ಷೇರುಪೇಟೆ ವಹಿವಾಟಿನಲ್ಲಿ ದೇಶದಲ್ಲೇ ಅತ್ಯಂತ ಮುನ್ನಡೆಯಲ್ಲಿರುವ ವಲ್ತ್ ರೇಸ್ ಗ್ರೂಪ್ ಈಗ ಮೊಬೈಲ್‌ನಲ್ಲಿಯೂ ಸೇವೆ ಆರಂಭಿಸಿದೆ. ಇದಕ್ಕಾಗಿ ಅದು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ದಿಂದ ಅನುಮತಿ ಪಡೆದಿದೆ. ಹೀಗಾಗಿ ಅದು ಆನ್‌ಲೈನ್/ ಟರ್ಮಿನಲ್ ಮತ್ತು ಮೊಬೈಲ್ ಟ್ರೇಡಿಂಗ್ ಸೌಲಭ್ಯವನ್ನು ಎನ್‌ಎಸ್‌ಇ ಕ್ಯಾಶ್ ಮತ್ತು ಎನ್‌ಎಸ್‌ಇ ಎಫ್ ಆ್ಯಂಡ್ ಓ ವಲಯಗಳಲ್ಲಿ ವ್ಯವಹಾರ ನಡೆಸಲು ಅವಕಾಶ ನೀಡಿದೆ. ಇದಕ್ಕಾಗಿ ಅದು 33 ಬ್ಯಾಂಕ್‌ಗಳ ಜತೆ ಸಹಭಾಗಿತ್ವ ಹೊಂದಿದೆ. ಹೊಸ ಸೇವೆಗಳ ಮೂಲಕ ಗ್ರಾಹಕರಿಗೆ ಶೂನ್ಯ ಬ್ರೋಕರೇಜ್ ಶುಲ್ಕದೊಂದಿಗೆ ಟ್ರೇಡಿಂಗ್ ಸೌಲಭ್ಯ ಒದಗಿಸಿದೆ.