ಮುಂಬೈನಲ್ಲಿ ಎಸ್ಬಿಐ ಶಾಖೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತ್ತೀಚಿಗೆ ಮುಂಬೈನಲ್ಲಿ ತನ್ನ ಶಾಖೆಯನ್ನು ಆರಂಭಿಸಿತು. ಇದೇ ವೇಳೆ,...
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತ್ತೀಚಿಗೆ ಮುಂಬೈನಲ್ಲಿ ತನ್ನ ಶಾಖೆಯನ್ನು ಆರಂಭಿಸಿತು. ಇದೇ ವೇಳೆ, ಲೋಕಮಾನ್ಯ ಸೇವಾ ಸಂಘಕ್ಕೆ ಆ್ಯಂಬುಲೆನ್ಸ್ ನ್ನು ಕೊಡುಗೆಯಾಗಿ ನೀಡಿತು. ಸಂಘದ ಟ್ರಸ್ಟಿ ಮುಕುಂದ್ ಚಿತಾಲೆಯವರಿಗೆ, ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎ.ಕೃಷ್ಣಕುಮಾರ್ ವಾಹನದ ಕೀಯನ್ನು ಹಸ್ತಾಂತರಿಸಿದರು. ಈ ವೇಳೆ ಬ್ಯಾಂಕ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಅನ್ಷುಲ ಕಾಂತ್, ಪ್ರಧಾನ ವ್ಯವಸ್ಥಾಪಕ ರವೀಂದ್ರ ಜೋಷಿ ಮತ್ತಿತರರು ಇದ್ದರು.
HomeShikari.Com ಈಗ ಇನ್ನಷ್ಟು ಪಾರದರ್ಶಕ
HomeShikari.Com ತನ್ನ ಗ್ರಾಹಕರಿಗೆ, ಪರೀಕ್ಷಿತ ಆಸ್ತಿ ಪಟ್ಟಿಗಳು, ವಿವಿಧ ಮೌಲ್ಯವರ್ಧಿತ ಸೇವೆಗಳು ಮತ್ತು ನಿಷ್ಠ ಗ್ರಾಹಕ ಸಹಾಯದೊಂದಿಗೆ, ತೊಂದರೆ ರಹಿತ ಆಸ್ತಿ ಖರೀದಿಸುವ ಅನುಭವವನ್ನು ಒದಗಿಸುತ್ತದೆ. ಭೂ ಆಸ್ತಿ ವಿಷಯಗಳಲ್ಲಿ ವಿಸ್ತೃತ ಅನುಭವವಿರುವ ಟಿಟಿಕೆ ಸರ್ವಿಸ್ನ ಒಂದು ವಿಭಾಗವಾದ HomeShikari.Com ಭಾರತೀಯ ಭೂ ಆಸ್ತಿ ಮಾರುಕಟ್ಟೆಯಲ್ಲಿ, ತನ್ನ ಗ್ರಾಹಕರಿಗೆ ಪಾರದರ್ಶಕ ಮತ್ತು ಪೂರ್ವಾಗ್ರಹವಿಲ್ಲದ ಮಾಹಿತಿಯನ್ನು ಒದಗಿಸಿ ಅವರು ಸರಿಯಾದ ನಿರ್ಧಾರಗಳನ್ನು ಸಬಲೀಕರಿಸಿ, ಪಾರದರ್ಶಕತೆಯನ್ನು ತರಲು ಇಚ್ಛಿಸಿದೆ. ಈ ಸೇವೆಗಳ ಬಗ್ಗೆ ಪ್ರತಿಕ್ರಿಯಿಸುತ್ತಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಮಾತನಾಡಿ, 'ಇಂದು ಎಲ್ಲರೂ ಸಂಪೂರ್ಣ ಪರಿಹಾರವನ್ನು ಪಡೆಯಲು ಇಚ್ಛಿಸುತ್ತಾರೆ. ತಮ್ಮ ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳು ಗೌಪ್ಯವಾಗಿರಬೇಕೆಂದು ಬಯುಸುತ್ತಾರೆ. ನಾವು, ನಮ್ಮ ಎಲ್ಲ ಪಾಲುದಾರರು, ಕಟ್ಟಡ ನಿರ್ಮಾಪಕರು, ಆಸ್ತಿ ಖರೀದಿಸಬಯಸುವವರು ಮತ್ತು ಮನೆಗಳ ಮಾಲೀಕರಿಗೆ ಪಾರದರ್ಶಕತೆಯನ್ನು ಒದಗಿಸುತ್ತೇವೆ ಎಂದರು.
'ದಿ ಗ್ರಾಂಡ್ ಕೃಷ್ಣ' ಹೊಟೇಲ್ ಈಗ ಚಿಕ್ಕಮಗಳೂರಲ್ಲಿ
ಚಿಕ್ಕಮಗಳೂರಿನಲ್ಲಿ 'ದಿ ಗ್ರಾಂಡ್ ಕೃಷ್ಣ' ಹೊಟೇಲ್ ಸ್ಥಾಪನೆಯಾಗಿದ್ದು, ನಾಜೂಕು ಕಲಾಕುಸುರಿ ಮತ್ತು ಒಳಾಂಗಣ ವಿನ್ಯಾಸದಲ್ಲಿ ವಿಶೇಷವಾಗಿ ರೂಪುಗೊಂಡಿದೆ. ಹೆದ್ದಾರಿಯಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿದ್ದು, ಡೈನಿಂಗ್ ರೂಂ, ಕಾರ್ ರೆಂಟಲ್, ಮಿನಿ ಬಾರ್, ಸುಪೀರಿಯರ್ ಗೆಸ್ಟ್ ರೂಂ, ಟ್ವಿನ್ ಕಾಟ್, ಫ್ರಂಟ್ ಡೆಸ್ಕ್ಗಳನ್ನು ಒಳಗೊಂಡಿದೆ. ಚಿಕ್ಕಮಗಳೂರಿನ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗಳಿಗೆ ಆರಾಮದಾಯಕವಾಗಿ ನಿರ್ಮಾಣಗೊಂಡಿದೆ. ಹೆಚ್ಚಿನ ಮಾಹಿತಿಗೆ- 08262-230543. ವೆಬ್ಸೈಟ್ - http: //grandkrishnahotelckm.weebly. comನ್ನು ಲಾಗ್ ಆನ್ ಆಗಿ.
ಈಸಿ ಡೇನಲ್ಲಿ ಚಳಿಗಾಲದ ಸಂಗ್ರಹಗಳ ಅನಾವರಣ
ಭಾರತಿ ರೀಟೆಲ್ ಲಿಮಿಟೆಡ್ ದೇಶದಾದ್ಯಂತ ಇರುವ ತನ್ನ 21 'ಈಸಿ ಡೇ ಮಳಿಗೆ'ಯಲ್ಲಿ ಇದೀಗ ವಿಶೇಷ ಹಾಗೂ ವ್ಯಾಪಕ ಶ್ರೇಣಿಯ 'ಚಳಿಗಾಲ ಸಂಗ್ರಹ'ಗಳನ್ನು ಅನಾವರಣಗೊಳಿಸಿದೆ. ಈ ಚಳಿಗಾಲದ ಸಂಗ್ರಹಗಳಲ್ಲಿ ಗ್ರಾಹಕರು ಮುಂಬರುವ ಹಬ್ಬಗಳಿಗಾಗಿ ಆಯ್ದ ವಿನ್ಯಾಸದ ಹಾಗೂ ಪಾಶ್ಚಾತ್ಯ ಶೈಲಿಯ ವಿಶೇಷವಾದ ಹಾಗೂ ವ್ಯಾಪಕ ಶ್ರೇಣಿಯ ಉಡುಗೆಗಳನ್ನು ಆಯ್ದುಕೊಳ್ಳಬಹುದಾಗಿದೆ. ಈ ಸಂಗ್ರಹದಲ್ಲಿ ಮಹಿಳೆಯರಿಗಾಗಿ ವಿಶೇಷ ವರ್ಣಗಳ ಬ್ರೊಕೆಡ್ಸ್, ರೆಯಾನ್ ಮತ್ತು ಕಾಟನ್ನ ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಉಡುಗೆಗಳು ಲಭ್ಯವಿರುತ್ತವೆ. ಪ್ರಿಟೆಂಡ್ ಟೀಸ್ಗಳು 178ರಲ್ಲಿ, 398 ಮೇಲ್ಪಟ್ಟ ದುಪ್ಪಟ್ಟಾ ಅಥವಾ ಚೂಡಿದಾರ ಖರೀದಿಯ ಮೇಲೆ ಖುರ್ತಾ ಉಚಿತವಾಗಿ ದೊರೆಯುತ್ತದೆ.
ಅ.9ರಿಂದ ಐಐಎಂಬಿಯಲ್ಲಿ ಎಜುನಿವರ್ಸಲ್ ವಿಶ್ವ ಸಮ್ಮೇಳನ 2013
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬೆಂಗಳೂರು, 'ಎಜ್ಯುನಿವರ್ಸಲ್ ವಿಶ್ವ ಸಮ್ಮೇಳ'ನದ 6ನೇ ಆವೃತ್ತಿಯನ್ನು ಅಕ್ಟೋಬರ್ 9ರಿಂದ 12ರವರೆಗೆ ಆಯೋಜಿಸಿದೆ. ಈ ಸಮ್ಮೇಳನವನ್ನು ಪ್ರೊಫೆಸರ್ ದೇವನಾಥ್ ಮತ್ತು ಸಂಸ್ಥೆಯ ಸಿಇಒ ಮಾರ್ಟಿಯಲ್ ಗೀಟಿ ಉದ್ಘಾಟಿಸಲಿದ್ದಾರೆ. ಚರ್ಚಾ ಅವಧಿಗಳಿಗೆ ಉತ್ತೇಜನ ನೀಡುವಿಕೆ, ವಿಷಯಾಧಾರಿತ ಪ್ರದರ್ಶನಗಳು ಮತ್ತು ವೈಭವದ ಪ್ರಶಸ್ತಿ ಪ್ರಧಾನ ಇವುಗಳು ಸಮಾರಂಭದ ಮುಖ್ಯಾಂಶ. 9 ಭೌಗೋಳಿಕ ವಲಯಗಳಲ್ಲಿನ 3 ಅಗ್ರ ವ್ಯವಹಾರ ಶಾಲೆಗಳಿಗೆ, ವಿಶ್ವದಾದ್ಯಂತ ಇರುವ ಶೈಕ್ಷಣಿಕ ವರಿಷ್ಠರ ಪರವಾಗಿ ಎಜ್ಯುನಿವರ್ಸಲ್ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮಿತಿಯ ಸದಸ್ಯರಿಂದ ವಿಶೇಷ ಟ್ರೋಫಿ ನೀಡಿ ಗೌರವಿಸಲಾಗುತ್ತದೆ.
ಸಮುದಾಯ ಆಧಾರಿತ ನೇತ್ರದಾನ ಕಾರ್ಯಕ್ರಮ
'ಶಂಕರ ಕಣ್ಣಿನ ಆಸ್ಪತ್ರೆ' ಮತ್ತು 'ದಿ ಫೋರಂ' ಜತೆಗೂಡಿ, ದೃಷ್ಟಿ ವಿಕಲಚೇತನರು ಹಾಗೂ ಶಾಪಿಂಗ್ ಮಾಡಲು ಬಂದ ಜನರ ಜತೆ ಸೇರಿ ನೇತ್ರದಾನದ ಬಗ್ಗೆ ಸಮುದಾಯ ಆಧಾರಿತ ಕಾರ್ಯಕ್ರಮ ಆಯೋಜಿಸಿತ್ತು. 'ದಿ ಫೋರಂ'ಗೆ ಭೇಟಿ ನೀಡಿದ ಜನರು ನೇತ್ರ ದಾನ ಮಾಡಲು ಪ್ರಮಾಣ ಮಾಡಿದರು. ಜತೆಗೆ ತಮ್ಮ ಹೆಸರುಗಳನ್ನು ಬ್ರೈಲ್ನಲ್ಲಿ ಮುದ್ರಿಸಿದರು. ಬೆಂಗಳೂರು, ಶಿವಮೊಗ್ಗ, ಗುಂಟೂರು, ಕೊಯಮತ್ತೂರು ಹಾಗೂ ಆನಂದ್ ನಗರಗಳಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯು ಒಟ್ಟು 5 ಕಣ್ಣಿನ ಬ್ಯಾಂಕ್ಗಳನ್ನು ಹೊಂದಿದೆ. ನೇತ್ರದಾನ ಮಾಡಲು ಇಚ್ಚಿಸುವವರು ಬೆಂಗಳೂರಿನಲ್ಲಿರುವ ಶಂಕರ್ ಕಣ್ಣಿನ ಆಸ್ಪತ್ರೆಯ 080-28542727 ಮೂಲಕ ಸಂಪರ್ಕಿಸಬಹುದು.
ಎಮಿರೇಟ್ಸ್ ವಿಮಾನ ಯಾನದಿಂದ ವಿಶೇಷ ದರ
ಎಮಿರೇಟ್ಸ್ ವಿಮಾನ ಯಾನ ಸಂಸ್ಥೆ ಈಗ ಭಾರತೀಯ ಪ್ರವಾಸಿಗರನ್ನು ದುಬೈಗೆ ಆಹ್ವಾನಿಸುತ್ತಿದೆ! ಅದು ವಿಶೇಷ ದರಗಳಲ್ಲಿ!. ಬೆಂಗಳೂರು- ದುಬೈ- ಬೆಂಗಳೂರು ಪ್ರಯಾಣಕ್ಕೆ ಮಿತವ್ಯಯ ವರ್ಗದ ದರ 25,654ಗಳಲ್ಲಿ ಈಗ ಲಭ್ಯ. ಈ ವಿಶೇಷ ಕೊಡುಗೆ ಮಾರಾಟ ಮತ್ತು ಪ್ರಯಾಣ 2014 ಮಾರ್ಚ್ 31ರವರೆಗೆ ಮಾತ್ರ. ಈ ದರಗಳು ಎಮಿರೇಟ್ಸ್ಗೆ ಭಾರತದಿಂದ ಇರುವ 10ಮಾರ್ಗಗಳಲ್ಲೂ ಲಭ್ಯವಿದೆ. ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ತಿರುವನಂತಪುರಂ, ಕೋಜಿಕೋಡ್, ಬೆಂಗಳೂರು, ಹೈದರಾಬಾದ್ ಮತ್ತು ಕೊಲ್ಕೊತ್ತಾಕ್ಕೆ ಎಮಿರೇಟ್ಸ್ ವಿಮಾನದ ತವರೂರಾದ ದುಬೈಗೆ ಇನ್ನೂ ಆಕರ್ಷಕ ಕೊಡುಗೆಗಳು ಲಭ್ಯವಿದ್ದು, 2013ರ ಅಕ್ಟೋಬರ್ 7ರವರೆಗೆ ಭಾರತೀಯರು ದುಬೈಗೆ 'ತ್ವರಿತ ಪ್ರವಾಸಿ ವೀಸಾ'ಗೆ 'ಸಾಮಾನ್ಯ ಪ್ರವಾಸಿ ವೀಸಾ' ದರದಲ್ಲೇ ಅರ್ಜಿ ಹಾಕಬಹುದು. ಅದು 5,150ಗಳಲ್ಲಿ. ಅಂದರೆ ಸಾಮಾನ್ಯಕ್ಕಿಂತ ಶೇ.25ರಷ್ಟು ಕಡಿಮೆ ದರದಲ್ಲಿ.
ಎಐಎಂಎಸ್ 20ನೇ ವಾರ್ಷಿಕೋತ್ಸವ
ಎಐಎಂಎಸ್ ಇತ್ತೀಚಿಗೆ ಬೆಂಗಳೂರಿನಲ್ಲಿ ತನ್ನ 20ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ನಿರ್ದೇಶಕ ಗೋಪಾಲ್ ರೆಡ್ಡಿ, ಡಾ.ಕಿರಣ್ ಜಿ ರೆಡ್ಡಿ, ಪ್ರಿಯನಂದನ್ ರೆಡ್ಡಿ ಮತ್ತು ರೋಜಾರೆಡ್ಡಿ ಈ ವೇಳೆ ಉಪಸ್ಥಿತರಿದ್ದರು.
ಯೆಸ್ ಬ್ಯಾಂಕ್ನ ಹಣಕಾಸು ಸಾಕ್ಷರತಾ ಕಾರ್ಯಾಗಾರ ಯಶಸ್ವಿ
ಸರ್ಕಾರೇತರ ಸಂಸ್ಥೆಗಳ ಮಕ್ಕಳಿಗಾಗಿ ಹಣಕಾಸು ಸಾಕ್ಷರತೆಯ ಕಾರ್ಯಾಗಾರವನ್ನು 'ಯೆಸ್ ಬ್ಯಾಂಕ್' ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆಸಿತು. ಭಾರತದಾದ್ಯಂತ ಶಾಲೆ ಮತ್ತು ಎನ್ಜಿಓ ಮಕ್ಕಳಿಗೆ ಹಣಕಾಸು ಸಾಕ್ಷರತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ ಶಿಕ್ಷಕರ ದಿನ ಮತ್ತು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಿತು. ಯೆಸ್-ಕಮ್ಯೂನಿಟಿ ಕಾರ್ಯಕ್ರಮದ ಅಡಿಯಲ್ಲಿ ನಡೆದ ಈ ಕಾರ್ಯಕ್ರಮ ಹಣಕಾಸು ಸಾಕ್ಷರತೆ ಮತ್ತು ಯುವ ಜನರದಲ್ಲಿ ಉಳಿತಾಯ ಮತ್ತು ಹಣಕಾಸು ಸ್ವಾತಂತ್ರವನ್ನು ಉತ್ತೇಜಿಸುವ ಗುರಿಯೊಂದಿಗೆ ಭಾರತದಾದ್ಯಂತ 200ಸ್ಥಳಗಳಲ್ಲಿನ 1000ಕ್ಕೂ ಹೆಚ್ಚು ಶಾಲೆಗಳ ಮಕ್ಕಳನ್ನು ತಲುಪುವ ಗುರಿಯನ್ನು ಹೊಂದಿದೆ. ಯೆಸ್ ಬ್ಯಾಂಕ್ನ ಬೆಂಗಳೂರು ಶಾಖೆಗಳು ಅನಾಥಶಿಶು ನಿವಾಸ ಮತ್ತು ಸಾಕುಮ್ವಿತ್ ಟ್ರಸ್ಟ್ ಇದರ ಸಹಭಾಗಿತ್ವದೊಂದಿಗೆ ಈ ಹಣಕಾಸು ಸಾಕ್ಷರತೆ ಕಾರ್ಯಾಗಾರವನ್ನು ನಡೆಸಿತು.