ವಾಣಿಜ್ಯ

ಮೊದಲ ಹಿನ್ನಡೆ ಈಗಿಲ್ಲ

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಜನ ನಿರೀಕ್ಷಿಸಿದ್ದು ಭಾರತೀಯ ಷೇರು ಪೇಟೆಯ...

 -ಮುಗಿಲು ಚುಂಬಿಸಿದ ಸೂಚ್ಯಂಕ

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಜನ ನಿರೀಕ್ಷಿಸಿದ್ದು ಭಾರತೀಯ ಷೇರು ಪೇಟೆಯ ಸೂಚ್ಯಂಕಗಳು ಆಕಾಶಕ್ಕೇ ಜಿಗಿಯುತ್ತವೆ ಎಂದು. ಅದಕ್ಕೆ ಕಾರಣ ಮೋದಿ ಅವರೂ ಕಾರ್ಪೊರೇಟ್ ವಲಯವನ್ನು ಬಹಿರಂಗವಾಗಿ ಬೆಂಬಲಿಸಿದ್ದೇ.
ಆದರೆ ವಾಸ್ತವದಲ್ಲಿ ಹಾಗಾಗಲಿಲ್ಲ. ಪೇಟೆಯ ಸೂಚ್ಯಂಕಗಳ ಏರಿಕೆಯಲ್ಲಿ ದೊಡ್ಡ ಉತ್ಸಾಹವೇನೂ ಕಂಡುಬರಲಿಲ್ಲ. ಇದು ಎಲ್ಲರಿಗೂ ಆಶ್ಚರ್ಯವಾಗಿಯೇ ಕಂಡಿತ್ತು. ಈಗ ಮೋದಿ ಸರ್ಕಾರದ ಮೂರನೇ ತಿಂಗಳಲ್ಲಿ ಪೇಟೆಯ ಸೂಚ್ಯಂಕಗಳು ಮುಗಿಲನ್ನೇ ಚುಂಬಿಸಲು ಹೊರಟಿವೆ.
ಕಳೆದ ವಾರದಲ್ಲಿ ಒಂದೇ ದಿನ ಸೆನ್ಸೆಕ್ಸ್ 321 ಅಂಶಗಳಷ್ಟು ಹೆಚ್ಚಿದರೆ, ನ್ಯಾಷನಲ್ ಸ್ಟಾಕ್ಸ್ ಎಕ್ಸ್‌ಛೇಂಜ್‌ನ ನಿಫ್ಟಿಯಲ್ಲೂ ದೊಡ್ಡ ರೀತಿಯಲ್ಲೇ ಏರಿಕೆ ನೀಡುತ್ತಿರುವವರು ಯಾರು? ವಿದೇಶಿ ಹೂಡಿಕೆ ಸಂಸ್ಥೆಗಳೇ ಅಲ್ಲವೇ? ಇದಕ್ಕೆ ಮೂಲ ಕಾರಣ, ಈಗ ಪ್ರಕಟವಾಗಿರುವ ಆಶಾದಾಯಕ ಕಾರ್ಪೊರೇಟ್ ವ್ಯವಹಾರದ ವರದಿಗಳೇ. ಅದರ ಪರಿಣಾಮ ಎನ್ನುವಂತೆ, ಟಿಸಿಎಸ್‌ನ ಪೇಟೆ ಬಂಡವಾಳ (ಷೇರು ಮೌಲ್ಯದ ಲೆಕ್ಕ) ಐದು ಲಕ್ಷ ಕೋಟಿ ರು.ಗಳನ್ನು ಮೀರಿದೆ. ಇದು ಭರಾಟೆಯ ಲಕ್ಷಣವೇ.
ಡಿ- ಮ್ಯಾಟ್ ಕಡ್ಡಾಯ
ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್‌ಛೇಂಜ್‌ನ ಬೋರ್ಡ್, ಈಗ ಎಲ್ಲ ಷೇರುಗಳನ್ನು ಗ್ರಾಹಕರು ಡಿ- ಮ್ಯಾಟ್ (ಡಿಜಿಟಲ್) ಸ್ವರೂಪದಲ್ಲೇ ವ್ಯವಹರಿಸುವಂತಾಗಬೇಕೆನ್ನುವ ನಿರ್ಧಾರ ಪ್ರಕಟಿಸಿದೆ. ಗ್ರಾಹಕರ ಹಿತರಕ್ಷಣೆಯೇ ಈ ಆದೇಶದ ಉದ್ದೇಶವಾದರೂ, ಯಾವುದೋ ಕಾಲದ ಹಳೆಯ ಷೇರುಗಳನ್ನು ಹಳೆಯದಾದರೂ ಜೋಪಾನವಾಗಿಟ್ಟುಕೊಂಡಿರುವ ವರ್ಗಕ್ಕೆ ಇದು ನಿಜವಾಗಲೂ ಪೇಚಿನ ವಿಚಾರವೇ.
ಹಳೆಯ ಷೇರುಗಳನ್ನು ಡಿ'ಮ್ಯಾಟ್ ಸ್ವರೂಪಕ್ಕೆ ಬದಲಾಯಿಸಿಕೊಳ್ಳುವುದು ಸುಲಭ ಎನ್ನುತ್ತಾರೆ ಬಲ್ಲವರು. ಆದರೆ ಅನೇಕ ವೇಳೆ ಬದಲಾವಣೆ ಸುಲಭವಲ್ಲ. ಡಿ'ಮ್ಯಾಟ್ ಅಕೌಂಟ್ ಪಡೆಯುವುದು ಸುಲಭ. ಆದರೆ ಆ ಅಕೌಂಟ್‌ಗೆ ಹಳೇ ಷೇರುಗಳನ್ನು ಪರಿವರ್ತಿಸುವುದು ಅಷ್ಟು ಸುಲಭವಲ್ಲ. ನಿಮ್ಮ ಸಹಿ ಸರಿಯಾಗಿಲ್ಲ ಎನ್ನುವಂಥ ಹಲವಾರು ಆಕ್ಷೇಪಗಳನ್ನು ಎದುರಿಸಬೇಕಾಗಿ ಬರುತ್ತದೆ. ಎಲ್ಲವೂ ಸುಗಮವಾಗಿ ನಡೆದರ, ಪೂರ್ಣ ಪರಿವರ್ತನೆಗೆ ಸುಮಾರು ಮೂರು ತಿಂಗಳು ಬೇಕಂತೆ. ಬೇಗ ಕೆಲಸ ಆರಂಭಿಸಿ. ಬಲ್ಲವರನ್ನು ಕೇಳಿ.

ಆದಾಯ ತೆರಿಗೆ ಫರ್ಮಾನ್
ಆದಾಯ ತೆರಿಗೆ ಪಾವತಿಸುವ ಜನ ಈಗಾಗಲೇ ಇಲಾಖೆಗೆ ಒದಗಿಸಿರುವ 'ಪ್ಯಾನ್‌' ಜತೆಯಲ್ಲೇ ಮೊಬೈಲ್ ನಂಬರ್ ಹಾಗೂ ಇ- ಮೇಲ್ ಗುರುತನ್ನು (ವಿಳಾಸ) ರವಾನಿಸಲೇಬೇಕು ಎನ್ನುವ ಒಂದು ಫರ್ಮಾನ್ ಇಲಾಖೆಯಿಂದ ಹೊರಟಿದೆ. ಈ ಕ್ರಮದಿಂದ ಆದಾಯ ತೆರಿಗೆ ಇಲಾಖೆಗೆ ತನ್ನ ಗ್ರಾಹಕರ ಜತೆ ನೇರವಾಗಿ ವ್ಯವಹರಿಸುವುದು ಸಾಧ್ಯ. ಆದರೆ ಸಹಸ್ರ ಸಹಸ್ರ ಸಂಖ್ಯೆ ತೆರಿಗೆದಾರರಿಗೆ ಮೊಬೈಲ್ ಸಂದೇಶಗಳು, ಇ-ಮೇಲ್ ಮೂಲಕ ರವಾನೆಯಾಗುವ ಆದೇಶಗಳನ್ನು ಗ್ರಹಿಸುವ ಶಕ್ತಿ ಇರುವುದಿಲ್ಲ. ಕಂಪ್ಯೂಟರ್ ಇಲ್ಲದವರೂ ಇ- ಮೇಲ್ ವಿಳಾಸ ಇಟ್ಟುಕೊಳ್ಳುವುದು ಸಾಧ್ಯ. ಈ ನಿಯಮ ದೊಡ್ಡ ಗೊಂದಲಕ್ಕೆ ಆಹ್ವಾನವೇ. ನೋಡಬೇಕು ಏನೇನಾಗುತ್ತೋ?

-ಸತ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT