ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಅಡಿಕೆ ಹೊಸ ವಿಷಯ

Vishwanath S
Updated On : 27 Jan 2014, 4:00 am

ಅಡಕೆಯ ಬಗ್ಗೆ ಕೆಟ್ಟ ಸಂಗತಿಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೂ, ಬೆಳೆಗಾರರ ಆಶಾವಾದ ಚಿಗುರಿಸುವಂತಹ ಸುದ್ದಿಗಳೂ ಬರುತ್ತಿವೆ. ಅಡಕೆ ಜೀರ್ಣಕ್ರಿಯೆಗೆ ಸಹಕಾರಿ ಎನ್ನುವ ಚೆನ್ನೈ ವೈದ್ಯಕೀಯ ಮಹಾವಿದ್ಯಾಲಯದ ಸಂಶೋಧನೆ ಅಂಥದೊಂದು. ಅದರಲ್ಲಿ ಕಂಡುಬಂದ ಸ್ವಾರಸ್ಯಕರ ಸಂಗತಿಗಳು ಸಾಕಷ್ಟಿವೆ.
ಏನೇನು ಸಂಶೋಧನೆ?
ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ಸುಳ್ಳುಗಳ ನಡುವೆ, ಅಡಕೆಯಲ್ಲಿ ಔಷಧೀಯ ಅಂಶಗಳು ಒಳಗೊಂಡಿವೆ ಎಂಬ ಬಗ್ಗೆ ನಡೆದ ಸಂಶೋಧನೆಯ ಫಲಿತಗಳು.
=      ಚೆನ್ನೈ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಮೈಕ್ರೋಬಯಾಲಜಿ ವಿಭಾಗ ನಡೆಸಿದ ಸಂಶೋಧನೆಯಲ್ಲಿ ಅಡಕೆ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ಹೇಗೆಂದರೆ ತಾಂಬೂಲ (ವೀಳ್ಯದೆಲೆ, ಅಡಕೆ, ಸುಣ್ಣ, ಲವಂಗ, ಏಲಕ್ಕಿ ಮಿಶ್ರಣ)ವನ್ನು  ಜನರು ಜೀರ್ಣ ಕ್ರಿಯೆ ಸುಗಮವಾಗಿಸಲು ಬಳಸುತ್ತಾರೆ.
=      ಔಷಧೀಯ ಗುಣಗಳಿವೆ ಎಂಬುದನ್ನು ತಿಳಿದುಕೊಳ್ಳಲು ಗರ್ಭಿಣಿಯರಿಗೆ ಮತ್ತು ಇತರರಿಗೆ ಅದನ್ನು ಸೇವನೆಗೆ ನೀಡಲಾಗುತ್ತಿತ್ತು. ಅದನ್ನು ಪ್ರತ್ಯೇಕವಾಗಿ ಅಧ್ಯಯನ ನಡೆಸಿದಾಗ ತಾಂಬೂಲ ಅಥವಾ ಪಾನ್‌ನಲ್ಲಿ ವಿವಿಧ ರೋಗಗಳ ನಿವಾರಣೆ ಸಾಧ್ಯ ಎಂದು ಗೊತ್ತಾಗಿತ್ತು
=      ಅದರಲ್ಲಿ ಔಷಧೀಯ ಗುಣಗಳಿದ್ದು, ಅದನ್ನು ಬಾಯಿಹುಣ್ಣು, ಕ್ಯಾನ್ಸರ್, ಹಲ್ಲಿಗೆ ಸಂಬಂಧಿತ ರೋಗ ಮಾತ್ರವಲ್ಲದೆ ಬಾಯಿ ದುರ್ವಾಸನೆ ತಡೆಗೆ ಬಳಸಬಹುದು.
=      ಅಡಕೆಯಲ್ಲಿ ಒಸಡು ಗಟ್ಟಿಗೊಳಿಸುವ ಮತ್ತು ಹಲ್ಲು ಹಾಳಾಗುವುದನ್ನು ತಡೆಯುವ ಗುಣಗಳಿವೆ. ತಾಂಬೂಲ ಸೇವನೆಯಿಂದ ಹಲ್ಲು ನೋವು ನಿವಾರಣೆ ಮತ್ತು ಜೀರ್ಣ ಕ್ರಿಯೆ ಸುಲಭವಾಗುತ್ತದೆ.
=      ಮಾಂಸಾಹಾರ ಸೇವನೆ ಮಾಡುವವರಿಗೆ ಹೆಚ್ಚು ರೋಗ ಬರಲು ಮುಖ್ಯ ಕಾರಣವೇನೆಂದರೆ ಪ್ರಾಣಿಗಳನ್ನು ಕೊಲ್ಲುವ ಸಂದರ್ಭದಲ್ಲಿ ಅವು ಹೆದರಿಕೊಳ್ಳುತ್ತವೆ. ಇದು ಅವುಗಳ ಮೂತ್ರಪಿಂಡದ ಮೇಲೆ ಪರಿಣಾಮ ಬೀರುತ್ತದೆ.   ಮಾಂಸಾಹಾರ ಮತ್ತು ಮದ್ಯ ಸೇವನೆಯಿಂದ ಬರುವ ರೋಗ ಹತೋಟಿಯಲ್ಲಿಡಲು ಆಗಾಗ ತಂಬೂಲ ಸೇವನೆ ಉತ್ತಮ.
ಈ ವಿಚಾರಗಳು  ವಿದ್ಯಾಲಯ ನಡೆಸಿದ 'ಆ್ಯಂಟಿ ಮೈಕ್ರೋಬಯಾಲಜಿ ಎಫೆಕ್ಟ್ ಆಫ್ ಚ್ಯೂಯಿಂಗ್ ತಾಂಬೂಲಂ (ಬೀಟೆಲ್ ಲೀವ್ಸ್ ಆ್ಯಂಡ್ ಇಟ್ಸ್ ಕಾಂಬಿನೇಷನ್ ) ಬೈ ಟೆಸ್ಟಿಂಗ್ ಸಲೈವ ಆಫ್ ವಾಲೆಂಟಿಯರ್ಸ್‌' ಎಂಬ ಶೀರ್ಷಿಕೆಯಲ್ಲಿ  ಇಂಡಿಯನ್ ಜರ್ನಲ್ ಆಫ್ ಎಪ್ಲೈಡ್ ರಿಸರ್ಚ್ ಪತ್ರಿಕೆಯ ಕಳೆದ ವರ್ಷದ ಫೆಬ್ರವರಿಯ ಸಂಚಿಕೆಯಲ್ಲಿ ಪ್ರಕಟವಾಗಿದೆ.
ಇತ್ತೀಚಿನ ದಿನಗಳಲ್ಲಿ ಅಡಕೆ ಮೇಲೆ ನಿಷೇಧ ಹೇರಲಾಗುತ್ತಿದೆ ಎಂಬ ಗುಲ್ಲು ಬೆಳೆ ಬೆಳೆಯುವ ಪ್ರದೇಶದ ರೈತರನ್ನು ಕಂಗೆಡಿಸಿದೆ. ಕೇಂದ್ರ ಸರ್ಕಾರವೇನೋ ಅಂಥ ಪ್ರಸ್ತಾಪವೇ ಇಲ್ಲ ಎಂದು ಹೇಳಿಕೆ ಮೇಳೆ ಹೇಳಿಕೆ ಕೊಡುತ್ತಿದ್ದಾರೆ. ಒಂದು ವೇಳೆ ಅಡಕೆಗೆ ನಿಷೇಧ ಬಿದ್ದರೆ?ಅದನ್ನು ಊಹಿಸಲೂ ಅಸಾಧ್ಯವಾದೀತು. ಆದರೂ ಒಂದು ಅಂದಾಜಿನ ಪ್ರಕಾರ ಬರೋಬ್ಬರಿ 75 ಸಾವಿರ ಕೋಟಿ ವಹಿವಾಟು ಸ್ಥಗಿತಗೊಳ್ಳುತ್ತದೆ. ಕೇಂದ್ರಕ್ಕೆ ಬರುವ 500 ಕೋಟಿ ವಿದೇಶಿ ವಿನಿಮಯ ನಷ್ಟವಾಗುವುದು ಖಚಿತ. ಇಷ್ಟು ಮಾತ್ರವಲ್ಲ ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ರೈತರ ಜೀವಕ್ಕೇ ಕೊಳ್ಳಿ ಇರಿಸಿದಂತಾದೀತು.
ಆದರೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಮಾತ್ರ ಅಡಕೆಯಲ್ಲಿ ಕ್ಯಾನ್ಸರ್ ಕಾರಕವಾಗಿರುವ ಅಂಶಗಳು ಇದೆ. ಅದರ ಮೇಲೆ ನಿಷೇಧ ಹೇರುವ ಬಗ್ಗೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲಾಗಿದೆ ಎಂದಿದ್ದರು.
ನಮ್ಮ ರಾಜ್ಯವೂ ಸೇರಿದಂತೆ ದೇಶಾದ್ಯಂತ ಸುಮಾರು ಹತ್ತು ಲಕ್ಷ ಕುಟುಂಬ ಅಡಕೆ ಬೆಳೆಯನ್ನೇ ಅವಲಂಬಿಸಿದೆ. ಸುಮಾರು 4.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಬೆಳೆಯಲಾಗುತ್ತದೆ. 20 ಲಕ್ಷಕ್ಕೂ ಅಧಿಕ ಮಂದಿ ಪಾನ್‌ವಾಲಾಗಳು ಈ ಬೆಳೆಯನ್ನೇ ನಂಬಿದ್ದಾರೆ. ಅಡಕೆ ಮೇಲೆ ನಿಷೇಧ ಜಾರಿಯಾಯಿತು ಎಂದಾದರೆ ಅದನ್ನು ನಂಬಿಕೊಂಡಿರುವ ಪ್ರದೇಶದ ಜನಜೀವನವೇ ಸಂಪೂರ್ಣ ಕುಸಿತ ಕಾಣಲಿದೆ. ಏಕೆಂದರೆ ಈ ಪ್ರದೇಶದಲ್ಲಿ ಹಣಕಾಸಿನ ವ್ಯವಹಾರದ ಬೆಳೆಯೇ ಅಡಕೆ.
ಹಿತ್ತಲ ಗಿಡವೇ ಮದ್ದು
ಶತಮಾನಗಳಿಂದ ಅಡಕೆಯನ್ನು ಬಳಕೆ ಮಾಡುತ್ತಿದ್ದರೂ ನಮ್ಮ ಪೂರ್ವಜರಿಗೆ ಏನೂ ಆಗಲಿಲ್ಲ. ಆರಂಭದಲ್ಲಿ ವೀಳ್ಯದೆಲೆ ಜತೆಗೆ ಅಡಕೆ ಬಳಸಲಾಗುತ್ತಿತ್ತು. ನಂತರ ಅದರ ಜತೆಗೆ ಹೊಗೆಸೊಪ್ಪು ಸೇರಿಕೊಂಡಿತು. ಇದಾದ ಬಳಿಕ ಸೇರ್ಪಡೆಯಾದದ್ದು ಗುಟ್ಕಾ. ಇದೇ ಸಂದರ್ಭದಲ್ಲಿ ಅಡಕೆಗೆ ಬೆಲೆಯೂ ದ್ವಿಗುಣವಾಯಿತು. ಇದು ಬೆಳೆಗಾರರಿಗೆ ನೆಮ್ಮದಿ ತಂದಿತು. ಆದರೆ ಬೆಳೆಗೆ ಕೆಟ್ಟ ಹೆಸರು ಬಂದಿತು. ಈ ಅಂಶವನ್ನು ಬೆಳೆಗಾರರೂ ಒಪ್ಪಿಕೊಳ್ಳುತ್ತಾರೆ.


-ರಾಘವೇಂದ್ರ ಅಗ್ನಿಹೋತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement