ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಜೈಕಾಂನಿಂದ ಮಿನಿ ಡಿಜಿಟಲ್ ರೆಕಾರ್ಡರ್

Mainashree
Updated On : 23 Jun 2014, 12:26 pm

ಜೈಕಾಮ್ ಎಲೆಕ್ಟ್ರಾನಿಕ್ ಸೆಕ್ಯುರಿಟಿ ಸಿಸ್ಟಮ್ ಲಿ. ಹೈಬ್ರಿಡ್ ರೇಂಜ್ ಮಿನಿ ಡಿಜಿಟಲ್ ವೀಡಿಯೋ ರೆಕಾರ್ಡರ್‌ನು ಪರಿಚಯಿಸುತ್ತಿದೆ. ಇದರಲ್ಲಿ ಐಪಿ ಮತ್ತು ಅನಲಾಗ್ ಕ್ಯಾಮರಾಗಳನು ಕನೆಕ್ಟ್ ಮಾಡುವ ವಿಶಿಷ್ಟ ಸದುಪಾಯವಿದೆ. ಹೈಬ್ರಿಡ್ ಮಿನಿ ಡಿವಿಆರ್ ಮೂಲಕ ಒಂದೇ ಸ್ಥಳದಲ್ಲಿ ಐಪಿ ಮತ್ತು ಅನಲಾಗ್‌ನು ಬಳಸಬೇಕಾದ ಅಗತ್ಯವನು ಹೆಚ್ಚಿನ ಹೊಂದಾಣಿಕೆ ಮತ್ತು ಹೂಡಿಕೆಯಲ್ಲಿ ನಿರ್ವಹಿಸಬಹುದಾಗಿದೆ.
ಈ ಉತ್ಪನ 4, 8 ಮತ್ತು 16 ಚಾನಲ್‌ಗಳಲ್ಲಿ ದೊರೆಯುತ್ತದೆ. ಇದರಲ್ಲಿ ಆಖಂ 9 RISC ಇದು ಚಿಪ್‌ಗೆ ಹೆಚ್ಚಿನ ಸಾಮರ್ಥ್ಯ ಒದಗಿಸುತ್ತದೆ. ಅಧಿಕ ಮಲ್ಟಿ ಮೀಡಿಯಾ ಪ್ರೊಸೆಸಿಂಗ್ ಸಾಮರ್ಥ್ಯ ಹೊಂದಿದ್ದು ಮಲ್ಟಿ ವೀಡಿಯೊ ಇನ್‌ಪುಟ್ ಎನ್‌ಕೋಡಿಂಗ್ ಮತ್ತು ಅಂಟೆಲಿಜೆಂಟ್ ವೀಡಿಯೋ ಅನಾಲಿಸಿಸ್ ಸಾಧ್ಯವಾಗುತ್ತದೆ. ಒಂದು ಡಿಎಸ್‌ಪಿ ಚಿಪ್ ವೀಡಿಯೊ 656 ಇನ್‌ಪುಟ್ ಹೊಂದಿರುವ 8ರಿಂದ 10 ಚಾನಲ್‌ಗಳಿಗೆ ಅವಕಾಶ  ನೀಡುತ್ತದೆ. ಇದರಲ್ಲಿ ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್, ಹೈಬ್ರಿಡ್ ಮಿನಿ ಡಿವಿಆರ್‌ನಲ್ಲಿ ಸಿಂಕ್ರೊನಸ್ ಪ್ಲೇಬ್ಯಾಕ್ ಪೆಸಿಲಿಟ್ ಅಂದರೆ ನಿರ್ದಿಷ್ಟ ಸಮಯದಲ್ಲಿ ಒಂದೇ ಸಾರಿ ವಿವಿಧ ಕ್ಯಾಮರಾಗಳ ವೀಡಿಯೋ ಫೂಟೇಜ್ ವೀಕ್ಷಿಸಬಹುದು.

ಮಾರುಕಟ್ಟೆಯಲ್ಲಿದೆ ಗಿಟ್ಸ್ ಉತ್ಪನಗಳು
ಗಿಟ್ಸ್ ಸಂಸ್ಥೆ ಇದೀಗ ಪನೀರ್ ರೆಡಿ ಮೀಲ್ಸ್ ಉತ್ಪನಗಳನು ಬಿಡುಗಡೆ ಮಾಡಿದೆ ವಿವಿಧ ದೇಶಗಳಲ್ಲೂ ಲಭ್ಯವಿದೆ. ಮನೆ ಅಡುಗೆ ಬಯಸುವವರಿಗೆ ಸೂಕ್ತ ಆಯ್ಕೆ ಇದಾಗಿದ್ದು ವಿದ್ಯಾರ್ಥಿಗಳು ಹಾಗೂ ವಿದೇಶ ಪ್ರವಾಸದಲ್ಲಿರುವವರಿಗೆ ತಮ್ಮೊಂದಿಗೆ ಮನೆ ಅಡುಗೆಯನು ಕೊಂಡೊಯ್ಯಲು ಸಾಧ್ಯವಾಗಿದೆ. ಗಿಟ್ಸ್ ಆಹಾರ ಉತ್ಪನಗಳಲ್ಲಿ ಯಾವುದೇ ಪ್ರಿಸರ್ವೇಟಿವ್ಸ್‌ಗಳು ಇರುವುದಿಲ್ಲ, ಪ್ರತಿ ಪದಾರ್ಥಗಳು ಆರೋಗ್ಯಕರವಾಗಿದೆ. ಇದು ಕಡಿಮೆ ಪ್ರಮಾಣದ ಕ್ಯಾಲೊರಿ ಗುಣಮಟ್ಟವನು ಕಾಯ್ದುಕೊಳ್ಳುತ್ತದೆ. ಮಟರ್ ಪನೀರ್ 79, ಪನೀರ್ ಮಖಾನಿ, ಪನೀರ್ ಮಸಾಲಾ, ಪಾಲಕ್ ಪನೀರ್ 89ಕ್ಕೆ ಲಭ್ಯವಿರುತ್ತದೆ.

ಇಂಟೆಕ್ಸ್, ಮೊಜಿಲಾ ಸ್ಮಾರ್ಟ್‌ಫೋನ್
ಇಂಟೆಕ್ಸ್ ಹಾಗೂ ಮೊಜಿಲಾ ಫೈಯರ್‌ಫಾಕ್ಸ್ ಜಂಟಿಯಾಗಿ ಕಡಿಮೆ ದರದ ಸ್ಮಾರ್ಟ್‌ಫೋನ್ ಕ್ಲೌಡ್ ಎಫ್‌ಎಕ್ಸ್ ಬಿಡುಗಡೆ ಮಾಡಿದೆ. ಇಂಟೆಕ್ಸ್ ಕ್ಲೌಡ್ ಎಪ್‌ಎಕ್ಸ್ ಸ್ಮಾರ್ಟ್‌ಫೋನ್ 2000ಕ್ಕಿಂತಲೂ ಕಡಿಮೆ ದರದಲ್ಲಿ ಆಗಸ್ಟ್ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಇದು ಎಲ್ಲಾ ಫೀಚರ್ಸ್ ಪಡೆದಿದ್ದು ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ಲಭ್ಯವಾಗಲಿದೆ. ಮೊಜಿಲಾ ಫೈಯರ್‌ಫಾಕ್ಸ್ ಹೊಂದಿರುವ, ಅಗ್ಗದ ಸ್ಮಾರ್ಟ್‌ಫೋನ್ ಇದಾಗಿದೆ. ಡುಯಲ್ ಸಿಮ್ ಸೌಲಭ್ಯವಿದ್ದು, 305 ಇಂಚಿನ ಪರದೆ, 1ಗಿಗಾ ಹರ್ಟ್ಸ್ ಪ್ರೊಸೆಸರ್, 2 ಎಂಪಿ ಕ್ಯಾಮರಾ, ವೈ-ಫೈ ಹಾಗೂ ಬ್ಲೂಟೂತ್ ಸೇರಿ ಹಲವು ಫೀಚರ್ಸ್ ಹೊಂದಿದೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಜಂಟಿ ಪ್ರಾಜೆಕ್ಟ್
ಯುನೈಟೆಡ್ ಟೆಕಾಲಜೀಸ್ ಕಾರ್ಪೊರೇಷನ್ ಹಾಗೂ ಖಕಖ ಮಕ್ಕಳ ಹಳ್ಳಿ ಜಂಟಿಯಾಗಿ ಪ್ರಾಜೆಕ್ಟ್ ವಿದ್ಯಾವನು ಪ್ರಾರಂಭಿಸಿದೆ. ಭಾರತದಲ್ಲಿನ 9ನಗರಗಳಲ್ಲಿ ಹರಡಿರುವ ಖಕಖ ಹಳ್ಳಿಗಳಲ್ಲಿನ 800 ಮಕ್ಕಳ ಶಿಕ್ಷಣಕ್ಕೆ ನೆರವು ಒದಗಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಇದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದಲ್ಲದೆ ಶಾಲಾಶಿಕ್ಷಣದಲ್ಲಿ ಸುಧಾರಿಸುವಂತೆ ಮಾಡಲು ಮಾರ್ಗದರ್ಶನ ಹಾಗೂ ಹೆಚ್ಚುವರಿ ನೆರವನು ನೀಡುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement