ಚರ್ಮದ ಸಂರಕ್ಷಣೆಗೆ ಪ್ಯಾರಾಚೂಟ್ ಲೋಷನ್
ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆಗಾಗಿ ಪ್ಯಾರಾಚೂಟ್ ನೂತನ ಅಡ್ವಾನ್ಸಡ್ ಬಟರ್ ಸ್ಮೂತ್ ಬಾಡಿ ಲೋಷನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ..
ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆಗಾಗಿ ಪ್ಯಾರಾಚೂಟ್ ನೂತನ ಅಡ್ವಾನ್ಸಡ್ ಬಟರ್ ಸ್ಮೂತ್ ಬಾಡಿ ಲೋಷನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬಳಕೆಯಿಂದ ನೀವು ನೈಸರ್ಗಿಕವಾದ ಮೃದು ಚರ್ಮವನ್ನು ಕಾಯ್ದುಕೊಳ್ಳಬಹುದು. ಇದರ ತಯಾರಿಕೆಗಾಗಿ ತೆಂಗಿನಕಾಯಿಯ ಬೆಣ್ಣೆ ಬಳಕೆ ಮಾಡಲಾಗಿದ್ದು ಇದು ಚಳಿಗಾಲದಲ್ಲಿ ಸೂಕ್ತ ಆರೈಕೆ ಮಾಡಲು ಸಹಾಯ ಮಾಡುತ್ತದೆ. ಎರಡು ಗಂಟೆಗಳ ಅವಧಿಯಲ್ಲಿ ನಿಮ್ಮ ಚರ್ಮ ಭಾಗದಲ್ಲಿನ ತೇವಾಂಶವನ್ನು ದುಪಟ್ಟು ಮಾಡುತ್ತದೆ. ಅಡ್ವಾನ್ಸಡ್ ಬಟರ್ ಸ್ಮೂತ್ ಬಾಡಿ ಲೋಷನ್ 100 ಎಂ.ಎಲ್.ನ ಬೆಲೆ 75 ಹಾಗೂ 250 ಎಂ.ಎಲ್.ನ ಬೆಲೆ 160.
'ಕೊ-ಬ್ರ್ಯಾಂಡೆಡ್ ಪ್ರೀಪೇಯ್ಡ್' ನೂತನ ಕಾರ್ಡ್ ಮಾರುಕಟ್ಟೆಗೆ
ಇಟ್ಜ್‌ಕ್ಯಾಷ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ವೀಸಾ ಕಂಪನಿಯು ನೂತನ 'ಕೊ-ಬ್ರ್ಯಾಂಡೆಡ್ ಪ್ರೀಪೇಯ್ಡ್' ಕಾರ್ಡ್ ಪರಿಚಯಿಸಿದೆ. ಈ ನೂತನ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ತಮ್ಮ ಕಾರ್ಡ್‌ಗಳ ವೀಸಾ ಸಂಪರ್ಕ ಜಾಲವಿರುವ ಎಲ್ಲಾ ಸ್ಥಳಗಳಲ್ಲಿ ಬಳಸಬಹುದಾಗಿದೆ. ಈ ಸಹಪ್ರಾಯೋಜಕತ್ವದ ಕಾರ್ಡ್ ಮೂಲಕ ಬ್ಯಾಂಕ್ ಖಾತೆಗಳಲ್ಲದಿರುವ ಗ್ರಾಹಕರೂ ಸಹ ಕಡಿಮೆ ವೆಚ್ಚದ ಹಾಗೂ ಅನುಕೂಲಕರ ರೀತಿಯಲ್ಲಿ ಬಿಲ್ ಪಾವತಿ ಹಾಗೂ ಹಣ ವರ್ಗಾವಣೆ ಸೇರಿದಂತೆ ತಮ್ಮ ಹಣಕಾಸು ವಹಿವಾಟು ಮಾಡಬಹುದು. ಈ ಕುರಿತು ಮಾತನಾಡಿರುವ ಇಟ್ಜ್‌ಕ್ಯಾಷ್ ಕಾರ್ಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನವೀನ್ ಸೂರ್ಯ, ಭಾರತೀಯ ಪ್ರಿಪೇಯ್ಡ್ ಕಾರ್ಡ್ ಕ್ಷೇತ್ರದಲ್ಲಿ ಇದು ಹೊಸ ಬದಲಾವಣೆಯನ್ನು ತರಲಿದೆ. ಭಾರತದಲ್ಲಿ ಪ್ರೀಪೇಯ್ಡ್ ಕಾರ್ಡ್‌ಗಳ ಕ್ಷೇತ್ರದಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದ್ದು, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದೇವೆ. ಈ ಸೇವೆಯಿಂದ ಗ್ರಾಹಕರು ನೇರವಾಗಿ ಹಣಕಾಸು ಸೇವೆಗಳಿಲ್ಲದ ಅಥವಾ ನಿಯಮಿತ ಬ್ಯಾಂಕಿಂಗ್ ಸೌಲಭ್ಯವಿರುವ ಗ್ರಾಹಕರಿಗೆ ಇದು ಅತ್ಯಂತ ಅನುಕೂಲಕರ ಎಂದು ತಿಳಿಸಿದ್ದಾರೆ.
ತೋಷಿಬಾದಿಂದ ಲ್ಯಾಪ್‌ಟಾಪ್ ಬಿಡುಗಡೆ
ಜಪಾನ್ ದೇಶದ ತೋಷಿಬಾ ಕಾರ್ಪೋರೇಷನ್‌ನ ಅಂಗ ಸಂಸ್ಥೆಯಾದ ತೋಷಿಬಾ ಇಂಡಿಯಾ 18 ವಿವಿಧ ರೀತಿಯ ಅತ್ಯಾಕರ್ಷಕ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇವು ಸಂಪೂರ್ಣ ಎಚ್‌ಡಿ ಸ್ಕ್ರೀನ್ ಹೊಂದಿದ್ದು, ಹಾರ್ಮನ್ ಮತ್ತು ಕಾರ್ಡನ್ ಸ್ಪೀಕರ್ ಹೊಂದಿವೆ. ನಾಲ್ಕು ಔಟ್‌ಪುಟ್‌ಗಳಿವೆ. 'ಸಿ' ಸರಣಿಯ ಲ್ಯಾಪ್‌ಟಾಪ್‌ಗಳು ವಿಶಾಲ ವ್ಯಾಪ್ತಿಯ ತಾಂತ್ರಿಕ ಅಂಶಗಳಿಂದ ಕೂಡಿವೆ. 'ಎಲ್' ಸರಣಿಯು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಮೆಟಾಲಿಕ್ ಹೊದಿಕೆ ಹೊಂದಿದೆ. ಲ್ಯಾಪ್‌ಟಾಪ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ತೋಷಿಬಾ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಸಂಜಯ್ ವಾರ್ಕೆ ಮಾತನಾಡಿ, ಸಂಸ್ಥೆಯ ಉತ್ಪನ್ನಗಳಲ್ಲಿನ ಗುಣಮಟ್ಟ ಅತ್ಯುತ್ತಮವಾಗಿದೆ. ಅತಿ ವೇಗವಾಗಿ ಕಾರ್ಯನಿರ್ವಹಿಸಲಿವೆ. ಗ್ರಾಹಕರು ನಿರೀಕ್ಷೆ ಪಡುತ್ತಿರುವ ಎಲ್ಲಾ ಅಂಶಗಳು ಇದರಲ್ಲಿವೆ ಎಂದರು. ಈ ಲ್ಯಾಪ್‌ಟಾಪ್‌ಗಳ ಬೆಲೆ 24,730ರಿಂದ ಪ್ರಾರಂಭವಾಗಲಿವೆ.
ಪ್ಲಾನೆಟ್‌ಎಂ ಕೈ ಜೋಡಿಸಿದ ಪೇಬ್ಯಾಕ್
ಮನರಂಜನ ಸರಕು ಸಾಮಗ್ರಿಗಳ ಸಗಟು ಮಾರಾಟ ಜಾಲವಾದ ಪ್ಲಾನೆಟ್‌ಎಂ, ಲಾಯಲ್ಟಿ ಪ್ರೋಗ್ರಾಮ್ ಸೇವಾ ಸಂಸ್ಥೆಯಾದ ಪೇಬ್ಯಾಕ್ ಜತೆ ಕೈ ಜೋಡಿಸಿದೆ. ಈ ಮೂಲಕ ಪ್ಲಾನೆಟ್ ಎಂ ಗ್ರಾಹಕರು ಮನರಂಜನಾ ವಿಭಾಗದ ರಿಟೇಲ್ ಮಳಿಗೆಯಲ್ಲೂ ಪೇಬ್ಯಾಕ್ ಸೇವೆ ಪಡೆಯುಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ, ಗ್ರಾಹಕರು ದೇಶದಾದ್ಯಂತ ಇರುವ ಯಾವುದೇ ಪ್ಲಾನೆಟ್‌ಎಂ ಮಳಿಗೆಗಳಲ್ಲಿ ಅಥವಾ ಢಿಢಿಢಿ.ಠಛಣಛಿಛ್ಛ್ಞ.್ಝಟಿ ವೆಬ್‌ಸೈಟ್‌ಗೆ ಲಾಗ್‌ಇನ್ ಮಾಡುವ ಮೂಲಕವೂ ಪಡೆದುಕೊಳ್ಳಬಹುದು. ಪ್ಲಾನೆಟ್‌ಎಂ ಮಳಿಗೆಯಲ್ಲಿ 100ಕ್ಕಿಂತ ಹೆಚ್ಚು ಮೇಲ್ಪಟ್ಟ ವಸ್ತುಗಳನ್ನು ಖರೀದಿಸಿದಲ್ಲಿ ಅಂಕಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಕುರಿತು ಪೇಬ್ಯಾಕ್ ಇಂಡಿಯಾ ಸಂಸ್ಥೆ ಮುಖ್ಯ ಕಾರ್ಯಕಾರಿ ಅಧಿಕಾರಿ ರಾಹುಲ್ ರಾಣಾ ಮಾತನಾಡಿ, ಪೇಬ್ಯಾಕ್ ಸಂಸ್ಥೆಯು ವೈದ್ಯಕೀಯ ಕ್ಷೇತ್ರ ಸೇರಿದಂತೆ ಪೆಟ್ರೋಲ್ ಬಂಕ್, ಸಗಟು ವ್ಯಾಪಾರ ಮಳಿಗೆ, ಫಾರ್ಮ್ಯೂಲಾ-1, ಯೂನಿವರ್‌ಸೆಲ್, ವೋಡೋಫೋನ್, ಬಿಗ್ ಬಜಾರ್, ಹೋಮ್‌ಟೌನ್, ಬ್ರಾಂಡ್ ಫ್ಯಾಕ್ಟರಿ, ಫ್ಯೂಚರ್ ಬಜಾರ್, ಫುಡ್ ಬಜಾರ್, ಫುಡ್ ಹಾಲ್, ಪ್ಯಾಂಟಲೂನ್ಸ್, ಬುಕ್‌ಮೈಶೋ ಡಾಟ್ ಕಾಂ ನಲ್ಲಿ ವಸ್ತುಗಳನ್ನು ಖರೀದಿಸುವ ಮೂಲಕ ಗ್ರಾಹಕರು ಪೇಬ್ಯಾಕ್ ಪಾಯಿಂಟ್ಸ್ ಪಡೆದುಕೊಳ್ಳಬಹುದು ಎಂದರು.
ವೆಲ್‌ಸ್ಟನ್ ಎನರ್ಜಿ ಸಂಸ್ಥೆಯಿಂದ ಸೋಲಾರ್ ಯೋಜನೆ
ವೆಲ್‌ಸ್ಟನ್ ಎನರ್ಜಿ ಸಂಸ್ಥೆಯು ರಾಜ್ಯದ ಚಿತ್ರದುರ್ಗದಲ್ಲಿ 8.02 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಯೋಜನೆಯನ್ನು ಪ್ರಾರಂಭಿಸಿದೆ. ಮಂಗಳೂರು ವಿದ್ಯುತ್ ಸರಬರಾಜು ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ವಿದ್ಯುತ್ ಖರೀದಿ ಒಪ್ಪಂದದನ್ವಯ ಸಂಸ್ಥೆಯು 2014ರ ಮಾರ್ಚ್‌ನಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕಾಗಿತ್ತು. ಅವಧಿಗೂ ಮುನ್ನವೇ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದೊಂದು ಸೋಲಾರ್ ಮತ್ತು ಗಾಳಿ ಚಾಲಿತ ಯೋಜನೆಗಳಲ್ಲಿ ಒಂದಾಗಿದ್ದು, ವಿದ್ಯುತ್ ಬೇಡಿಕೆಯನ್ನು ತಗ್ಗಿಸಲು ಅನುಷ್ಠಾನಗೊಳಿಸಲಾಗಿದೆ. ಇದರಿಂದ 33,600 ಮನೆಗಳಿಗೆ ವಿದ್ಯುತ್ ಪೂರೈಸಲು ಬೇಕಾಗುವ 12.264 ದಶಲಕ್ಷ ಕಿಲೋ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುವ ಮೂಲಕ ವಾರ್ಷಿಕ ಗರಿಷ್ಠ ವಿದ್ಯುತ್ ಬೇಡಿಕೆಯಾದ ಶೇ.27.4ರಷ್ಟು ಕೊರತೆ ನೀಗಿಸಲಿದೆ. ಈ ಯೋಜನೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವೆಲ್‌ಸ್ಟನ್ ಎನರ್ಜಿ ಸಂಸ್ಥೆಯ ಕಾರ್ಯಕಾರಿ ನಿರ್ವಾಹಕ ವಿನೀತ್ ಮಿಟ್ಟಲ್, ವೆಲ್‌ಸ್ಟನ್ ಎನರ್ಜಿ ಭಾರತದ ಅಭಿವೃದ್ಧಿಗೆ ಶುದ್ಧ ಶಕ್ತಿಯನ್ನು ಒದಗಿಸಲು ಬದ್ಧವಾಗಿದೆ. ಪುನರುತ್ಪಾದನಾ ಯೋಜನೆಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಬೇಡಿಕೆ ಪೂರೈಕೆ ನಡುವಿನ ಕೊರತೆ ನೀಗಿಸಲಿದೆ ಎಂದರು. ವೆಲ್‌ಸ್ಟನ್ ಯೋಜನೆಗಳು ರಾಷ್ಟ್ರದ ವಿದ್ಯುತ್ ಬೇಡಿಕೆಗೆ ಕೊಡುಗೆ ನೀಡಲು ಉದ್ದೇಶಿಸಿದೆ. ಕೈಗಾರಿಕಾ ಮುನ್ಸೂಚನೆಯಂತೆ ವಾರ್ಷಿಕ ಶೇ.20 ಬೆಳವಣಿಗೆ ಮತ್ತು ಸಹಕಾರಿ ಪರಿಸರ ನೀತಿಗಳೊಂದಿಗೆ ಮುಂದಿನ ಮೂರು ವರ್ಷಗಳಲ್ಲಿ 1.75ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ ಎಂದರು.
ಬಿಗ್ 92.7 ಎಫ್.ಎಂನ ವಿಜೇತ ಸೋನಲ್
ಬಿಗ್ 92.7 ಎಫ್.ಎಂ ನಡೆಸಿದ ಡಾಬರ್ ಹಂಟಿಸ್ ಬಿಗ್ ಗೋಲ್ಡನ್ ವಾಯ್ಸ್ ಜೂನಿಯರ್ ಸ್ಪರ್ಧೆಯಲ್ಲಿ ಅತ್ಯಾಕರ್ಷಕವಾಗಿ ಹಾಡಿದ ಸೋನಲ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ಬಿ.ಜೆ. ಭರತ್ ಅವರು ಸ್ಪರ್ಧೆಯ ಅಂತಿಮ ಸುತ್ತಿನ ತೀರ್ಪುಗಾರರಾಗಿದ್ದು, ಏಳು ಅಂತಿಮ ಸ್ಪರ್ಧಿಗಳಲ್ಲಿ ವಿಜೇತರನ್ನು ಅಯ್ಕೆಗೊಳಿಸಿದ್ದಾರೆ. ವಿಜೇತರಾದ ಸೋನಲ್ ಅವರಿಗೆ ಒಮ್ಮೆ ಸಂಗೀತ ನಿರ್ದೇಶಕ ಬಿ.ಜೆ. ಭರತ್ ಜೊತೆ ಮ್ಯೂಸಿಕ್ ಆಲ್ಬಂನಲ್ಲಿ ಹಾಡುವ ಅವಕಾಶವನ್ನು ಬಿಗ್ ಎಫ್‌ಎಂ ನೀಡಿದೆ.
ಇತ್ತೀಚೆಗೆ ಗರುಡಾ ಮಾಲ್‌ನಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಸೋನಲ್ ಕಂಠಸಿರಿಯಿಂದ ಜನಮನ ಗೆದ್ದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸೋನಲ್, ನನಗೆ ಅತಿ ದೊಡ್ಡ ಅವಕಾಶವನ್ನು ಈ ಬಿಗ್‌ಎಫ್‌ಎಂ ನೀಡಿದೆ. ನಾನು ಒಬ್ಬ ಸಂಗೀತ ನಿರ್ದೇಶಕರೊಂದಿಗೆ ಅಲ್ಬಂನಲ್ಲಿ ಹಾಡಲು ಅವಕಾಶ ನೀಡಿರುವುದು ಸಾಕಷ್ಟು ಸಂತಸ ತಂದಿದೆ ಎಂದರು.
ಬಿಗ್‌ಎಫ್‌ಎಂ ಮಾರುಕಟ್ಟೆ ಮುಖ್ಯಸ್ಥ ಅಶ್ವಿನ್ ಪದ್ಮನಾಭನ್ ಮಾತನಾಡಿ, ಸೋನಲ್ ಅವರನ್ನು ವಿಜೇತರೆಂದು ಘೋಷಿಸಲು ತುಂಬಾ ಸಂತೋಷವಾಗುತ್ತದೆ. ಜನಪ್ರಿಯ ಗಾಯಕ ವಿ.ಹರಿಕೃಷ್ಣನ್ ಅವರು ಉತ್ತಮ ತೀರ್ಪು ನೀಡಿದ್ದಾರೆ. ಅವರು ಮುಂದೆ ದೊಡ್ಡ ಸಂಗೀತ ನಿರ್ದೇಶಕಿಯಾಗಲಿ ಎಂದು ಹಾರೈಸಿದ್ದಾರೆ.