ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಮೂರ್ತಿ ಮ್ಯಾಜಿಕ್‌ಗೆ ಇನ್ಫಿ ಲಾಭ ಏರಿಕೆ

ಇತ್ತೀಚೆಗಷ್ಟೇ ಇನ್ಫೋಸಿಸ್‌ಗೆ ಮರು ಪ್ರವೇಶ ಮಾಡಿದ ನಾರಾಯಣಮೂರ್ತಿಯವರ ಕೈಚಳಕ ಕೆಲಸ ಮಾಡಿದೆ.

Rashmi Kasaragodu
Updated On : 13 Jul 2013, 11:41 am

ಪಿಟಿಐ, ಬೆಂಗಳೂರು/ಮುಂಬೈ, ಜು.12-
ಇತ್ತೀಚೆಗಷ್ಟೇ ಇನ್ಫೋಸಿಸ್‌ಗೆ ಮರು ಪ್ರವೇಶ ಮಾಡಿದ ನಾರಾಯಣಮೂರ್ತಿಯವರ ಕೈಚಳಕ ಕೆಲಸ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.3.7ರಷ್ಟು ಹೆಚ್ಚಳವಾಗಿದೆ.
 ಜೂ.30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಲಾಭ 2,374 ಕೋಟಿ ಆಗಿದೆ. ಹೀಗೆಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ ಬಾಂಬೆ ಷೇರು ಪೇಟೆಗೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.ಐಟಿ ಸಂಸ್ಥೆ ಕಳೆದ ವರ್ಷದ ಇದೇ ಅವಧಿಯಲ್ಲಿ 2,289 ಕೋಟಿ ಲಾಭ ದಾಖಲಿಸಿತ್ತು. ಲಾಭದ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಶುಕ್ರವಾರ ಬಾಂಬೆ ಷೇರು ಪೇಟೆಯಲ್ಲಿ ಇನ್ಫೋಸಿಸ್‌ನ ಷೇರುಗಳಿಗೆ ಹೆಚ್ಚು ಬೇಡಿಕೆ ಉಂಟಾಯಿತು.  ಷೇರು ಪೇಟೆಯಲ್ಲಿ ವಹಿವಾಟು ಆರಂಭವಾಗುತ್ತಲೇ ಸಂಸ್ಥೆಯ ಪ್ರತಿ ಷೇರಿಗೆ 2,905ರಿಂದ ಆರಂಭವಾಗಿತ್ತು.

ಅತ್ಯಧಿಕ ಏರಿಕೆ
ಆದಾಯದಲ್ಲಿ ಹೆಚ್ಚಳವಾದ್ದರಿಂದ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರಿನ ಬೆಲೆ ಶೇ.10.9ರಷ್ಟು ಏರಿಕೆ ಕಂಡಿತು.  ಕಳೆದ ಒಂದರಿಂದ ಒಂದೂವರೆ ತಿಂಗಳಿಗೆ ಹೋಲಿಸಿದರೆ ಇದು ಅತ್ಯಧಿಕ ಏರಿಕೆಯಾಗಿದೆ. ಈ ಬೆಳವಣಿಗೆ ಮಾರುಕಟ್ಟೆ ವಿಶ್ಲೇಷಕರಲ್ಲಿ ಭಾರಿ ಅಚ್ಚರಿಯನ್ನುಂಟು ಮಾಡಿದೆ. ಟಿಸಿಎಸ್‌ನ ಷೇರು ಶೇ.2.9 ಮತ್ತು ವಿಪ್ರೋ ಷೇರು ಶೇ.3.2ರಷ್ಟು ಏರಿಕೆಯಾಗಿದೆ.

ಆದಾಯದಲ್ಲಿ ಹೆಚ್ಚಳ
ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಕಂಪನಿ ಶೇ.3.7ರಷ್ಟು ಲಾಭ ದಾಖಲಿಸಿದ್ದರಿಂದಾಗಿ ಅದರ ಒಟ್ಟು ಆದಾಯ 9,616 ಕೋಟಿಯಿಂದ 11, 267 ಕೋಟಿಗೆ ಏರಿಕೆಯಾಗಿದೆ.

ಕಳೆದ ವರ್ಷದ ಪರಿಸ್ಥಿತಿ
ಕಳೆದ ಹಣಕಾಸು ವರ್ಷದಲ್ಲಿ ಸಾಫ್ಟ್‌ವೇರ್ ರಫ್ತು ಕ್ಷೇತ್ರದಲ್ಲಿ ಇನ್ಫೋಸಿಸ್‌ನ ಸಾಧನೆ ತೃಪ್ತಿಕರವಾಗಿರಲಿಲ್ಲ. ನಾರಾಯಣಮೂರ್ತಿಯವರು ಮುಖ್ಯಸ್ಥರಾಗಿರುವ ವರೆಗೆ ಅಗ್ರ ಸ್ಥಾನ ಕಾಯ್ದುಕೊಂಡಿದ್ದ ಸಂಸ್ಥೆ ನಿವೃತ್ತರಾದ ಬಳಿಕ ನಿಧಾನವಾಗಿ ಟಿಸಿಎಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ವಿಪ್ರೋಗೆ ಸ್ಥಾನ ಬಿಟ್ಟುಕೊಟ್ಟಿತ್ತು.   ಆದರೆ ಮೂರ್ತಿಯವರ ಮರು ಪ್ರವೇಶದಿಂದಾಗಿ ಅಗ್ರ ಸ್ಥಾನವನ್ನು ಮತ್ತೆ ಪಡೆದುಕೊಳ್ಳುವ ಸೂಚನೆ ನೀಡಿದೆ.

ಅಮೆರಿಕದಲ್ಲೂ ಲಾಭ
ಅಮೆರಿಕದ ಡಾಲರ್‌ನಲ್ಲೂ ಶೇ.0.5ರಷ್ಟು ಲಾಭ ಗಳಿಸುವಲ್ಲಿ ಬೆಂಗಳೂರು ಮೂಲದ ಕಂಪನಿ ಯಶಸ್ವಿಯಾಗಿದೆ.
   ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಇನ್ಫೋಸಿಸ್ 418 ಮಿಲಿಯನ್ ಅಮೆರಿಕನ್ ಡಾಲರ್ (2,502 ಕೋಟಿ) ಗಳಿಸಿದೆ. ಇದು ಕಳೆದ ಹಣಕಾಸು ವರ್ಷ (2012-13) ಮೊತ್ತ (2,490 ಕೋಟಿ)ಕ್ಕಿಂತ ಹೆಚ್ಚಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement