ಕನ್ನಡದ ಕೋಟ್ಯಾಧಿಪತಿಯಲ್ಲಿ 'ಒಂದು ಪ್ರಶ್ನೆ ಬದುಕನ್ನೇ ಬದಲಿಸುತ್ತದೆ' ಅಂತಾರೆ. ಅದು ಬಿಡಿ, ರಿಯಾಲಿ ಶೋ. ಇಲ್ಲಿ ಕೇಳಿ ರಿಯಲ್ ಶೋ. 'ಒಂದು ಮೆಸೇಜು ನಿಮ್ಮ ಬದುಕನ್ನೇ ಬದಲಿಸುತ್ತದೆ!!!'
ಹಾಗಂದುಕೊಂಡು ಬಹುತೇಕ ಜನ ಗುಂಡಿಗೆ ಬೀಳ್ತಾರೆ. 'ನಿಮ್ಮ ಮೊಬೈಲಿನ ಈ ನಂಬರಿಗೆ 1,00,00,000 ರು. ಸ್ಪೆಷಲ್ ಬಹುಮಾನ ಬಂದಿದೆ' ಎಂಬ ಅನಾಮಿಕ ಸಂದೇಶಕ್ಕೆ ಕಣ್ಣರಳಿಸಿ, ಕೊನೆಗೆ ಕಣ್ಣೀರು ಸುರಿಸುತ್ತಾರೆ. ಇಂದು ಎಲ್ಲರ ಕೈಯಲ್ಲೂ ಮೊಬೈಲಿದೆ. ಬೇರೆ ಬೇರೆ ಕಂಪನಿಯ ಸಿಮ್‌ಕಾರ್ಡ್‌ಗಳಿವೆ. ಈ ನಡುವೆ ಕೆಲವು ಗುಂಪುಗಳು ನಿಮ್ಮ ಸಿಮ್‌ಕಾರ್ಡ್ ನಂಬರ್ ತಿಳಿದು, 'ಊಡುಗೊರೆ ಬಂದಿದೆ' ಎಂದು ಸುಳ್ಳು ಮಾಹಿತಿ ನೀಡಿ, ದಾರಿ ತಪ್ಪಿಸುತ್ತವೆ. ಇಂಥದ್ದೊಂದು ದೊಡ್ಡ ಜಾಲವೇ ಸೃಷ್ಟಿಯಾಗಿದೆ. ನಿಮ್ಮ ಸಿಮ್‌ಕಾರ್ಡ್ ಯಾವುದೇ ಇರಲಿ, ಅದರಲ್ಲೂ ವಿದೇಶಿ ಕಂಪನಿಯ ಸಿಮ್‌ಕಾರ್ಡ್‌ಗಳ ಬಗ್ಗೆ ಹುಷಾರಾಗಿರಿ.
ಗೊತ್ತಲ್ಲ, ಆ ಮೆಸೇಜು...
'ಕಂಗ್ರ್ಯಾಟ್ಸ್. ನೀವು ತುಂಬಾ ಲಕ್ಕಿ. ನಿಮ್ಮ ಈ ನಂಬರ್ ಕೋಟಿ ರು. ಗೆದ್ದಿದೆ'! ಕೋಟಿಯಂಥ ದೊಡ್ಡ ಮೊತ್ತ ಇಟ್ಟುಕೊಂಡು ನಮ್ಮಿಂದಲೇ ಮಾಹಿತಿ ತಿಳಿದುಕೊಳ್ಳುತ್ತಾರವರು. ಕೆಲವು ಮಂದಿ ಇದನ್ನು ನಿಜ ಎಂದು ನಂಬಿ, ಇ-ಮೇಲ್ ಮೂಲಕ ತಮ್ಮ ವಿಳಾಸ ಮತ್ತು ಫೋನ್ ನಂಬರ್‌ಗಳನ್ನು ನೀಡುತ್ತಾರೆ. ಇಷ್ಟು ಮಾಡಿಬಿಟ್ಟರೆ ಹೊಂಡಕ್ಕೆ ಬಿದ್ದಂತೆಯೇ ಲೆಕ್ಕ.ಉಡುಗೊರೆ ಬರುತ್ತೆ!
'ನಿಮಗೆ ಊಡುಗೊರೆ ಕೊಡಲು ಭಾರತಕ್ಕೆ ವಿಮಾನದಲ್ಲಿ ಬರುತ್ತಿದ್ದೇನೆ' ಎಂದು ಆ ಸುಳ್ಳು ಜಾಲ ಮಾಹಿತಿ ಕೊಡುತ್ತದೆ. ನಂತರ ಒಂದು ದಿನ ಬಿಟ್ಟು ಕರೆ ಮಾಡಿ, 'ನಾವು ನವದೆಹಲಿಯಲ್ಲಿ ಇದ್ದೇವೆ. ನೀವು ಊಡುಗೊರೆ ತೆಗೆದುಕೊಳ್ಳಬೇಕಾದರೆ ಕೇವಲ ರು. 19,500 ಪಾವತಿಸಬೇಕು' ಎಂದು ಅವರ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಿಮ್ಮ ಮೊಬೈಲ್‌ಗೆ ಕಳುಹಿಸುತ್ತಾರೆ. ಈ ಕೆಲಸಗಳು ಮೊಬೈಲ್, ಇ-ಮೇಲ್ ಮೂಲಕವೇ ನಡೆಯುತ್ತದೆ.
ಮೋಸದ ಹಿಂದಿನ ಜಾಲ
ಈ ರೀತಿ ಮೋಸ ಒಬ್ಬಿಬ್ಬರು ಮಾಡುವುದಿಲ್ಲ. ಇದು ಸಂಘಟಿತ ದಾಳಿ. ವಿದೇಶಿ ಸಿಮ್‌ಗಳನ್ನು ಹೊಂದಿರುವ ಅನೇಕರಿಗೆ ಇಂಥ ಮೆಸೇಜು ಸುಲಭವಾಗಿ ರವಾನಿಸಲಾಗುತ್ತದೆ. ವಿದೇಶಿಯರ ಈ ಮುಖಗಳಿಗೆ ಭಾರತೀಯ ಮುಖವಾಡಗಳು ಮುಖ್ಯವಾಗಿ ನೆರವಾಗುತ್ತಿರುವುದು ದೊಡ್ಡ ದುರಂತ. ಹೀಗಾಗಿ, ಇಂಥ ಮೆಸೇಜುಗಳು ಬಂದರೆ ಸುಮ್ಮನೆ ಡಿಲೀಟ್ ಮಾಡಿಬಿಡಿ. ಇಲ್ಲದಿದ್ದರೆ ರಿಸ್ಕ್ ಮೈಮೇಲೆ ಬರುತ್ತದೆ.
ತಡೆಯೋದು ಹೇಗೆ?