ಪೀಟರ್ ಇಂಗ್ಲೆಂಡ್'ನಿಂದ ಇನ್ಸ್ಟೋರ್ ಕಾರ್ಯಕ್ರಮ
ಬೆಂಗಳೂರು: ಪುರುಷರ ಸಿದ್ಧ ಉಡುಪು ಮಾರಾಟ ಕ್ಷೇತ್ರದಲ್ಲಿ ಭಾರತದ ಅತಿ ದೊಡ್ಡ ಬ್ರ್ಯಾಂಡ್ 'ಪೀಟರ್ ಇಂಗ್ಲೆಂಡ್' ತನ್ನ ಗ್ರಾಹಕರಿಗೆ ವಿಶೇಷ ಭಾವನೆ ಮೂಡಿಸಲು ತನ್ನ ಮಳಿಗೆಯಲ್ಲಿ ವಿನೂತನ ಇನ್ಸ್ಟೋರ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಯಾರಿಗೆ, ಯಾವ ಸಂದರ್ಭಕ್ಕೆ, ಯಾವ ರೀತಿಯ ಉಡುಗೆಗಳು ಒಪ್ಪುತ್ತವೆ ಎಂಬುದನ್ನು ಗ್ರಾಹಕರಿಗೆ ತಿಳಿಸಲು ಕಾರ್ಯಕ್ರಮದಲ್ಲಿ ಸಕಾರಾತ್ಮಕ ಮಾರ್ಗದರ್ಶನ ನೀಡಲಾಯಿತು. ಗ್ರಾಹಕರ ಅವಶ್ಯ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪೀಟರ್ ಇಂಗ್ಲೆಂಡ್ನ ನಿರ್ದೇಶಕ ನಿಧಿ ರಾಜ್ ತಿಳಿಸಿದರು.
ವಿಕಸನಗೊಳ್ಳುತ್ತಿರುವ ಶಾಲೆ ಪ್ರಶಸ್ತಿಗೆ 'ಯೂರೋಸ್ಕೂಲ್'
ಬೆಂಗಳೂರು: ನಗರದ 'ಯೂರೋಸ್ಕೂಲ್' ಅತ್ಯಂತ ವೇಗವಾಗಿ ವಿಕಸನಗೊಳ್ಳುತ್ತಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 6ನೇ ಬ್ರ್ಯಾಂಡ್ ಅಕಾಡೆಮಿಕ್ ಎಜುಕೇಷನ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಕಸನಗೊಳ್ಳುತ್ತಿರುವ ಶಾಲೆ ಎಂಬ ಪ್ರಶಸ್ತಿ 'ಯೂರೋಸ್ಕೂಲ್'ಗೆ ಲಭಿಸಿದೆ. ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಈ ಪ್ರಶಸ್ತಿ ಪಡೆದಿರುವ ಬ್ರ್ಯಾಂಡ್ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ 8 ತಿಂಗಳ ಕಾಲ ನಡೆದ ಮಾರುಕಟ್ಟೆ ಸಂಶೋಧನಾ ಅಧ್ಯಯನ ಮತ್ತು ಅಭಿಪ್ರಾಯಗಳ ಸರ್ವೇಕ್ಷಣಗಳ ಫಲಿತಾಂಶದ ಆಧಾರದ ಮೇಲೆ ಪ್ರಶಸ್ತಿ ವಿಜೇತ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಕಸನಗೊಳ್ಳುತ್ತಿರುವ ಶಾಲೆ ಪ್ರಶಸ್ತಿಗೆ 'ಯೂರೋಸ್ಕೂಲ್'
ಬೆಂಗಳೂರು: ನಗರದ 'ಯೂರೋಸ್ಕೂಲ್' ಅತ್ಯಂತ ವೇಗವಾಗಿ ವಿಕಸನಗೊಳ್ಳುತ್ತಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ 6ನೇ ಬ್ರ್ಯಾಂಡ್ ಅಕಾಡೆಮಿಕ್ ಎಜುಕೇಷನ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಕಸನಗೊಳ್ಳುತ್ತಿರುವ ಶಾಲೆ ಎಂಬ ಪ್ರಶಸ್ತಿ 'ಯೂರೋಸ್ಕೂಲ್'ಗೆ ಲಭಿಸಿದೆ. ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಈ ಪ್ರಶಸ್ತಿ ಪಡೆದಿರುವ ಬ್ರ್ಯಾಂಡ್ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಳೆದ 8 ತಿಂಗಳ ಕಾಲ ನಡೆದ ಮಾರುಕಟ್ಟೆ ಸಂಶೋಧನಾ ಅಧ್ಯಯನ ಮತ್ತು ಅಭಿಪ್ರಾಯಗಳ ಸರ್ವೇಕ್ಷಣಗಳ ಫಲಿತಾಂಶದ ಆಧಾರದ ಮೇಲೆ ಪ್ರಶಸ್ತಿ ವಿಜೇತ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಎಲ್ಜಿ ಆರ್ಒ ವಾಟರ್ ಪ್ಯೂರಿಫೈಯರ್ ಮಾರುಕಟ್ಟೆಗೆ
ಬೆಂಗಳೂರು: ಗೃಹೋಪಯೋಗಿ ವಸ್ತು ತಯಾರಿಕಾ ಕಂಪನಿ ಎಲ್ಜಿಯು ನೂತನ ಆರ್ಒ ವಾಟರ್ ಪ್ಯೂರಿಫೈಯರ್ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಪರಿಶುದ್ಧ ಕುಡಿಯುವ ನೀರು ಒದಗಿಸುವುದು ಇದರ ಉದ್ದೇಶವಾಗಿದ್ದು, ಈ ಹೊಸ ಆರ್ಓ ವಾಟರ್ ಪ್ಯೂರಿಫೈಯರ್ 8 ಹಂತಗಳಲ್ಲಿ ನೀರನ್ನು ಶುದ್ಧೀಕರಣ ಮಾಡಲಿದೆ. ಆರೋಗ್ಯಕ್ಕೆ ಹಾನಿಕಾರಕ ಆಗಬಲ್ಲ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲಿದೆ. ಸ್ಟೈನ್ಲೆಸ್ ಸ್ಟೀಲ್ ವಾಟರ್ ಟ್ಯಾಂಕ್ ಹಾಗೂ ಪ್ರತ್ಯೇಕ ಸಿಲಿಕಾನ್ ಸೀಲ್ಡ್ ಟ್ಯಾಂಕ್ ಇದ್ದು, ಶುದ್ಧೀಕರಿಸಿದ ನೀರಿಗೆ ಯಾವುದೇ ರೋಗಾಣು ಸೇರದಂತೆ ತಡೆಯಲಿದೆ. ಇದರಿಂದ ಬ್ಯಾಕ್ಟೀರಿಯಾ ಹಾಗೂ ವೈರಾಣು ಮುಕ್ತ ನೀರು ಲಭ್ಯವಾಗಿದ್ದು, ಸಂಪೂರ್ಣ ಸ್ವಯಂ ಚಾಲಿತ. ಇದರ ಬೆಲೆ 22 ಸಾವಿರದಿಂದ ರು. 44,290 ಸಾವಿರದವರೆಗೆ ಲಭ್ಯ.ಮಾಹಿತಿಗಾಗಿ 9917648859 ಸಂಪರ್ಕಿಸಬಹುದು.
ಏರ್ಟೆಲ್ನಿಂದ 'ಪಾಕೆಟ್ ಟಿವಿ' ಮೊಬೈಲ್ ಆ್ಯಪ್
ಬೆಂಗಳೂರು: ಭಾರತಿ ಏರ್ಟೆಲ್ನ ಒಂದು ಭಾಗವಾಗಿರುವ ಏರ್ಟೆಲ್ ಡಿಜಿಟಲ್ ಟಿವಿ ಏರ್ಟೆಲ್ 'ಪಾಕೆಟ್ ಟಿವಿ' ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಈ ನೂತನ ಮೊಬೈಲ್ ಅಪ್ಲಿಕೇಷನ್ಗೆ ತಿಂಗಳಿಗೆ 60 ಪಾವತಿಸಬೇಕು. ಇದರಿಂದ ಗ್ರಾಹಕರು ತಮ್ಮ ನೆಚ್ಚಿನ ಟಿವಿ ಕಾರ್ಯಕ್ರಮಗಳನ್ನು ಸುಲಭವಾಗಿ ವೀಕ್ಷಿಸಬಹುದು. ಸುಮಾರು 150ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಗಳು, 10 ಸಾವಿರ ಗಂಟೆಗೂ ಅಧಿಕ ಕಾಲದ ವಿಡಿಯೋ ಕಂಟೆಂಟ್ ಮತ್ತು 13 ಟಿವಿ ಚಾನೆಲ್ಗಳು ಸದಾ ಲಭ್ಯ ಇರುವಂತೆ ಈ ಆ್ಯಪ್ನ್ನು ರೂಪಿಸಲಾಗಿದೆ. ಈ ಆ್ಯಪ್ ಆಂಡ್ರಾಯ್ಡ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್ 2.1 ನಂತರದ ಎಲ್ಲಾ ಮಾದರಿಯ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸಲಿದೆ. ಅಪ್ಲಿಕೇಷನ್ ಡೌನ್ಲೋಡ್ ಮಾಡಿ ಆಉಉ ಖಿಗ ಡ್ಟಿ 54325 ಗೆ ಸಂದೇಶ ಕಳುಹಿಸಿ ನೋಂದಣಿ ಮಾಡಿದಲ್ಲಿ ಸೇವೆ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಢಿಢಿಢಿ.ಛ್ಝ್ಠಡಿಜಟ.್ಝಟಿ.
ಪೆಪ್ಸಿ ಐಪಿಎಲ್ 2014 ಕರೆ ಬಂದಿದೆ ಪ್ರಚಾರಾಂದೋಲನ
ಬೆಂಗಳೂರು: ರಾಷ್ಟ್ರಾದ್ಯಂತ ಏಪ್ರಿಲ್ 16ರಿಂದ ಆರಂಭವಾಗಲಿರುವ ಬೃಹತ್ ಕ್ರಿಕೆಟ್ ಹಬ್ಬ ಪೆಪ್ಸಿ ಐಪಿಎಲ್ 2014ನ ಅಧಿಕೃತ ಪ್ರಸಾರಕರಾದ ಸೋನಿ ಮ್ಯಾಕ್ಸ್ ಮತ್ತು ಸಿಕ್ಸ್ 2014 ಪ್ರಚಾರಾಂದೋಲನ ಆರಂಭಿಸಿದೆ. 'ಬನ್ನಿ ಕರೆ ಬಂದಿದೆ'- ಎಂಬ ಸಂದೇಶದ ಮೂಲಕ ಪ್ರಚಾರಾಂದೋಲನವನ್ನು ಆರಂಭಿಸಿದ್ದು, ನಾಲ್ಕು ಚಲನಚಿತ್ರಗಳೊಂದಿಗೆ ಪ್ರಚಾರ ಆರಂಭವಾಗಲಿದೆ. ಪ್ರಚಾರದಲ್ಲಿ ವಿವಿಧ ಜನರ ಜೀವನದಿಂದ ಆಯ್ದ ಭಿನ್ನ ಪರಿಸ್ಥಿತಿಗಳನ್ನು ಬಿಂಬಿಸಿ, ಬುಲಾವ(ಕರೆ ಬಂದಿದೆ) ಚಿತ್ರದೊಂದಿಗೆ ಕೊನೆಗೊಳಿಸಲಿದೆ. ಕ್ರಿಕೆಟ್ ಪ್ರಿಯರೆಲ್ಲ ತಮ್ಮ ಕೆಲಸ ಕಾರ್ಯ ಬದಿಗೊತ್ತಿ ಪಂದ್ಯ ವೀಕ್ಷಿಸಲು ಬನ್ನಿ ಎಂಬ ಸಂದೇಶವನ್ನು ಈ ಪ್ರಚಾರ ಕೊಡಲಿದೆ. ಪಂದ್ಯವನ್ನು ಸೋನಿ ನೆಟ್ವರ್ಕ್ನ ವೆಬ್ಸೈಟ್ ಢಿಢಿಢಿ.ಡ್ಟಟಿಣಟ್ಝಢಜ.್ಛ್ಟಟ ನಲ್ಲೂ ವೀಕ್ಷಿಸಬಹುದು.
ಡೊಕೊಮೊದಿಂದ ಪೋಸ್ಟ್ಪೇಯ್ಡ್ ಯೋಜನೆ
ಬೆಂಗಳೂರು: ಟಾಟಾ ಟೆಲಿಸರ್ವೀಸಸ್ನ ಜನಪ್ರಿಯ ಬ್ರಾಂಡ್ 'ಟಾಟಾ ಡೊಕೊಮೊ' ಗ್ರಾಹಕರಿಗಾಗಿ 'ಕೌಟುಂಬಿಕ ಯೋಜನೆ' ಎಂಬ ಹೊಸ ಜಿಎಸ್ಎಂ ಪೋಸ್ಟ್ಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇಡೀ ಕುಟುಂಬ ಸದಸ್ಯರಿಗೆ ಹೊಂದುವ ರೀತಿ ಈ ಯೋಜನೆ ಇದೆ. ಕುಟುಂಬದ ಒಬ್ಬರು ಒಂದು ಯೋಜನೆಯನ್ನು ಖರೀದಿಸಿದರೆ ಇಡೀ ಕುಟುಂಬ ಸದಸ್ಯರಿಗೆ, ಅವರ ಆಯ್ಕೆ ತಕ್ಕಂತೆ ಇರುವ ವಿವಿಧ ಸೌಲಭ್ಯ ಲಭ್ಯವಾಗುತ್ತವೆ. ಕುಟುಂಬ ಸದಸ್ಯರಲ್ಲಿ ಯಾರೇ ಈ ಸೌಲಭ್ಯ ಬಳಸಿಕೊಂಡರೂ ಸಹ ಒಂದೇ ದರ ಅನ್ವಯವಾಗುತ್ತದೆ. ಎಲ್ಲರಿಂದ ಒಂದೇ ಬಿಲ್ ಬರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ ಢಿಢಿಢಿ.ಡಿಛಡಿಛಜ್ಟ್ಛ್ಟಟ್ಟ.್ಛ್ಟಟ.
ಚುನಾವಣೆ ಮಾಹಿತಿಗೆ 'ಎಂಟಿಎಸ್ ಎಲೆಕ್ಷನ್ ಟ್ರಾಕರ್'
ಬೆಂಗಳೂರು: ಇಂಟರ್ನೆಟ್ ಬಳಕೆದಾರರು ಇನ್ನು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳನ್ನು ಕುರಿತು ನಡೆಯುವ ಸಂವಾದ, ಚರ್ಚೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವೀಕ್ಷಿಸಬಹುದು. ಅದಕ್ಕಾಗಿ ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವೀಸಸ್ ಲಿಮಿಟೆಡ್ನಿಂದ ಎಂಟಿಎಸ್ ಬ್ರಾಂಡ್ ಹೆಸರಿನಲ್ಲಿ ಹೊಸದಾಗಿ 'ಎಂಟಿಎಸ್ ಎಲೆಕ್ಷನ್ ಟ್ರಾಕರ್' ಎಂಬ ಟ್ರಾಕರ್ ರೂಪಿಸಿದೆ. ಅಂತರ್ಜಾಲ ಬಳಕೆದಾರರು ಆಯಾ ಕ್ಷಣದ ವಿಶ್ಲೇಷಣೆ, ವಿವಿಧ ಪೋರ್ಟಲ್, ಫೇಸ್ಬುಕ್, ಟ್ವೀಟರ್, ಯೂಟ್ಯೂಬ್ಗಳಲ್ಲಿ ನಡೆಯುವ ಮಾಹಿತಿ ಆಧರಿಸಿ ವಿವರವನ್ನು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.