ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

229 ಅಂಕಗಳ ದಾಖಲೆ ಏರಿಕೆ ಕಂಡ ಸೆನ್ಸೆಕ್ಸ್; 8 ಸಾವಿರ ಗಡಿ ದಾಟಿದ ನಿಫ್ಟಿ

ಮುಂಬೈ ಷೇರುಪೇಟೆಯಲ್ಲಿ ಮತ್ತೆ ಹರ್ಷ ಮನೆ ಮಾಡಿದ್ದು, ಸೆನ್ಸೆಕ್ಸ್ 229 ಅಂಕಗಳ ದಾಖಲೆ ಏರಿಕೆ ಕಂಡಿದೆ.

Srinivasa Murthy VN
Updated On : 1 Sept 2014, 6:26 am

ಮುಂಬೈ: ಮುಂಬೈ ಷೇರುಪೇಟೆಯಲ್ಲಿ ಮತ್ತೆ ಹರ್ಷ ಮನೆ ಮಾಡಿದ್ದು, ಸೆನ್ಸೆಕ್ಸ್ 229 ಅಂಕಗಳ ದಾಖಲೆ ಏರಿಕೆ ಕಂಡಿದೆ.

ಜಿಡಿಪಿ ದರದ ಏರಿಕೆಯ ಹಿನ್ನಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆ ದಾಖಲೆ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ. ನಿಫ್ಟಿ 8000 ಅಂಶಗಳ ಗಡಿ ದಾಟಿದ್ದು, ಸೆನ್ಸೆಕ್ಸ್ ಕೂಡ ದಾಖಲೆ ಪ್ರಮಾಣದ 229 ಅಂಕಗಳ ಏರಿಕೆಯೊಂದಿಗೆ 26, 900 ಅಂಕಗಳಿಗೇರಿದೆ.

ನೂತನ ಎನ್ಡಿಎ ಸರ್ಕಾರ 100 ದಿನಗಳನ್ನು ಪೂರೈಸುತ್ತಿದ್ದಂತೆಯೇ ತನ್ನ ಆರ್ಥಿಕ ಪ್ರಗತಿಯ ವರದಿಯನ್ನು ಬಿಡುಗಡೆ ಮಾಡಿತ್ತು. ಈ ಪೈಕಿ ಏಪ್ರಿಲ್ ಮತ್ತು ಜೂನ್ ತಿಂಗಳ ತ್ರೈಮಾಸಿಕ ವರದಿಯಲ್ಲಿ ದಾಖಲೆ ಪ್ರಮಾಣದಲ್ಲಿ ದೇಶದ ಅಭಿವೃದ್ಧಿ ದರ ಏರಿಕೆಯಾಗಿದೆ. ಈ ಹಿಂದಿನ ತ್ರೈಮಾಸಿಕ ವರದಿಯಲ್ಲಿ ಶೇ.4.6ರಷ್ಟಿದ್ದ ಜಿಡಿಪಿ ದರ ಪ್ರಸ್ತುತ ಏಪ್ರಿಲ್ ಮತ್ತು ಜೂನ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ 5.7ಕ್ಕೆ ಏರಿದೆ.

ಇದೇ ಅಂಶ ಷೇರುಮಾರುಕಟ್ಟೆಯ ಚೇತರಿಕೆಗೆ ಬಹುಮುಖ್ಯ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾದ ಆರ್ಥಿಕ ಉತ್ತೇಜಕ ಕಾರ್ಯಕ್ರಮಗಳಿಂದ ಉಧ್ಯಮಿಗಳು ಹೆಚ್ಚೆಚ್ಚು ಬಂಡವಾಳ ತೊಡಗಿಸುತ್ತಿರುವುದು ಕೂಡ ಷೇರುಮಾರುಕಟ್ಟೆ ಚೇತರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಪ್ರಸಕ್ತ ತ್ರೈಮಾಸಿಕ ದರದ ಪ್ರಗತಿ 2 ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚಿನ ಅಭಿವೃದ್ಧಿ ದರವಾಗಿದೆ. ಸರ್ಕಾರದ ಸಾಧನೆ ಬಗ್ಗೆ ಈ ಹಿಂದೆ ಮಾತನಾಡಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಮುಂದಿನ 2 ವರ್ಷದಲ್ಲಿ ಅತಿ ಹೆಚ್ಚಿನ ಜಿಡಿಪಿ ಸಾಧನೆಯನ್ನು ಮಾಡುವ ವಿಶ್ವಾಸವನ್ನು ಕೇಂದ್ರ ಸರ್ಕಾರ ಹೊಂದಿದೆ. ದೇಶದ ಬಹುತೇಕ ಭಾಗಗಳಲ್ಲಿ ಬರದ ಛಾಯೆ ಇದ್ದರೂ, ಉತ್ತಮ ಪ್ರಗತಿ ಸಾಧಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ರಫ್ತಿನ ಪ್ರಮಾಣವನ್ನು ಹೆಚ್ಚು ಮಾಡಲು ಗಮನ ನೀಡಲಾಗುತ್ತದೆ. ವಿವಿಧ ಉತ್ಪನ್ನ ತಯಾರಿಕಾ ವಿಭಾಗ ಮತ್ತು ಸೇವಾ ಘಟಕಕ್ಕೆ ಕೇಂದ್ರ ಸರ್ಕಾರ ನೀಡಿದ ಉತ್ತೇಜನವೇ ಈ ಬೆಳವಣಿಗೆಗೆ ಕಾರಣವಾಗಿದೆ. ಬಂಡವಾಳ ಹೂಡಿಕೆಗೆ ಉಧ್ಯಮಿಗಳು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಹೀಗಾಗಿ ಬಹುತೇಕ ವಲಯಗಳು ಧನಾತ್ಮಕ ಬದಲಾವಣೆ ತೋರಿವೆ ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement