ಮಿಸ್ ಆ್ಯಂಡ್ ಮಿಸ್ಟರ್ ಇಂಡಿಯಾ ಸ್ಪರ್ಧೆ ವಿಜೇತರು
ಡೆಹ್ರಾಡೂನ್ನ ದೀಪಿಕಾ ವರ್ಮಾ ಹಾಗೂ ನವದೆಹಲಿಯ ಅಮಿತ್ ಸಿಂಗ್ ಅವರು ಮಿಸ್ ಇಂಡಿಯಾ ಮತ್ತು...
ಡೆಹ್ರಾಡೂನ್ನ ದೀಪಿಕಾ ವರ್ಮಾ ಹಾಗೂ ನವದೆಹಲಿಯ ಅಮಿತ್ ಸಿಂಗ್ ಅವರು ಮಿಸ್ ಇಂಡಿಯಾ ಮತ್ತು ಮಿಸ್ಟರ್ ಇಂಡಿಯಾ- 2013ರ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಮೈಶಾಪ್ ಬಜಾರ್.ಕಾಂ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿತ್ತು. ಕಾರ್ಯಕ್ರಮದ ಅಂತಿಮ ಸುತ್ತು ನವದೆಹಲಿಯಲ್ಲಿ ನಡೆಯಿತು. ಈ ಅಂತಿಮ ಸುತ್ತಿನಲ್ಲಿ ದೀಪಿಕಾ ವರ್ಮಾ ಹಾಗೂ ಅಮಿತ್ ಸಿಂಗ್ ಆಯ್ಕೆಯಾಗಿದ್ದಾರೆ. ವಡೋದರಾದ ಸಾಗರ್ ಷಾ, ಚಂಡೀಘಡದ ಶಿಕಾ ಶರ್ಮಾ ಅವರು ಮೊದಲನೇ ರನ್ನರ್ ಅಪ್ಗಳಾಗಿದ್ದಾರೆ. ನವದೆಹಲಿಯ ಮನೀಶ್ ಮೆಹ್ತಾ, ನೋಯ್ಡಾದ ಇಶಾ ತಿವಾರಿ ಪಾಂಡೆ ಅವರು 2ನೇಯ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಮಿಸ್ ಟ್ಯಾಲೆಂಟ್, ಮಿಸ್ ಫೋಟೋ ಜೆನಿಕ್, ಮಿಸ್ ಪಾಪ್ಯುಲರ್, ಅತ್ಯುತ್ತಮ ಮಾಡೆಲ್, ಅತ್ಯುತ್ತಮ ನಡಿಗೆ, ಅಂದವಾದ ಕಣ್ಣುಗಳು, ದೇಹದಾರ್ಢ್ಯತೆ, ಉತ್ತಮ ನಗು ವಿಭಾಗಗಳ(ಮಹಿಳೆ, ಪುರುಷರಿಗೆ) ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಕ್ರಮವಾಗಿ ಅಂಕಿತ್ ವರ್ಮಾ ಮತ್ತು ವಿಧಿ ಸಚ್ದೇವ್, ರಜತ್ಪಾಲ್ ಮತ್ತು ಶ್ವೇತಾ ಪಾಲ್, ಮಂಜುನಾಥ್ ರೆಡ್ಡಿ ಮತ್ತು ಪಾಯಲ್ ಸಿಂಗ್, ಮಣೇಶ್ ದಢೀಚ್ ಮತ್ತು ಸವಿತಾ ಸಿಂಗ್, ಡಾ. ಕುಲ್ದೀಪ್ ಶರ್ಮಾ ಮತ್ತು ರಾಧಾ ಭಟ್, ಆಶಾ ಫ್ರೆಡ್, ಪರ್ವೇಜ್ ಮಾಗ್ರೆ, ವಿಶ್ವಾಸ್ ಶರ್ಮಾ ಮತ್ತು ಸೋನಾಲಿ ವರ್ಮಾ ಆಯ್ಕೆಯಾಗಿದ್ದಾರೆ.
ವೋಕ್ಸ್ವ್ಯಾಗನ್ನಿಂದ ವೆಂಟೋ ಟಿಎಸ್ಐ ಕಾರ್ ಬಿಡುಗಡೆ
ಯೂರೋಪಿನ ಅತಿದೊಡ್ಡ ಕಾರು ತಯಾರಕಾ ಸಂಸ್ಥೆಗಳಲ್ಲಿ ಒಂದಾದ ವೋಲ್ಕ್ಸ್ವ್ಯಾಗನ್ ಈಗ ಶಕ್ತಿಶಾಲಿ ಮತ್ತು ದಕ್ಷ ಹೊಸ ವೆಂಟೋ ಟಿಎಸ್ಐ ಅನ್ನು ಬಿಡುಗಡೆ ಮಾಡಿದೆ. ಈ ವೆಂಟೋದಲ್ಲಿ 105 ಪಿಎಸ್ ಮತ್ತು 175 ಎನ್ಎಂ ಉತ್ಪತ್ತಿಮಾಡುವ 1.2 ಲೀ, 4 ಸಿಲಿಂಡರ್ ಟರ್ಬೋಚಾರ್ಜ್ ಉಳ್ಳ ಇಂಧನ ದಕ್ಷತೆ ಇರುವ ಪೆಟ್ರೋಲ್ ಎಂಜಿನ್ ಇದೆ.ಟಿಎಸ್ಐ ಎಂಜಿನ್ಗಳು ಚಿಕ್ಕದಾಗಿದ್ದರೂ ಶಕ್ತಿಯಾಗಿದ್ದು, ಸಾಮಾನ್ಯ ಎಂಜಿನ್ಗಳಿಗಿಂತಲೂ ಕಡಿಮೆ ಇಂಧನ ವ್ಯಯಿಸುತ್ತದೆ. ವಿವಿಧ ಬಣ್ಣಗಳಲ್ಲಿ ಲಭ್ಯ. ವಿವರಕ್ಕೆ ಮೊ. 88793 00107
ನಟ ದಿಗಂತ್ ಡಿಯೋಡ್ರೆಂಟ್ ರಾಯಭಾರಿ
'ಓಲ್ಡ್ ಸ್ಪೈಸ್ ಡಿಯೋಡ್ರೆಂಟ್ ಬಳಸಿ ಪುರುಷೋತ್ತಮರಾಗಿ...' ಎಂದು ಹೇಳುವ ಮೂಲಕ ಖ್ಯಾತ ಮ್ಯಾರಥಾನ್ ಓಟಗಾರ ಮಿಲಿಂದ್ ಸೋಮನ್ ಮತ್ತು ಕನ್ನಡದ ಹಿರಿತೆರೆ ನಟ ದಿಗಂತ್ ಅವರು ಪ್ರಚಾರ ಆರಂಭಿಸಿದ್ದಾರೆ. ಓಲ್ಡ್ ಸ್ಪೈಸ್ ಡಿಯೋಡ್ರೆಂಟ್ ಪ್ರಚಾರಕ್ಕೆ ಇವರಿಬ್ಬರೂ ರಾಯಭಾರಿಯಾಗಿದ್ದಾರೆ. ಇದರ ಬೆಲೆ 150. ವಿವಿಧ ನಮೂನೆಗಳಲ್ಲಿ ಲಭ್ಯ. ವಿವರಕ್ಕೆ www.oldspiceindia.comಅಥವಾ 088849 29583.
ಬಾಷ್ಗೆ ಗ್ವೆಂಟರ್ ವೆಂಬರ್ ನೇಮಕ
ಬಾಷ್ ಲಿಮಿಟೆಡ್ನ ವಾಹನ ಕ್ಷೇತ್ರದ ಮಾರುಕಟ್ಟೆ ವಹಿವಾಟಿನ ಪ್ರಾದೇಶಿಕ ಅಧ್ಯಕ್ಷರಾಗಿ ಗ್ವೆಂಟರ್ ವೆಂಬರ್ ಅವರು ನೇಮಕಗೊಂಡಿದ್ದಾರೆ. ಈ ನೇಮಕದ ಆದೇಶ ನ.1ರಿಂದ ಜಾರಿಗೆ ಬಂದಿದೆ. ಕೋರ್ ಬ್ಯುಸಿನೆಸ್ ಫೀಲ್ಡ್ ಡೀಸೆಲ್ ಆಟೋಮೋಟಿವ್ ಆಫ್ಟರ್ ಮಾರ್ಕೆಟ್ ವಿಭಾಗದಲ್ಲಿ ಜರ್ಮನಿಯಲ್ಲಿ ಉಪಾಧ್ಯಕ್ಷರಾಗಿದ್ದ ವೆಬರ್ ಈಗ ಭಾರತದಲ್ಲಿ ಪ್ರಾದೇಶಿಕ ಕಾರ್ಯಾಚರಣೆಯ ಹೊಣೆಗಾರಿಕೆ ನಿರ್ವಹಿಸಲಿದ್ದಾರೆ. ಬಾಷ್ ಸಮೂಹದ ಭಾರತದ ಅಧ್ಯಕ್ಷ ಹಾಗೂ ಬಾಷ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಡಾ. ಸ್ಟೀಫನ್ ಬರ್ನ್ಸ್ ಅವರು ವೆಂಬರ್ ಅವರನ್ನು ಅಭಿನಂದಿಸಿದ್ದಾರೆ.
ವೈಟ್ಫೀಲ್ಡ್ನಲ್ಲಿ 'ತನ್ವಿ ಹೋಂಡಾ' ಆರಂಭ
ಹೋಂಡಾ ಸಂಸ್ಥೆಯು ನಗರದ ವೈಟ್ಫೀಲ್ಡ್ ಸಮೀಪದ ಮಹದೇವಪುರದಲ್ಲಿ ನೂತನ ದ್ವಿಚಕ್ರ ವಾಹನ ಮಾರಾಟ ಮಳಿಗೆ 'ತನ್ಸಿ ಹೋಂಡಾ'ವನ್ನು ಆರಂಭಿಸಿದೆ. ಈ ನೂತನ ಮಳಿಗೆಯೊಂದಿಗೆ ಸಂಸ್ಥೆಯು ಭಾರತದಲ್ಲಿ ಒಟ್ಟು 703 ಮಾರಾಟ ಮಳಿಗೆ ಹೊಂದಿದಂತಾಗಿದೆ. ನಗರದ ಎಲ್ಲಾ ಭಾಗದ ಜನರಿಗೂ ಉತ್ತಮ ಸೇವೆ ಒದಗಿಸುವುದು ಹೋಂಡಾ ಉದ್ದೇಶ. ಈ ಮಳಿಗೆಯಲ್ಲಿ ಸ್ಕೂಟರ್, ಮೋಟಾರ್ ಬೈಕ್ಗಳಿಗೆ ಪ್ರತ್ಯೇಕ ವಿಭಾಗ ಮೀಸಲಿಡಲಾಗಿದ್ದು, ಒಂದೇ ಸೂರಿನಡಿ ಗ್ರಾಹಕರಿಗೆ 4 ರೀತಿಯ ಸೇವೆಗಳನ್ನು ಒದಗಿಸಿದೆ. ವಿವರಕ್ಕೆ ಮೊ. 99869 38281.
ಎಚ್ಸಿಎಲ್ನಿಂದ ಮಕ್ಕಳಿಗಾಗಿ 'ಮೀ ಚಾಂಪ್' ಟ್ಯಾಬ್ಲೆಟ್
ಭಾರತದ ಎಚ್ಸಿಎಲ್ ಇನ್ಫೋಸಿಸ್ಟಮ್ಸ್ ಲಿ. ದೀಪಾವಳಿ ಪ್ರಯುಕ್ತ 3ರಿಂದ 12 ವರ್ಷದೊಳಗಿನ ಮಕ್ಕಳಿಗಾಗಿ " me champ' ಎಂಬ ನೂತನ ಟ್ಯಾಬ್ಲೆಟ್ ಬಿಡುಗಡೆ ಮಾಡಿದ್ದು, "kids are champ' ಎಂಬ ವಿದ್ಯಾರ್ಥಿ ವೇತನ ಯೋಜನೆಯನ್ನು ಸಹ ಪ್ರಾಯೋಜಿಸಿದೆ. ಈ ಟ್ಯಾಬ್ಲೆಟ್ 11 ಸ್ಥಳೀಯ ಭಾಷೆಗಳ ಸೌಲಭ್ಯ ಹೊಂದಿದ್ದು, 7,999ಕ್ಕೆ ಲಭ್ಯ. ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯ ಹೆಚ್ಚಿಸುವುದು ಇದರ ಉದ್ದೇಶ. ಇದರಲ್ಲಿ ಮಕ್ಕಳ ಕಾಮಿಕ್ಸ್, ಸಂಗೀತ, ಗಣಿತ, ವಿವಿಧ ವಿಷಯಗಳ ಪುಸ್ತಕಗಳನ್ನೊಳಗೊಂಡ ಹಲವು ಕಾರ್ಯಕ್ರಮಗಳೂ ಲಭ್ಯ. ಅಂತರ್ಜಾಲ ತಾಣದ ಸಂಪರ್ಕ ಕಲ್ಪಿಸಿಕೊಳ್ಳಬಹುದು. ಅಲ್ಲದೇ, "kids are champ' ಎಂಬ ಯೋಜನೆಯಲ್ಲಿ ಗೆಲುವು ಸಾಧಿಸುವ 10 ಮಂದಿಗೆ 5 ಲಕ್ಷ ವಿದ್ಯಾರ್ಥಿ ವೇತವನ್ನು ಹಂಚಲಾಗುತ್ತದೆ. ವಿವರಕ್ಕೆ ಮೊ. 99711 79400.