ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಚಿನ್ನಕ್ಕಿಲ್ಲ ಪ್ರೋತ್ಸಾಹ

ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡದಂತೆ ಗ್ರಾಹಕರಿಗೆ ತಿಳಿಸಿ ಎಂದು ಚಿದಂಬರಂ ಅವರು ಬ್ಯಾಂಕುಗಳಿಗೆ ಸೂಚಿಸಿದ್ದಾರೆ.

Rashmi Kasaragodu
Updated On : 7 Jun 2013, 12:39 pm

ಮುಂಬೈ: ಚಿನ್ನದ ಮೇಲಿನ ಆಮದು ಸುಂಕವನ್ನು ಸರ್ಕಾರ ಶೇ.8ಕ್ಕೇರಿಸಿದ ಮಾರನೇ ದಿನವೇ ಚಿದಂಬರಂ ಅವರು, ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡದಂತೆ ಗ್ರಾಹಕರಿಗೆ ತಿಳಿಸಿ ಎಂದು ಬ್ಯಾಂಕುಗಳಿಗೆ ಸೂಚಿಸಿದ್ದಾರೆ.
 ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಚಿದು,  ಚಿನ್ನದ ಮೇಲಿನ ಮೋಹವನ್ನು ಗ್ರಾಹಕರು ಕಡಿಮೆ ಮಾಡಬೇಕು. ಚಿನ್ನದ ಖರೀದಿ ಅಥವಾ ಅದರ ಮೇಲೆ ಹೂಡಿಕೆ ಮಾಡುವಂತೆ ಗ್ರಾಹಕರನ್ನು ಉತ್ತೇಜಿಸದಿರಿ ಎಂದೂ ತಿಳಿಸಿದ್ದಾರೆ.
 ಇದೇ ವೇಳೆ, ಚಿನ್ನದ ನಾಣ್ಯವನ್ನು ಚಿಲ್ಲರೆ ಗ್ರಾಹಕರಿಗೆ ಮಾರಾಟ ಮಾಡದಂತೆ ಬ್ಯಾಂಕುಗಳಿಗೆ ಈಗಾಗಲೇ ಆರ್‌ಬಿಐ ಸೂಚಿಸಿರುವುದರ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ.
ಲಾಭ ಗ್ರಾಹಕರಿಗಿರಲಿ: ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸುವ ಬಡ್ಡಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿ ಎಂದೂ ಚಿದು ಇದೇ ವೇಳೆ ಹೇಳಿದ್ದಾರೆ. ಹೂಡಿಕೆಯ ಪ್ರಗತಿ ಹೆಚ್ಚಿಸುವ ನಿಟ್ಟಿನಲ್ಲಿ ಬಡ್ಡಿದರ ಕಡಿತದ ಲಾಭವನ್ನು ರಿಟೇಲ್ ಮತ್ತು ಕಾರ್ಪೊರೇಟ್ ಗ್ರಾಹಕರಿಗೆ ಒದಗಿಸಬೇಕಾದ ಅವಶ್ಯಕತೆಯಿದೆ ಎಂದು
 ಏತನ್ಮಧ್ಯೆ, ಮುಂದಿನ ವರ್ಷದ ಮಾರ್ಚ್‌ನೊಳಗಾಗಿ ಹೊಸ ಬ್ಯಾಂಕು ಲೈಸೆನ್ಸ್‌ಗಳನ್ನು ಒದಗಿಸುವುದಾಗಿಯೂ ಅವರು ಹೇಳಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement