ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ವೋಲ್ವೋ ಎಬಿಬಿ ಒಪ್ಪಂದ

ಬಸ್ ತಯಾರಕ ಸಂಸ್ಥೆ ವೋಲ್ವೋ ಮತ್ತು ಎಬಿಬಿ ಒಪ್ಪಂದ ಮಾಡಿಕೊಂಡಿವೆ. ಅದರ ಪ್ರಕಾರ, ವೋಲ್ವೋ...

Rashmi Kasaragodu
Updated On : 29 Jul 2014, 4:07 am

ಬಸ್ ತಯಾರಕ ಸಂಸ್ಥೆ ವೋಲ್ವೋ ಮತ್ತು ಎಬಿಬಿ ಒಪ್ಪಂದ ಮಾಡಿಕೊಂಡಿವೆ. ಅದರ ಪ್ರಕಾರ, ವೋಲ್ವೋ ಹೊಂದಲಿರುವ ವಿದ್ಯುತ್ ಬಸ್ಸುಗಳ ಚಾರ್ಜರ್, ಸಂಪೂರ್ಣ ವಿದ್ಯುತ್ ಚಾಲಿತ ಬಸ್ಸುಗಳ ನಿರ್ವಹಣೆಯ ಹೊಣೆ ಎಬಿಬಿ ಮಡಿಲಿಗೆ ಬೀಳಲಿದೆ. ಇದರಿಂದಾಗಿ ನಗರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ಬಸ್ಸುಗಳ ಆರಂಭಕ್ಕೆ ಹೊಸ ಅಧ್ಯಾಯ ಬರೆದಂತಾಗಿದೆ. ವೋಲ್ವೋ ವಿದ್ಯುತ್ ಚಾಲಿತ ಬಸ್ಸುಗಳನ್ನು ಪೂರೈಸಿದರೆ, ಎಬಿಬಿ ಉನ್ನತ ಗುಣಮಟ್ಟದ ಚಾರ್ಜಿಂಗ್ ಮತ್ತು ಇತರ ಉಪಕರಣಗಳನ್ನು ವೋಲ್ವೋಗೆ ವಿಶ್ವಾದ್ಯಂತ ಪೂರೈಸಿಕೊಡಲಿದೆ.

ಎಂಟಿಎಸ್‌ಗೆ ಧ್ರುವೆ ಅಧಿಕಾರಿ
ಸಿಸ್ಟೆಮಾ ಶಾಮ್ ಟೆಲಿ ಸರ್ವಿಸ್‌ನ ಎಂಟಿಎಸ್ ದೂರಸಂಪರ್ಕ ಕಂಪನಿಯ ಕರ್ನಾಟಕ ವಲಯಕ್ಕೆ ಹೊಸ ಅಧಿಕಾರಿಯನ್ನು ನೇಮಿಸಲಾಗಿದೆ. ಭಾರ್ತಿ ಏರ್‌ಟೆಲ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಉಮೇಶ್ ಧ್ರುವೆ ಅವರನ್ನು ಎಂಟಿಎಸ್‌ನ ಕರ್ನಾಟಕ ವಲಯದ ಮುಖ್ಯ ನಿರ್ವಹಣಾಧಿಕಾರಿ (ಸಿಓಓ) ಆಗಿ ನೇಮಿಸಲಾಗಿದೆ. ಕಳೆದ ಹಲವು ತಿಂಗಳಿಂದ ಕರ್ನಾಟಕ ವಲಯದ ಸ್ಥಾನ ಭರ್ತಿಯಾಗದೆ ಉಳಿದಿತ್ತು. ಇದರ ಜತೆಗೆ ಉತ್ತರ ಪ್ರದೇಶದ ಪಶ್ಚಿಮ ವಲಯದ ಆರ್ ಕಾಮ್‌ನಲ್ಲಿ ಹಿರಿಯ ಅಧಿಕಾರಿಯಾಗಿದ್ದ ಸಿರಾಜ್ ಅಬ್ಬಾಸಿ ಅವರನ್ನು ನೇಮಿಸಲಾಗಿದೆ.

ಕೆನರಾಗೆ 806.86 ಕೋಟಿ ರು. ಲಾಭ
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೆನರಾ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 806.86 ಕೋಟಿ ರು. ಲಾಭ ಹೊಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ 792.07 ಕೋಟಿ ಲಾಭ ಪಡೆದುಕೊಂಡಿತ್ತು. ಒಟ್ಟಾರೆಯಾಗಿ ಬ್ಯಾಂಕಿನ ಲಾಭದ ಪ್ರಮಾಣದಲ್ಲಿ ಶೇ.1.86ರಷ್ಟು ಹೆಚ್ಚಾಗಿದೆ. ಬ್ಯಾಂಕಿನ ಒಟ್ಟು ಆದಾಯ 10,507.88 ಕೋಟಿ ರು.ನಿಂದ 11,728.01 ಕೋಟಿ ರು.ಗೆ ಏರಿಕೆಯಾಗಿದೆ. ಕಳೆದ ಎಂಟು ತ್ರೈಮಾಸಿಕಗಳಲ್ಲಿ ಬ್ಯಾಂಕಿನ ಲಾಭ 800 ಕೋಟಿ ರು.ಗಿಂತ ದಾಟಿರಲಿಲ್ಲ ಎಂದು ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ದುಬೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement