ಈ ಬಾರಿಯ ನವರಾತ್ರಿ, ದಸರೆಯ ಹಬ್ಬಕ್ಕೆ ಹೊಸ ಮನೆ, ಕಾರು ಕೊಳ್ಳಬೇಕೆಂದು ಇದ್ದೀರಾ? ಹಾಗಿದ್ದರೆ ನಿಮಗೆ ಕೊಂಚ ನಿರಾಸೆ ಕಾದಿದೆ. ಆರ್‌ಬಿಐನ ಹೊಸ ಗವರ್ನರ್ ಡಾ. ರಘುರಾಮ್ ರಾಜನ್ ಏಕಾಏಕಿ ರೆಪೋ ದರ ಹೆಚ್ಚಳ ಮಾಡಿದ್ದಾರೆ. ಅದರಿಂದಾಗಿ ಬ್ಯಾಂಕುಗಳು ನೀಡುವ ಸಾಲದ ಬಡ್ಡಿ ದರ ಹೆಚ್ಚಳವಾಗಲಿದೆ. ಹೀಗಾಗಿ ಎಂದಿನಂತೆಯೇ ಇಎಂಐ (ಪ್ರತಿ ತಿಂಗಳ ಸಮಾನ ಕಂತಿನ ಮೊತ್ತ) ಪ್ರಮಾಣ ಹೆಚ್ಚಾಗಲಿದೆ.
ಇತ್ತೀಚೆಗಷ್ಟೇ ಹೊಸ ಹೊಣೆ ಹೊತ್ತಿರುವ ರಘುರಾಮ್, ಅಮೆರಿಕದ ಡಾಲರ್ ಸೇರಿದಂತೆ ಪ್ರಮುಖ ಕರೆನ್ಸಿಗಳ ಎದುರು ಕುಸಿಯುತ್ತಿದ್ದ ರುಪಾಯಿ (ಸದ್ಯ ಅದರ ಮೌಲ್ಯ ಕೊಂಚ ಸ್ಥಿರವಾಗಿದೆ) ಮೇಲೆತ್ತಲು ಹಲವು ಕ್ರಮಗಳನ್ನು ಕೈಗೊಳ್ಳುವರು ಎಂಬ ನಿರೀಕ್ಷೆ ಇತ್ತು. ಹೆಚ್ಚಿನ ಆರ್ಥಿಕ ಬೆಳವಣಿ ಸಾಧಿಸುವ ನಿಟ್ಟಿನಿಂದ ಸಾಲದ ಮೇಲಿನ ಬಡ್ಡಿದರ ತಗ್ಗಿಸಲು ಹಲವು ಕ್ರಮಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಎಲ್ಲ ತಲೆಕೆಳಗಾಗಿದೆ.
ಆದರೆ, ಸಿಹಿ ಸುದ್ದಿ ಏನೆಂದರೆ... ಈ ಹಿಂದಿನಂತೆ ಬಡ್ಡಿದರ ಏರಿಕೆ ಸಂದರ್ಭದಲ್ಲಿ ತ್ರೈಮಾಸಿಕ ಸಾಲ ನೀತಿ ಪರಿಷ್ಕರಣೆ ವೇಳೆ ಸಾಲದ ಮೇಲಿನ ಬಡ್ಡಿದರ ಮಾತ್ರ ಹೆಚ್ಚಳವಾಗುತ್ತಿತ್ತು. ಈಗ ನಿಗದಿತ ಠೇವಣಿಗಳ ಮೇಲೆ ಕೂಡ ಬಡ್ಡಿದರ ಹೆಚ್ಚಳವಾಗಲಿದೆ.
ನಿರೀಕ್ಷೆಗಳೇನಿದ್ದವು?
- ಹೆಚ್ಚಿದ ಆಹಾರ ಹಣದುಬ್ಬರ ದರ ನಿಯಂತ್ರಣ ಕ್ರಮಕ್ಕೆ ವಿಶೇಷವಾಗಿ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಜತೆಗೆ ಬಂಡವಾಳ ಹೂಡಿಕೆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಘೋಷಿಸುವರೆಂಬ ಆಶಯ ಉದ್ದಿಮೆ ವಲಯದಲ್ಲಿತ್ತು.
- ಅಮೆರಿಕದ ಫೆಡರಲ್ ಬ್ಯಾಂಕ್ ಅಲ್ಲಿನ ಹಣಕಾಸು ವ್ಯವಸ್ಥೆಗೆ ಪ್ರಕಟಿಸಿದ್ದ ಉತ್ತೇಜನ ಕ್ರಮಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಘೋಷಿಸಿತ್ತು. ಅದರ ಫಲವಾಗಿ ಸೆ.19ಕ್ಕೆ ದೇಶದ ಷೇರುಪೇಟೆ ಸೂಚ್ಯಂಕ 685 ಅಂಕಗಳಷ್ಟು ಹೆಚ್ಚಾಗಿತ್ತು. ರಾಜನ್ ಅದೇ ಮಾದರಿಯ ಕ್ರಮಗಳನ್ನು ಕೈಗೊಳ್ಳುವರು ಎಂಬ ನಿರೀಕ್ಷೆ ದೇಶದ ಉದ್ಯಮಪತಿಗಳಲ್ಲಿತ್ತು. ಅಂದಹಾಗೆ, ಎರಡು ವರ್ಷಗಳ ಬಳಿಕ ರೆಪೋ ದರ ಹೆಚ್ಚಳ ಮಾಡಲಾಗಿದೆ.
- ರೆಪೋ ದರ ಈಗಿನ ಶೇ.7.25ರಿಂದ ಶೇ.7ಕ್ಕೆ ಇಳಿಕೆಯಾಗಬಹುದೆಂಬ ನಿರೀಕ್ಷೆ.
- ಬ್ಯಾಂಕುಗಳು ಆರ್‌ಬಿಐನಲ್ಲಿ ಇರಿಸಬೇಕಾದ ನಗದು ಪ್ರಮಾಣ ಶೇ.4ರಿಂದ ಶೇ.3.45ಕ್ಕೆ ತಗ್ಗಿಸುವ ಪ್ರಸ್ತಾಪಕ್ಕೆ ಸಿಗದ ಮಾನ್ಯತೆ.
ಈಗ ಏನಾಗಿದೆ?
- ಎಲ್ಲರ ನಿರೀಕ್ಷೆಗೆ ಮೀರಿ ರೆಪೋ ದರ ಶೇ.0.25ಕ್ಕೆ (ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಹೆಚ್ಚಿಸಲಾಗಿದೆ.
- ಹೆಚ್ಚುವರಿ ಸ್ಥಿರ ಸಾಲದರ 75 ಮೂಲಾಂಶ ಇಳಿಕೆ. ಸದ್ಯದ ಪ್ರಮಾಣ ಶೇ.9.5. ಈ ಹಿಂದೆ ಇದ್ದದ್ದು ಶೇ.10.25.
- ನಗದು ಮೀಸಲು ಅನುಪಾತ ಶೇ.99ರಿಂದ ಶೇ.99ಕ್ಕೆ ಇಳಿಕೆ.
- ಆರ್‌ಬಿಐನಲ್ಲಿ ಠೇವಣಿ ಇರಿಸುವ ನಗದು ಮಿತಿಯನ್ನು ಶೇ.4ಕ್ಕೆ ಮಿತಿ.
- ರಿವರ್ಸ್ ರೆಪೋ (ಆರ್‌ಬಿಐನಲ್ಲಿ ಬ್ಯಾಂಕುಗಳಲ್ಲಿ ಇರಿಸುವ ಠೇವಣಿ)ಗೆ ಬಡ್ಡಿ ದರವನ್ನು ಶೇ.6.50ಕ್ಕೆ ಸೀಮಿತಗೊಳಿಸಲಾಗಿದೆ.
ಬ್ಯಾಂಕುಗಳಿಗೆ ಅನುಕೂಲ
- ವರಿಷ್ಠ ಬ್ಯಾಂಕಿನಿಂದ ಬ್ಯಾಂಕುಗಳಿಗೆ ಸಿಗುವ ಸಾಲದ ಮಿತಿ ವಿಸ್ತರಣೆ.
- ನಗದು ಮೀಸಲು ಅನುಪಾತಕ್ಕೆ ಸಂಬಂಧಿಸಿದ ದಿನವಹಿ ವೆಚ್ಚ ಇಳಿಕೆ.
- ನಮಗೇನು ಲಾಭ- ನಷ್ಟ?
- ಜನಸಾಮಾನ್ಯರ ದೃಷ್ಟಿಯಿಂದ ನೋಡಿಗಾದ ಸಿಹಿಯೂ ಉಂಟು ಕಹಿಯೂ ಉಂಟು. ಅದು ಹೇಗೆಂದರೆ...
- ವಾಹನ, ಗೃಹ ಸಾಲದ ಮೇಲಿನ ಬಡ್ಡಿದರ ಹೆಚ್ಚಾಗುತ್ತದೆ. ಇದರಿಂದಾಗಿ ಇಎಂಐ ಮೊತ್ತ ಹೆಚ್ಚಾಗುತ್ತದೆ. ಇದರಿಂದಾಗಿ ಸಂಬಳ ಅಥವಾ ಸೀಮಿತ ಆದಾಯ ಇರುವ ಕುಟುಂಬ ವರ್ಗಕ್ಕೆ ಅನಾನುಕೂಲವಾಗುತ್ತದೆ.
- ಖುಷಿಯ ವಿಚಾರವೇನೆಂದರೆ, ಬ್ಯಾಂಕುಗಳಲ್ಲಿ ವಿವಿಧ ರೀತಿಯಲ್ಲಿ ಠೇವಣಿ ಇರಿಸುವವರಿಗೆ ಬಡ್ಡಿ ದರ ಹೆಚ್ಚಾಗುತ್ತದೆ. ಇದರಿಂದಾಗಿ ಕಷ್ಟಪಟ್ಟು ಉಳಿತಾಯ ಮಾಡಬೇಕು ಎನ್ನುವವರ ಸಂಖ್ಯೆಯೂ ಹೆಚ್ಚಾಗಲಿದೆ. ಪರೋಕ್ಷವಾಗಿ ಹೆಚ್ಚಿನ ಉಳಿತಾಯಕ್ಕೆ ಹೊಸ ಗವರ್ನರ್ ಒತ್ತು ನೀಡಿದ್ದಾರೆ ಎಂದು ಹೇಳಬಹುದು.
- ಉದ್ಯಮ ವಲಯ, ನಗರ ಪ್ರದೇಶಗಳ ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ರೆಪೋ ದರವನ್ನು ಹೆಚ್ಚಿಸಲಾಗಿದೆ.
ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ
ಹೆಚ್ಚುವರಿ ಸ್ಥಿರ ಸಾಲದರ ಎಂದರೆ...
- ಸದಾಶಿವ ಕೆ./ ರಮಾನಂದ ಶರ್ಮಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics