ಇಂಡಸ್ನಿಂದ ಎಫ್ ಇ 555 ಸ್ಟೀಲ್ ಬಾರ್
ದಕ್ಷಿಣದ ಸ್ಟೀಲ್ ಉತ್ಪಾದಕರಲ್ಲಿ ಒಬ್ಬರಾದ ಇಂಡಸ್ ಸ್ಟೀಲ್ ಅಂಡ್ ಅಲ್ಲಾಯ್ಸ್ ಲಿ., ಪ್ರತಿ ಚದರ ಮಿಲಿ ಮೀಟರ್ಗೆ 555 ನ್ಯೂಟನ್ ಬಲ ಹೊಂದಿರುವ ಎಫ್ ಇ 555 ಸ್ಟೀಲ್ ಬಾರ್ ಎಂಬ ತನ್ನ ಇನ್ನೊಂದು ಯಶಸ್ವಿ ಉತ್ಪನ್ನವನ್ನು ಘೋಷಿಸಿದೆ. ಬೆಂಗಳೂರಿನಲ್ಲಿ ನಡೆದ ಮಾರಾಟಗಾರರ ಸಭೆಯಲ್ಲಿ ಈ ಉತ್ಪನ್ನವನ್ನು ಬಿಡುಗಡೆ ಮಾಡುತ್ತಾ ನಿರ್ದೇಶಕ ಎಸ್.ಎಸ್.ಶ್ರೀಕಾಂತ್ 'ಈ ವಿಶ್ವ ದರ್ಜೆಯ ಉತ್ಪನ್ನವನ್ನು ಪರಿಚಯಿಸಲು ನಮಗೆ ಹೆಮ್ಮೆಯೆನಿಸುತ್ತದೆ. ತುಕ್ಕು ನಿರೋಧಕ ಅಂಶಗಳು ಹೆಚ್ಚಾಗಿರುವ ಇದು 600 ಡಿಗ್ರಿ ಸೆಂಟಿಗ್ರೇಡ್ವರೆಗೆ ಬೆಂಕಿಗೆ ಪ್ರತಿರೋಧ ಒಡ್ಡಬಲ್ಲುದು. ಇದರ ಮೃದು ಫೆರೈಟ್-ಪೀರ್ಲ್ಟ್ ತಿರುಳಿನಿಂದಾಗಿ, ಇದು ಭೂಕಂಪ ಇತ್ಯಾದಿ ನೈಸರ್ಗಿಕ ವಿಕೋಪಗಳನ್ನು ಹೆಚ್ಚು ತಾಳಿಕೊಳ್ಳುವಷ್ಟು ದೃಢವಾಗಿದೆ' ಎಂದು ತಿಳಿಸಿದರು.
ತಲೆಗೂದಲಿಗೆ ಸಂಬಂಧಿಸಿದ
ಎಲೆಕ್ಟ್ರಾನಿಕ್ ಪರಿಕರ ಬಿಡುಗಡೆ
ಎಲೆಕ್ಟಾನಿಕ್ ವಸ್ತುಗಳ ತಯಾರಿಕಾ ಕಂಪನಿಗಳಲ್ಲೊಂದಾದ 'ಫಿಲಿಪ್ಸ್ ಇಂಡಿಯಾ' ಭಾರತದಲ್ಲಿ ನೂತನವಾಗಿ ತಲೆಕೂದಲಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಪರಿಕರಗಳನ್ನು ಬಿಡುಗಡೆಗೊಳಿಸಿದೆ. ಇವು 'ಗ್ಲಾಮ್ ಸ್ಟೈಲರ್ ಎಚ್ಪಿ8632', 'ಸ್ಟೈಟ್ನರ್ ಎಚ್ಪಿ8316', 'ಹೇರ್ಡ್ರೈಯರ್ ಎಚ್ಪಿ 8216/00' ಹೆಸರಿನ ಉತ್ಪನ್ನಗಳಾಗಿದ್ದು, ಈ ಕುರಿತು ಮಾತನಾಡಿದ ಫಿಲಿಪ್ಸ್ ಇಂಡಿಯಾದ ಗ್ರಾಹಕ ವಿಭಾಗದ ಮುಖ್ಯಸ್ಥ ಎಡಿಎ ರತ್ನಂ, ಭಾರತದಲ್ಲಿ ಆರೋಗ್ಯಕರ ಹೊಳಪಿನ ಮತ್ತು ಮೃದುವಾದ ಕೂದಲನ್ನು ಬೇಡುವ ಭಾರತೀಯ ಮಹಿಳೆಯರು ಹೆಚ್ಚು. ಈ ನಿಟ್ಟಿನಲ್ಲಿ ಸೌಂದರ್ಯಸಾಧಕಗಳಲ್ಲಿ ಒಂದಾದ ಫಿಲಿಪ್ಸ್ ಉತ್ಪನ್ನಗಳು ಬಹಳ ಉಪಯೋಗಕಾರಿ ಮತ್ತು ಅವರ ನಿರೀಕ್ಷೆಗಳಿಗೆ ತಕ್ಕುದಾದ ಸಾಧನವಾಗಿದೆ ಎಂದು ತಿಳಿಸಿದರು.
ಸನ್ ಡೈರೆಕ್ಟ್ ವಿಶೇಷ ಕೊಡುಗೆ
ಡಿಟಿಎಚ್ ಸಂಸ್ಥೆಗಳಲ್ಲೊಂದಾದ ಸನ್ ಡೈರೆಕ್ಟ್ ಹಬ್ಬದ ಸಂಭ್ರಮಕ್ಕೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಸಿನಿಮಾ ಪ್ಲಸ್ ಸ್ಪೋರ್ಟ್ಸ್ ಪ್ಯಾಕ್ 1890- 2ತಿಂಗಳ ಸಬ್ಸ್ಕ್ರಿಪ್ಷನ್ ಉಚಿತ ಮತ್ತು 2290 - 5ತಿಂಗಳ ಸಬ್ ಸ್ಕ್ರಿಪ್ಷನ್ ಉಚಿತ. ಮತ್ತು ವರ್ಲ್ಡ್ ಪ್ಯಾಕ್ನಲ್ಲಿ 2090 -2ತಿಂಗಳು ಉಚಿತ ಮತ್ತು 3190- 7ತಿಂಗಳು ಉಚಿತ. ಮತ್ತು ಮೆಗಾ ಪ್ಯಾಕ್ನಲ್ಲಿ 2090- 2ತಿಂಗಳು ಉಚಿತ ಮತ್ತು 3490-7ತಿಂಗಳು ಉಚಿತ ಎಂಬ ಪ್ಯಾಕ್ಗಳು ಇದಾಗಿವೆ. ಇದಲ್ಲದೇ ವಿಶೇಷ ಪ್ಯಾಕ್ಗಳು ಲಭ್ಯವಿದೆ. ಇದೀಗ ಸನ್ಡೈರೆಕ್ಟ್ ವೆಬ್ಸೈಟ್ ಅನಾವರಣಗೊಂಡಿದ್ದು, ಈ ಮೂಲಕ ಸಂಸ್ಥೆಯ ಹಳೆಯ ಹಾಗೂ ಹೊಸ ಗ್ರಾಹಕರುಗಳು ಅತ್ಯುತ್ತಮ ಗ್ರಾಹಕ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಗ್ರಾಹಕರು ಸಂಸ್ಥೆಯ ವೆಬ್ಸೈಟ್ಗೆ ಲಾಗಿನ್ www.my.sundirect.in ಮಾಡಬೇಕಾಗುತ್ತದೆ. ಅಲ್ಲದೆ ಸಂಸ್ಥೆಯ ಪ್ರಮುಖ ವೆಬ್ಸೈಟ್ ಆದ www.sundirect.in ಮೂಲಕ ಲಿಂಕ್ ಬಳಸಿ ನೂತನ ವೆಬ್ಸೈಟ್ಗೆ ತಲುಪಬಹುದು.
'ಯೂನಿಯನ್ ಕೆಬಿಸಿ ಟ್ರಿಗರ್ ಫಂಡ್ ಸರಣಿ 1'ಕ್ಕೆ ಚಾಲನೆ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಂಗವಾಗಿರುವ ಯೂನಿಯನ್ ಕೆಬಿಸಿ ಮ್ಯೂಚ್ಯುವಲ್ ಫಂಡ್, ಇತ್ತೀಚೆಗೆ 'ಯೂನಿಯನ್ ಕೆಬಿಸಿ ಟ್ರಿಗರ್ ಫಂಡ್ ಸರಣಿ 1'ಕ್ಕೆ ಚಾಲನೆ ನೀಡಿದೆ. ಹೂಡಿಕೆದಾರರಿಗೆ ಹೂಡಿಕೆಯ ಆರಂಭಿಕ ಹಂತದಲ್ಲಿಯೇ ಲಾಭದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಹೂಡಿಕೆಯ ಹಣದ ಮೇಲಿನ ಲಾಭಾಂಶದ ಹೆಚ್ಚಳವನ್ನು ಗೊತ್ತು ಮಾಡಿಕೊಳ್ಳುವ ಸಂಪೂರ್ಣ ಇಕ್ವಿಟಿ ಯೋಜನೆ ಇದಾಗಿದೆ. ಈ ಯೋಜನೆಯು ಹಣವನ್ನು ಇಕ್ವಿಟಿ ಮತ್ತು ಇಕ್ವಿಟಿ ಸಂಬಂಧಿತ ಸಂರಕ್ಷಣಾ ವಲಯಗಳಲ್ಲಿ ತೊಡಗಿಸಲಾಗುತ್ತದೆ. ಎಸ್ ಅಂಡ್ ಪಿಬಿಎಸ್ಇ 200 ಸೂಚ್ಯಂಕ ಸಂಬಂಧಿ ಕಂಪನಿಗಳಿಗೆ ಇದು ಸೇರುತ್ತದೆ. ಹಣಕಾಸು ವಲಯದ ಸಮತೋಲನಕ್ಕಾಗಿ ಈ ಹಣವನ್ನು ಸಾಲ ನೀಡಿಕೆ ಅಥವಾ ಆರ್ಥಿಕ ಮಾರುಕಟ್ಟೆ ವಲಯದಲ್ಲಿಯೂ ತೊಡಗಿಸಬಹುದು.
ಹೊಸ ಡೈನಿಂಗ್ ತಾಣ
ಪರಿಕಾ ಹಾಸ್ಪಿಟಾಲಿಟಿ ಸರ್ವೀಸಸ್ ಇತ್ತೀಚಿಗೆ ಮೂರು ಹೊಸ ಡೈನಿಂಗ್ ತಾಣಗಳನ್ನು ಪರಿಕಾ, ಕುಡ್ಲ ಮತ್ತು ಕನಕ್ ಎನ್ನುವ ಹೆಸರಿನಲ್ಲಿ ಆರಂಭಿಸಿದೆ. ಪರಿಕಾ ಮತ್ತು ಕುಡ್ಲ ಎರಡೂ ಕೂಡ ವೈವಿಧ್ಯಮಯ ಸುಂದರ ಡೈನಿಂಗ್ ರೆಸ್ಟೋರೆಂಟ್ಗಳಾಗಿದ್ದು, ಜಾಗತಿಕ ಅಡುಗೆ ಹಾಗೂ ಕರಾವಳಿಯ ತಿನಿಸುಗಳನ್ನು ಒದಗಿಸುತ್ತಿವೆ. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೋಗುವ ಹಾಗೂ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಸೂಕ್ತವಾಗುವಂತೆ ಇರುವ ಎರಡೂ ರೆಸ್ಟೋರೆಂಟ್ಗಳು ತಿನಿಸುಗಳ ಸ್ವಾದಕ್ಕೆ ಹೊಸ ಮೆರುಗು ನೀಡಿವೆ. ವಿಶಿಷ್ಟವಾದ ಇಂಟೀರಿಯರ್ ಹೊಂದಿರುವ, ಸ್ವಾದಿಷ್ಟ ಮತ್ತು ಬಾಯಲ್ಲಿ ನೀರೂರಿಸುವ ಆಹಾರಗಳು ಇಲ್ಲಿ ಲಭ್ಯ. ಭಾರತದಲ್ಲಿನ ಎಲ್ಲಾ ರಾಜ್ಯಗಳಲ್ಲಿನ ಪ್ರಸಿದ್ಧ ತಿನಿಸುಗಳನ್ನು ಇಲ್ಲಿ ಸವಿಯಬಹುದು.
ಕೆನಾನ್ ಕಾರ್ಯಕ್ಷೇತ್ರ ವಿಸ್ತರಣೆ
ಕಚೇರಿಗಳ ವ್ಯವಸ್ಥಿತ ಕಡತ ನಿರ್ವಹಣೆ ಕ್ಷೇತ್ರದಲ್ಲಿ ಪ್ರಸಿದ್ಧವಾಗಿರುವ ಕೆನಾನ್ ಇಂಡಿಯಾ ಪ್ರೈವೇಟ್ ಲಿ., ಇದೀಗ ತನ್ನ ಕಾರ್ಯಕ್ಷೇತ್ರವನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸುವತ್ತ ದಾಪುಗಾಲು ಇಟ್ಟಿದೆ. ಕಳೆದ 16 ವರ್ಷಗಳಿಂದ ಆಫೀಸ್ ಇಮೇಜಿಂಗ್ ಸೊಲ್ಯೂಷನ್ಸ್ ಡಿವಿಜನ್ ವಿಭಾಗವು ದೇಶದ ಉದ್ದಗಲಕ್ಕೂ ತನ್ನ ಸೇವೆಯನ್ನು ನೀಡುತ್ತಿದ್ದು, 2015ರ ಒಳಗೆ ಸೇವಾ ಕ್ಷೇತ್ರವನ್ನು ಈಗಿನ 546 ಸ್ಥಳಗಳಿಂದ 700ಕ್ಕೂ ಹೆಚ್ಚು ಸ್ಥಳಗಳಿಗೆ ವಿಸ್ತರಿಸಲು ನಿರ್ಧಾರ ಕೈಗೊಂಡಿರುವುದಾಗಿ ಪ್ರಕಟಿಸಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆನಾನ್ನ ಆಫೀಸ್ ಇಮೇಜಿಂಗ್ ಸೊಲ್ಯುಷನ್ಸ್ ವಿಭಾಗದ ಹಿರಿಯ ನಿರ್ದೇಶಕ ಕೆ.ಭಾಸ್ಕರ್, ಸಣ್ಣ ಮತ್ತು ಮಧ್ಯಮ ಗಾತ್ರದ ಎಲ್ಲಾ ಕಂಪನಿಗಳು ಟಯರ್ 2 ಮತ್ತು ಟಯರ್ 3 ನಗರಗಳಲ್ಲಿ ತಮ್ಮ ಸೇವೆ ವಿಸ್ತರಿಸಲು ಮುಂದಾಗಿವೆ ಎಂದು ತಿಳಿಸಿದರು.
'ಗುಡ್ನೈಟ್ ಫಾಸ್ಟ್ ಕಾರ್ಡ್'
ಗೊದ್ರೇಜ್ ಸಂಸ್ಥೆ ಸೊಳ್ಳೆಗಳಿಂದ ಎದುರಾಗುವ ದೊಡ್ಡ ಸಮಸ್ಯೆಗೆ ಬಹಳ ಸುಲಭದ ಹಾಗೂ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸುವ ಹೊಸ ಬಗೆಯ 'ಗುಡ್ನೈಟ್ ಫಾಸ್ಟ್ ಕಾರ್ಡ್' ಪರಿಹಾರ ಪ್ರಕಟಿಸಿದೆ. ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ, 'ನಮ್ಮ ದೇಶದಲ್ಲಿನ ಶೇ.56ರಷ್ಟು ಮಂದಿ ರಾತ್ರಿ ನಿದ್ರೆಯ ವೇಳೆ ಸೊಳ್ಳೆ ನಿವಾರಕಗಳನ್ನು ಬಳಸುತ್ತಲೇ ಇಲ್ಲ. ಅಂತಹವರು ಸೊಳ್ಳೆಗಳು ಹರಡುವ ರೋಗಕ್ಕೆ ತುತ್ತಾಗುವ ಅಪಾಯವಿದೆ. ಇದಕ್ಕೆ ಪರಿಹಾರವಾಗಿ ನಮ್ಮ ಸಂಸ್ಥೆಯ ಉತ್ಪನ್ನ ಬಹಳ ಪರಿಣಾಮಕಾರಿಯಾಗಿದೆ' ಎಂದರು. 10 ಕಾರ್ಡ್ಗಳಿರುವ ಗೋದ್ರೆಜ್ನ ಗುಡ್ನೈಟ್ ಫಾಸ್ಟ್ ಕಾರ್ಡ್ನ ಬೆಲೆ 10. ಅಂದರೆ, ಒಂದು ಕಾರ್ಡ್ ಬೆಲೆ 1.
'ಎವೆರಿವೇರ್ ಟಿವಿ' ಬಿಡುಗಡೆ
ಡಿಟಿಎಚ್ ಉದ್ದಿಮೆಯಲ್ಲಿ ನೂತನ ತಂತ್ರಜ್ಞಾನ ಆವಿಷ್ಕಾರಗಳ ಪ್ರವರ್ತಕ ಟಾಟಾ ಸ್ಕೈ ಇತ್ತೀಚಿಗೆ 'ಎವೆರಿವೇರ್ ಟಿ ವಿ' ಬಿಡುಗಡೆ ಮಾಡಿತು. ಈ ಮೂಲಕ ಚಂದಾದಾರರು ಶೀಘ್ರದಲ್ಲಿ ಚಲಿಸುತ್ತಿರುವಾಗಲೇ ತಮ್ಮ ನೆಚ್ಚಿನ ಟಿವಿ ಚಾನೆಲ್ಗಳನ್ನು ಹಾಗೂ ಬೇಡಿಕೆ ಮೇರೆಗೆ ವೀಡಿಯೋಗಳನ್ನು ವೀಕ್ಷಿಸುವ ಆನಂದ ಪಡೆಯಬಹುದು. ಟಾಟಾ ಸ್ಕೈ ಚಂದಾದಾರರಿಗೆ ಲಭ್ಯವಾಗಲಿರುವ ಈ ಸೇವೆ, ಆ್ಯಪಲ್ ಮತ್ತು ಆ್ಯಂಡ್ರಾಯ್ಡ್ ಸ್ಟೋರ್ಗಳಿಂದ ಟಾಟಾ ಸ್ಕೈ ಮೊಬೈಲ್ ತಂತ್ರಾಂಶಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಪಡೆದುಕೊಳ್ಳಬಹುದು. ಈ ಮೊಬೈಲ್ ತಂತ್ರಾಂಶ ಅನೇಕ ಉಚಿತ ಸೇವೆಗಳನ್ನು ನೀಡುತ್ತಿದ್ದು ಎವೆರಿವೇರ್ ಟಿವಿ ಸೇವೆಗೆ ಚಂದಾದಾರರು ತಿಂಗಳಿಗೆ 60 ಪಾವತಿಸಬೇಕು. 60 ಪಾವತಿಸಿದರೆ 50ಕ್ಕೂ ಹೆಚ್ಚು ಟಿವಿ ಚಾನಲ್ಗಳನ್ನು ವೀಕ್ಷಿಸಬಹುದು.
'ಸಿನ್ ರಿಯಮ್' ಮಾರಾಟಕ್ಕೆ ರಾನ್ಬ್ಯಾಕ್ಸಿ ಲ್ಯಾಬೊರೇಟರೀಸ್ಗೆ ಅನುಮೋದನೆ
ರಾನ್ಬ್ಯಾಕ್ಸಿ ಲ್ಯಾಬೊರೇಟರೀಸ್ ಲಿಮಿಟೆಡ್ ವಯಸ್ಕರಲ್ಲಿ ಪ್ಲಾಸ್ಮೋಡಿಯಮ್ ವಿವಾಕ್ಸ್ ಎಂಬ ಮಲೇರಿಯಾಗೆ ಚಿಕಿತ್ಸೆ ನೀಡಲು 'ಸಿನ್ ರಿಯಮ್'ನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಭಾರತದ ಕೇಂದ್ರ ಔಷಧಗಳ ಮಾನದಂಡ ನಿಯಂತ್ರಣ ಸಂಸ್ಥೆಯಿಂದ ಅನುಮೋದನೆ ಪಡೆದಿರುವುದಾಗಿ ತಿಳಿಸಿದೆ. ವಯಸ್ಕರಲ್ಲಿ ಪ್ಲಾಸ್ಮೋಡಿಯಮ್ ವಿವಾಕ್ಸ್ ಎಂಬ ಪರೋಪಜೀವಿಯಿಂದ ಉಂಟಾದ ಮಲೇರಿಯಾಗೆ ಚಿಕಿತ್ಸೆ ನೀಡಲು 'ಸಿನ್ ರಿಯಮ್'ನ್ನು ತಯಾರಿಸಲಾಗುತ್ತದೆ. ಔಷಧಕ್ಕೆ ನಡೆಸಿದ 3ಪ್ರಯೋಗಗಳಲ್ಲಿ ಕ್ಲೋರೊಕ್ವಿನ್ಗೆ ಹೋಲಿಸಿದರೆ ಸಿನ್ರಿಯಮ್ನ ಪರಿಣಾಮ ಮತ್ತು ಸಹನಶೀಲತೆಗಳನ್ನು ಯಶಸ್ವಿಯಾಗಿ ಪ್ರದರ್ಶಿತವಾಗಿದೆ. ಮಲೇರಿಯಾದಿಂದ ಬಳಲುವ ರೋಗಿಗಳ ಚಿಕಿತ್ಸೆಗಾಗಿ ಫಾರ್ಮುಲೇಶನ್ ಅನ್ನು 3 ಹಂತದ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲು ಕೂಡ ರಾನ್ಬಾಕ್ಸಿ ಅನುಮತಿ ಪಡೆದಿದೆ.