ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ತಾನಿಷ್ಕ್‌ನಿಂದ ಇನರ ಬಿಡುಗಡೆ

ಭಾರತದ ಜ್ಯುವೆಲ್ಲರಿ ಬ್ರ್ಯಾಂಡ್‌ಗಳಲ್ಲಿ ಒಂದಾದ ತಾನಿಷ್ಕ್ 'ಇನರ' ಮತ್ತು ಮಿಯಾ 3.0 ಸಂಗ್ರಹವನ್ನು ಪರಿಚಯಿಸುತ್ತಿದೆ. ಹೊಸ ತಲೆಮಾರಿನ ...

Rashmi Kasaragodu
Updated On : 22 Jul 2013, 1:34 am

ಬೆಂಗಳೂರು: ಭಾರತದ ಜ್ಯುವೆಲ್ಲರಿ ಬ್ರ್ಯಾಂಡ್‌ಗಳಲ್ಲಿ ಒಂದಾದ ತಾನಿಷ್ಕ್ 'ಇನರ' ಮತ್ತು ಮಿಯಾ 3.0 ಸಂಗ್ರಹವನ್ನು ಪರಿಚಯಿಸುತ್ತಿದೆ. ಹೊಸ ತಲೆಮಾರಿನ ವಜ್ರಾಭರಣ ಸಂಗ್ರಹ ಮತ್ತು ಟ್ರೆಂಡಿ, ಹಗುರ, ಭಾರದ, ಆಕರ್ಷಕ ಆಭರಣಗಳು ಇದಾಗಿದ್ದು, ಪ್ರೀತಿ, ಸಾಮರ್ಥ್ಯ ಮತ್ತು ಶುದ್ಧತೆಯ ಭರವಸೆ ನೀಡುತ್ತದೆ.
ಇನರ ಆಭರಣ ಪ್ರಿಯರಿಗಾಗಿ ಬಿಡುಗಡೆಗೊಳ್ಳಲಿದ್ದು, ಅರೆಬಿಕ್ ಪದ ಇನರ ಹೊಳಪು ಅಥವಾ ಬೆಳಕಿನ ಸಂಕೇತವಾಗಿದೆ. ಇನರದ ಪ್ರತಿ ತುಣುಕು ಕಾಸ್ಮಿಕ್ ಸ್ವಿರ್ಲ್ಸ್, ಮೆಟರ್ ಶವರ್ ಮತ್ತು ಸ್ಟಾರ್ ಬ್ರುಸ್ಟಸ್‌ಗಳನ್ನು ಬದುಕಿಗೆ ತೆರೆದಿಡುತ್ತದೆ. ಈ ಸಂಗ್ರಹವನ್ನು ಅತ್ಯಾಕರ್ಷಕವಾಗಿ ಕಸೂತಿಗೊಳಿಸಲಾಗಿದೆ. 120ಕ್ಕೂ ಹೆಚ್ಚು ಶೈಲಿಗಳಲ್ಲಿ ಕಾಣಿಸಿಕೊಂಡಿರುವ ಇನರ ಸಂಗ್ರಹ ನಕ್ಲೇಸ್, ಬಳೆ, ಕಿವಿಯೋಲೆ ಮತ್ತು ಕಾಕ್‌ಟೈಲ್ ರಿಂಗ್‌ಗಳನ್ನು ಹೊಂದಿದೆ. ದರ 2 ಲಕ್ಷದಿಂದ 6ಲಕ್ಷದವರೆಗೆ ಗ್ರಾಹಕರಿಗೆ ನಾನಾ ಆಯ್ಕೆಯ ಅವಕಾಶವಿದೆ. ಈ ಕುರಿತು ಪ್ರತಿಕ್ರಯಿಸಿದ ತಾನಿಷ್ಕ್ ರಿಟೇಲ್ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ, ಪ್ರತಿಯೊಬ್ಬ ಮಹಿಳೆಯ ವ್ಯಕ್ತಿತ್ವ ಬಿಂಬಿಸುವ ಸಂಶೋಧನಾತ್ಮಕ ವಿನ್ಯಾಸದ ಸಂಗ್ರಹವನ್ನು ಪರಿಚಯಿಸಲು  ಸಂತೋಷವಾಗುತ್ತಿದೆ. ನೈಜ ವಜ್ರಗಳ ಕಸೂತಿಯನ್ನು ಭಾರತೀಯ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದರು.


25ರಂದು ಹೇರ್ ಟ್ರೆಂಡ್ ಶೋ
ಇಂಡೋಲಾ ಕಂಪನಿಯ ಎರಡನೇ ಸಂಚಿಕೆ ಸ್ಮಾರ್ಟ್ ಸ್ಟ್ರೀಟ್ ಕಲೆಕ್ಷನ್-2013 ಜು.25ಕ್ಕೆ ವಾರ್ಷಿಕ ಹೇರ್ ಟ್ರೆಂಡ್ ಶೋ ನಡೆಸಲಿದೆ. ಈ ಅಪರೂಪದ ವಿಭಿನ್ನ ಮಾದರಿಯ ಹೇರ್ ಟ್ರೆಂಡ್ ಶೋನಲ್ಲಿ ಅಂತರಾಷ್ಟ್ರೀಯ ಖ್ಯಾತಿ ಹೇರ್ ಸ್ಟೈಲಿಸ್ಟ್ ತಜ್ಞರು ಭಾಗವಹಿಸಲಿದ್ದು ತಮ್ಮ ವಿಭಿನ್ನ ಶೈಲಿಯ ಹೇರ್ ಸ್ಟೈಲ್‌ಗಳನ್ನು ಪ್ರದರ್ಶಿಸಲಿದ್ದಾರೆ. ಡೈಟರ್ ಕೈಜರ್ ಅಂತಾರಾಷ್ಟ್ರೀಯ ಖ್ಯಾತಿಯ ಹೇರ್‌ಸ್ಟೈಲಿಸ್ಟ್ ತಜ್ಞ ಸುಮಾರು 60ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ನಮೂನೆಯ ಮಾಹಿತಿ ಆಧಾರಿತ ಕಾರ್ಯಾಗಾರ, ಸ್ಪರ್ಧೆ ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸಿರುವ ಕೈಜರ್, ಇದೀಗ 3-ಡಿ ಡ್ರೀಮ್ಸ್, ಗೆಲ್ಕಾಟಿಕ್ ಗ್ಲಾಮರ್, ಹ್ಯಾಕ್ ಅಟ್ಯಾಕ್, ಪ್ಯೂರ್ ಸಿಂಪ್ಲಿಸಿಟಿ ಹಾಗೂ ರೋಮ್ಯಾಂಟಿಕ್ ಯೂತ್ ಎಂಬ ಐದು ಬಗೆಯ ವಿಭಿನ್ನ ಹೇರ್‌ಸ್ಟೈಲ್ ಮಾದರಿಯನ್ನು ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮದ ಅಂತ್ಯದಲ್ಲಿ ಮಾಡೆಲ್‌ಗಳಿಂದ ವರ  ರಂಜಿತ ಗ್ಲಾಮರ್ ಕ್ಯಾಟ್‌ವಾಕ್ ಸಹ ಏರ್ಪಡಿಸಲಾಗಿದೆ.



ವಿ-ಗಾರ್ಡ್‌ನಿಂದ ವಾರ್ಷಿಕ ಸ್ಪರ್ಧೆ
ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕಂಪನಿಯಾದ ವಿ - ಗಾರ್ಡ್ ಇಂಡಸ್ಟ್ರೀಸ್ ಇದೀಗ ತನ್ನ ವಾರ್ಷಿಕ ಸ್ಪರ್ಧೆಯಾದ ಬಿಗ್ ಐಡಿಯಾ ಬಿಸಿನೆಸ್ ಪ್ಲಾನ್ ಮೂರನೇ ಸಂಚಿಕೆ ಪ್ರಾರಂಭಿಸಿದೆ.
ಎಲ್ಲಾ ಬಿ ಸ್ಕೂಲ್ ಹಾಗೂ ಬಿ.ಟೆಕ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಆವಿಷ್ಕಾರ ಮತ್ತು ಉದ್ಯಮಶೀಲತೆ ಪ್ರತಿಭೆಯನ್ನು ಗುರುತಿಸಲು ಈ ವಿಶೇಷ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿದೆ. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿ ಗಾರ್ಡ್ ಸಂಸ್ಥೆಯ ಬಗ್ಗೆ ಒಂದು ಬಿಸಿನೆಸ್ ಯೋಜನೆಯನ್ನು ರೂಪಿಸಬೇಕಿದೆ. ಆ ನಿಟ್ಟಿನಲ್ಲಿ ಕಂಪನಿಯು ಎಲ್ಲಾ ವಿದ್ಯಾರ್ಥಿಗಳಿಗೂ ಈ ಸಂಬಂಧ ಮಾಹಿತಿಯನ್ನು ನೀಡಿ ಆ ಮುಖೇನ ಮೂರು ಸದಸ್ಯರಿರುವ ಒಂದೊಂದು ತಂಡವಾಗಿ ರೂಪಿಸುತ್ತದೆ. ಈ ತಂಡದ ಪ್ರತಿಯೊಬ್ಬ ಸದಸ್ಯರು ಸಹ ಕಂಪನಿಯ ಬಿಗ್ ಐಡಿಯಾಗಳಾದ ಆವಿಷ್ಕಾರ, ಸಂಶೋಧನೆ, ಕೌಶಲ್ಯ, ಸಮಯ ಪರಿಪಾಲನೆ, ಮಾನವ ಸಂಪನ್ಮೂಲ, ಉತ್ಪಾದನೆ, ಮಾರ್ಕೆಂಟಿಂಗ್ ಹಾಗೂ ಗ್ರಾಹಕ ಸೇವಾ ಕೌಶಲ್ಯವನ್ನು ಪ್ರದರ್ಶಿಸಬೇಕಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಮೊದಲನೇ ಬಹುಮಾನವಾಗಿ 1 ಲಕ್ಷ, ಎರಡನೇ ವಿಜೇತ ತಂಡಕ್ಕೆ 50 ಸಾವಿರ, ಮೂರನೇ ವಿಜೇತ ತಂಡಕ್ಕೆ 25,000 ಬಹುಮಾನವನ್ನು ನೀಡಲಾಗುವುದು. ಅಲ್ಲದೇ ಎರಡು ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ತಲಾ 10,000ದಂತೆ ಸಹ ನೀಡಲಾಗುವುದು. ಈ ಸಂಬಂಧ ತಮ್ಮ ಹೆಸರನ್ನು ನೊಂದಾಯಿಸಲು ಆ.7ರಂದು ಕೊನೆಯ ದಿನವಾಗಿರುತ್ತದೆ. ತಂಡಗಳು ತಮ್ಮ ಸಂಪೂರ   ವರದಿಯನ್ನು ಆ.17ರೊಳಗಾಗಿ ಸಲ್ಲಿಸಬೇಕಿದೆ. ಇದಕ್ಕಾಗಿ ಮೊದಲ 20 ಆಯ್ಕೆ ಪಟ್ಟಿಯನ್ನು ಸೆಪ್ಟೆಂಬರ್ 9ರೊಳಗಾಗಿ ಸಲ್ಲಿಸಬೇಕು. ಈ ಸಂಬಂಧ ಫೈನಲ್ ಸೆ.26 ಮತ್ತು 27ರಂದು ನಡೆಯಲಿದ್ದು ಅಲ್ಲಿ ತೀರ್ಪುಗಾರರ ಮುಂದೆ ಅರ್ಹತೆ ಪಡೆದ ತಂಡದ ಸದಸ್ಯರು ಮೌಖಿಕವಾಗಿ ಬಿಗ್ ಐಡಿಯಾವನ್ನು ಓದಬೇಕಿದೆ. ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗೆ  http://www.vguard.in/big_idea_2013.htm




ಡೊಕೊಮೊ ದರ ಪರಿಷ್ಕರಣೆ
ಟಾಟಾ ಟೆಲಿಸರ್ವೀಸ್‌ನ ಜನಪ್ರಿಯ ದೂರ ಸಂಪರ್ಕ ಸೇವೆಗಳ ಬ್ರ್ಯಾಂಡ್ ಟಾಟಾ ಡೊಕೊಮೊ ಬೆಂಗಳೂರಿನ ಗ್ರಾಹಕರಿಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಹಾಗೂ ಅತ್ಯಂತ ವೇಗದ ಸೇವೆಯಾದ ಫೈಬರ್ ಟು ದಿ ಹೋಮ್ ಸೌಲಭ್ಯದ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿದೆ. ಗರಿಷ್ಠ ಪ್ರಮಾಣದ  ದರ ಕಡಿತ ಆಕರ್ಷಣೆಯ ದರಪಟ್ಟಿಯ ಪ್ರಯೋಜನ ಬೆಂಗಳೂರಿನ ಟಾಟಾ ಡೊಕೊಮೊ ಚಂದಾದಾರರಿಗೆ ಲಭ್ಯವಿದ್ದು, ಗರಿಷ್ಠ 100 ಎಂಬಿಪಿಎಸ್ (ಪ್ರತಿ ಸೆಕೆಂಡ್‌ಗೆ ಮೆಗಾಬೈಟ್) ವೇಗದವರೆಗೂ ದತ್ತಾಂಶ ಪಡೆಯುವ ಸೌಲಭ್ಯ ಹೊಂದಬಹುದು. ಆ ಮೂಲಕ ಐಪಿಟಿವಿ, ಎಚ್‌ಡಿಟಿವಿ, 3ಡಿ ಟಿವಿ, ವೀಡಿಯೊ ಆನ್ ಡಿಮ್ಯಾಂಡ್, ಬ್ಯಾಂಡ್ ವಿಡ್ತ್ ಆನ್ ಡಿಮ್ಯಾಂಡ್, ವೀಡಿಯೊ ಕಾನ್ಫರೆನ್ಸಿಂಗ್, ಇಂಟರ್ಯಾಕ್ಟೀವ್ ಗೇಮಿಂಗ್ ಮೊದಲಾದ ಸೇವೆಗಳನ್ನು ಅತ್ಯಂತ ವೇಗದಲ್ಲಿ ಪಡೆಯಬಹುದು. ಟ್ಯಾಬ್ಲೆಟ್, ಲ್ಯಾಪ್‌ಟಾಪ್ಸ್ ಮತ್ತು ಟಿವಿ ಸೇರಿದಂತೆ ಬಹು ವಿಧದ ಎಲೆಕ್ಟ್ರಾನಿಕ್ ಸಾಧನಗಳಿಗೆ  ಒಂದೇ ಸಮಯದಲ್ಲಿ ಈ ಸೌಲಭ್ಯದ ಸಂಪರ್ಕ ಪಡೆದುಕೊಳ್ಳಬಹುದು. ಟಾಟಾ ಡೊಕೊಮೊ ಗ್ರಾಹಕರು 100 ಎಂಬಿಪಿಎಸ್ ವೇಗದವರೆಗೂ ಡೇಟಾ ಸೇವೆಯನ್ನು ಆಕರ್ಷಕ ದರ ಪಟ್ಟಿಯಲ್ಲಿ ಪಡೆಯಬಹುದು. ತಿಂಗಳಿಗೆ ಕೇವಲ 1000 ಶುಲ್ಕಕ್ಕೆ ಗ್ರಾಹಕರು 4 ಎಂಬಿಪಿಎಸ್ ವೇಗದಲ್ಲಿ 20 ಜಿ.ಬಿವರೆಗೂ ಎಫ್‌ಟಿಟಿಎಚ್ ಸೌಲಭ್ಯ ಪಡೆದುಕೊಳ್ಳಬಹುದು. ಅಲ್ಲದೆ, ಹೆಚ್ಚಿನ ಪ್ರಮಾಣದ ಡೇಟಾ ಸೌಲಭ್ಯ ಅಗತ್ಯವಿದೆ ಎನ್ನುವವರಿಗಾಗಿ ತಿಂಗಳಿಗೆ 1400 ಶುಲ್ಕಕ್ಕೆ 4 ಎಂಬಿಪಿಎಸ್ ವೇಗದಲ್ಲಿಯೂ 1500 ಶುಲ್ಕಕ್ಕಾದರೆ 8 ಎಂಬಿಪಿಎಸ್ ವೇಗದಲ್ಲಿಯೂ 80 ಜಿಬಿವರೆಗೂ ಪ್ರಯೋಜನ ಪಡೆಯಬಹುದಾಗಿದೆ.




ಟಿಯೋಕೋ ಪ್ರಗತಿ ಯೋಜನೆ ಘೋಷಣೆ
ಪ್ರಮುಖ ಜಾಗತಿಕ ವಿಶ್ಲೇಷಕ ಸೇವಾದಾರ ಕಂಪನಿ ಟಿಯೋಕೋ ಭಾರತದಲ್ಲಿನ ತನ್ನ ಪ್ರಗತಿಯ ಯೋಜನೆಗಳನ್ನು ಘೋಷಿಸಿದೆ.ಅಮೆರಿಕ ಮೂಲದ ಕಂಪನಿ ಸಿಇಓ ಮತ್ತು ಮುಖ್ಯಸ್ಥ ಅತುಲ್ ಜೈನ್, ಟಿಯೋಕೋದ ಯಶೋಗಾಥೆ ಹಾಗೂ ವೃದ್ಧಿಸುತ್ತಿರುವ ಭಾರತದೊಂದಿಗಿನ ಸಂಪರ್ಕವನ್ನು ಬಿಚ್ಚಿಟ್ಟರು. 1995ರಲ್ಲಿ ಅಸ್ತಿತ್ವಕ್ಕೆ ಬಂದು ಈ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಒಂದಾದ ಟಿಯೋಕೋ ಉತ್ತರ ಅಮೆರಿಕ, ಇಸ್ರೇಲ್, ಯುರೋಪ್, ಆಸ್ಟ್ರೇಲಿಯಾ ಮತ್ತು ಭಾರತದಾದ್ಯಂತ ತನ್ನ ಅಸ್ತಿತ್ವವನ್ನು ಹೊಂದಿದೆ. ಭಾರತದಲ್ಲಿನ ಟಿಯೋಕೋ ಯೋಜನೆಗಳ ಬಗ್ಗೆ ಮಾತನಾಡಿದ ಅತುಲ್ ಜೈನ್ 'ಉತ್ಪನ್ನದ ನಾವಿಣ್ಯ ಮತ್ತು ಪ್ರತಿಭೆಯ ವಿಚಾರದಲ್ಲಿ ಭಾರತವು ಅಗಾಧ ಅವಕಾಶಗಳನ್ನು ಒದಗಿಸಿದೆ. ಭವಿಷ್ಯದಲ್ಲಿ ನಮ್ಮ ವಿಸ್ತರಣಾ ಯೋಜನೆಗಳನ್ನು ಜಾರಿಗೆ ತರುವಾಗ ಭಾರತದಲ್ಲಿ ಲಭ್ಯವಿರುವ ಕೈಗಾರಿಕಾ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ನಾವು ಬಳಸಿಕೊಳ್ಳುತ್ತೇವೆ. ಭಾರತವು ತನ್ನ ಯುವ ಮತ್ತು ಪ್ರತಿಭಾನ್ವಿತ ಉದ್ದಿಮೆ ನಾಯಕರಿಗೆ ಅವಕಾಶದ ರೆಕ್ಕೆ ಒದಗಿಸುವ ಅಗತ್ಯವಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ನಮ್ಮ ಇರುವಿಕೆ ಬಲಪಡಿಸುತ್ತಿರುವುದು ಭಾರತೀಯ ಮೂಲದವನಾಗಿರುವ ನನಗೆ ಹೆಮ್ಮೆಯೆನಿಸುತ್ತಿದೆ. ನಮ್ಮ ಉತ್ಪನ್ನಗಳು ಹಾಗೂ ಪರಿಹಾರಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ನಾವು ಬದ್ಧವಾಗಿರುತ್ತೇವೆ' ಎಂದು ಹೇಳಿದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement