ಕ್ರೆಡಿಟ್ ಕಾರ್ಡ್ ಬಳಕೆ ನಮ್ಮ ದೇಶದ ಜನರಿಗೆ ಈಗ ಹೊಸ ವಿಚಾರ ಅಲ್ಲ. ತೀರಾ ಇತ್ತೀಚಿನ ವರೆಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಆಯಾ ಬ್ಯಾಂಕ್ ಶಾಖೆಯಲ್ಲೇ ಜನರು ನಡೆಸುತ್ತಿದರು. ಆದರೆ ಈಗ ಕೊಂಚ ಬದಲಾವಣೆಯಾಗಿದೆ. ಸದ್ಯದ ಪರಿಸ್ಥಿತಿ ಏನೆಂದರೆ 4 ವ್ಯವಹಾರಗಳ ಪೈಕಿ ಒಂದು ಆನ್‌ಲೈನ್ ವ್ಯವಹಾರವಾಗಿದೆ. ಕಳೆದ ವರ್ಷ ಈ ಪ್ರಮಾಣ ಶೇ.35ರಷ್ಟು ಇದ್ದದ್ದು ಪ್ರಸಕ್ತ ವರ್ಷ ಶೇ.50ರಷ್ಟಾಗಿದೆ. ಆರ್‌ಬಿಐ ನಡೆಸಿದ ಅಧ್ಯಯನದ ಪ್ರಕಾರ 8.47 ಕೋಟಿ ವ್ಯವಹಾರ ನಡೆಯುತ್ತದೆ. ಅಂದಹಾಗೆ, ಇದು ಈ ವರ್ಷದ ಜೂನ್‌ನಲ್ಲಿ ಹೊರಬಿದ್ದ ಮಾಹಿತಿ.