ಮೂರನೇ ತಲೆಮಾರಿನ ತಂತ್ರಜ್ಞಾನ ಎನಿಸಿಕೊಂಡಿರುವ 3ಜಿ ಅಂತರ್ಜಾಲ ಸಂಪರ್ಕ ಸೌಲಭ್ಯದಿಂದಾಗಿ ನಿಮ್ಮ ಕನಸು, ಕಲ್ಪನೆಗಳೆಲ್ಲವೂ ಈಗ ನಿಜವೇ ಆಗಿಬಿಟ್ಟಿವೆ. ಈ ಅತ್ಯಾಧುನಿಕ ಹಾಗೂ ವೇಗದ ತಂತ್ರಜ್ಞಾನವು ಮನುಷ್ಯರು ಪರಸ್ಪರ ಸಂಪರ್ಕಕ್ಕೆ ಒಳಗಾಗುವ, ಸಂವಹನ ನಡೆಸುವ ವಿಧಾನವನ್ನೇ ಸಮಗ್ರವಾಗಿ ಬದಲಿಸಿಬಿಟ್ಟಿದೆ.
ಹಾಗೇ ಯೋಚಿಸಿ. ಕಚೇರಿಯ ದೊಡ್ಡ ಯೋಜನೆಯೊಂದರ ಕೆಲಸದಲ್ಲಿದ್ದಾಗಲೇ ಉದ್ಯಾನದಲ್ಲಿ ವಿಹರಿಸುತ್ತಿದ್ದೀರಿ. ಮೆಟ್ರೋ ರೈಲಲ್ಲಿ ಸಂಚರಿಸುವಾಗಲೇ ಮನೆಗೆ ಅಗತ್ಯ ದಿನಸಿ ಖರೀದಿಸುತ್ತಿದ್ದೀರಿ. ಕಚೇರಿಯ ತುಸು ವಿರಾಮದ ವೇಳೆಯಲ್ಲಿಯೇ ಮಕ್ಕಳ ಶಾಲಾ ಪಠ್ಯ-ಯೋಜನಾ ವರದಿಗಾಗಿ ಕಂಪ್ಯೂರ್‌ನಲ್ಲಿ ಸಂಶೋಧನೆಯನ್ನೂ ನಡೆಸುತ್ತಿದ್ದೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ನೇರವಾಗಿ ವೀಡಿಯೋ ಸಂವಹನ ನಡೆಸುತ್ತಿದ್ದೀರಿ.
ಇದೆಲ್ಲವೂ ಕೇವಲ ಕನಸಿನ ಲೋಕದ ಆಲೋಚನೆಗಳಲ್ಲ, ಎಲ್ಲವೂ ವಾಸ್ತವ ಸಂಗತಿಗಳು ಹಾಗೂ ಈಗಾಗಲೇ ನಿಮ್ಮ ಮನೆಯ ಬಾಗಿಲಿಗೇ ಬಂದಿರುವ ಸೌಲಭ್ಯಗಳು.
ಮೂರನೇ ತಲೆಮಾರಿನ ತಂತ್ರಜ್ಞಾನ ಎನಿಸಿಕೊಂಡಿರುವ 3ಜಿ ಅಂತರ್ಜಾಲ ಸಂಪರ್ಕ ಸೌಲಭ್ಯದಿಂದಾಗಿ ನಿಮ್ಮ ಕನಸು, ಕಲ್ಪನೆಗಳೆಲ್ಲವೂ ಈಗ ನಿಜವೇ ಆಗಿಬಿಟ್ಟಿವೆ. ಈ ಅತ್ಯಾಧುನಿಕ ಹಾಗೂ ವೇಗದ ತಂತ್ರಜ್ಞಾನವು ಮನುಷ್ಯರು ಪರಸ್ಪರ ಸಂಪರ್ಕಕ್ಕೆ ಒಳಗಾಗುವ, ಸಂವಹನ ನಡೆಸುವ ವಿಧಾನವನ್ನೇ ಸಮಗ್ರವಾಗಿ ಬದಲಿಸಿಬಿಟ್ಟಿದೆ.
ಈಗಂತೂ ವೈದ್ಯರು 3ಜಿ ಸೌಲಭ್ಯವನ್ನು ಬಳಸಿಕೊಂಡು ರೋಗಿ ಮತ್ತು ತಜ್ಞರ ವೈದ್ಯರ ನಡುವಿನ ಸಂಪರ್ಕ- ಸಂವಹನದ ಅವಕಾಶಗಳನ್ನು ಬಹಳವಾಗಿ ವಿಸ್ತರಿಸಿಬಿಟ್ಟಿದ್ದಾರೆ. ಅತ್ಯಂತ ವೇಗದ ಅಂತರ್ಜಾಲ ಸಂಪರ್ಕ ಒಳಗೊಂಡ ಮೊಬೈಲ್ ಸೇರಿದಂತೆ ವಿವಿಧ ನಿಸ್ತಂತು (ಸಂಚಾರಿ) ದೂರವಾಣಿ ಸಾಧನಗಳು ಈಗಂತೂ ವೈಯಕ್ತಿಕ ಜೀವನ ಹಾಗೂ ಕೆಲಸದ ಸ್ಥಳಗಳ ನಡುವಿನ ಅಂತರವನ್ನು, ಗಡಿಗಳನ್ನು, ಮಿತಿಗಳನ್ನೂ ಇಲ್ಲವಾಗಿಸಿಬಿಟ್ಟಿವೆ. ಅಚ್ಚರಿಯ ಸಂಗತಿಯೆಂದರೆ, ಕೆಲವರ ಅಭಿಪ್ರಾಯದಲ್ಲಿ ಈ ಬೆಳವಣಿಗೆಗಳು ಆಧುನಿಕ ಜೀವನದ ಗುಣಮಟ್ಟಕ್ಕೆ ಧಕ್ಕೆ ತರುವಂತಹವಾಗಿವೆ. ಆದರೆ, ಇನ್ನು ಕೆಲವರ ಪಾಲಿಗಂತೂ
ಈ ಆಧುನಿಕ ತಂತ್ರಜ್ಞಾನ ಎಂಬುದು ವೃತ್ತಿ ಬದುಕಿನಲ್ಲಿ ವೇಗವಾಗಿ ಹೆಚ್ಚಿನ ಬೆಳವಣಿಗೆ ಕಾಣಲು ಹಾಗೂ ವೈಯಕ್ತಿಕ ಬದುಕಿಗೂ ಹೆಚ್ಚಿನ ಸಮಯ ನೀಡಲು ಅವಕಾಶ ಮಾಡಿಕೊಡುತ್ತಿರುವ ಸಾಧನವಾಗಿದೆ.
ಸ್ಮಾರ್ಟ್‌ಫೋನ್ ಎಂಬ ಸಾಧನ ಭಾರತದಲ್ಲಿ ಬಹಳ ಸಾಮಾನ್ಯ ಎಂಬಂತಾಗುತ್ತಿರುವ ಹಾಗೂ ಹ್ಯಾಂಡ್‌ಸೆಟ್‌ಗಳುಬಹಳ ಕಡಿಮೆ ಬೆಲೆಗೂ ಲಭ್ಯವಾಗುತ್ತಿರುವ ಈ ದಿನಗಳಲ್ಲಿ 3ಜಿ ತಂತ್ರಜ್ಞಾನ ಆಧರಿಸಿದ ಸೇವೆಗಳ ಬಳಕೆ ಪ್ರಮಾಣವೂ ಹೆಚ್ಚುತ್ತಿದೆ. ಮೊಬೈಲ್‌ಗಳಲ್ಲಿಯೂ ಅಂತರ್ಜಾಲ ಬಳಕೆ ಹೆಚ್ಚುತ್ತಿದೆ. ಸೇವೆಯ ಲಭ್ಯತೆಯೂ ಬಹಳ ಸುಲಭವಾಗಿದೆ. ಅಲ್ಲದೇ ಈಗಂತೂ 2ಜಿ ದರಕ್ಕೇ 3ಜಿ ಸಂಪರ್ಕ ಮತ್ತು ಸೇವೆಗಳು ಲಭಿಸುತ್ತಿವೆ. ಹಾಗಾಗಿ ಗ್ರಾಹಕರು ಕಡಿಮೆ ಬೆಲೆಗೆ ವೇಗದ ಅಂತರ್ಜಾಲ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ಇದು ಬಹುಮುಖಿ ಸೇವೆಗಳನ್ನು ಬಳಸಿಕೊಳ್ಳುವ, ಅಗತ್ಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಅವಕಾಶಗಳನ್ನು ಹಿಗ್ಗಿಸುತ್ತಿದೆ, ಜನರ ನಿತ್ಯದ ಜೀವನವನ್ನೂ ಸುಲಭಗೊಳಿಸುತ್ತಿದೆ.
ದೇಶದಲ್ಲಿ 3ಜಿ ತಂತ್ರಜ್ಞಾನ ಆಧರಿಸಿದ ಸೇವೆಗಳನ್ನು ಒದಗಿಸುವಲ್ಲಿ ಭಾರತದ ದೂರಸಂಪರ್ಕ ಉದ್ಯಮ ಬಹಳ ಆಸಕ್ತಿ ವಹಿಸಿ ಪ್ರಮುಖ ಪಾತ್ರವನ್ನೂ ವಹಿಸಿದೆ. ದೊಡ್ಡ ಮಟ್ಟದ ಬೆಳವಣಿಗೆಗೆ ಅವಕಾಶವಿರುವ ಈ ವಿಭಾಗದಲ್ಲಿ ಟಾಟಾ ಡೊಕೊಮೊ, ಭಾರ್ತಿ ಏರ್‌ಟೆಲ್, ಏರ್‌ಸೆಲ್, ಬಿಎಸ್‌ಎನ್‌ಎಲ್ ಸೇವೆಗಳನ್ನು ಒದಗಿಸುತ್ತಿವೆ. ಆದರೆ, ಟಾಟಾ ಡೊಕೊಮೊ ಮಾತ್ರ ಇತರೆಲ್ಲ ದೂರಸಂಪರ್ಕ ಸಂಸ್ಥೆಗಳಿಗಿಂತ ಹೆಚ್ಚು ಸ್ಪರ್ಧಾತ್ಮಕ ದರದಲ್ಲಿ ವೈವಿಧ್ಯಮಯ ಸೇವೆಗಳನ್ನು ಒದಗಿಸುತ್ತಿದೆ.
- ರೋಹಿತ್ ಟಂಡನ್
(ಟಾಟಾ ಡೊಕೊಮೊ ಕರ್ನಾಟಕ ವಲಯ ಮುಖ್ಯಸ್ಥ)