ಸಾಮಾಜಿಕ ಜಾಲತಾಣವನ್ನು ಆಧರಿಸಿದ ಗ್ರಾಹಕ ಸಂಬಂಧದ ನಿರ್ವಹಣೆ ಮಾರುಕಟ್ಟೆ ಕಳೆದವರ್ಷ 191 ಕೋಟಿ ಡಾಲರ್ಗಳಷ್ಟು ಇದ್ದದ್ದು 20,18,908 ಕೋಟಿ ಡಾಲರ್ಗಳ ಪ್ರಮಾಣಕ್ಕೆ ಬೆಳವಣಿಗೆ ಕಾಣಲಿದೆ. ಇದರಲ್ಲಿ ಸಮಗ್ರ ವಾರ್ಷಿಕ ವೃದ್ಧಿ ದರ ಶೇ.36.5ರಷ್ಟು ಇರಲಿದೆ.
ಆದರೆ, ನಾವು ಯಾವಾಗ ಸಾಮಾಜಿಕ ತಾಣ ಮತ್ತು ಗ್ರಾಹಕ ಸಂಬಂಧ ನಿರ್ವಹಣೆ ಕುರಿತು ಮಾತನಾಡುತ್ತೇವೆಯೋ, ಆಗ ಈ ಅಂಶಗಳು ಪ್ರಸ್ತುತ ವಾಣಿಜ್ಯಿಕ ವಹಿವಾಟಿನಲ್ಲಿ ಅಷ್ಟೇನೂ ಜನಪ್ರಿಯವಾಗಿಲ್ಲ. ಆದರೆ ಸಾಮಾಜಿಕ ತಾಣಗಳಲ್ಲಿ ಆಗುತ್ತಿರುವ ಕ್ಷಿಪ್ರಗತಿಯ ಬದಲಾವಣೆಗಳು ಮತ್ತು ಗ್ರಾಹಕರು ಇವುಗಳಲ್ಲಿನ ಬದಲಾವಣೆಗಳನ್ನು ಹೇಗೆ ಬಳಸಿಕೊಳ್ಳಬಲ್ಲರು ಎಂಬುದನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅಂಥ ಬದಲಾವಣೆಗಳನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವುದೇ ಈಗ ಯಾವುದೇ ಕಂಪನಿಗೆ ಎದುರಾಗಿರುವ ಆರಂಭಿಕ ಹಂತದಲ್ಲಿನ ಸವಾಲಾಗಿದೆ.
ಟಾಟಾ ಡೊಕೊಮೊಗೆ ಈ ಸಾಮಾಜಿಕ ತಾಣ ಎಂಬುದು ಕೇವಲ ಜಾಹೀರಾತು ನೀಡುವ ಅಥವಾ ಚಟುವಟಿಕೆಯಿಂದ ಇರುವ ಸಾಧಾರಣ ವೇದಿಕೆಯಾಗಿಯಷ್ಟೇ ಬೇಕಾಗಿಲ್ಲ. ಅದೊಂದು ಹೊಸ ಬಗೆಯ ವಹಿವಾಟಿಗೆ, ಭಿನ್ನ ಸ್ವರೂಪದ ಪ್ರಕ್ರಿಯೆಗೆ ಬಹಳ ಆಳದಲ್ಲಿ ಅನುಕೂಲಕಾರಿಯಾದ ವಾಣಿಜ್ಯ ವಹಿವಾಟು ವೇದಿಕೆಯಾಗಿ ಪ್ರಯೋಜನಕ್ಕೆ ಬರಬೇಕಿದೆ. ನೇರವಾಗಿ ಹಾಗೂ ಅರ್ಥಪೂರ್ಣವಾಗಿ ಮತ್ತು ಲೆಕ್ಕಕ್ಕೆ ಸಿಗುವಂಥ ಫಲಿತಾಂಶವನ್ನು ಒದಗಿಸುವಂಥ ವಾಣಿಜ್ಯ ವಹಿವಾಟಿನ ಸಾಮಾಜಿಕ ತಾಣವಾಗಿ ಲಭ್ಯವಾಗಬೇಕಿದೆ. ಅಲ್ಲದೆ, ಕಂಪನಿ ಒಟ್ಟಾರೆ ಕಾರ್ಯತಂತ್ರ ಮತ್ತು ಹೊಸ ಬಗೆಯ ವಾಣಿಜ್ಯ ವಹಿವಾಟು ಸೂತ್ರಗಳಿಗೆ ಸಮರ್ಥ ಮಾಧ್ಯಮವಾಗಿ ಬೇಕಿದೆ.
(ಲೇಖಕರು ಟಾಟಾ ಡೊಕೊಮೊದ ಡಿಜಿಟಲ್ ಬಿಸಿನೆಸ್ ಮುಖ್ಯಸ್ಥರು ಮತ್ತು ಎಸೋಸಿಯೇಟ್ ವೈಸ್ ಪ್ರಸಿಡೆಂಟ್)
-ಪ್ರವೀಣ್ ಗುಪ್ತಾ