ಡಾಲರ್ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಕುಸಿದು, ಕೊಂಚ ಚೇತರಿಸಿಕೊಂಡಿದ್ದು ಈಗ ಹಳೇ ಸಂಗತಿ. ಆದರೆ ಅದು ತಂದಿಟ್ಟಿದ್ದ ಸಂಕಷ್ಟದ ಸರಮಾಲೆ ಇನ್ನೂ ಮುಗಿದಿಲ್ಲ. ದೂರಸಂಪರ್ಕ ಕ್ಷೇತ್ರ ಬಹಳವಾಗಿ ರುಪಾಯಿ ಕುಸಿತದಿಂದ ಬಸವಳಿದು ಹೋದ ಕ್ಷೇತ್ರ.
ವಿವಾದಾತ್ಮಕ ಸ್ಪೆಕ್ಟ್ರಂ ಹಗರಣದ ಬಳಿಕ ನಿಧಾನಕ್ಕೆ ಹಂತಕ್ಕೆ ಬರುತ್ತಿದ್ದ ದೂರಸಂಪರ್ಕ ಕ್ಷೇತ್ರಕ್ಕೆ ಹೊಸ ತಲೆನೋವೆಂದರೆ ರುಪಾಯಿ ಅಪಮೌಲ್ಯದ ಪರಿಣಾಮ. ಅದನ್ನು ನೇರವಾಗಿ ಗ್ರಾಹಕರ ತಲೆ ಮೇಲೆ ವರ್ಗಾಯಿಸಲು ಪ್ರಮುಖ ಕಂಪನಿಗಳು ಮುಂದಾಗಿದ್ದವು. ಆದರೆ, ಅವುಗಳು ಆ ರೀತಿ ಮಾಡುವಂತಿಲ್ಲ ಈಗ! ಪರಿಸ್ಥಿತಿ ಬೇರೆಯೇ ಆಗಲಿದೆ ಎನ್ನುತ್ತಿದೆ ಈ ಕ್ಷೇತ್ರದ ಮೂಲಗಳು.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸ್ಪೆಕ್ಟ್ರಂನ ಮೂಲ ಬೆಲೆ ಹೆಚ್ಚಿಸಿದ್ದನ್ನು ತಗ್ಗಿಸುವಂತೆ ಶಿಫಾರಸು ಮಾಡಿತ್ತು. ರು. 36 ಸಾವಿರ ಕೋಟಿ ಮೌಲ್ಯದಷ್ಟು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅದರ ಜತೆಗೆ ದೇಶಿಯವಾಗಿ ಇರುವ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರೂ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್‌ಗಳನ್ನು ತಯಾರಿಸುತ್ತಿದ್ದಾರೆ. ಆದರೆ, ಡಾಲರ್ ಎದುರು ರುಪಾಯಿ ಕುಸಿತ ಪರಿಣಾಮ ಮೊಬೈಲಿನ ಬಿಡಿ ಭಾಗಗಳ ಖರೀದಿಗೆ ಭಾರಿ ಅಡ್ಡಿಯಾಗಿ ಪರಿಣಮಿಸಿದೆ.
ಚೇತರಿಕೆ ಕಂಡರೂ ದರ ಹೆಚ್ಚಳ
ಡಾಲರ್ ಎದುರು ರುಪಾಯಿ ಅಲ್ಪಪ್ರಮಾಣದ ಚೇತರಿಕೆ ಕಂಡರೂ ಅದರಿಂದ ಹೆಚ್ಚಿನ ಪ್ರಯೋಜನವನ್ನು ನಿರೀಕ್ಷಿಸುವಂತಿಲ್ಲ. ಏಕೆಂದರೆ ಹ್ಯಾಂಡ್‌ಸೆಟ್‌ಗಳ ಬೆಲೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
ಸಾಲ ಕಾರಣ
ಕಂಪನಿಗಳು ಎಷ್ಟೇ ದೊಡ್ಡದಿರಲಿ ಸಾಲ ಇಲ್ಲದೆ ವಹಿವಾಟು ಇಲ್ಲವೇ ಇಲ್ಲ ಎಂದು ಹೇಳಬಹುದು. ವಿದೇಶಗಳಲ್ಲಿನ ವ್ಯವಹಾರಗಳಿಗೆ ಹೆಚ್ಚಾಗಿ ಡಾಲರ್‌ನಲ್ಲಿ ನಡೆಸಬೇಕಾಗುತ್ತದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದು ಹೋದರೆ, ಆಯಾ ಸಂದರ್ಭಗಳಲ್ಲಿ ದೂರಸಂಪರ್ಕ ಕಂಪನಿಗಳು ಪಾವತಿಯನ್ನು ಡಾಲರ್ ಮೂಲಕವೇ ಮಾಡಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಕಂಪನಿಗಳಿಗೆ ನಷ್ಟ ಉಂಟಾಗುತ್ತದೆ.
ನಮ್ಮ ದೇಶದಲ್ಲಿ ಖಾಸಗಿ ವಲಯದ ಅತ್ಯಂತ ದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ವಿದೇಶಗಳಲ್ಲಿ ಬರೋಬ್ಬರಿ ರು. 62,000 ಕೋಟಿ ಸಾಲ ಹೊಂದಿದೆ. ಈ ಮೊತ್ತ 20 ವಿವಿಧ ದೇಶಗಳಲ್ಲಿರುವಂಥದ್ದು. ರಿಲಯನ್ಸ್ ಕಮ್ಯುನಿಕೇಶನ್ ಕೂಡ ಸಾಲದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ರು. 38 ಸಾವಿರ ಕೋಟಿ ಸಾಲವನ್ನು ಅದು ಹೊಂದಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇತ್ತೀಚೆಗೆ ರುಪಾಯಿಗೆ ಬಿದ್ದ ಹೊಡೆತ ಹಲವು ಮಜಲುಗಳಿಗೆ ವ್ಯಾಪಿಸಿದೆ.
10, 000 ಕೋಟಿ
ಶೇ.15 ಜು.1 ಮತ್ತು ಆ.29ರ ನಡುವೆ ರುಪಾಯಿ ಮೌಲ್ಯದಲ್ಲಿ ಆಗಿರುವ ವ್ಯತ್ಯಾಸದ ಪ್ರಮಾಣ
60,000 ಕೋಟಿ
ಜು.1ರ ಬಳಿಕ ದೇಶದ ಮೂರು ಪ್ರಮುಖ ದೂರಸಂಪರ್ಕ ಕಂಪನಿಗಳ ಒಟ್ಟು ಸಾಲ.
36,000 ಕೋಟಿ
ಇಷ್ಟು ಮೌಲ್ಯದ ಹ್ಯಾಂಡ್‌ಸೆಟ್‌ಗಳು ವಿದೇಶಗಳಿಂದಲೇ ಆಮದಾಗುತ್ತವೆ.
20, 000 ಕೋಟಿ
ದೂರಸಂಪರ್ಕ ಕಂಪನಿಗಳು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಉಪಕರಣಗಳ ಮೌಲ್ಯವಿದು.
ಕುಸಿತ ಪರಿಣಾಮ