ಕಿಂಡಾಲ್ ಇಂಡಿಯಾ ಜೊತೆ ಕೈ ಜೋಡಿಸಿದ ಜೆ.ಪಿ ಸಮೂಹ
ಪ್ರೀಮಿಯಂ ಗುಣಮಟ್ಟದ ಸ್ಪಿರಿಟ್ಗಳ ರಫ್ತು, ತಯಾರಿಕೆ ಹಾಗೂ ವಿತರಣೆಯಲ್ಲಿ ತೊಡಗಿರುವ ಕಿಂಡಾಲ್ ಇಂಡಿಯಾ ಜೆ.ಪಿ ಸಮೂಹ ಸಂಯೋಜನೆಯೊಂದಿಗೆ...
ಕಿಂಡಾಲ್ ಇಂಡಿಯಾ ಜೊತೆ ಕೈ ಜೋಡಿಸಿದ ಜೆ.ಪಿ ಸಮೂಹ
ಪ್ರೀಮಿಯಂ ಗುಣಮಟ್ಟದ ಸ್ಪಿರಿಟ್ಗಳ ರಫ್ತು, ತಯಾರಿಕೆ ಹಾಗೂ ವಿತರಣೆಯಲ್ಲಿ ತೊಡಗಿರುವ ಕಿಂಡಾಲ್ ಇಂಡಿಯಾ ಜೆ.ಪಿ ಸಮೂಹ ಸಂಯೋಜನೆಯೊಂದಿಗೆ 50-50 ಸರಾಸರಿಯಂತೆ ಸ್ಪಿರಿಟ್ ವಿತರಣೆ ಮಾಡುವ ಟೆರ್ರಾ ಇಂಕ್ ಎಂಬ ಜಂಟಿ ಸಂಸ್ಥೆಯನ್ನು ಸ್ಥಾಪಿಸಿದೆ. ಎರಡು ಕಂಪನಿಗಳು ಒಟ್ಟಾಗಿ ಮಾರುಕಟ್ಟೆಯಲ್ಲಿ ಪ್ರೀಮಿಯಂ ಗುಣಮಟ್ಟದ ಸ್ಪಿರಿಟ್ಗಳ ಮಾರಾಟವನ್ನು ಅಭಿವೃದ್ಧಿಪಡಿಸುವುದು ಪಾಲುದಾರಿಕೆ ಉದ್ದೇಶವಾಗಿದೆ. ಪ್ರಾಥಮಿಕವಾಗಿ ಟೆರ್ರಾ ಇಂಕ್, ಕರ್ನಾಟಕ, ಆಂಧ್ರಪ್ರದೇಶ, ಹಾಗೂ ದೆಹಲಿಯಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಲಿದ್ದು ಮುಂಬರುವ ದಿನಗಳಲ್ಲಿ ಭಾರತದಾದ್ಯಂತ ತನ್ನ ಮಾರುಕಟ್ಟೆ ವಿಸ್ತರಿಸಲಿದೆ.
ಬಿಗ್ ಎಫ್ಎಂನಿಂದ ಪರಿಸರ ಸ್ನೇಹಿ ಪೇಪರ್ ಗಣೇಶ
ಸಾಮಾಜಿಕ ಹೊಣೆಗಾರಿಕೆ, ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿಕೊಡುವ 92.7 ಎಫ್ಎಂನ ಬೆಂಗಳೂರು ಕಚೇರಿ 6ನೇ ವರ್ಷ ಬಸವನಗುಡಿ ಪಿಇಎಸ್ ಕಾಲೇಜು ಆವರಣದಲ್ಲಿ ಹಸಿರು ಪ್ರಿಯ ಗಣಪನನ್ನು ಪ್ರತಿಷ್ಠಾಪಿಸುವ ಮೂಲಕ ಆಚರಿಸಿತು. ಕನ್ನಡ ಚಿತ್ರನಟಿ ಸುಧಾರಾಣಿ ಗಣೇಶಮೂರ್ತಿ ಪೂಜಿಸಿ ಆರತಿ ಬೆಳಗಿದರು. ವಿಷಕಾರಿ ಬಣ್ಣಗಳು ಹಾಗೂ ಪರಿಸರಕ್ಕೆ ಮಾರಾಕವಾದ ವಸ್ತುಗಳನ್ನು ಬಳಸದೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪೂಜಿಸಿ ಎಂದು ಜನರಲ್ಲಿ ಜಾಗೃತಿ ಮೂಡಿಸುವುದು ಬಿಗ್ ಎಫ್ಎಂನ ಉದ್ದೇಶವಾಗಿದೆ. ಹೀಗಾಗಿ ಬಿಗ್ ಎಫ್ಎಂನ ಕಚೇರಿ ಸಿಬ್ಬಂದಿ ಜನವಸತಿ, ವಾಣಿಜ್ಯ ಪ್ರದೇಶಗಳು ಅಂಗಡಿ ಮುಂಗಟ್ಟು ಮುಂತಾದ ಕಡೆ ಬೀದಿ ಬೀದಿ ಸುತ್ತಾಡಿ ಹಳೆಯ ದಿನಪತ್ರಿಕೆಗಳನ್ನು ಸಂಗ್ರಹಿಸಿದ್ದರು. ಆ ಪತ್ರಿಕೆಗಳನ್ನು ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಿಸುವವರಿಗೆ ನೀಡಿ ಒಂದು ಪರಿಸರ ಸ್ನೇಹಿ ಪೇಪರ್ ಗಣೇಶನನ್ನು ಸಿದ್ದಪಡಿಸಿದರು.
ಐಎಫ್ಪಿ ಇಂಡಿಯಾಗೆ ಕೈ ಜೋಡಿಸಿ
ಭಾರತದ ಅತಿದೊಡ್ಡ ಚಲನಚಿತ್ರ ನಿರ್ಮಾಣ ಕಾರ್ಯಕ್ರಮ 'ಭಾರತೀಯ ಚಲನಚಿತ್ರ ಯೋಜನೆ' (ಐಎಫ್ಪಿ ಇಂಡಿಯಾ) 2013ರ ಆವೃತ್ತಿ ಸೆಪ್ಟಂಬರ್ 20 ರಿಂದ 28ರವರೆಗೂ ನಡೆಯಲಿದೆ. ಹೊಸ ಹಾಗೂ ವೃತ್ತಿಪರ ಚಲನಚಿತ್ರ ನಿರ್ಮಾಪಕರಿಗೆ ಭಾರತೀಯ ಚಲನಚಿತ್ರ ಯೋಜನೆ ಉತ್ತಮ ಅವಕಾಶವಾಗಿದೆ. ಕೇವಲ 48 ಗಂಟೆಗಳಲ್ಲಿ ಒಂದು ಚಲನಚಿತ್ರ ನಿರ್ಮಿಸುವ ಸವಾಲನ್ನು ಎದುರಿಸಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಲು ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ. 2013ರ ಆವೃತ್ತಿಯನ್ನು ಆನ್ಲೈನ್ ಮಾಡಲಾಗಿದೆ. ಭಾಗವಹಿಸುವವರು ತಾವಿರುವ ಸ್ಥಳಗಳಲ್ಲಿಯೇ 48 ಗಂಟೆಗಳೊಳಗೆ ಚಿತ್ರ ನಿರ್ಮಿಸಿ ಅದನ್ನು ಅನ್ಲೈನ್ ಮೂಲಕ ಅಪ್ಲೋಡ್ ಮಾಡಬಹುದು. ಇದರಲ್ಲಿ ಭಾಗವಹಿಸಲು ಇಚ್ಚಿಸುವವರು ಸೆ.14 2013ರ ಒಳಗೆ ಹೆಸರು ನೋಂದಾಯಿಸಿಬೇಕು.
11 ರಾಷ್ಟ್ರಗಳ ಆರೋಗ್ಯ ಸಚಿವರ ಸಭೆ
ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧ ಹೋರಾಡಲು ಆಗ್ನೇಯ ಏಷ್ಯಾದ 11 ರಾಷ್ಟ್ರಗಳ ಆರೋಗ್ಯ ಸಚಿವರು ನವದೆಹಲಿಯಲ್ಲಿ ಸಭೆ ನಡೆಸಿದರು. ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ಹೊಗೆರಹಿತ ತಂಬಾಕು ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧ ಹೋರಾಡಲು ಈ ರಾಷ್ಟ್ರಗಳು 10 ಗುರಿಗಳನ್ನು ಅಳವಡಿಸಿಕೊಳ್ಳಲಿವೆ. ವಿಶ್ವದ ಶೇ.90 ರಷ್ಟು ಹೊಗೆರಹಿತ ತಂಬಾಕು ಸೇವಕರು ಈ ರಾಷ್ಟ್ರಗಳಲ್ಲಿದ್ದಾರೆ. ಅಲ್ಲದೇ ಹೃದಯ ಸಂಬಂಧಿ ಕಾಯಿಲೆಗಳು, ತೀವ್ರವಾದ ಉಸಿರಾಟ ಸಂಬಂಧಿತ ಕಾಯಿಲೆಗಳು, ಕ್ಯಾನ್ಸರ್ ಮತ್ತು ಡಯಾಬಿಟಿಸ್ ಖಾಯಿಲೆಗಳು ಈ ಭಾಗದ ಜನರನ್ನು ಹೆಚ್ಚಾಗಿ ಆಹುತಿ ತೆಗೆದುಕೊಳ್ಳುತ್ತಿವೆ. ತಂಬಾಕು ಬಳಕೆ, ಆನಾರೋಗ್ಯಕರ ಆಹಾರ ಸೇವನೆ, ದೈಹಿಕ ಚಟುವಟಿಕೆ ಇಲ್ಲದಿರುವುದು, ಮದ್ಯವ್ಯಸನ ಮುಂತಾದ ವಿಷಯಗಳ ಬಗ್ಗೆ ಆರೋಗ್ಯ ಸಚಿವರುಗಳ ಸಭೆಯಲ್ಲಿ ಚರ್ಚೆಯಾಗಲಿದೆ. 2025ರ ವೇಳೆಗೆ ಇಂತಹ ಕಾಯಿಲೆಗಳಿಂದ ಮೃತಪಡುವ ಜನರ ಸಂಖ್ಯೆಯನ್ನು ಇಳಿಸುವುದು ಸಭೆಯ ಉದ್ದೇಶವಾಗಿದೆ.
ಜಾಕ್ಸನ್ನಿಂದ ನೂತನ ಸೌರಶಕ್ತಿ ವಿದ್ಯುತ್ ಉತ್ಪಾದಕ
ಭಾರತದ ವಿದ್ಯುತ್ ಪರಿಹಾರ ಕಂಪನಿ ಜಾಕ್ಸನ್ ಪವರ್ ಸಲ್ಯೂಷನ್ಸ್ ನೂತನ ಸೌರಶಸ್ತಿ ವಿದ್ಯುತ್ ಉತ್ಪಾದಕಗಳನ್ನು ಪರಿಚಯಿಸುತ್ತಿದೆ. ಸೌರ ವಿದ್ಯುತ್ ಯಂತ್ರೋಪಕರಣಗಳ ಉತ್ಪಾದನೆ ಹಾಗೂ ಪರಿಹಾರಗಳ ಕ್ಷೇತ್ರದಲ್ಲಿ ತನ್ನ ಅಭಿವೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಮೊದಲ ಸೌರಶಕ್ತಿ ಆಧಾರಿತ ಜನರೇಟರ್ಗಳು ಹಾಗೂ ಸೌರಶಕ್ತಿ ಆಧಾರಿತಿ ನೀರು ಶುದ್ಧೀಕರಣ ಉಪಕರಣಗಳನ್ನು ಪರಿಚಯಿಸುತ್ತಿದೆ. ಈ ಉಪಕರಣಗಳು ಪ್ಲಗ್ ಆಂಡ್ ಪ್ಲೇ ಪರಿಕಲ್ಪನೆ ಆಧಾರಿಸಿವೆ. ಜಾಕ್ಸನ್ ಮೊಬೈಲ್ ಸೌರಶಕ್ತಿ ಜನರೇಚರ್ಗಳು ಚಿಕ್ಕ ವಿದ್ಯುತ್ ಉತ್ಪಾದನಾ ಉಪಕರಣಗಳಾಗಿದ್ದು, ತೊಂದರೆರಹಿತ ಹಾಗೂ ಶುದ್ಧ ವಿದ್ಯುತ್ ಉತ್ಪಾದಿಸುತ್ತವೆ. 0.5 ಕಿಲೋ ವ್ಯಾಟ್ನಿಂದ 25 ಕಿಲೋ ವ್ಯಾಟ್ ಸಾಮರ್ಥ್ಯವುಳ್ಳ ಉಪಕರಣಗಳು ಮನೆ, ಸಣ್ಣ ಕಚೇರಿಗಳಿಂದ ಹಿಡಿದು ರಕ್ಷಣಾ ಕ್ಷೇತ್ರ, ದೂರಸಂಪರ್ಕ ಸೇರಿದಂತೆ ಹಲವು ಸ್ಥಳಗಳಲ್ಲಿ ಬಳಸಬಹುದು.
ಮಡ್ಯೂಲರ್ ಯುಪಿಎಸ್ ಸಿಸ್ಟಮ್ ಬಿಡುಗಡೆ
ವಿದ್ಯುತ್ ಬ್ಯಾಕ್ ಅಫ್ ಉದ್ಯಮದ ಮುಂಚೂಣಿಯಲ್ಲಿರುವ ಸು- ಕ್ಯಾಮ್ ಪವರ್ ಸಿಸ್ಟಮ್ ಲಿಮಿಟೆಡ್ ಮಾಡ್ಯೂಲರ್ ಯುಪಿಎಸ್ನ ಮಲ್ಟಿಪ್ಲೆಕ್ಸ್ ಸರಣಿಯ ಎರಡು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಮಡ್ಯೂಲರ್ ಯುಪಿಎಸ್ ಸಿಸ್ಟಮ್ನಿಂದ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಕಡಿಮೆ ಎಂಟಿಟಿಆರ್ನ ಪ್ರಯೋಜನಗಳಿವೆ. ಇದು ಅತ್ಯಂತ ದಕ್ಷ, ಸ್ಥಳ ಉಳಿಸುವ ಯುಪಿಎಸ್ ಆಗಿದೆ. ಉತ್ಪಾದನೆ ಮತ್ತು ವರ್ಗಾವಣೆಯಲ್ಲಿ ಕಜಿಮೆ ಶಕ್ತಿ ಬಳಸುತ್ತದೆ. ಯುಪಿಎಸ್ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೂತನ ಉತ್ಪನ್ನಗಳು ವಾಣಿಜ್ಯ ಅಗತ್ಯಗಳಿಗೆ ಧೀರ್ಘ ಬಾಳಿಕೆ ಬರುವುದಲ್ಲದೇ ಹೂಡಿಕೆಯ ಮೇಲೆ ಉತ್ತಮ ಗಳಿಕೆ ನೀಡುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇನಾ ಬ್ಯಾಂಕ್ನ ಬಡ್ಡಿ ದರ ಪರಿಷ್ಕರಣೆ
ಸೆಪ್ಟಂಬರ್ 2013ರಿಂದ ಅನ್ವಯವಾಗುವಂತೆ ದೇನಾ ಬ್ಯಾಂಕ್ ಎಫ್ಸಿಎನ್ಆರ್ (ಬಿ)- ಆರ್ಎಫ್ ಬಡ್ಡಿ ದರ ಪರಿಷ್ಕರಿಸಿದೆ. ಆಗಸ್ಟ್ 2013ಕ್ಕೆ ಹೋಲಿಸಿದ್ದಲ್ಲಿ 2ರಿಂದ 3 ವರ್ಷ ಒಳಗಿನ ಠೇವಣೆಗಳಿಗೆ ಬಡ್ಡಿದರವನ್ನು ಶೇ.2.48ರಿಂದ ಶೇ. 2.57ಕ್ಕೆ ಹೆಚ್ಚಿಸಲಾಗಿದೆ. 3 ರಿಂದ 4 ವರ್ಷಗಳ ಠೇವಣೆಗೆ ಶೇ. 4.78ರಿಂದ ಶೇ.4.95ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ವಿವಿಧ ಹಂತಗಳಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿದೆ.
ಹತ್ತಿಗೆ ಎಕ್ಸ್ಪ್ಲೋಡ್, ಲೋಗೋ ಕೀಟನಾಶಕ
ದೇಶದ ಪ್ರಖ್ಯಾತ ಕೀಟನಾಶಕ ಉತ್ಪಾದನೆ ಮತ್ತು ಮಾರಾಟ ಮಾಡುವ ಇನ್ಸೆಕ್ಟಿಸೈಡ್ಸ್ ಕಂಪನಿ ಹತ್ತಿ ಹಾಗೂ ಇತರ ಬೆಳೆಗಳಿಗೆ ತಗಲುವ ಹುಂಡೆ ಕ್ರಿಮಿಗಳಿಂದ ರಕ್ಷಣೆ ನೀಡುವ ಎಕ್ಸ್ಪ್ಲೋಡ್ ಮತ್ತು ಲೋಗೋ ಎಂಬ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಹತ್ತಿ, ಬೇಳೆಕಾಳುಗಳು ಮುಂತಾದ ಖರೀಫ್ ಬೆಳೆಗಳನ್ನು ಬೆಳೆಯುವ ರಾಜ್ಯದ ರೈತರ ಅನುಕೂಲಕ್ಕಾಗಿ ಎಕ್ಸ್ಪ್ಲೋಡ್ನ್ನು ಪರಿಚಯಿಸಲಾಗುತ್ತಿದೆ. ಲೋಗೋ ಕೂಡ ಉತ್ತಮ ಕೀಟನಾಶಕವಾಗಿದ್ದು ಅದು ಹತ್ತಿ ಮತ್ತು ತರಕಾರಿಗಳಿಗೆ ತಗುಲುವ ಯಾವುದೇ ತೆರನಾದ ಬಿಳಿ ಕೀಟಗಳಿಂದ ಮುಕ್ತಿ ನೀಡುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ನಂಬರ್ ಒನ್ ಎಲ್ಐಸಿಗೆ 57 ವರ್ಷ
ಲೈಫ್ ಇನ್ಷುರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಲ್ಐಸಿ) ಸಾರ್ವಜನಿಕರ ಸೇವೆಯಲ್ಲಿ 57 ವರ್ಷಗಳನ್ನು ಪೂರ್ಣಗೊಳಿಸಿದೆ. ಖಾಸಗಿ ವಿಮಾ ಕಂಪನಿಗಳ ತೀವ್ರ ಸ್ಪರ್ಧೆಯ ನಡುವೆಯೂ ಎಲ್ಐಸಿ ನಂಬರ್ ಒನ್ ಸ್ಥಾನದಲ್ಲಿದೆ. ಇಂದು ಎಲ್ಐಸಿಗೆ 29 ಕೋಟಿ ಪಾಲಿಸಿದಾರರಿದ್ದಾರೆ. ಜೀವ ವಿಮೆಯಲ್ಲಿ 15 ಲಕ್ಷ ಕೋಟಿ ಸ್ವತ್ತನ್ನು ಎಲ್ಐಸಿ ಹೊಂದಿದೆ. 2012-13ರ ಅವಧಿಯಲ್ಲಿ ಶೇ. 83.24ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಎಲ್ಐಸಿ 367.82 ಲಕ್ಷ ಪಾಲಿಸಿಗಳನ್ನು ಮಾರಾಟ ಮಾಡಲಾಗಿದೆ. ಮೊದಲ ವರ್ಷದಲ್ಲಿ 76,245.64 ಕೋಟಿ ಪ್ರಿಮಿಯಂ ಆದಾಯದ ಮೂಲಕ ಬಂದಿದೆ. 2012-13ರ ಅವಧಿಯಲ್ಲಿ 183.63 ಲಕ್ಷ ವಿಮೆಗಳಿಗೆ ರು. 74,077.84 ಕೋಟಿ ಕ್ಲೇಮ್ ಮಾಡಿಕೊಳ್ಳಲಾಗಿದೆ ಎಂದು ಎಲ್ಐಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರಿಕೆಟ್ ಮೋಡ್ ಎಲ್ಇಡಿ ಟಿವಿ ಮಾರುಕಟ್ಟೆಗೆ
ಕ್ರಿಕೆಟ್ ಪ್ರಿಯರಿಗೆಂದೆ ತೋಷಿಬಾ ಇಂಡಿಯಾ ಸಂಸ್ಥೆ ವಿಶ್ವದ ಮೊದಲ 'ಕ್ರಿಕೆಟ್ ಮೋಡ್ ಎಲ್ಇಡಿ ಟಿವಿ'ಗಳನ್ನು ಪರಿಚಯಿಸಿದೆ. ತೋಷಿಬಾ ಸಂಸ್ಥೆಯ ರಾಯಭಾರಿಯಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಸ್ತಾಕ್ಷರ ಕ್ರಿಕೆಟ್ ಮೋಡ್ ಟಿವಿ ಮೇಲೆ ಇರಲಿವೆ. ಪಿ2305, ಎಲ್2300 ಹಾಗೂ ಫ್ಲ್ಯಾಗ್ಶಿಪ್ ಎಲ್3300 ಎಂಬ ಮೂರು ಹೊಸ ಶ್ರೇಣಿಯ ಟಿವಿಗಳನ್ನು ಕ್ರಿಕೆಟ್ ಮೋಡ್ ಪರಿಚಯಿಸಲಾಗಿದೆ. ಈ ಟಿವಿಗಳ ಬೆಲೆ ರು. 16,990ರಿಂದ 88, 990 ವರೆಗೆ ಇರಲಿವೆ. ಆಕ್ಟಿವ್ ಮೋಷನ್ ರೇಟ್, ಇಮೇಜ್ ಪ್ರೋಸೆಸಿಂಗ್ ಟೆಕ್ನಾಲಜಿ ಈ ಟಿವಿಗಳಲ್ಲಿ ಅಳವಡಿಸಿರುವುದರಿಂದ ಪರದೆ ಮೇಲೆ ಮೂಡುವ ವರ್ಣಗಳು ಅತೀ ಶ್ರೀಮಂತವಾಗಿರಲಿವೆ, ಸ್ಪಷ್ಟ ವಿವರಗಳು, ನಿಖರ ಚಿತ್ರಗಳು ಕಾಣುತ್ತವೆ. ಚಿತ್ರಗಳು ಮುಸುಕಾಗದೆ, ಆಟ ಹೇಗೆ ಮುಂದುವರೆಯುತ್ತದೆಯೋ ಅದೇ ವೇಗ, ಮೈದಾನದ ಚಟುವಟಿಕೆಗಳು ಪರಿಣಾಮಕಾರಿಯಾಗಿ ಕಣ್ಣಿಗೆ ಕಟ್ಟಿಕೊಡಲಿದೆ ಎಂದು ತೋಷಿಬಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.