ವಾಣಿಜ್ಯ

ಮಕ್ಕಳ ಕಲ್ಯಾಣ

ಕುಟುಂಬಕ್ಕೆ ನಾವು ಆದ್ಯತೆ ಕೊಡಲೇಬೇಕು. ಅದರಲ್ಲೂ ಮಕ್ಕಳಿಗೆ ವಿಶೇಷ ಪ್ರಾಮುಖ್ಯ ನೀಡಬೇಕು. 'ಮನೆಯೇ ಮೊದಲ ಪಾಠ ಶಾಲೆ' ಎಂಬ ನೀತಿಯಿಂದ ಹಿಡಿದು ಅವರು ಬೆಳೆದು ದೊಡ್ಡವರಾದ ಮೇಲೆ ಸ್ನೇಹಿತರಾಗುವಲ್ಲಿಯವರೆಗೆ ನಾವು ಅವರಿಗೆ ಹೆಗಲಾಗಲೇಬೇಕು. ಅವರ ವಿವಿಧ ತಳಮಳಗಳಿಗೆ ಹೆತ್ತವರು ಸ್ಪಂದಿಸಲೇಬೇಕು.
ಇಂಥ ವೇಳೆಯಲ್ಲಿ ನಾವು ಮಕ್ಕಳಿಗಾಗಿ ತೆಗೆದುಕೊಳ್ಳುವ ನಿರ್ಧಾರಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಮತ್ತು ಇತರ ಅಗತ್ಯಗಳಿಗಾಗಿ ವಿಶೇಷ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಪೋಷಕರಿಗೆ ಅಥವಾ ಹೆತ್ತವರಿಗೆ ಸವಾಲಾಗಿ ಪರಿಣಮಿಸುವುದು ಮಕ್ಕಳ ವಿದ್ಯಾಭ್ಯಾಸ. ಅದಕ್ಕಾಗಿಯೇ ಹೆಚ್ಚಿನ ವೆಚ್ಚವಾಗುತ್ತದೆ. ಇದಕ್ಕಾಗಿ ಮಕ್ಕಳಿಗೆ ಅನುಕೂಲವಾಗುವ ವಿಮಾ ಯೋಜನೆಗಳು ಮಾರುಕಟ್ಟೆಯಲ್ಲಿವೆ. ಇವು ಅತ್ಯಂತ ಕಷ್ಟಕರವಾದ ಸಂದರ್ಭಗಳಲ್ಲಿ ನೆರವಿಗೆ ಬರುತ್ತವೆ.
ಕೆಲವೊಂದು ಸಲ ಜೀವನ ಶೈಲಿಯೂ ಪ್ರಮುಖ  ಪಾತ್ರವಹಿಸುತ್ತದೆ. ಎಂಥ ಕಷ್ಟ ಬಂದರೂ ಮಕ್ಕಳು ಕಷ್ಟಕರವಾದ ಜೀವನ ಸಾಗಿಸುವಂತಾಗಬಾರದು. ಅದಕ್ಕಾಗಿ ಹೆತ್ತವರು ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಇದಕ್ಕಾಗಿಯೂ ವಿಮೆಗಳಲ್ಲಿ ಅವಕಾಶ ಉಂಟು. ಹೀಗಾಗಿ, ಅದನ್ನೆಲ್ಲ ಸದುಪಯೋಗ ಪಡಿಸಿಕೊಳ್ಳುವುದು ಒಳ್ಳೆಯದು.
(ಲೇಖಕರು ಅವಿವಾ ಲೈಫ್ ಇನ್ಶೂರೆನ್ಸ್‌ನ ಸಿಇಒ ಮತ್ತು ಎಂಡಿ)

-ಟಿ.ಆರ್. ರಾಮಚಂದ್ರನ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ