ತ್ರಿ ಮಂಕೀಸ್ `ಮ್ಯಾಂಗೋ ಸೈಡರ್' ಬಿಡುಗಡೆ
ನವೀನ ಶೈಲಿಯ ತ್ರಿ ಮಂಕೀಸ್ ಬ್ರ್ಯೂಪಬ್ನಲಿಭಿನ್ನ ಬೀಯರ್ ಮತ್ತು ನವೀನ...
ಬೆಂಗಳೂರು: ನವೀನ ಶೈಲಿಯ ತ್ರಿ ಮಂಕೀಸ್ ಬ್ರ್ಯೂಪಬ್ನಲಿಭಿನ್ನ ಬೀಯರ್ ಮತ್ತು ನವೀನ ಸ್ವಾಧೀನದ ಪಾನೀಯಗಳಿಗೆ ಹೆಸರಾಗಿದ್ದು, ಭಾರತದ ಮೊದಲ ಮ್ಯಾಂಗೋ ಸೈಡರ್ ಪಾನೀಯವನ್ನು ಸಿಗ್ನೇಚರ್ ಕಲೆಕ್ಷನ್ ಆಗಿ ಇಂದು ಬಿಡುಗಡೆಗೊಳಿಸಿತು.
ಶೇ 100ರಷ್ಟು ಪ್ರಾಕೃತಿಕ ದತ್ತವಾದ, ರಫ್ತು ಗುಣಮಟ್ಟದ `ನುಜ್ವಿದ್' ಮಾವು ತನ್ನ ಭಿನ್ನ ಸ್ವಾದದಿಂದಾಗಿ ಹೆಸರಾಗಿದ್ದು, ತ್ರಿ ಮಂಕೀಸ್ ಆಕರ್ಷಕ ಸೈಡರ್ ಆಗಿ ಅಭಿವೃದ್ಧಿಪಡಿಸಿದೆ. ನೀರೂರಿಸುವ ಈ ಪಾನೀಯವು ಸ್ವಲ್ಪ ಸಕ್ಕರೆ ಅಂಶ ಮತ್ತು ಹಣ್ಣಿನ ಸ್ವಾದವನ್ನು ಹೊಂದಿದೆ.
ಮ್ಯಾಂಗೋ ಸೈಡರ್ನಲ್ಲಿ ಆಲ್ಕೋಹಾಲ್ ಪ್ರಮಾಣ ಶೇ 5.6ರಷ್ಟಿದೆ. ಗ್ರೀಲ್ಡ್ ಸಾಸೇಜ್,
ಹುರಿದ ಮೀನು, ಎಣ್ಣೆಯಲ್ಲಿ ಬೇಯಿಸಿದ ಖಾದ್ಯದೊಂದಿಗೆ ಇದರ ಸೇವೆ ಅತ್ಯುತ್ತಮ ಅನುಭವ ನೀಡಲಿದೆ.
ಮ್ಯಾಂಗೋ ಸೈಡರ್ ದರ 330 ಎಂ.ಎಲ್ ಬಾಟಲೀಗೆ ರೂ. 273 ಇದ್ದು, 500 ಎಂ.ಎಲ್. ಪ್ರಮಾಣಕ್ಕೆ ರೂ. 323 ಇರುತ್ತದೆ.
ತ್ರಿ ಮಂಕೀಸ್ ಬ್ರ್ಯೂಪಬ್ ಕುರಿತು:
ತ್ರಿ ಮಂಕೀಸ್ ಇದು ಮೂವರು ಮೊದಲ ಪೀಳಿಗೆಯ ಉದ್ಯಮಿಗಳಾದ ಫಾನಿ ರಾಮ ಕೃಷ್ಣರೆಡ್ಡಿ ಕೊತ್ವಾಲಿ, ವಂಶಿ ಕೃಷ್ಣ ರೆಡ್ಡಿ ಕೊತ್ವಾಲಿ ಮತ್ತು ಸುಧಾಕರ ರೆಡ್ಡಿ ಯನ್ನಂ ಅವರ ಉದ್ಯಮವಾಗಿದೆ. ಇವರು ಐಟಿ ವೃತ್ತಿಪರರಾಗಿದ್ದಾರೆ. ತ್ರಿ ಮಂಕೀಸ್ ಎಂಬುದು ಬೆಂಗಳೂರಿಗರಿಗೆ ಜಾಗತಿಕವಾಗಿ ಅತ್ಯುತ್ತಮವಾದ ಅನುಭವ ನೀಡುವುದು ಇವರ ಗುರಿಯಾಗಿದೆ. ತ್ರಿ ಮಂಕೀಸ್ ಒಟ್ಟಾರೆ 13,500 ಚದರ ಅಡಿ ವಿಸ್ತೀರ್ಣದ ಸ್ಥಳದಲ್ಲಿ ವ್ಯಾಪಿಸಿದೆ. ಬ್ರ್ಯೂಪಬ್ನ ಮುಖ್ಯ ಆಕರ್ಷಣೆಯೆಂದರೆ ಐಲ್ಯಾಂಡ್ ಬಾರ್ 140 ಅಡಿ ಉದ್ದನೆಯ ಕೌಂಟರ್ ತನ್ನ ನವೀನತೆ ಹಾಗೂ ಸೊಬಗಿನಿಂದಾಗಿ ಗಮನಸೆಳೇಯಲಿದೆ.