ವಿತ್ತಲೋಕದ ಸುತ್ತ ಮುತ್ತ
ಬಿರ್ಲಾ ಸನ್ಲೈಫ್ನಿಂದ ಐದು ಹೊಸ ವಿಮಾ ಯೋಜನೆ ಆರಂಭ
ಬಿರ್ಲಾ ಸನ್ಲೈಫ್ ಇನ್ಶುರೆನ್ಸ್ ಸಂಸ್ಥೆ ಐದು ನೂತನ ವಿಮಾ ಯೋಜನೆಗಳನ್ನು ಆರಂಭಿಸುತ್ತಿದೆ. ಜೀವಮಾನದುದ್ದಕ್ಕೂ ಆದಾಯ ಬರುವಂತಹ ವಿಮಾ ಯೋಜನೆಯನ್ನು ರೂಪಿಸಲಾಗಿದ್ದು, ಹೂಡಿಕೆಗೆ ಹೆಚ್ಚಿನ ಭದ್ರತೆ ನೀಡಲಿದೆ ಎಂದು ಸಂಸ್ಥೆಯ ಉಪಕಾರ್ಯನಿರ್ವಾಹಣಾ ಅಧಿಕಾರಿ ಮಾಯಂಕ್ ಬತ್ವಾಲ್ ತಿಳಿಸಿದ್ದಾರೆ. ಅನಿಶ್ಚಿತತೆ ಹಾಗೂ ದೀರ್ಘಾವಧಿ ಉಳಿತಾಯದ ಅಂಶಗಳನ್ನು ಒಳಗೊಂಡಂತೆ ಜೀವವಿಮೆ ಮೂಲಭೂತ ಅಂಶಗಳನ್ನು ಯೋಜನೆಯಲ್ಲಿ ರೂಪಿಸಲಾಗಿದೆ. ಪ್ರಸಕ್ತ ಗ್ರಾಹಕರ ಅಗತ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಸದೃಢ ಪಿಂಚಣಿ ಯೋಜನೆ, ಆಸ್ತಿ ಭದ್ರತಾ ಯೋಜನೆ, ವೆಲ್ತ್ ಮ್ಯಾಕ್ಸ್ ಯೋಜನೆ, ಜೀವಿತದುದ್ದದ ಆದಾಯ ಯೋಜನೆ ಹಾಗೂ ವಿಷನ್ ಎಂಡೋಮೆಂಟ್ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆ ಆ್ಯಂಡ್ ಕೆ ಬ್ಯಾಂಕ್ ಲಾಭ ಶೇ. 11ರಷ್ಟು ಹೆಚ್ಚಳ
ಪ್ರಸಕ್ತ ಆರ್ಥಿಕ ಸಾಲಿನ 3ನೇ ತ್ರೈ ಮಾಸಿಕದಲ್ಲಿ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ತನ್ನ ನಿವ್ವಳ ಲಾಭದಲ್ಲಿ ಶೇ.11ರಷ್ಟು ಏರಿಕೆ ಕಂಡಿದೆ. ಒಟ್ಟು 9 ತಿಂಗಳಲ್ಲಿ ಬ್ಯಾಂಕ್ನ ಲಾಭದ ಪ್ರಮಾಣ 931.87 ಕೋಟಿಗೆ ಏರಿದೆ. ಡಿಸೆಂಬರ್ಗೆ ಅಂತ್ಯವಾದ 3ನೇ ತ್ರೈ ಮಾಸಿಕದಲ್ಲಿಯೇ 289.40 ಕೋಟಿ ಲಾಭ ಗಳಿಸಿದೆ. ಇದರೊಂದಿಗೆ ಬ್ಯಾಂಕ್ ಠೇವಣಿಯು 63,157 ಕೋಟಿಗೆ ಏರಿದ್ದು, ಒಟ್ಟು ಮುಂಗಡ ಶೇ.21.48ರಷ್ಟು ಹೆಚ್ಚುವ ಮೂಲಕ 43,317 ಕೋಟಿಗೆ ಏರಿದೆ. ಆರ್ಥಿಕ ಹಿನ್ನಡೆಯ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಬೆಳವಣಿಗೆಯ ಹಾದಿಯಲ್ಲಿ ಸಾಗಿದೆ. ಗುಣಮಟ್ಟದ ಆಸ್ತಿ ದಾಖಲೆ ನಿರ್ವಹಿಸಬೇಕು ಎನ್ನುವ ಬ್ಯಾಂಕ್ ಪ್ರಯತ್ನ ಫಲ ನೀಡಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.
ಪೆಪ್ಸ್ ಇಂಡಿಯಾಕ್ಕೆ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಪ್ರಾಯೋಜಕತ್ವ
ಭಾರತದ ಪ್ರಮುಖ ಹಾಸಿಗೆ ತಯಾರಿಕಾ ಸಂಸ್ಥೆಯಾದ ಪೆಪ್ಸ್ ಇಂಡಿಯಾವು ಪ್ರತಿಷ್ಠಿತ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಪ್ರಾಯೋಜಕತ್ವವನ್ನು ಪಡೆದಿದೆ. ಫೆ.25ರಿಂದ ಪ್ರಾರಂಭವಾಗುವ ಏಷ್ಯಾ ಕಪ್ನಲ್ಲಿ ಇದೇ ಮೊದಲ ಬಾರಿಗೆ ಪೆಪ್ಸ್ ಕಂಪನಿಗೆ ಪ್ರಾಯೋಜಕತ್ವ ದೊರೆತಿದೆ. ಈ ಪ್ರಾಯೋಜಕತ್ವದೊಂದಿಗೆ ಭಾರತ ಹೊರತುಪಡಿಸಿ ಏಷ್ಯಾದ ಇತರ ದೇಶಗಳಲ್ಲಿಯೂ ಉದ್ಯಮ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಮಾಧವನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏರ್ಟೆಲ್ಗೆ 20 ಕೋಟಿ ಗ್ರಾಹಕರು
ಏರಟೆಲ್ ಸಂಸ್ಥೆಯು ಭಾರತದಲ್ಲಿ 20 ಕೋಟಿ ಗ್ರಾಹಕರ ಮೈಲುಗಲ್ಲನ್ನು ದಾಟಿದೆ. ವಿಶ್ವದ 20ಕ್ಕೂ ಹೆಚ್ಚಿನ ದೇಶಗಳಲ್ಲಿ ಟೆಲಿಕಾಂ ಸೇವೆ ಒದಗಿಸುತ್ತಿರುವ ಏರ್ಟೆಲ್, ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯನ್ನು ಹೊಂದಿದೆ. 'ಈ ಮಹತ್ವದ ಮೈಲುಗಲ್ಲನ್ನು ದಾಟಿರುವುದಕ್ಕೆ ಸಂತಸವಾಗುತ್ತಿದೆ.
ಗ್ರಾಹಕರು ಸಂಸ್ಥೆಯ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತೇವೆ. ಭಾರತದ ಗ್ರಾಮೀಣ ಪ್ರದೇಶದಲ್ಲಿಯೂ ಶೇ.87ರಷ್ಟು ಸೇವಾ ವ್ಯಾಪ್ತಿಯನ್ನು ಹೊಂದಿರುವ ಏರ್ಟೆಲ್, ಭವಿಷ್ಯದಲ್ಲಿ ಇನ್ನಷ್ಟು ಪರಿಣಾಮಕಾರಿ ಸೇವೆಗಳನ್ನು ಒದಗಿಸಲಿದೆ' ಎಂದು ಏರ್ಟೆಲ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗೋಪಾಲ್ ವಿಠ್ಠಲ್ ಹೇಳಿದ್ದಾರೆ.
ಸಲಾರ್ಪುರಿಯಾ ಸತ್ವ ರಿಯಲ್ ಎಸ್ಟೇಟ್ ಸಂಸ್ಥೆಗೆ ಪ್ರಶಸ್ತಿ
ಸಲಾರ್ಪುರಿಯಾ ಸತ್ವ ರಿಯಲ್ ಎಸ್ಟೇಟ್ ಸಂಸ್ಥೆಗೆ ಎಬಿಪಿ ಐಷಾರಾಮಿ ಯೋಜನೆ ಪ್ರಶಸ್ತಿ ಲಭಿಸಿದೆ.
ನಗರದ ಮಲ್ಲೇಶ್ವರಂನಲ್ಲಿ 197 ಐಷಾರಾಮಿ ಮನೆಗಳನ್ನು ನಿರ್ಮಿಸಿರುವ ಸಂಸ್ಥೆಯು, ವಸತಿ ಸಮುಚ್ಚಯದಲ್ಲಿಯೇ ಹೆಲಿಪ್ಯಾಡ್, ಅಂತಾರಾಷ್ಟ್ರೀಯ ಶಾಲೆ, ಸೌರಶಕ್ತಿ ಯೋಜನೆ ಸೇರಿದಂತೆ ನಾನಾ ಐಷಾರಾಮಿ ಸೌಲಭ್ಯ ಹೊಂದಿದೆ.
ಕಳೆದ 28 ವರ್ಷಗಳಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಭವಿಷ್ಯದ ಪ್ರಗತಿಗೆ ನೆರವಾಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಅಗರವಾಲ್ ಹೇಳಿದ್ದಾರೆ.
ಗ್ರಾಸಿಂನಿಂದ ನೂತನ ವಿನ್ಯಾಸದ ಬಟ್ಟೆಗಳು ಮಾರುಕಟ್ಟೆಗೆ
ಸ್ವದೇಶಿ ಹಾಗೂ ಪುರುಷರ ಬಟ್ಟೆಯ ಗ್ರಾಸಿಮ್ ಬ್ರಾಂಡ್ ಬೇಸಿಗೆಯ ಸಂಗ್ರಹದ ನೂತನ ವಿನ್ಯಾಸದ ಬಟ್ಟೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಶೇ.100ರಷ್ಟು ಮರ್ಸೈಸ್ಡ್ ಹತ್ತಿ ಒಳಗೊಂಡ ಈ ಬಟ್ಟೆಯು ಗ್ರಾಹಕರ ಇಚ್ಚೆಗೆ ಅನುಗುಣವಾಗಿ ರೂಪಗೊಂಡ ವಿನ್ಯಾಸ ಹೊಂದಿದೆ. ಆದಿತ್ಯಾ ಬಿರ್ಲಾ ಸಂಸ್ಥೆಯ ಅಂಗವಾಗಿರುವ ಗ್ರಾಸಿಮ್ ಬ್ರಾಂಡ್ ದೇಶಾದ್ಯಂತ 150 ಡೀಲರ್ಗಳು ಹಾಗೂ 120 ಪ್ರಮುಖ ಮಳಿಗೆಗಳನ್ನು ಹೊಂದಿದೆ.
ಆಸ್ಕ್ಮಿ ಡಾಟ್ ಕಾಮ್ ವಿಶೇಷ ಯೋಜನೆ
ನಿಮ್ಮ ಮನೆಯ ಹತ್ತಿರದ ವೈದ್ಯರ ಸಮಯ ಕಾಯ್ದಿರಿಸಲು ಆಸ್ಕ್ಮಿ ಡಾಟ್ ಕಾಮ್ ವಿಶೇಷ ಯೋಜನೆ ಪ್ರಾರಂಭಿಸಿದೆ. ಸ್ಮಾರ್ಟ್ಫೋನ್ಗಳಿಗಾಗಿ ಆಸ್ಕ್ ಮಿ ಡಾಕ್ಟರ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದ್ದು, ಫೋನ್, ವೆಬ್ಸೈಟ್ ಅಥವಾ ದೂರವಾಣಿ ಕರೆಗಳ ಮೂಲಕ ನಿಮ್ಮ ಮನೆಯ ಹತ್ತಿರದ ವೈದ್ಯರಲ್ಲಿ ಚಿಕಿತ್ಸೆ ಪಡೆಯಲು ಸಮಯ ಕಾಯ್ದಿರಿಸಬಹುದಾಗಿದೆ. ಇದರ ಜತೆಗೆ ರೋಗಿಗಳು ತಮ್ಮ ಚಿಕಿತ್ಸೆಗೆ ಅನುಗುಣವಾಗಿ ವೈದ್ಯರ ವಿಚಾರಣೆಯನ್ನು ಮಾಡಬಹುಜದಾಗಿದೆ. 04444444443 ಸಂಖ್ಯೆ ಕರೆ ಮಾಡಿ ಅಥವಾ ಆಸ್ಕ್ಮಿ ಡಾಟ್ ಕಾಮ್ಗೆ ಭೇಟಿ ನೀಡಿ ಸಮಯ ಕಾಯ್ದಿರಿಸಬಹುದಾಗಿದೆ.
ನೂತನ ಶಾಪಿಂಗ್ ವೆಬ್ಸೈಟ್ ಆರಂಭ
ಬೆಂಗಳೂರಿನ ಮೂವರು ಯುವಕರು ಸೇರಿ ಬಿಗ್ಬ್ಯಾಂಗ್ಆಫರ್ ಡಾಟ್ ಕಾಮ್ ಎಂಬ ನೂತನ ಶಾಪಿಂಗ್ ವೆಬ್ಸೈಟ್ ಆರಂಭಿಸುತ್ತಿದ್ದಾರೆ. ಮಾರ್ಚ್ 1ರಿಂದ ಆನ್ಲೈನ್ ಶಾಪಿಂಗ್ ಆರಂಭವಾಗುತ್ತಿದ್ದು, ಕೇವಲ 48 ಗಂಟೆಯೊಳಗೆ ಗ್ರಾಹಕರು ಬುಕ್ ಮಾಡಿರುವ ಸಾಮಗ್ರಿಗಳನ್ನು ಮನೆಗೆ ತಲುಪಿಸಲಾಗುವುದು ಎಂದು ಸಂಸ್ಥೆ ಹೇಳಿಕೊಂಡಿದೆ. ಕಾಸ್ಮೆಟಿಕ್ಸ್, ಬಟ್ಟೆ, ಬೂಟು, ಮೊಬೈಲ್, ಎಲೆಕ್ಟ್ರಾನಿಕ್ ಯಂತ್ರೋಪಕರಣ ಹಾಗೂ ಕ್ಯಾಮರಾಗಳು ಇಲ್ಲಿ ಲಭ್ಯವಿರಲಿವೆ. ಭವಿಷ್ಯದಲ್ಲಿ ಗೃಹೋಪಯೋಗಿ ಪಿಠೋಪಕರಣಗಳನ್ನು ಮಾರಾಟ ಮಾಡಾಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥ ಅಭಾಸ್ ಶ್ರೀವತ್ಸ ಹೇಳಿದ್ದಾರೆ.