ವಿತ್ತ ಪರೀಕ್ಷೆ
ಕಳೆದ ಒಂದು ವರ್ಷದ ಅವಧಿಯಲ್ಲಿ ಆರ್ಥಿಕ ಮಾರುಕಟ್ಟೆಯಲ್ಲಿ ಏನೆಲ್ಲಾ ಬದಲಾವಣೆಗಳು ನಡೆದಿವೆ. ಆ ಬದಲಾವಣೆಗಳಿಂದ ಈ ವರ್ಷದಲ್ಲಿ ಏನೇನು ನಡೆಯುತ್ತವೆ? ಹಣದುಬ್ಬರ ಮತ್ತು ಋಣಾತ್ಮಕ ಗಳಿಕೆ ಆರ್ಥಿಕವಾಗಿ ಹಾಗೂ ಪ್ರಾಕೃತಿಕವಾಗಿ ಕಳೆದುಕೊಂಡದ್ದನ್ನು 2014ರಲ್ಲಿ ಪಡೆಯಬಹುದೆ? ಹೇಗಿದೆ ಈ ವರ್ಷ?
2014 ಚಿಲ್ಲರೆ ವ್ಯಾಪಾರಸ್ಥರಿಗೆ ವಿಭಿನ್ನವಾಗಿರುತ್ತದೆ. ಏಕೆಂದರೆ 2013ರ ಷೇರು ಮಾರುಕಟ್ಟೆ ಆರ್ಥಿಕ ಕುಸಿತ ಕಂಡಿತ್ತು. ಇದಲ್ಲದೆ ಚಿನ್ನ, ರಿಯಲ್ ಎಸ್ಟೇಟ್‌ನಲ್ಲಿಯೂ ಇದರ ಪರಿಣಾಮ ಬೀರದೇ ಇರಲಿಲ್ಲ. ಜಿಡಿಪಿ (ಸಮಗ್ರ ದೇಶೀಯ ಉತ್ಪನ್ನ) ಕಳೆದ ಜುಲೈ- ಸೆಪ್ಟಂಬರ್‌ನಲ್ಲಿ ಶೇ. 4.8ರಷ್ಟು ಇತ್ತು. ಇದನ್ನು ಈ ವರ್ಷದಲ್ಲಿ ಶೇ.4.5 ರಿಂದ ಶೇ.5ರ ಹೆಚ್ಚಾಗಬಹುದು ಎಂದು ಅಂದಾಜಿಲಾಗಿದೆ.
ಪ್ರತಿ ಬಾರಿಯೂ ಚುನಾವಣೆ ನಡೆದ ನಂತರ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯಾಗಿರುವುದನ್ನು ಕಾಣಬಹುದು. ಹಾಗಾಗಿ ಈ ಬಾರಿಯೂ ಸರ್ಕಾರ ಬದಲಾವಣೆಯಾಗಿ ಬಿಜೆಪಿ ಅಧಿಕಾರಿಕ್ಕೆ ಬಂದರೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.
ಕೆಲವು ಆರ್ಥಿಕ ತಜ್ಞರು ದೊಡ್ಡಮಟ್ಟದ ಹಣದುಬ್ಬರ ಮತ್ತು ಬಡ್ಡಿ ದರಗಳು ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ ಎಂಬ ಎಳೆಯನ್ನು ತೆರೆದಿಡುತ್ತಾರೆ. ಫೆಡರಲ್ ರಿಸರ್ವ್ ವಿದೇಶಿ ಸಂಸ್ಥೆಗಳ ಹೂಡಿಕೆಗೆ ಹೆಚ್ಚಿನ ಒಲವು ತೋರುತ್ತಿರುವುದರಿಂದ ಭಾರತೀಯ ಸ್ಟಾಕ್ ಮಾರುಕಟ್ಟೆ ಮತ್ತು ರುಪಾಯಿ ಕುಸಿತ ಕಾಣದಿದ್ದರೂ ಏರಿಕೆ ಕಾಣುವುದು ಕಷ್ಟಸಾಧ್ಯ.
ಷೇರು ಮಾರುಕಟ್ಟೆ
ಸರ್ಕಾರ ಬದಲಾಗುವ ಸಾಧ್ಯತೆ ಇರುವುದರಿಂದ ದಲ್ಲಾಳಿಗಳು ಈಗಾಗಲೇ ತಮ್ಮ ಚಾಣಾಕ್ಷ ಬುದ್ಧಿ ಪ್ರದರ್ಶಿಸಿ ಮುಂದಿನ ಆರ್ಥಿಕ ವರ್ಷವನ್ನು ಸಾಧ್ಯವಾದ ಮಟ್ಟಿಗೆ ಊಹಿಸಿದ್ದು, ದೇಶದ ಆರ್ಥಿಕತೆಯಲ್ಲಿ ದೊಡ್ಡಮಟ್ಟದ ಬದಲಾವಣೆ ಊಹಿಸಲು ಸಾಧ್ಯವಿಲ್ಲ, ಹೆಚ್ಚಿನ ಫಲಿತಾಂಶ ಏನೂ ಕಂಡುಬರುವುದಿಲ್ಲ ಎಂದು ಹೇಳಿದ್ದಾರೆ.
ಆರ್ಥಿಕತೆ ಮತ್ತು ಕಾರ್ಪೊರೇಟ್ ಗಳಿಕೆ ಮೇಲೆ ಸೀಮಿತ ಪರಿಣಾಮ ಬೀರಬಹುದು. ಚುನಾವಣಾ ಫಲಿತಾಂಶ ಮತ್ತು ಆರ್ಥಿಕ ಕುಸಿತ ಭಾರತೀಯ ಆರ್ಥಿಕತೆಗೆ ದೊಡ್ಡ ತಲೆನೋವಾಗಿ ಪರಿಣಮಿಸಬಹುದು.
1991ರಲ್ಲಿ ಪಿ.ವಿ. ನರಸಿಂಹರಾವ್ ಆಡಳಿತದ ಸಂದರ್ಭದಲ್ಲಿ ಕೇವಲ ಮೂರು ತಿಂಗಳಲ್ಲಿ ಶೇ.44ರಷ್ಟು ಷೇರು ಮಾರುಕಟ್ಟೆ ಹೆಚ್ಚಳ ಕಂಡಿತ್ತು. ತೃತೀಯ ರಂಗ ಹಾಗೂ 1999ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಶೇ.32ರಷ್ಟು ಕುಸಿತ, ಯುಪಿಎ ಅಧಿಕಾರಕ್ಕೆ ಬಂದಾಗ 2009ರಲ್ಲಿ ಶೇ.8 ಹೆಚ್ಚಳ ಕಂಡಿತ್ತು.
ಷೇರು ಮಾರುಕಟ್ಟೆ
ಪ್ರಸಕ್ತ ವರ್ಷದ ಪ್ರಾಥಮಿಕ ಹಂತದಲ್ಲಿ ಕೆಲವು ಕ್ಷೇತ್ರಗಳಲ್ಲಿ ಸೀಮಿತಗೊಳ್ಳಬಹುದು. (ಐಟಿ, ಫಾರ್ಮಾಸ್ಯುಟಿಕಲ್, ಖಾಸಗಿ ಒಡೆತನದ ಬ್ಯಾಂಕ್‌ಗಳು).
ಎಲ್ಲ ವರ್ಗದ (ದೊಡ್ಡ- ಚಿಕ್ಕ- ಮಧ್ಯಮ) ಕಂಪನಿಗಳು ಐತಿಹಾಸಿಕ ಮಟ್ಟದಲ್ಲಿ ಸತ್ವ ಪರೀಕ್ಷೆಗೊಳಪಡಲಿವೆ. ಇದು 2014ರ ಚುನಾವಣೆ ಮೇಲೆ ನಿರ್ಧಾರಿತವಾಗುತ್ತದೆ.
ರಾಜಧಾನಿಯಲ್ಲಿ ಮೂಲ ಸೌಕರ್ಯ ಸಂಸ್ಥೆಗಳು, ಸಾರ್ವಜನಿಕ ಒಡೆತನಗಳು ಶೀಘ್ರಗತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಬಹುದು.
ಆಟೋಮೊಬೈಲ್, ಮೂಲ ಸೌಕರ್ಯ, ಭಾರಿ ಕೈಗಾರಿಗಳಿಗೂ ಉತ್ತಮ ಲಾಭಾಂಶ ಗಳಿಸಬಹುದು.
ರಿಯಲ್ ಎಸ್ಟೇಟ್
ಕಳೆದ 5 ವರ್ಷಗಳಲ್ಲಿ ಹೆಚ್ಚಿನ ಹಣ ಹೂಡಿಕೆ ಮಾರುತ್ತಿರುವುದರಲ್ಲಿ ರಿಯಲ್ ಎಸ್ಟೇಟ್ ಮೊದಲ ಸ್ಥಾನದಲ್ಲಿದೆ.
ದೊಡ್ಡ ದೊಡ್ಡ ನಗರಗಳಲ್ಲಿ ಹೂಡಿಕೆದಾರರಿಗೆ ಒತ್ತಡ ಉಂಟಾಗಬಹುದು.
ಹೂಡಿಕೆದಾರರ ಶಕ್ತತೆಯಲ್ಲಿ ಇಳಿತವಾಗಬಹುದು. <
ಸಾಲ
ನಿಶ್ಚಿತ ಠೇವಣಿ ಮೇಲಿನ ಬಡ್ಡಿಯನ್ನು ಶೇ.9 ರಿಂದ 9.5ಕ್ಕೆ ಏರಿಸುವಂತೆ ಮುಂದಿನ ಎರಡು ತಿಂಗಳುಗಳಲ್ಲಿ ಎಲ್ಲ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಬಹುದು.
2013ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.3.5ರಷ್ಟು ಚಿನ್ನ ಕುಸಿತ ಕಂಡಿತ್ತು. ಈ ವರ್ಷ ಅಲ್ಪ ಚೇತರಿಕೆ ಕಾಣಬಹುದು.
-ಎನ್.ಎಲ್. ಶಿವಮಾದು