ಅತ್ಯುತ್ತಮ ಉಡುಪು ತಯಾರಕ ಪ್ರಶಸ್ತಿ ರುಬು ದಮನಿಗೆ ಪ್ರದಾನ
ಹೊಲಿಗೆ ಯಂತ್ರಗಳ ವ್ಯಾಪಾರೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಉಷಾ ಇಂಟರ್ನ್ಯಾಷನಲ್, ಉಷಾ-ಎನ್ಐಎಫ್ಟಿ...
ಬೆಂಗಳೂರು: ಹೊಲಿಗೆ ಯಂತ್ರಗಳ ವ್ಯಾಪಾರೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಉಷಾ ಇಂಟರ್ನ್ಯಾಷನಲ್, ಉಷಾ-ಎನ್ಐಎಫ್ಟಿ ಅತ್ಯುತ್ತಮ ಉಡುಪು ತಯಾರಕ ಪ್ರಶಸ್ತಿಯನ್ನು ರುಬು ದಮನಿ ಅವರಿಗೆ ನೀಡಿ ಗೌರವಿಸಿತು. ತರುಣ ಹಾಗೂ ಉಗಮಗೊಳ್ಳುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಎನ್ಐಎಫ್ಟಿ ಸಹಯೋಗದೊಂದಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯೊಂದಿಗೆ ಉಷಾ ಇಂಟರ್ನ್ಯಾಷನಲ್ ತನ್ನ ಅತ್ಯಾಧುನಿಕ ಉಷಾ ಜನೋಮ್ ಹೊಲಿಗೆ ಯಂತ್ರ, ಒಂದು ಟ್ರೋಫಿ, ಪ್ರಮಾಣಪತ್ರ ಮತ್ತು 10,000 ನಗದು ಬಹುಮಾನ ನೀಡಿತು. ಸಹಯೋಗದ ಬಗ್ಗೆ ಮಾತನಾಡಿದ ಉಷಾ ಇಂಟರ್ನ್ಯಾಷನಲ್ನ ನೀಲಿಮಾ ಬುರ್ರಾ, ಎನ್ಐಎಫ್ಟಿ ಯೊಂದಿಗಿನ ನಮ್ಮ ಸಂಬಂಧ, ಇಂದಿನ ಯುವ ಹಾಗೂ ಪ್ಯಾಷನ್ ಜಗತ್ತಿನಲ್ಲಿ ಹೆಸರು ಮಾಡುವ ಆಕಾಂಕ್ಷೆ ಹೊಂದಿರುವ ತರುಣ ವಿನ್ಯಾಸಗಾರರೊಂದಿಗೆ ಬೆಸೆಯಲು ಸಾಧ್ಯವಾಗಿಸಿದೆ. ಈ ಸಹಯೋಗವು ಫ್ಯಾಷನ್ ಉದ್ದಿಮೆಯ ಯುವ ಸೃಜನಶೀಲ ಮನಸ್ಸುಗಳೊಂದಿಗೆ ಸಂಪರ್ಕ ಬೆಳೆಸಲು ನಮಗೆ ಅವಕಾಶ ಒದಗಿಸಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಉಷಾ ಹೊಲಿಗೆ ಯಂತ್ರಗಳು ಈ ವಿದ್ಯಾರ್ಥಿಗಳಿಗೆ ಒಂದು ಸ್ಮರಣೀಯ ಉತ್ಪನ್ನ ಅನುಭವವನ್ನು ಒದಗಿಸಲಿದೆ ಎಂದರು.
ಸ್ಟಾರ್ ಬಜಾರ್ನಿಂದ ಈಜಿಶಾಪ್ ಕಾರ್ಡ್ ಬಿಡುಗಡೆ
ಟ್ರೆಂಟ್ ಹೈಪರ್ಮಾರ್ಕೆಟ್ನ ಭಾಗವಾಗಿರುವ ಸ್ಟಾರ್ಬಜಾರ್, ತನ್ನ ಗಿಫ್ಟ್ ಕಂ ರಿಚಾರ್ಜ್ ಈಜಿಶಾಪ್ ಕಾರ್ಡ್ ಬಿಡುಗಡೆಗೊಳಿಸಿದೆ. ಇದು ಗ್ರಾಹಕರಿಗೆ ಸುಲಭವಾದ ನಗದುರಹಿತ ಪಾವತಿ ಅವಕಾಶ ನೀಡಲಿದೆ.
ಮುಂಬೈ, ಬೆಂಗಳೂರು, ಚೆನ್ನೈ, ಪುಣೆ, ಅಹಮದಾಬಾದ್, ಔರಂಗಬಾದ್, ಸೂರತ್ ಮತ್ತು ಕೊಲ್ಹಾಪುರದ ಯಾವುದೇ ಸ್ಟಾರ್ ಬಜಾರ್ನಲ್ಲಿ ಗ್ರಾಹಕರು ಈ ಕಾರ್ಡ್ನಿಂದ ಖರೀದಿ ಮಾಡಬಹುದು. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಕಾರ್ಡ್ ಪಡೆಯಬಹುದು. ಆದಾಗ್ಯೂ ಮೊದಲ ಖರೀದಿಯ ಕನಿಷ್ಠ ಮೊತ್ತ 250 1000ಕ್ಕಿಂತ ಹೆಚ್ಚಿನ ಖರೀದಿ ಮಾಡುವ ಅಥವಾ ರಿಫಿಲ್ ಮಾಡುವ ಗ್ರಾಹಕರಿಗೆ ಶೇ.2ರಷ್ಟು ರಿಯಾಯಿತಿ ಇದೆ. ಕಾರ್ಡ್ ಪರಿಚಯಿಸಿ ಮಾತನಾಡಿದ ಸ್ಟಾರ್ಬಜಾರ್ ಮಾರುಕಟ್ಟೆ ಮುಖ್ಯಸ್ಥೆ ಸುಷ್ಮಿತಾ ಪೌಲ್ಸ, ಗ್ರಾಹಕರ ಆದ್ಯತೆ ನೀಗಿಸುವುದು ಈ ಕಾರ್ಡ್ನ ಮುಖ್ಯ ಉದ್ದೇಶ. ಗ್ರಾಹಕರಿಗೆ ಶಾಪಿಂಗ್ ವೇಳೆ ನಗದು ತರುವುದನ್ನು ತಪ್ಪಿಸುತ್ತೇವೆ ಮತ್ತು ಆಕರ್ಷಕ ಉಡುಗೊರೆ ಅವಕಾಶವಿದೆ ಎಂದರು. 50ರಿಂದ 49,999ರವರೆಗೆ ರಿಚಾರ್ಜ್ ಅವಕಾಶವಿದ್ದು, ಸೇಲ್ಸ್, ಡಿಸ್ಕೌಂಟ್ ಅವಧಿಯಲ್ಲೂ ಕಾರ್ಡ್ ಬಳಸಬಹುದು. ಮಾಹಿತಿಗೆ ಢಿಢಿಢಿ.ಡಡಿಛ್ಠಛಿಛಣಛಛ್ಠ್ಝಟಿಜ್ಝಛ.್ಛ್ಟಟ ತಾಣ ನೋಡಬಹುದು.
ಇ-ಬಿಲ್ಲಿಂಗ್ ಮಾಡಲು ಏರ್ಟೆಲ್ ಶಿಫಾರಸು
ದೇಶದ ಟೆಲಿಸಂವಹನ ಸಂಸ್ಥೆ ಭಾರ್ತಿ ಏರೆಟೆಲ್, ತನ್ನೆಲ್ಲಾ ಸೇವೆಗಳಿಗಾಗಿ ಗ್ರಾಹಕರು ಹಣ ಪಾವತಿಸಿದಾಗ ಇ-ಬಿಲ್ಲಿಂಗ್ ಮಾಡುವಂತೆ ಸಂಸ್ಥೆ ತನ್ನೆಲ್ಲಾ ಸಿಬ್ಬಂದಿಗೂ ಶಿಫಾರಸು ಮಾಡಿದೆ. ಪರಿಸರ ಸ್ನೇಹಿ ಕಾರ್ಯಕ್ರಮಗಳ ಕುರಿತು ಮಾತನಾಡಿದ ಭಾರ್ತಿ ಏರ್ಟೆಲ್ನ ಕರ್ನಾಟಕ ವೃತ್ತದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರೋಹಿತ್ ಮಲ್ಹೋತ್ರಾ ಅವರು, ಏರ್ಟೆಲ್ ನಡೆಸುವ ಪರಿಸರ ಸ್ನೇಹಿ ಕಾರ್ಯಕ್ರಮಗಳು ಒಂದು ಶ್ರೇಷ್ಠ ಉದ್ದೇಶಕ್ಕಾಗಿ ಸಮಾಜದ ಪರವಾಗಿ ನಿಲ್ಲುವಂಥವುಗಳಾಗಿವೆ. ಪ್ರಸ್ತುತ ನಮ್ಮ ಭೂಮಿಯು ಅಪಾಯದಲ್ಲಿದ್ದು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮದೇ ಕೊಡುಗೆ ನೀಡುವ ಅಗತ್ಯವಿದೆ. ಈ ವಿಷಯದಲ್ಲಿ ನಾವು ಈಗಾಗಲೇ ಯಶಸ್ವಿಯಾಗಿದ್ದು, ಇ-ಬಿಲ್ಲಿಂಗ್ ಆಯ್ಕೆ ಮಾಡಿಕೊಂಡ ಗ್ರಾಹಕರ ಸಂಖ್ಯೆಯಲ್ಲಿ ಈ ಬಾರಿ ಶೇ.26ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದರು.
ರಿಲಯನ್ಸ್ ಕಮ್ಯೂನಿಕೇಷನ್ಸ್ ಸ್ಟಾರ್ ಸ್ಪೋರ್ಟ್ಸ್ ಒಪ್ಪಂದ
ದೇಶದ 3ಜಿ ಹಾಗೂ ಪ್ರೀಪೇಯ್ಡ್ ಗ್ರಾಹಕರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ 2013 ಕ್ರಿಕೆಟ್ ಪಂದ್ಯಾವಳಿ ಸೇವಾ ಸೌಲಭ್ಯವನ್ನು ಒದಗಿಸಲು ರಿಲಯನ್ಸ್ ಕಮ್ಯೂನಿಕೇಷನ್ಸ್, ಸ್ಟಾರ್ ಸ್ಪೋರ್ಟ್ಸ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಘೋಷಿಸಿದೆ. ಈ ಪಾಲುದಾರಿಕೆಯಿಂದಾಗಿ ರಿಲೈಯನ್ಸ್ ಗ್ರಾಹಕರು ಕೇವಲ 301 ಶುಲ್ಕ ಪಾವತಿಸಿ ತಮ್ಮ ಸ್ಮಾರ್ಟ್ಫೋನ್ಗಳ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿ 2013ರ ಎಲ್ಲಾ ಪಂದ್ಯಗಳನ್ನು ಯಾವುದೇ ಹೆಚ್ಚುವರಿ ಡಾಟಾ ಶುಲ್ಕಗಳಿಲ್ಲದೆ ವೀಕ್ಷಿಸಬಹುದಾಗಿದೆ. ಈಗ ರಿಲಯನ್ಸ್ 3ಜಿ ಹಾಗೂ ಪ್ರೀಪೇಯ್ಡ್ ಜಿಎಸ್ಎಂ ಸ್ಮಾರ್ಟ್ಫೋನ್ ಗ್ರಾಹಕರು ಯಾವುದೇ ಅಡಚಣೆಯಿಲ್ಲದೆ ತಮ್ಮ ಮೊಬೈಲ್ ಪರದೆಗಳ ಮೇಲೆ ಚಾಂಪಿಯನ್ಸ್ ಟ್ರೋಫಿ 2013 ಪಂದ್ಯಗಳು ಹಾಗೂ ಸುಲಲಿತ ವೀಡಿಯೋ ಅನುಭವವನ್ನು ಪಡೆಯಬಹುದು. ಈ ಶುಲ್ಕದಲ್ಲಿ 50 www.starsports.com ನ ಚಂದಾದಾರಿಕೆಯಾಗಿದ್ದು ರಿಲಯನ್ಸ್ ಈ ಸೌಲಭ್ಯಗಳನ್ನೂ ಸಹ ಪಡೆಯಬಹುದು. ಘೋಷಣೆಯ ಕುರಿತು ಮಾತನಾಡಿದ ಸಂಸ್ಥೆಯ ರೆವಿನ್ಯೂ ಅಧಿಕಾರಿ ನಿಲಾಂಜನ್ ಮುಖರ್ಜಿ, ಸ್ಟಾರ್ಸ್ಪೋರ್ಟ್ಸ್ನ ಪಾಲುದಾರಿಕೆಯೊಂದಿಗೆ ನಮ್ಮ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಸ್ಮಾರ್ಟ್ಫೋನ್ಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2013 ಪಂದ್ಯಗಳನ್ನು ನೋಡುವ ಅವಕಾಶ ಕಲ್ಪಿಸಲು ನಮಗೆ ಹರ್ಷವಾಗುತ್ತಿದೆ ಎಂದರು.
ಫಾಂಟಾ ಹೊಸ ಅವತರಣಿಕೆ ಪರಿಚಯಿಸಿದ ತಮನ್ನಾ
ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಫಾಂಟಾದ 'ಮೀಟ್ ಅಂಡ್ ಗ್ರೀಟ್' ಕಾರ್ಯಕ್ರಮಕ್ಕೆ ತಮನ್ನಾ ಮತ್ತು ಅವರ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು. ಫಾಂಟಾದ ಬ್ರಾಂಡ್ ಅಂಬಾಸಿಡರ್ ಆಗಿರುವ ತಮನ್ನಾ ಈ ಫಾಂಟಾದ ಹೊಸ ಅವತರಣಿಕೆಯನ್ನು ಪರಿಚಯಿಸಿ ನಂತರ ಮಾತನಾಡಿದರು. ಬೆಂಗಳೂರಿನ ಅಭಿಮಾನಿಗಳ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಅಭಾರಿಯಾಗಿದ್ದೇನೆ. ಪ್ರತಿ ಬಾರಿ ನಾನು ಇಲ್ಲಿಗೆ ಭೇಟಿ ನೀಡಿದಾಗ ವಿಶಿಷ್ಟ ಅನುಭವವಾಗುತ್ತದೆ. ಅದರಲ್ಲೂ ಈ ಬಾರಿ ಫಾಂಟಾದ ಪ್ರಾಯೋಜಕತ್ವಕ್ಕೆ ನಾನಿಲ್ಲಿ ಬಂದಿದ್ದು ಬಹಳ ಖುಷಿ ತಂದಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ವೈವಾಹಿಕ, ಪಾರಂಪರಿಕ 'ಆಭರಣ' ಅನಾವರಣ
ಪ್ರಮುಖ ಚಿನ್ನಾಭರಣಗಳ ಮಳಿಗೆಯಾದ ಆಭರಣ ಈಗ ಹೊಸದಾಗಿ, ವೈವಾಹಿಕ ಮತ್ತು ಪಾರಂಪರಿಕ ಆಭರಣಗಳನನ್ನು ಅನಾವರಣ ಮಾಡಿದೆ. ಭಾರತೀಯ ವಿವಾಹಗಳ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಸಂಗ್ರಹವನ್ನು ರೂಪಿಸಲಾಗಿದ್ದು, ದಕ್ಷಿಣ ಭಾರತದ ದೇಗುಲಗಳಿಂದ ಪ್ರೇರೇಪಣೆಗೊಂಡಂತಾಗಿದೆ. ಕುಂದನ್ ಮತ್ತು ನಾಕ್ಷಿ ಕುಶಲ ಕರ್ಮಿಗಳು ಇವನ್ನು ವಿನ್ಯಾಸಗೊಳಿಸಿದ್ದಾರೆ. ಆಭರಣದ ಪಾರಂಪರಿಕ ಸಂಗ್ರಹ ಆಭರಣಗಳು ವಿಶೇಷ ವಿನ್ಯಾಸದಲ್ಲಿ ಲಭ್ಯವಾಗಿದೆ. ಆಭರಣ ಜ್ಯುವೆಲ್ಲರ್ಸ್ನ ಸಿಇಒ ಪ್ರತಾಪ್ ಕಾಮತ್ ಮಾತನಾಡಿ, ಮದುವೆ ಎಂಬುದು ಭಾರತೀಯ ಮಹಿಳೆಗೆ ವಿಶೇಷ. ಪ್ರತಿ ಮಹಿಳೆಯು ಇಂಥ ದಿನ ವಿಶೇಷ ಆಭರಣಗಳನ್ನು ಧರಿಸಲು ಬಯಸುತ್ತಾರೆ. ಇದನ್ನರಿತು ಆಭರಣ ವಿಶಿಷ್ಟ ವಿಶೇಷ ವಿನ್ಯಾಸದ ಆಭರಣಗಳನ್ನು ರೂಪಿಸಿದೆ. ನಮ್ಮ ವೈವಾಹಿಕ ಸಂಗ್ರಹದ ಆಭರಣಗಳು ಭಾರತೀಯ ಸೌಂದರ್ಯಕ್ಕೆ ನೀಡಿದ ಕೊಡುಗೆಯಾಗಿದೆ ಎಂದರು.
ಓರಿಪ್ಲೇಮ್ ಇಂಡಿಯಾದಿಂದ ಹೊಸ ಉತ್ಪನ್ನ ಮಾರುಕಟ್ಟೆಗೆ
ಆ್ಯಂಟಿ-ಏಜಿಂಗ್ನಲ್ಲಿ ಪರಿಣಿತನಾಗಿರುವ ಓರಿಪ್ಲೇಮ್ ಇಂಡಿಯಾ ಓರಿಪ್ಲೇಮ್ಸ್ ಟೈಮ್ ರಿವರ್ಸಿಂಗ್ ಸ್ಕಿನ್ ಜೆನಿಸ್ಟ್ ಶ್ರೇಣಿಯನ್ನು ಪರಿಚಯಿಸಿದೆ. ಜೆನೆಟಿಕ್ ಸಂಶೋಧನೆಯಿಂದ ಪ್ರಭಾವಿತನಾಗಿರುವ ಕ್ರೀಮ್ ವಯಸ್ಸಿಗೆ ಸವಾಲೆಸೆಯುವ ಸೂತ್ರ ತ್ವಚೆಗೆ ವಯಸ್ಸಾಗುವಿಕೆಯನ್ನು ಪ್ರತಿರೋಧಿಸುತ್ತದೆ ಮತ್ತು ಒಂದು ತಾರುಣ್ಯಭರಿತ ಅಂದವನ್ನು ನೀಡುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಪ್ರೌಢ ತ್ವಚೆಯ ಎಲ್ಲ ಅಗತ್ಯಗಳನ್ನು ಪೂರೈಸಲೆಂದೇ ರೂಪಿಸಲಾಗಿರುವ ಈ ವಿಶಿಷ್ಟ ಸ್ಕಿನ್ ಕೇರ್ ಚಿಕಿತ್ಸೆಯು ಒಂದು ಡೇ ಕ್ರೀಮ್, ಒಂದು ನೈಟ್ ಕ್ರೀಮ್ ಮತ್ತು ಒಂದು ಡೇ ಅಂಡ್ ನೈಟ್ ಕ್ರೀಮ್ ಅನ್ನು ಒಳಗೊಂಡಿದೆ. ಜತೆಗೆ 45ವರ್ಷ ಮೇಲ್ಪಟ್ಟ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ಉತ್ಪನ್ನವನ್ನು ರೂಪಿಸಲಾಗಿದೆ. ಟೈಮ್ ರಿವರ್ಸಿಂಗ್ ಸ್ಕಿನ್ ಜೆನಿಸ್ಟ್ ಡೇ ಅಂಡ್ ನೈಟ್ ಎಸ್ಸೆನ್ಸ್ 30ಎಂಎಲ್ಗೆ 1290., ಡೇ ಕ್ರೀಮ್ ಎಸ್ಪಿಎಫ್15-50 ಎಂಎಲ್ಗೆ 1690., ನೈಟ್ ಕ್ರೀಮ್ - 50 ಎಂಎಲ್ಗೆ 1790.
ಜಾನ್ಸನ್ನಿಂದ ಸೆರಾಮಿಕ್ ಪ್ಯಾನೆಲ್ ಉತ್ಪಾದನೆ
ಹೋಮ್ ಲೈಫ್ಸ್ಟೈಲ್ ಸಲೂಶನ್ನ ಪ್ರಮುಖ ಕಂಪನಿಯಾಗಿರುವ ಎಚ್ ಆ್ಯಂಡ್ ಆರ್ ಜಾನ್ಸನ್(ಇಂಡಿಯಾ) 'ಸೆರಾಮಿಕ್ ಪ್ಯಾನೆಲ್ ಬಿಸಿನೆಸ್' ಆರಂಭಿಸಿದೆ. ಭಾರತೀಯ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಗೋಡೆ ಮತ್ತು ನೆಲಹಾಸುಗಳನ್ನು ಪರಿಚಯಿಸುವ ದೃಷ್ಟಿಯಿಂದ ಈ ಹೊಸ ಕ್ಷೇತ್ರಕ್ಕೆ ಕಾಲಿಟ್ಟಿದೆ. ಜಾನ್ಸನ್ ಕ್ರಾಫ್ಟ್ ಸೆರಾಮಿಕ್ ಪ್ಯಾನೆಲ್ಗಳು ವಾಸ್ತುಶಿಲ್ಪ ಕಲ್ಪನೆಯನ್ನು ಹೊಂದಿದ್ದಲ್ಲದೆ, ತಾಂತ್ರಿಕ ಮೇಲ್ದರ್ಜೆಯನ್ನೂ ಹೊಂದಿದೆ. ನವೀನ ಉತ್ಪನ್ನಗಳೊಂದಿಗೆ ಸೆರಾಮಿಕ್ ಕೆಟಗರಿಗೆ ಪ್ರವೇಶಿಸಬೇಕು ಎಂಬ ಉದ್ದೇಶದಿಂದ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ, ದಕ್ಷಿಣ ಭಾರತದಾದ್ಯಂತ ಎಚ್ ಆ್ಯಂಡ್ ಆರ್ ಜಾನ್ಸನ್ ಕಂಪನಿಯು ಗೋಡೆ ಮತ್ತು ನೆಲಹಾಸು ಸೆರಾಮಿಕ್ ಪ್ಯಾನೆಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂದು ಕಂಪನಿಯ ಉಪಾಧ್ಯಕ್ಷ ಶ್ರೀ ಜಗನ್ನಾಥನ್ ತಿಳಿಸಿದ್ದಾರೆ. ಈ ಉತ್ಪನ್ನಗಳನ್ನು ಕಂಪನಿ ತನ್ನ 1200 ಡೀಲರ್, 15 ಸಾವಿರ ಉಪ ಡೀಲರ್, 33ಕ್ಕೂ ಹೆಚ್ಚು ಆಧುನಿಕ ಚಿಲ್ಲರೆ ಮಳಿಗೆಗಳ ಮೂಲಕ ಮಾರಾಟ ಮಾಡುತ್ತದೆ.
ಪೋಲಿಯೋ ಲಸಿಕೆ: ಕಟ್ಟುನಿಟ್ಟಿನ ಜಾರಿಗೆ ಸರ್ಕಾರಕ್ಕೆ ರೋಟರಿ ಮನವಿ
ದೇಶದಲ್ಲಿ ಅಂಗವೈಕಲ್ಯವನ್ನು ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸುವಂತೆ ರೋಟರಿ ಸಂಸ್ಥೆ ಸರ್ಕಾರಕ್ಕೆ ಮನವಿ ಮಾಡಿದೆ. ಈ ನಡುವೆ ಹೊರಗಿನಿಂದ ಪೊಲೀಯೋ ಹನಿಯನ್ನು ತರಿಸಿಕೊಳ್ಳುತ್ತಿರುವುದರಿಂದ ಅದರಲ್ಲಿ ವೈರಸ್ ಬರುವ ಸಾಧ್ಯತೆ ಇದೆ ಎಂದು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಪೋಲಿಯೋ ಹನಿ ಹಾಕಿಸುವ ಬಗ್ಗೆ ಸಂಪೂರ್ಣ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಗಡಿ ಪ್ರದೇಶದಲ್ಲಿನ ಹಳ್ಳಿಗಳಲ್ಲಿ ಈ ಬಗ್ಗೆ ಸಂಪೂರ್ಣ ಅರಿವು ಮೂಡಿ, ಪೋಲಿಯೋಗೆ ತುತ್ತಾಗುವ ಮಕ್ಕಳ ಸಂಖ್ಯೆ ಕಡಿಮೆ ಮಾಡದ ಹೊರತು ಈ ರೋಗ ನಿವಾರಣೆ ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದೆ.