ನವದೆಹಲಿ: ಸರ್ಕಾರಿ ಗುತ್ತಿಗೆದಾರರು ಅಥವಾ ಪೂರೈಕೆದಾರರು ತೆರಿಗೆ ತಪ್ಪಿಸುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಜಾಗೃತ ಆಯೋಗ(ಸಿವಿಸಿ) ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.
ನೈಸರ್ಗಿಕ ವಿಕೋಪದದಂತಹ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಂದರ್ಭದಲ್ಲೂ ಸಿಂಗಲ್ ಟೆಂಡರ್ ಮೂಲಕ ಗುತ್ತಿಗೆ ಕೆಲಸಗಳನ್ನು ವಹಿಸುವಂತಿಲ್ಲ ಎಂದು ಕೇಂದ್ರದ ಎಲ್ಲ ಸಚಿವಾಲಯಗಳು, ಇಲಾಖೆಗಳಿಗೆ ಕಳುಹಿಸಿದ ಮಾರ್ಗದರ್ಶಿಯಲ್ಲಿ ತಿಳಿಸಲಾಗಿದೆ.
ಗುತ್ತಿಗೆಯನ್ನು ಪಡೆಯುವ ವೇಳೆ ತೆರಿಗೆ ತಪ್ಪಿಸುವಿಕೆಯೂ ಗಂಭೀರ ವಿಚಾರ. ಹಾಗಾಗಿ ಗುತ್ತಿಗೆದಾರರು ಅಥವಾ ಪೂರೈಕೆದಾರರ ತೆರಿಗೆ ಹೊಣೆಗಾರಿಕೆಯನ್ನು ಕೂಲಂಕಶವಾಗಿ ಪರಿಶೀಲಿಸುವ ಅಗತ್ಯವಿದೆ ಎಂದೂ ಸಿವಿಸಿ ಹೇಳಿದೆ.