ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಕ್ಯಾನ್ಸರ್ ಸಂಸ್ಥೆಗೆ ಕೇಶದಾನ

Rashmi Kasaragodu
Updated On : 9 Jun 2014, 2:03 am

ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ಚೆನ್ನೈನ ವಿಮೆನ್ಸ್ ಕ್ರಿಶ್ಚಿಯನ್ ಕಾಲೇಜಿನ ರೋಟಿರ್ಯಾಕ್ಟ್ ಕ್ಲಬ್ ಕೇಶದಾನ ಅಭಿಯಾನ ಆರಂಭಿಸಿದೆ. ಬೆಂಗಳೂರು ಹಾಗೂ ಚೆನ್ನೈನಲ್ಲಿರುವ ಸಲೂನ್‌ಗಳಿಂದ ಕೂದಲುಗಳನ್ನು ಸಂಗ್ರಹ ಮಾಡಿ ಅಡ್ಯಾರ್ ಕ್ಯಾನ್ಸರ್ ಸಂಸ್ಥೆಗೆ ವಿಗ್ ರೂಪದಲ್ಲಿ ದಾನ ಮಾಡಿದೆ. ಸುಮಾರು 40 ಲಕ್ಷ ಮೌಲ್ಯದ 300 ವಿಗ್‌ಗಳನ್ನು ತಯಾರಿಸಲಾಗಿದ್ದು, 3500ಕ್ಕೂ ಅಧಿಕ ದಾನಿಗಳ ನೆರವನ್ನು ಅಭಿಯಾನಕ್ಕೆ ಪಡೆಯಲಾಗಿದೆ. ಕಿಮೋಥೆರಪಿ ಚಿಕಿತ್ಸೆ ಪಡೆದ ಬಡ ರೋಗಿಗಳಿಗೆ ಈ ವಿಗ್‌ನ್ನು ನೀಡಲಾಗುತ್ತಿದೆ.
ಟಿ ಚಾಕಲೇಟ್ ಬಿಡುಗಡೆ
ಐಟಿಸಿ ಸಂಸ್ಥೆಯು 'ಕ್ಯಾಂಡಿಮ್ಯಾನ್ ಜೆಲೀಷಿಯಸ್‌' ಚಾಕಲೇಟ್‌ನ್ನು ಪರಿಚಯಿಸಿದೆ.  ನೈಜ ಸ್ಟ್ರಾಬೆರಿ ಹಣ್ಣಿನಿಂದ ತಯಾರಿಸಿರುವ ಸ್ವಾಧಭರಿತ ಈ ಜೆಲ್ಲಿಯಲ್ಲಿ ನಿಜವಾದ ಸ್ಟ್ರಾಬೆರಿ ಹಣ್ಣನ್ನು ತಿಂದ ಅನುಭವ ದೊರೆಯಲಿದೆ.  ಸ್ಟ್ರಾಬೆರಿ ಜೆಲೀಷಿಯಸ್ 1ಗೆ ಭಾರತದಾದ್ಯಂತ ಎಲ್ಲ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಟಿ  ಮೇರು ಕ್ಯಾಬ್‌ಗೆ ಪ್ರಶಸ್ತಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ ಸರ್ವಶ್ರೇಷ್ಠ ಸೇವಾ ಪ್ರಶಸ್ತಿ ಹಾಗೂ ಟ್ರಾನ್ಸ್‌ಫಾರ್ಮೇಷನಲ್ ಟೆಕ್ ಐಡಿಯಾ ಆಫ್ ದಿ ಇಯರ್ ಪ್ರಶಸ್ತಿಗೆ ಪ್ರತಿಷ್ಠಿತ ಮೆರು ಕ್ಯಾಬ್ಸ್ ಪಾತ್ರವಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ ಸಂಸ್ಥೆಯು ತನ್ನ 6ನೇ ವರ್ಷದ ಯಶಸ್ವಿ ಕಾರ್ಯಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಬಿಐಎಎಲ್‌ನ ವಿವಿಧ ವಿಭಾಗಗಳಲ್ಲಿ ಸರ್ವಶ್ರೇಷ್ಠ ಸೇವೆಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದೆ.
ಟಿ ಐಷಾರಾಮಿ ಟಾಟಾ ಮನೆ
ಟಾಟಾ ಹೌಸಿಂಗ್ ಡೆವಲಪ್‌ಮೆಂಟ್ ಕಂಪನಿಯ ಟಾಟಾ ವ್ಯಾಲ್ಯು ಹೋಮ್ಸ್ ಸಂಸ್ಥೆಯು ಬೆಂಗಳೂರಿನಲ್ಲಿ ನ್ಯೂ ಹೆವನ್ ಐಷಾರಾಮಿ ಮನೆಗಳನ್ನು ನಿರ್ಮಿಸಿದೆ. ವಿಶಾಲವಾದ 3 ಕೊಠಡಿಗಳನ್ನೊಳಗೊಂಡ ಈ ಮನೆಗಳು ರು. 49.90 ಲಕ್ಷ ಬೆಲೆಗೆ ಲಭ್ಯವಿದೆ. ಮನೆಯ ಖರೀದಿಸಲು ರು. 30 ಸಾವಿರ ಮುಂಗಡ ಪಾವತಿಯನ್ನು ಆನ್‌ಲೈನ್‌ನಲ್ಲಿಯೇ ಮಾಡಬಹುದು. ಆದರೆ ಆನ್‌ಲೈನ್ ಖರೀದಿಗೆ ಕೇವಲ 10 ಮನೆಗಳು ಮಾತ್ರ ಲಭ್ಯವಿದೆ. ಟಾಟಾ ವ್ಯಾಲ್ಯು ಹೋಮ್ಸ್ ಕಂಪನಿಯು ನ್ಯೂ ಹೆವನ್ ವಸತಿ ಯೋಜನೆಯ ಹೆಸರಿನಲ್ಲಿ ಈಗಾಗಲೇ ಬೈಸಾರ್, ಚೆನ್ನೈ ಹಾಗೂ ಅಹಮದಾಬಾದ್‌ನಲ್ಲಿ ನಿರ್ಮಾಣವಾಗಿದ್ದು, ನಿರ್ಮಾಣವಾಗಿರುವುದು 4ನೇ ಯೋಜನೆಯಾಗಿದೆ.
ಟಿ  ಬಂಟ್ ಸೋಲಾರ್ ಶುರು
ಬೆಂಗಳೂರಿನಲ್ಲಿ ಬಂಟ್ ಸೋಲಾರ್ ಸಂಗ್ರಹಾಲಯ ಆರಂಭವಾಗಿದೆ. ಸೌರಶಕ್ತಿ ಉಪಕರಣಗಳ ಬಗೆಗಿನ ಮಾಹಿತಿ, ಮಾರಾಟ, ಸಂಶೋಧನೆ ಹಾಗೂ ಅಧ್ಯಯನಕ್ಕೆ ನೆರವಾಗುವ ನಿಟ್ಟಿನಲ್ಲಿ ಬಂಟ್ ಸೋಲಾರ್ ಇಂಡಿಯಾ ಸಂಸ್ಥೆಯು ಈ ಮಳಿಗೆ ಆರಂಭಿಸಿದೆ. ಸೂರ್ಯನ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ನಾನಾ ಬಗೆಯಲ್ಲಿ ಅನುಕೂಲ ಪಡೆಯಲು ಅವಕಾಶ ಮಾಡಿಕೊಡುವ ಉಪಕರಣಗಳ  ಸರಣಿಯನ್ನೇ ಮಾರುಕಟ್ಟೆಗೆ ಒದಗಿಸುತ್ತಿದೆ. ಈ ನಿಟ್ಟಿನಲ್ಲಿಯೇ ವಿನೂತನ ಶೈಲಿಯ ಬಂಟ್ ಸೋಲಾರ್ ಸಂಗ್ರಹಾಲಯವನ್ನು ನಾಗರಬಾವಿಯಲ್ಲಿ ಆರಂಭಿಸಿದೆ.
ಟಿ 'ಉಂಬ್ರೋ' ಶಾಖೆ ಶುರು
ಫುಟ್ಬಾಲ್ ಶೂ ಹಾಗೂ ಪಾದರಕ್ಷೆಗಳ ಪ್ರತಿಷ್ಠಿತ ಬ್ರಿಟಿಷ್ ಬ್ರಾಂಡ್ 'ಉಂಬ್ರೋ' ಭಾರತದಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಈಗ 'ಉಂಬ್ರೋ' ಉಡುಪುಗಳ ವಿಭಾಗಕ್ಕೆ ವಿಸ್ತರಿಸಿದೆ. ಕ್ರ್ಯೂನೆಕ್, ಟೀ ಶರ್ಟ್, ಟ್ರಾಕ್ ಪ್ರಾಂಟ್ ಹಾಗೂ ಟ್ರ್ಯಾಕ್ ಸೂಟ್‌ಗಳು ಕ್ರೀಡಾಳುಗಳು ಹಾಗೂ ಕ್ರೀಡಾಸಕ್ತರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಎಲ್ಲ ಪ್ಲಾನೆಟ್ ಸ್ಪೋರ್ಟ್ಸ್‌ನ ಕ್ರೀಡಾ ಮಳಿಗೆಗಳಲ್ಲಿ ಹಾಗೂ ಆಯ್ದ ಹೈಪರ್ ಸಿಟಿ ಮಳಿಗೆಗಳಲ್ಲಿ ಉಂಬ್ರೋ ಉಡುಗೆಗಳು ಲಭ್ಯವಿದೆ. ಮೈಂತ್ರಾ, ಜಬಾಂಗ್, ಫ್ಲಿಪ್‌ಕಾರ್ಟ್ ಹಾಗೂ ಅಮೆಝಾನ್ ಇ-ವಾಣಿಜ್ಯ ಮಳಿಗೆಗಳಲ್ಲಿಯೂ ಲಭ್ಯವಿದೆ.
ಟಿ  ಓಮ್ಯಾಕ್ಸ್ ಜೋಡಣೆ ಘಟಕ
ನಗರದ ಬೊಮ್ಮಸಂದ್ರದಲ್ಲಿನ ಘಟಕದಲ್ಲಿ ಓಮ್ಯಾಕ್ಸ್ ಆಟೋಸ್ ಲಿಮಿಟೆಡ್ ಸಂಪೂರ್ಣ ವಾಹನ ಜೋಡಣೆ ವ್ಯವಸ್ಥೆ ಪ್ರಾರಂಭಿಸಿದೆ. ಖ್ಯಾತ ಟ್ರಕ್ ಉಪಕರಣ ತಯಾರಿಕಾ ಸಂಸ್ಥೆಯೊಂದು 20 ಟ್ರಕ್ ಜೋಡಣೆ ಕಾರ್ಯವನ್ನು ಸಂಸ್ಥೆಗೆ ನೀಡಿದೆ. 2014ರಲ್ಲಿ ಓಮ್ಯಾಕ್ ತನ್ನ ಮೊಟ್ಟ ಮೊದಲ ಟ್ರಕ್ ಅಸೆಂಬ್ಲಿಯನ್ನು ಯಶಸ್ವಿಯಾಗಿ ಆರಂಭಿಸಿದ್ದು, 1200 ಕೋಟಿ ಮೌಲ್ಯದ ಬಂಡವಾಳ ಹೂಡಿರುವ ಓಮ್ಯಾಕ್ಸ್ ಆಟೋಸ್ ಸಂಸ್ಥೆಯು ದ್ವಿಚಕ್ರ, ತ್ರಿಚಕ್ರ, ಆಫ್ ಹೈವೇ, ಪ್ರಯಾಣಿಕರ ಕಾರು, ವಾಣಿಜ್ಯ ವಾಹನ ಮತ್ತು ರೇಲ್ವೆ ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದ್ದು, ವಾರ್ಷಿಕ 10 ಸಾವಿರ ವಾಹನ ಗುರಿ ಹೊಂದಿರುವುದಾಗಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement