ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಸಿಂಡಿಕೇಟ್ ಬ್ಯಾಂಕ್‌ಗೆ 452 ಕೋಟಿ ಆದಾಯ

ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಸಿಂಡಿಕೇಟ್ ಬ್ಯಾಂಕ್ 452 ಕೋಟಿ ನಿವ್ವಳ ಆದಾಯ ಗಳಿಸುವ ಮೂಲಕ ಶೇ. 2.73ರಷ್ಟು ಪ್ರಗತಿ ಕಂಡಿದೆ.

Vishwanath S
Updated On : 30 Jul 2013, 11:34 am

ಬೆಂಗಳೂರು: ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಸಿಂಡಿಕೇಟ್ ಬ್ಯಾಂಕ್ 452 ಕೋಟಿ ನಿವ್ವಳ ಆದಾಯ ಗಳಿಸುವ ಮೂಲಕ ಶೇ. 2.73ರಷ್ಟು ಪ್ರಗತಿ ಕಂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುಧೀರ್ ಕುಮಾರ್ ಜೈನ್ ಅವರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಬ್ಯಾಂಕ್ ಸಾಧನೆ ಕುರಿತ ವಿವರ ನೀಡಲು ನಗರದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಈ ಅವಧಿಯಲ್ಲಿ ಬ್ಯಾಂಕ್‌ನ ದೇಶೀಯ ವಹಿವಾಟು ಕಳೆದ ಸಾಲಿನ ಇದೇ ಅವಧಿಯಲ್ಲಿದ್ದ 2,57,715 ಕೋಟಿಯಿಂದ 2,84,649 ಕೋಟಿ ತಲುಪಿದ್ದು, ಶೇ.10.45ರಷ್ಟು ಏರಿಕೆ ಕಂಡಿದೆ. ಠೇವಣಿ ಹಾಗೂ ಮುಂಗಡ ಕ್ರಮವಾಗಿ 1,62,510 ಕೋಟಿ ಮತ್ತು 1,22,139 ಕೋಟಿ ತಲುಪಿ ಕ್ರಮವಾಗಿ ಶೇ.11.86 ಮತ್ತು ಶೇ.8.63 ಪ್ರಗತಿ ಕಂಡಿವೆ. ಉಳಿತಾಯ ಠೇವಣಿ ಶೇ.9ರಷ್ಟು ಹೆಚ್ಚಳ ಕಂಡು 37,369 ಕೋಟಿ ತಲುಪಿದೆ ಎಂದು ತಿಳಿಸಿದರು.
ಜತೆಗೆ, ಸಾಗರೋತ್ತರ ವಹಿವಾಟಿನಲ್ಲಿ ಲಂಡನ್ ಶಾಖೆಯ ವಹಿವಾಟು 42,247 ಕೋಟಿ ತಲುಪಿ ಶೇ.64 ಪ್ರಗತಿ ಕಂಡಿದೆ. ಅಲ್ಲದೆ, ಅದರ ಮುಂಗಡ 27,244 ಕೋಟಿ ಮತ್ತು ಠೇವಣಿ 20,003 ಕೋಟಿ ತಲುಪಿ ಕ್ರಮವಾಗಿ ಶೇ.63 ಮತ್ತು ಶೇ.67 ಪ್ರಗತಿ ಕಂಡಿವೆ. ಒಟ್ಟಿನಲ್ಲಿ ನಿವ್ವಳ ಆದಾಯ ಕಳೆದ ಸಾಲಿನ ಇದೇ ತ್ರೈಮಾಸಿಕದಲ್ಲಿ 440 ಕೋಟಿ ಇದ್ದುದು 452 ಕೋಟಿ  ತಲುಪಿ ಶೇ.2.73 ಪ್ರಗತಿ ಕಂಡಿದೆ ಎಂದು ತಿಳಿಸಿದರು.
ಜತೆಗೆ, ನಿರ್ವಹಣಾ ಆದಾಯ 949 ಕೋಟಿ (ಶೇ.12.84 ಪ್ರಗತಿ), ಬಡ್ಡಿ ಆದಾಯ 4432 ಕೋಟಿ (ಶೇ. 4.48 ಪ್ರಗತಿ), ಇತರ ಆದಾಯ 294 ಕೋಟಿ (ಶೇ.24.58 ಪ್ರಗತಿ) ಮತ್ತು ನಿವ್ವಳ ಬಡ್ಡಿ ಆದಾಯ 1319 ಕೋಟಿ (ಶೇ.1.44) ತಲುಪಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement