ವಾಣಿಜ್ಯ

ಇ ಟೈಲ್ ಡೀಟೈಲ್

ಟಿವಿ ನೋಡಿಕೊಂಡು ವಸ್ತುಗಳ ಖರೀದಿ ಹಳತಾದ ಬಳಿಕ ಇ- ಕಾಮರ್ಸ್ ಬಂತು. ನಮ್ಮ ದೇಶದಲ್ಲಿ ಅದು ಜನಪ್ರಿಯಗೊಳ್ಳುತ್ತಿರುವಂತೆಯೇ...

ಟಿವಿ ನೋಡಿಕೊಂಡು ವಸ್ತುಗಳ ಖರೀದಿ ಹಳತಾದ ಬಳಿಕ ಇ- ಕಾಮರ್ಸ್ ಬಂತು. ನಮ್ಮ ದೇಶದಲ್ಲಿ ಅದು ಜನಪ್ರಿಯಗೊಳ್ಳುತ್ತಿರುವಂತೆಯೇ ಮತ್ತೊಂದು ಹೊಸ ವ್ಯವಸ್ಥೆ ನಿಧಾನಕ್ಕೆ ಜನಪ್ರಿಯವಾಗುತ್ತಿದೆ. ಅದುವೇ ಇ-ಟೈಲಿಂಗ್ ಅಂದರೆ ಎಲೆಕ್ಟ್ರಾನಿಕ್ ರಿಟೈಲಿಂಗ್.
ಈ ವ್ಯವಸ್ಥೆಯಲ್ಲಿ ಒಂದೇ ಕಂಪನಿಯ ವಸ್ತುಗಳು ಮಾತ್ರ ದೊರೆಯುತ್ತವೆ. ಉದಾಹರಣೆಗೆ ನಿರ್ದಿಷ್ಟ ಕಂಪನಿ ಉತ್ಪಾದಿಸುವ ವಾಷಿಂಗ್ ಮಷಿನ್, ಫ್ರಿಡ್ಜ್ ಮತ್ತು ಇತರ ಗೃಹೋಪಯೋಗಿ ವಸ್ತುಗಳು ಮಾತ್ರ ಸಿಗುತ್ತವೆ. ಆದರೆ ಈ ವಸ್ತುಗಳನ್ನು ಅಂಗಡಿಯಿಂದ ಖರೀದಿಸುವಂತಿಲ್ಲ. ಬದಲಾಗಿ ಇಂಟರ್‌ನೆಟ್‌ನಲ್ಲಿ ಕಂಪನಿಯ ವೆಬ್‌ಸೈಟ್ ಮೂಲಕ ಅದನ್ನು ಖರೀದಿಸಬೇಕು. ಯಾವುದೇ ತೊಂದರೆ ಆಗದಂತೆ ನಮ್ಮ ಮನೆಗೆ ನೇರವಾಗಿ ವಸ್ತು ತಲಪಿಸುವ ವ್ಯವಸ್ಥೆ ಆಗುತ್ತದೆ.
ನಿಜಕ್ಕೂ ನಮ್ಮ ದೇಶಕ್ಕೆ ಹೊಸ ವ್ಯವಸ್ಥೆ ಇದು. ಏಕೆಂದರೆ ನಮ್ಮ ದೇಶದಲ್ಲಿ ಇ-ಕಾಮರ್ಸ್ ಎನ್ನುವುದೇ ಇನ್ನೂ ಅಂಬೆಗಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ಇ-ಟೈಲಿಂಗ್ ಜನಪ್ರಿಯಗೊಂಡು ಬಲು ದೊಡ್ಡ ಉದ್ದಿಮೆಯ ಗಾತ್ರ ಪಡೆಯಲು ಕನಿಷ್ಠ ಆರು ವರ್ಷಗಳೇ ಬೇಕಾದೀತು.
ಈಗಾಗಲೇ ಪ್ರಮುಖ ಕಂಪನಿಗಳು ಇದೇ ಉದ್ದೇಶಕ್ಕಾಗಿ ವೆಬ್‌ಸೈಟ್ ಸಿದ್ಧಪಡಿಸುತ್ತಿವೆ. ವಿಲ್ಸ್ ಲೈಫ್‌ಸ್ಟೈಲ್‌ನ ಇ-ಸ್ಟೋರ್ ಆರು ತಿಂಗಳ ಹಿಂದೆ ಆರಂಭವಾಯಿತು. ರಿಲಯನ್ಸ್ ರಿಟೈಲ್ ಕೂಡ ಮುಂದಿನ ಎರಡು ತಿಂಗಳಲ್ಲಿ ತನ್ನದೇ ಆದ ರಿಟೈಲ್ ಆನ್‌ಲೈನ್ ಸ್ಟೋರ್ ಅನ್ನು ಆರಂಭಿಸಲಿದೆ.


ಇ-ಟೈಲಿಂಗ್ ಅಂದರೇನು?
ನಿಗದಿತ ಕಂಪನಿಗಳೇ ಇಂಟರ್‌ನೆಟ್ ಮೂಲಕ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರುವ ವ್ಯವಸ್ಥೆ. ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಂಥ ಕಂಪನಿಗಳಲ್ಲಿನ ವ್ಯವಸ್ಥೆಗೂ ಇದಕ್ಕೂ ಭಾರಿ ವ್ಯತ್ಯಾಸ ಉಂಟು.


525
ಬಿಲಿಯನ್ ಡಾಲರ್
ಹಾಲಿ ವರ್ಷ ದೇಶದ ರಿಟೈಲ್ ಮಾರುಕಟ್ಟೆ ಗಾತ್ರ.

13,868
ಕೋಟಿ ರುಪಾಯಿ ಅಥವಾ ಶೇ.0.4 ದೇಶದ ಇ-ಟೈಲಿಂಗ್ ಮಾರುಕಟ್ಟೆ.

1,040
ಬಿಲಿಯನ್ ಡಾಲರ್
2020ರ ವೇಳೆಗೆ ದೇಶದ ರಿಟೈಲ್ ಮಾರುಕಟ್ಟೆಯ ಸಂಭಾವ್ಯ ಗಾತ್ರ.

1,93,000
ಕೋಟಿ ರುಪಾಯಿ
ದೇಶದ ಇ- ಟೈಲಿಂಗ್ ಮಾರ್ಕೆಟ್ ಅಂದರೆ ವಿಶ್ವದ ಇ-ಟೈಲಿಂಗ್ ಮಾರುಕಟ್ಟೆಯ ಶೇ.3ರಷ್ಟು.




ಬಿಕರಿಯಾಗುವ ಕ್ಷೇತ್ರಗಳು
- ವಸ್ತ್ರೋದ್ಯಮ - ಎಲೆಕ್ಟ್ರಾನಿಕ್ಸ್
- ಪುಸ್ತಕಗಳು
- ಸೌಂದರ್ಯವರ್ಧಕ ಮತ್ತು ವೈಯಕ್ತಿಕ ವಸ್ತುಗಳು
- ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳು



ಇ- ವ್ಯಾಪಾರ ನೆಗೆತಕ್ಕೆ ಏನು ಕಾರಣ?
- ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕದಲ್ಲಿ ಹೆಚ್ಚಳ.
-  ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟ.
- 3ಜಿ ದೂರಸಂಪರ್ಕ ವ್ಯವಸ್ಥೆ ವಿಸ್ತರಣೆ.
- ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ವಸ್ತುಗಳ ವಿತರಣೆ.



ಇ ಟೈಲ್‌ನಲ್ಲಿ ದೇಶಿಯ ಕಂಪನಿಗಳು

- ರಿಲಯನ್ಸ್ ರಿಟೈಲ್
- ಟಾಟಾ (ಕ್ರೋಮಾ)
- ಟಾಟಾ ಹೌಸಿಂಗ್
- ಪ್ಯಾನಾಸಾನಿಕ್
- ಫ್ಯೂಚರ್ ಗ್ರೂಪ್
- ಐಟಿಸಿ (ಲೈಫ್‌ಸ್ಟೈಲ್)
- ಬಾಟಾ
- ಮದುರಾ ಗ್ರೂಪ್
- ಗೋದ್ರೇಜ್
- ಡಾಬರ್



ಬಳಕೆದಾರರು (ಮಿಲಿಯನ್‌ಗಳಲ್ಲಿ)

ಮೊಬೈಲ್ ಫೋನ್‌ಗಳು
487- 2014
550- 2020
ಸ್ಮಾರ್ಟ್‌ಫೋನ್‌ಗಳು   
74- 2014
440- 2020
ಪರ್ಸನಲ್ ಕಂಪ್ಯೂಟರ್‌ಗಳು
51- 2014
74- 2020

  -ಸದಾಶಿವ ಕೆ.
khandige29@gmail.com


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT