ರೆಪ್ಕೋ ಬ್ಯಾಂಕ್ ಶೇ.70ರಷ್ಟು ಲಾಭಾಂಶ
ಬೆಂಗಳೂರು: ರಾಜ್ಯ ಸರ್ಕಾರದ ಈಕ್ವಿಟಿ ಬಂಡವಾಳಕ್ಕೆ ರೆಪ್ಕೋ ಬ್ಯಾಂಕ್ ಶೇ.70ರಷ್ಟು ಲಾಭಾಂಶ ನೀಡಿದೆ. ಸರ್ಕಾರ ಈಕ್ವಿಟಿ ಮೂಲಕ ಹೂಡಿಕೆ ಮಾಡಿದ್ದ ಬಂಡವಾಳದಲ್ಲಿ 2012-13ನೇ ಸಾಲಿನ ಲಾಭಾಂಶದ ಮೊತ್ತ 3,49,400ಗಳನ್ನು ಬ್ಯಾಂಕ್ ಸಲ್ಲಿಸಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಅವರಿಗೆ ರೆಪ್ಕೋ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಟಿ.ಇ. ತಿರುವೆಂಕಟಮ್ ಮತ್ತು ಉಪ ಪ್ರಧಾನ ವ್ಯವಸ್ಥಾಪಕ ಎಸ್. ಹರಿನಾಥ್ ರೆಡ್ಡಿ ಹಾಗೂ ಸಿಬ್ಬಂದಿ ಬುಧವಾರ ಲಾಭಾಂಶದ ಚೆಕ್ ನೀಡಿದರು. ಕೇಂದ್ರ ಸರ್ಕಾರದ ಗೃಹ ಇಲಾಖೆ ಅಧೀನದಲ್ಲಿರುವ ರೆಪ್ಕೋ ಬ್ಯಾಂಕ್ ರಾಜ್ಯದಲ್ಲಿ 7 ಶಾಖೆಗಳನ್ನು ಹೊಂದಿದೆ. 2012-13ನೇ ಸಾಲಿನಲ್ಲಿ 9005ಕೋಟಿ ಲಾಭಗಳಿಸಿದ್ದು, 86 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಪ್ರಧಾನ ವ್ಯವಸ್ಥಾಪಕ ಟಿ.ಇ. ತಿರುವೆಂಕಟಮ್ ತಿಳಿಸಿದೆ.