ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

'ಅನೂಸ್ ನ್ಯಾಚುರಲ್ಸ್ ಸ್ಲಿಮ್ ಟೀ' ಬಿಡುಗಡೆ

Vishwanath S
Updated On : 20 Jan 2014, 12:43 pm

ಅನೂಸ್ ನ್ಯಾಚುರಲ್ಸ್‌ನಿಂದ ದೇಹದ ತೂಕ ಇಳಿಸಲು ನೆರವಾಗುವ ಆಯುರ್ವೇದ 'ಅನೂಸ್ ನ್ಯಾಚುರಲ್ಸ್ ಸ್ಲಿಮ್ ಟೀ' ಎಂಬ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ. ಈ ಗ್ರೀನ್ ಟೀ ತಯಾರಿಸಲು ನಾಗರ್ ಮೋಥಾ, ಪಿಪ್ಪಲಿ, ಒಣ ಶುಂಠಿ, ಕಾಳು ಮೆಣಸು, ನೆಲ್ಲಿ, ಹಾಲ್ಡ್‌ಪೊಸ್ಟ್, ಬೈಬಿಡಂಗ್, ಸೋನಾಮುಖಿ ಮೂಲಿಕೆ, ಮುಸ್ತಾ, ಚಕ್ಕೆ ಸೇರಿದಂತೆ 12 ಗಿಡಮೂಲಿಕೆಗಳನ್ನು ಬಳಸಲಾಗಿದ್ದು, ಇದರ ಬಳಕೆಯಿಂದಾಗಿ ದೇಹದಲ್ಲಿ ಹೆಚ್ಚುವರಿ ಕ್ಯಾಲೋರಿಗಳನ್ನು ವ್ಯವಸ್ಥಿತ ರೂಪದಲ್ಲಿ ಕ್ರಮೇಣವಾಗಿ ಕರಗಿಸಲು ನೆರವಾಗುತ್ತವೆ. ಇದರಿಂದ ದೇಹದ ತೂಕವನ್ನು ನಿಯಂತ್ರಿಸಿಕೊಳ್ಳಬಹುದು. 2 ಗ್ರಾಂ ತೂಕದ 30 ಟೀ ಬ್ಯಾಗ್ಸ್ ಹೊಂದಿರುವ ಈ ಸ್ಲಿಮ್ ಟೀ ಪ್ಯಾಕೆಟ್ ಬೆಲೆ 300, 60 ಟೀ ಬ್ಯಾಗ್ಸ್ ಹೊಂದಿರುವ ಟೀ ಪ್ಯಾಕೆಟ್ ಬೆಲೆ 600 ಎಂದು ಪ್ರಕಟಣೆ ತಿಳಿಸಿದೆ.

ಆರೋಗ್ಯಶ್ರೀ, ಯಶಸ್ವಿನಿ ಚಿಕಿತ್ಸೆ ದರ ಹೆಚ್ಚಿಸಿ
ರಾಜ್ಯದ ಖಾಸಗಿ ಹಾಗೂ ಚಾರಿಟಬಲ್ ಆಸ್ಪತ್ರೆಗಳಲ್ಲಿ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಕಾರ್ಡುಗಳಿಗೆ ನಿಗದಿಪಡಿಸಿರುವ ಚಿಕಿತ್ಸೆ ದರ ಹೆಚ್ಚಸಬೇಕು ಎಂದು ಕರ್ನಾಟಕ ರಾಜ್ಯ ಆಸ್ಪತ್ರೆಗಳ ವೇದಿಕೆ ಸರ್ಕಾರವನ್ನು ಒತ್ತಾಯಿಸಿದೆ. ಆರೋಗ್ಯಶ್ರೀ ಯೋಜನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದು ಹೊರೆಯಾಗಿ ಪರಿಣಮಿಸಿದೆ. ಶೇ. 80 ರಿಂದ ಶೇ.85ರಷ್ಟು ರೋಗಿಗಳು ಬಿಪಿಎಲ್ ಕಾರ್ಡ್ ಹೊಂದಿದ್ದು, ರಿಯಾಯಿತಿ ದರದಲ್ಲಿ ದೊಡ್ಡ ಚಿಕಿತ್ಸೆ ಒದಗಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಿಸಬೇಕು ಎಂದು ಕರ್ನಾಟಕ ರಾಜ್ಯ ಆಸ್ಪತ್ರೆಗಳ ವೇದಿಕೆ ಸಂಚಾಲಕ ಡಾ. ಪ್ರಶಾಂತ್ ಬಿ.ಕಟಾಕೋಲ್ ಒತ್ತಾಯಿಸಿದ್ದಾರೆ. ಈ ವಿಚಾರ ಕುರಿತು ಸರ್ಕಾರದೊಂದಿಗೆ ಸಾಕಷ್ಟು ಬಾರಿ ಚರ್ಚಿಸಲಾಗಿದೆ. ಆದರೂ ಯಾವುದೇ ಬದಲಾವಣೆ ತರಲು ಸಾಧ್ಯವಾಗಿಲ್ಲ.  ಆಸ್ಪತ್ರೆಗಳು ಶಸ್ತ್ರ ಚಿಕಿತ್ಸೆ ಹಾಗೂ ಮೂಲಸೌಕರ್ಯ ಮೇಲಿನ ಖರ್ಚುವೆಚ್ಚಗಳಲ್ಲಿನ ಮೂರನೇ ಒಂದು ಭಾಗದಷ್ಟು ಮಾತ್ರವೇ ಭರಿಸಲು ಸಾಧ್ಯವಾಗುತ್ತದೆ. ಆದರೆ, ಕಾಲ ಕಳೆದಂತೆ ಬಿಪಿಎಲ್ ಕಾರ್ಡ್ ವಿತರಣೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಕಾರಣ ಆಸ್ಪತ್ರೆಗಳು ಈ ಯೋಜನೆಯಲ್ಲಿ ನೀಡುವುದು ಬಹಳ ಕಷ್ಟವಾಗಿದೆ ಎಂದರು.

ಹಿಲ್ಟನ್ ಡಬಲ್ ಟ್ರೀ ಸ್ವೀಟ್ಸ್‌ಗೆ ಚಾಲನೆ
ಹಿಲ್ಟನ್ ವರ್ಲ್ಡ್ ವೈಡ್ ಹಾಗೂ ಹಿಲ್ಟನ್ ಡಬಲ್ ಟ್ರೀ ಹೊಟೇಲ್ ಸಂಸ್ಥೆ ನಗರದ ಸರ್ಜಾಪುರದಲ್ಲಿ ನೂತನ ಹಿಲ್ಟನ್ ಡಬಲ್ ಟ್ರೀ ಸ್ವೀಟ್ಸ್‌ಗೆ ಚಾಲನೆ ನೀಡಿದೆ. ಹೊಟೇಲ್‌ನಲ್ಲಿ ಧೀಘಾವಧಿ ಉಳಿದುಕೊಳ್ಳುವ ಗ್ರಾಹಕರಿಗೆ ಅಲ್ಲೇ ಸ್ಟುಡಿಯೋಗಳನ್ನು ನಿರ್ಮಿಸಲಾಗಿದೆ ಎಂದು ಹಿಲ್ಟನ್ ಡಬಲ್ ಟ್ರೀನ ಜಾಗತಿಕ ಮುಖ್ಯಸ್ಥರಾದ ಜಾನ್ ಗ್ರೀನ್ ಲೀಫ್ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಈ ಟ್ರೀ ಸೂಟ್ ನಗರದ ಪ್ರಮುಖ ಸ್ಥಳಗಳಿಗೆ ಸಮೀಪದಲ್ಲಿದೆ. ಗ್ರಾಹಕರಿಗೆ ಜಾಗತಿಕ ಗುಣಮಟ್ಟದ ಸೌಕರ್ಯ ಹಾಗೂ ಸವಲತ್ತುಗಳನ್ನು ಒದಗಿಸಲಾಗಿದೆ. ಪ್ರತಿ ಹಂತದಲ್ಲಿಯೂ ಅತಿಥಿ ಸತ್ಕಾರವನ್ನು ಅತ್ಯುನ್ನತ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು. 172 ಸ್ಟೈಲಿಷ್ ಕೊಠಡಿಗಳನ್ನು ಇದು ಹೊಂದಿದ್ದು, ಪ್ರತಿಯೊಂದು ಸ್ಟುಡಿಯೋ ಹಾಗೂ ಸೂಟ್ ಕೊಠಡಿಗಳಲ್ಲಿ ಪ್ರತ್ಯೇಕ ಡೈನಿಂಗ್ ಹಾಲ್, ವರ್ಕ್ ಸ್ಪೇಸ್, ಅತ್ಯಾಧುನಿಕ ಅಡುಗೆ ಮನೆ ಹಾಗೂ ಖಾಸಗಿ ಬಾಲ್ಕನಿಗಳಿವೆ. ದಿನದ 24 ಗಂಟೆ ಬಿಸಿನೆಸ್ ಕೇಂದ್ರ ಸೌಲಭ್ಯ ಒದಗಿಸಿದ್ದು, 3,000 ಚದರ ಅಡಿ ವಿಸ್ತೀರ್ಣದ ಕಾನ್ಫರನ್ಸ್ ಹಾಲ್ ಕೂಡ ಇದೆ ಎಂದು ವಿವರಿಸಿದರು. ಕೊಠಡಿ ಕಾಯ್ದಿರಿಸಲು ದೂರವಾಣಿ 67656565 ಸಂಪರ್ಕಿಸಬಹುದು. ಢಿಢಿಢಿ.ಜ್ಟ್ಡಛಿಟಜಡ್ಠಿಜಜ.್ಛ್ಟಟ ನೋಡಬಹುದು.

ಇಂಡಸ್ ಹೆಲ್ತ್ ಪ್ಲಸ್ ಗಣನೀಯ ಸಾಧನೆ
ಇಂಡಸ್ ಹೆಲ್ತ್ ಪ್ಲಸ್ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದೆ. ಪುಣೆಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ನವದೆಹಲಿ, ಬೆಂಗಳೂರು, ಮುಂಬೈ ಎಂಬ ಬೃಹತ್‌ನಗರಲ್ಲಿ ತನ್ನ ಶಾಖಾ ಕಚೇರಿ ಹೊಂದಿದೆ.
9 ರಾಜ್ಯ ಹಾಗೂ 32 ನಗರಗಳಲ್ಲಿ 63 ಆಸ್ಪತ್ರೆಗಳು ಹಾಗೂ ಡಯೋಗ್ನೆಸ್ಟಿಕ್ ಕೇಂದ್ರಗಳನ್ನು ಜತೆ ಸಹಭಾಗಿತ್ವ ಹೊಂದಿದೆ.  ಇಂಡಸ್ ಹೆಲ್ತ್ ಪ್ಲಸ್ ಪ್ರತ್ಯೇಕ ಕಾಲ್ ಸೆಂಟರ್ ಹೊಂದಿದ್ದು, ಆರೋಗ್ಯ ತಪಾಸಣೆ ಮಾಡಿ ವೈದ್ಯರೊಂದಿಗೆ ಆಪ್ತ ಸಮಾಲೋಚನೆ ದೊರಕಿಸಿ ಕೊಡಲಿದೆ. ಅಲ್ಲದೆ, ಲೈವ್ ಡಾಕ್ಟರ್ ಚಾಟ್ ಎಂಬ ಕಾರ್ಯಕ್ರಮದಲ್ಲಿ ವೈದ್ಯರೊಂದಿಗೆ ರೋಗಿಗಳು ನೇರವಾಗಿ ಚಿಟ್ ಚಾಟ್ ಮಾಡಬಹುದಾಗಿದೆ ಎಂದು ಇಂಡಸ್ ಹೆಲ್ತ್ ಪ್ಲಸ್ ವ್ಯವಸ್ಥಾಪಕ ನಿರ್ದೇಶಕ ಅಮೋಲ್ ನಾಯ್ಕ್‌ವಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಫ್‌ಐಸಿಸಿಐ, ಎಸ್‌ಎಸ್‌ಓಸಿಎಚ್‌ಎಎಂ, ನಾಸ್ಕಂ, ಐಎಂಸಿ, ಇಂಡೋ ಜರ್ಮನ್ ಛೇಬರ್ಸ್ ಆಫ್ ಕಾರ್ಮಸ್‌ನ ಸದಸ್ಯರನ್ನು ಇಂಡಸ್ ಹೆಲ್ತ್ ಪ್ಲಸ್ ಸದಸ್ಯರಾಗಿ ಮಾಡಿಕೊಳ್ಳಲಾಗಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ನಾಯ್ಕ್‌ವಾಡಿ.

ಇಂದಿರಾನಗರದಲ್ಲಿ ಟೈಟಾನ್ ಶೋರೂಂ
ಟೈಟಾನ್ ಕಂಪನಿ ತನ್ನ 1000ನೇ ಶಾಖೆಯನ್ನು ಇಂದಿರಾನಗರದಲ್ಲಿ ಸ್ಥಾಪಿಸಿದೆ. ಈ ಶಾಖೆಗೆ ಟೈಟಾನ್ ವ್ಯವಸ್ಥಾಪಕ ನಿರ್ದೇಶಕ ಬಾಸ್ಕರ್ ಭಟ್ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ಸಾಧನೆಗೆ ಗ್ರಾಹಕರು ಕಾರಣ. ಗ್ರಾಹಕರಿಗೆ ಕಂಪನಿಯ ಮೇಲೆ ನಂಬಿಕೆ ಇಲ್ಲದಿದ್ದರೆ ಯಾವುದೇ ಕಂಪನಿ ನಡೆಯಲು ಅಸಾಧ್ಯವಿಲ್ಲ. ಇಲ್ಲಿಯವರೆಗೂ ಆ ನಂಬಿಕೆಯನ್ನು ಗ್ರಾಹಕರು ನಮ್ಮ ಮೇಲೆ ಉಳಿಸಿಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಗ್ರಾಹಕರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು. ದೇಶದ 177 ನಗರದಲ್ಲಿ ನಮ್ಮ ಮಳಿಗೆಗಳಿದ್ದು, ದಕ್ಷಿಣ ಭಾರತದ ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಉತ್ತಮ ಗ್ರಾಹಕರಿದ್ದಾರೆ. ಇಂದಿರಾನಗರದಲ್ಲಿ ಆರಂಭಿಸಿರುವ ಈ ಮಳಿಗೆ 5200 ಚದರ ಅಡಿ ಸ್ಥಳದಲ್ಲಿ ಟೈಟಾನ್, ಹೆಲಿಯೋಸ್, ತಾನಿಷ್ಕ್, ಐಪ್ಲಸ್ ಹೀಗೆ ಎಲ್ಲ ಬ್ರಾಂಡ್‌ಗಳ ಉತ್ಪನ್ನ ಹೊಂದಿರುವ ಪ್ರಥಮ ಮಳಿಗೆಯಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement