ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹೀಂದ್ರಾ ರೇವಾ ವಿದ್ಯುತ್ ಕಾರುಗಳ ಚಾರ್ಜಿಂಗ್ ಪಾಯಿಂಟ್ ಆರಂಭವಾಗಿದೆ. ದೇಶದಲ್ಲೇ ಇಂಥ ವ್ಯವಸ್ಥೆ ಮೊದಲ ಬಾರಿಗೆ ಆರಂಭವಾಗುತ್ತಿರುವುದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ. ಮಹೀಂದ್ರಾ ಇ2ಓ ಗ್ರಾಹಕರಿಗೆ ವಿಶೇಷವಾಗಿ ಈ ವ್ಯವಸ್ಥೆ ಒದಗಿಸಲಾಗುತ್ತಿದೆ. ಉಚಿತವಾಗಿ ಈ ಸೇವೆಯ ಜತೆಗೆ ಪಾರ್ಕಿಂಗ್ ಶುಲ್ಕದಲ್ಲೂ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ದೇಶದ ಉಳಿದ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವಿದ್ಯುತ್‌ನಿಂದ ಸಂಚರಿಸುವ ಕಾರುಗಳು ಹೆಚ್ಚಾಗಿವೆ. ಜತೆಗೆ ಮಹೀಂದ್ರಾ ರೇವಾ ಸಂಸ್ಥೆ ಬೆಂಗಳೂರಿನ ಹಲವು ಸ್ಥಳಗಳಲ್ಲಿ ಕಾರುಗಳಿಗಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಂಭಿಸಿದೆ.