಿತಿ ಸ್ಕೀಂ ಫಿಟ್ನೆಸ್ ಉತ್ಸಾಹಿಗಳಿಂದ ಅಪಾರ ಬೆಂಬಲ ಪಡೆದಿದೆ. ಈ ಆಗಸ್ಟ್ನಲ್ಲಿ ತಲ್ವಾಕರ್ಸ್ ಮೌಲ್ಯಾಧಾರಿತ ಸೇವೆಗಳಲ್ಲಿ ವಿಶೇಷ ಆಫರ್ಗಳನ್ನು ನೀಡಿದೆ. ಈ ವಾರ್ಷಿಕ ರಿಯಾಯಿತಿ ಆಫರ್ ಈಗಾಗಲೇ ಪ್ರಾರಂಭವಾಗಿದ್ದು, ಸೆ.6ರವರೆಗೆ ಇರಲಿದೆ. ಸಂಸ್ಥೆಯ ಅಧ್ಯಕ್ಷ ಮಧುಕರ್ ತಲ್ವಾಕರ್, 'ವಾರ್ಷಿಕ ರಿಯಾಯಿತಿ ಸ್ಕೀಂ ಫಿಟ್ನೆಸ್ ಉತ್ಸಾಹಿಗಳು ಎದುರು ನೋಡುವ ವಾರ್ಷಿಕ ಕಾರ್ಯಕ್ರಮವಾಗಿದೆ. ಫಿಟ್ನೆಸ್ನ ಎಲ್ಲಾ ಅಡೆತಡೆಗಳನ್ನೂ ನಿವಾರಿಸುವ ಮೂಲಕ ಹಿಂದೆಂದೂ ವ್ಯಾಯಾಮ ಮಾಡದವರನ್ನು ಉತ್ತೇಜಿಸುವ ಗುರಿ ಹೊಂದಿದ್ದೇವೆ' ಎಂದರು.
'ಮನ ಪಾಜೆಕ್ಟ್ಸ್'ಗೆ ಪ್ರಶಸ್ತಿ ಸಂಭ್ರಮ
ಸಿಲಿಕಾನ್ ಇಂಡಿಯಾ ಹಾಗೂ ಆ್ಯಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ನಡೆದ 'ಎಮರ್ಜಿಂಗ್ ಡೆವಲಪರ್ ಆಫ್ ದಿ ಇಯರ್ ಪ್ರಶಸ್ತಿ' 'ಮನ ಪಾಜೆಕ್ಟ್ಸ್'ಗೆ ಲಭಿಸಿದೆ. ರಿ/ಮ್ಯಾಕ್ಸ್ ಕಂಪೆನಿಯ ಪ್ರಾಂತೀಯ ನಿರ್ದೇಶಕ ಶಿವ ಕ್ಯಾಸಾ ಅವರಿಂದ ಮನ ಪ್ರಾಜೆಕ್ಟ್ ಲಿಮಿಟೆಡ್ ಸ್ಥಾಪಕ ಸದಸ್ಯ ಡಿ. ಕಿಶೋರ್ ರೆಡ್ಡಿ ಸ್ವೀಕರಿಸಿದರು.