ಸನ್ ಡೈರೆಕ್ಟ್ನಿಂದ ನೂತನ ವೆಬ್ಸೈಟ್
ಗ್ರಾಹಕರಿಗೆ ತ್ವರಿತವಾಗಿ ಸೇವೆ ಒದಗುವ ನಿಟ್ಟಿನಲ್ಲಿ ಸನ್ ಡೈರೆಕ್ಟ್ ಡಿಟಿಎಚ್ ಸೇವಾ ಸಂಸ್ಥೆ ನೂತನ ವೆಬ್ಸೈಟ್ ಆರಂಭಿಸಿದೆ. ಸನ್ ಡೈರೆಕ್ಟ್ನ ಲಭ್ಯ ಕೊಡುಗೆಗಳು, ರೀಚಾರ್ಜ್ ಹಾಗೂ ಹೊಸ ಸಂಪರ್ಕಗಳನ್ನು ಈ ವೆಬ್ಸೈಟ್ (ಢಿಢಿಢಿ.ಡ್ಡಟಿಜ್ಝ್ಠಜ್ಛಡಿ.್ಝಟಿ)ನಿಂದ ಪಡೆಯಬಹುದು. ನೂತನ ವೆಬ್ಸೈಟ್ ಕುರಿತಂತೆ ಮಾತನಾಡಿರುವ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್, 'ನೂತನ ವೆಬ್ಸೈಟ್ ಗ್ರಾಹಕ ಸ್ನೇಹಿಯಾಗಿದೆ. ತಮಗೆ ಬೇಕಿರುವ ಕೊಡುಗೆ ಹಾಗೂ ಪ್ಯಾಕೇಜ್ಗಳನ್ನು ಇಲ್ಲಿಯೇ ಆಯ್ಕೆಮಾಡಿಕೊಳ್ಳಬಹುದು' ಎಂದಿದ್ದಾರೆ.
ಸನ್ಫೀಸ್ಟ್ನಿಂದ ಹೊಸ ಬಿಸ್ಕೆಟ್ ಫಾರ್ಮ್ಲೈಟ್
ಐಟಿಸಿ ಫುಡ್ಸ್ನ ಸನ್ಫೀಸ್ಟ್ ಬಿಸ್ಕೆಟ್ ತಯಾರಿಕೆ ಸಂಸ್ಥೆಯು ಫಾರ್ಮ್ಲೈಟ್ ಎಂಬ ನೂತನ ಉತ್ಪನ್ನವನ್ನು ಬಿಡುಗಡೆಮಾಡಿದೆ. ನೈಸರ್ಗಿಕ ಓಟ್ಸ್ ಮತ್ತು ವೀಟ್ ಫೈಬರ್ನ್ನು ಒಳಗೊಂಡಿರುವ ಸನ್ಫೀಸ್ಟ್ ಫಾರ್ಮ್ಲೈಟ್ ಎರಡು ವಿಭಿನ್ನ ಸ್ವಾದಗಳಲ್ಲಿ ಲಭ್ಯವಿದೆ. ಬಾದಾಮಿ ಹಾಗೂ ಒಣದ್ರಾಕ್ಷಿಯ ಸ್ವಾದವನ್ನು ಈ ಬಿಸ್ಕೆಟ್ ಹೊಂದಿದೆ. 150 ಗ್ರಾಂನ ಪ್ಯಾಕ್ಗಳಲ್ಲಿ ಲಭ್ಯವಿರುವ ಬಿಸ್ಕೆಟ್ ಆರೋಗ್ಯಕ್ಕೆ ಉತ್ತಮ ಎಂದು ಸಂಸ್ಥೆ ಹೇಳಿಕೊಂಡಿದೆ.
ಸೂಟ್ ತಯಾರಿಕೆ ಘಟಕ ಪ್ರಾರಂಭ
ಅರವಿಂದ್ ಲಿಮಿಟೆಡ್ ಮತ್ತು ಜಪಾನ್ ಗುಡ್ಹಿಲ್ ಕಾರ್ಪೊರೇಷನ್ ಸಂಸ್ಥೆಯಿಂದ ನಗರದ ಬೊಮ್ಮಸಂದ್ರದಲ್ಲಿ ಸೂಟ್ ತಯಾರಿಕೆ ಘಟಕ ಪ್ರಾರಂಭಿಸಲಾಗಿದೆ. ದೇಶೀಯ ಹಾಗೂ ಸಾಗರೋತ್ತರ ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಘಟಕ ತೆರೆಯಲಾಗಿದೆ. ವಾರ್ಷಿಕವಾಗಿ ಸುಮಾರು 3.50 ಲಕ್ಷ ಜಾಕೆಟ್ ಹಾಗೂ 6 ಲಕ್ಷ ಪ್ಯಾಂಟ್ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಮೊದಲ ಆರ್ಥಿಕ ವರ್ಷದಲ್ಲಿ ಸುಮಾರು 100 ಕೋಟಿ ವಹಿವಾಟಿನ ಗುರಿ ಇರಿಸಿಕೊಳ್ಳಲಾಗಿದೆ. ಜಂಟಿ ಸಹಭಾಗಿತ್ವದಿಂದ ಅರವಿಂದ್ ಲಿಮಿಟೆಡ್ ಸಂಸ್ಥೆಯು ಮೊದಲ ಬಾರಿಗೆ ಸೂಟ್ ತಯಾರಿಕೆಗೆ ಮುಂದಾಗಿದೆ. ಇದರಿಂದ ಅರವಿಂದ್ ಸಂಸ್ಥೆಯು ಪುರುಷರ ಬಟ್ಟೆಯಲ್ಲಿ ಎಲ್ಲ ಪ್ರಕಾರಗಳ ಉತ್ಪಾದನೆ ಪ್ರಾರಂಭಿಸಿದಂತಾಗಿದೆ. ಸುಮಾರು 50 ವರ್ಷಗಳ ಅನುಭವವನ್ನು ಹೊಂದಿರುವ ಗುಡ್ಹಿಲ್ನ ಸಹಯೋಗ ವಿಶ್ವದರ್ಜೆ ಸೂಟ್ ಉತ್ಪಾದನೆಗೆ ನೆರವಾಗಲಿದೆ ಎಂದು ಅರವಿಂದ್ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕ ಕುಲಿನ್ ಲಾಲ್ಬಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಟಾ ಸ್ಕೈ ಡಿಟಿಎಚ್ ಕರೋಕೆ ಸೇವೆ
ವಿಶ್ವದಲ್ಲಿಯೇ ಮೊದಲ ಬಾರಿಗೆ ಟಾಟಾ ಸ್ಕೈ ಡಿಟಿಎಚ್ ಕರೋಕೆ ಸೇವೆಯನ್ನು ಒದಗಿಸುತ್ತಿದೆ. ಕರೋಕೆ ಹಂಗಾಮಾ ಡಾಟ್ ಕಾಂ ಪಾಲುದಾರಿಕೆಯಲ್ಲಿ ನೂತನ ವಿಡಿಯೋ ಆಧಾರಿತ ಮ್ಯೂಸಿಕ್ ಸೌಲಭ್ಯ ಆರಂಭಿಸಿದೆ. ಇದರಲ್ಲಿ ಮ್ಯೂಸಿಕ್ ವಿಡಿಯೋಗಳ ಜತೆ ಸಾಹಿತ್ಯವೂ ಪ್ರದರ್ಶನವಾಗುತ್ತದೆ. ಪ್ರತಿ ತಿಂಗಳವೂ ಹಾಡುಗಳ ಸಂಖ್ಯೆ ಹೆಚ್ಚಾಗುತ್ತದೆ. ಹಾಡುಗಾರಿಕೆ ಕಲಿಯುವವರಿಗೆ ಇದೊಂದು ಸುವರ್ಣವಕಾಶವಾಗಿರುತ್ತದೆ. ಇದರ ವಾರ್ಷಿಕ ಶುಲ್ಕ 1990.
ಟಾಟಾ ಹೌಸಿಂಗ್ ಮನೆ ಖರೀದಿ ಕೊಡುಗೆ
ಜೇಮ್ಷೆಡ್ಜಿ ಟಾಟಾ ಅವರ 175ನೇ ಜನ್ಮದಿನಾಚರಣೆ ಪ್ರಯುಕ್ತ ಶೇ.3ರಷ್ಟು ಮುಂಗಡ ಹಣ ನೀಡಿ ಟಾಟಾ ಹೌಸಿಂಗ್ನಲ್ಲಿ ಮನೆ ಖರೀದಿಸುವ ಅವಕಾಶ ಒದಗಿಸಿದೆ. ಟಾಟಾ ಕ್ಯಾಪಿಟಲ್ ಜತೆಗೂಡಿ ಈ ಕೊಡುಗೆ ನೀಡುತ್ತಿದ್ದು, ಮಾ.3ಕ್ಕೆ ಅಂತ್ಯಗೊಳ್ಳುತ್ತಿದೆ. ಶೇ.3ರ ಮುಂಗಡ ಪಾವತಿ ಬೆಂಗಳೂರಿನ ದಿ ಪ್ರೊಮೊಂಟ್ ಬಡಾವಣೆಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯ ಭಾಗವಾಗಿಯೇ ಟಾಟಾ ಕ್ಯಾಪಿಟಲ್ನಿಂದ ಶೇ.10.20 ಬಡ್ಡಿ ದರದಲ್ಲಿ ಸಂಪೂರ್ಣ ಸಾಲವನ್ನು ನೀಡಲಾಗುತ್ತಿದೆ. ಮುಂದಿನ ಆರು ತಿಂಗಳವರೆಗೆ ಶೇ.7ರಷ್ಟು ಮುಂಗಡ ಹಣ ಪಾವತಿ ಮಾಡುವ ಯೋಜನೆ ಚಾಲ್ತಿಯಲ್ಲಿರುತ್ತದೆ.
'ಏರ್ಸೆಲ್ ಜಾಯ್ಸ್' ಹೊಸ ಯೋಜನೆ
ಏರ್ಸೆಲ್ ಟೆಲಿಕಾಂ ಸಂಸ್ಥೆಯು ತನ್ನ ಗ್ರಾಹಕರಿಗೆ 'ಏರ್ಸೆಲ್ ಜಾಯ್ಸ್' ಎಂಬ ಯೋಜನೆ ಪ್ರಾರಂಭಿಸಿದೆ. ಈ ಯೋಜನೆ ಮೂಲಕ ಮೈಡಾಲಾ.ಕಾಂ ಶಾಪಿಂಗ್ ಮೂಲಕ ಶೇ.90ರವರೆಗೆ ರಿಯಾಯಿತಿಯನ್ನು ಏರ್ಸೆಲ್ ಗ್ರಾಹಕರು ಪಡೆಯಬಹುದಾಗಿದೆ. ಲೈಫ್ಸ್ಟೈಲ್, ಪರ್ಸನಲ್ ಕೇರ್ ಹಾಗೂ ಇತರೆ ಶಾಪಿಂಗ್ನ್ನು ಇಲ್ಲಿ ಮಾಡಬಹುದಾಗಿದೆ. ಪ್ರೀ-ಪೇಡ್ ಹಾಗೂ ಪೋಸ್ಟ್ ಪೇಡ್ ಗ್ರಾಹಕರು ಇದರ ಲಾಭ ಪಡೆಯಬಹುದಾಗಿದ್ದು, ದಿನದ ಹಾಗೂ ಮಾಸಿಕ ಶುಲ್ಕವನ್ನು ಭರಿಸಬೇಕಾಗುತ್ತದೆ.
ಥೈಲ್ಯಾಂಡ್ ಪ್ರವಾಸೋದ್ಯಮ ಪ್ರಾಧಿಕಾರದಿಂದ ರೋಡ್ ಶೋ
ಥೈಲ್ಯಾಂಡ್ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಥೈಲ್ಯಾಂಡ್ ಪ್ರವಾಸೋದ್ಯಮ ಪ್ರಾಧಿಕಾರವು ನಗರದಲ್ಲಿ ಇತ್ತೀಚಿಗೆ ರೋಡ್ ಶೋ ನಡೆಸಿತು. ಈ ಕಾರ್ಯಕ್ರಮದಲ್ಲಿ ಸುಮಾರು 165 ಟ್ರಾವೆಲ್ ಏಜೆಂಟ್ಗಳು ಭಾಗವಹಿಸಿದ್ದರು. ಥೈಲ್ಯಾಂಡ್ನ ನೂತನ ಪ್ರವಾಸೋದ್ಯಮ ನೀತಿಯ ಬಗ್ಗೆ ಏಜೆಂಟ್ರಿಗೆ ಮಾಹಿತಿ ನೀಡಲಾಯಿತು. ಫೆಬ್ರವರಿ ಎರಡನೇ ವಾರದಲ್ಲಿ ಚುನಾವಣೆ ಮುಗಿದಿರುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಗೆ ಇನ್ನಷ್ಟು ಪೂರಕ ವಾತಾವರಣವಿದೆ. ಐಷಾರಾಮಿ ಹಾಗೂ ಸಾಮಾನ್ಯ ಪ್ರವಾಸಕ್ಕೆ ಥೈಲ್ಯಾಂಡ್ ಹೇಳಿಮಾಡಿಸಿದಂತಿದೆ. ಭಾರತೀಯ ಪ್ರವಾಸಿಗರಿಗೆ ಇಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿ ಪಿಚ್ಚೈ ರಕ್ತಸಿನ್ಹ ಹೇಳಿದ್ದಾರೆ.ಅಕ್ವಾಗಾರ್ಡ್ ಜಲ
ಪರೀಕ್ಷೆ ಕಿಟ್ ವಿತರಣೆ
ನೀರಿನ ಗುಣಮುಟ್ಟ ಪರೀಕ್ಷಿಸುವ ಅಕ್ವಾಗಾರ್ಡ್ ಜಲ ಪರೀಕ್ಷೆ ಕಿಟ್ನ್ನು ಯುರೇಕಾ ಫೋರ್ಬ್ಸ್ ಸಂಸ್ಥೆಯು ನಗರದ 22 ಸಾವಿರ ವಿದ್ಯಾರ್ಥಿಗಳಿಗೆ ವಿತರಿಸಿದೆ. ಬೆಂಗಳೂರಿಗರು ಕುಡಿಯುವ ನೀರು ಕಲುಷಿತವೇ ಎಂಬುದನ್ನು ಪರೀಕ್ಷಿಸಲು ಈ ಅಭಿಯಾನ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಕುಡಿಯವ ನೀರನ್ನು ಈ ಕಿಟ್ನಿಂದ ಪರೀಕ್ಷಿಸಬಹುದಾಗಿದೆ. ಆ ಮೂಲಕ ನೀರಿನಲ್ಲಿರುವ ರಾಸಾಯನಿಕ ಹಾಗೂ ಸಾಂಕ್ರಾಮಿಕ ರೋಗಕಾರಕಗಳನ್ನು ಪತ್ತೆಮಾಡಬಹುದಾಗಿದೆ. ದೇಶಾದ್ಯಂತ ಈ ಅಭಿಯಾನ ನಡೆಸಲಾಗಿದ್ದು, ಒಟ್ಟು 3 ಲಕ್ಷ ವಿದ್ಯಾರ್ಥಿಗಳಿಗೆ ಕಿಟ್ ನೀಡಲಾಗಿದೆ.
ಅಕ್ವಾಗಾರ್ಡ್ ಜಲ ಪರೀಕ್ಷೆ ಕಿಟ್ ವಿತರಣೆ
ನೀರಿನ ಗುಣಮುಟ್ಟ ಪರೀಕ್ಷಿಸುವ ಅಕ್ವಾಗಾರ್ಡ್ ಜಲ ಪರೀಕ್ಷೆ ಕಿಟ್ನ್ನು ಯುರೇಕಾ ಫೋರ್ಬ್ಸ್ ಸಂಸ್ಥೆಯು ನಗರದ 22 ಸಾವಿರ ವಿದ್ಯಾರ್ಥಿಗಳಿಗೆ ವಿತರಿಸಿದೆ. ಬೆಂಗಳೂರಿಗರು ಕುಡಿಯುವ ನೀರು ಕಲುಷಿತವೇ ಎಂಬುದನ್ನು ಪರೀಕ್ಷಿಸಲು ಈ ಅಭಿಯಾನ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಕುಡಿಯವ ನೀರನ್ನು ಈ ಕಿಟ್ನಿಂದ ಪರೀಕ್ಷಿಸಬಹುದಾಗಿದೆ. ಆ ಮೂಲಕ ನೀರಿನಲ್ಲಿರುವ ರಾಸಾಯನಿಕ ಹಾಗೂ ಸಾಂಕ್ರಾಮಿಕ ರೋಗಕಾರಕಗಳನ್ನು ಪತ್ತೆಮಾಡಬಹುದಾಗಿದೆ. ದೇಶಾದ್ಯಂತ ಈ ಅಭಿಯಾನ ನಡೆಸಲಾಗಿದ್ದು, ಒಟ್ಟು 3 ಲಕ್ಷ ವಿದ್ಯಾರ್ಥಿಗಳಿಗೆ ಕಿಟ್ ನೀಡಲಾಗಿದೆ.