ಕೆವಿನ್- ಟ್ರೆಂಡ್ಸ್ ಇನ್ ವೋಗ್ ಒಪ್ಪಂದ
ಕೆವಿನ್ ಕೇರ್ ಸಲೂನ್ ಉದ್ದಿಮೆ 'ಟ್ರೆಂಡ್ಸ್ ಇನ್ ವೋಗ್' ಕಂಪನಿ ಜತೆ ಬ್ಯೂಟಿ ಸಲೂನ್ ಕೈಗಾರಿಕೆಯಲ್ಲಿ ಮಹಿಳಾ ಉದ್ಯಮಿಗಳ ಉತ್ತೇಜಿಸಲು ಭಾರತೀಯ ಮಹಿಳಾ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಕೆವಿನ್ ಕೇರ್ ಸಿಎಂಡಿ ಸಿ.ಕೆ.ರಂಗನಾಥನ್ ಅವರು ಭಾರತೀಯ ಮಹಿಳಾ ಬ್ಯಾಂಕ್ ಸಿಎಂಡಿ ಉಷಾ ಅನಂತ ಸುಬ್ರಮಣಿಯನ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಗ್ರಿನ್ ಟ್ರೆಂಡ್ಸ್ 2014-15ನೇ ಸಾಲಿನಲ್ಲಿ 500 ಸಲೂನ್ ಸ್ಥಾಪಿಸುವ ಗುರಿ ಹೊಂದಿದೆ. ಭಾರತೀಯ ಸಂಘಟಿತ ಸಲೂನ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಮೊಬೈಲ್ ಮತ್ತು ಆನ್‌ಲೈನ್ ಚೆಕ್ ಇನ್ ಸೇವೆ ಒದಗಿಸಲಿದೆ.
ಬೇರೆ ಬೇರೆ ಹಿನೆಲೆಯುಳ್ಳ ಮಹಿಳೆಯರು ಈಗ ಬ್ಯೂಟಿ ಸಲೂನ್ ಕ್ಷೇತ್ರದತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಮಹಿಳಾ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಉದ್ಯಮ ಬಲಿಷ್ಠಗೊಳಿಸಲು ಶೇ.40 ರಿಂದ ಶೇ.60ರಷ್ಟು ಹೊಸ ಸಲೂನ್‌ಗಳ ಮಾಲೀಕತ್ವವನು ಮಹಿಳಾ ಫ್ರಾಂಚೈಸಿಗಳು ಹೊಂದಬೇಕೆನುವ ನಿರೀಕ್ಷೆ ಇದೆ ಎಂದು ಟ್ರೆಂಡ್ಸ್ ಇನ್ ವೋಗ್ ವ್ಯವಹಾರಗಳ ಮುಖ್ಯಸ್ಥ ಆರ್.ಗೋಪಾಲಕೃಷ್ಣನ್ ಹೇಳಿದರು. ಮಹಿಳೆಯರು ಉದ್ಯಮಿಗಳಾಗಲು ಭಾರತದ ಬ್ಯೂಟಿ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳು ಇವೆ ಎಂದು ಭಾರತೀಯ ಮಹಿಳಾ ಬ್ಯಾಂಕ್ ಸಿಎಂಡಿ ಉಷಾ ಅನಂತಸುಬ್ರಮಣಿಯನ್ ಹೇಳಿದರು.
ಓರಿಫ್ಲೇಮ್ ಸನ್ ಕೇರ್
ಹೊಸ ಉತ್ಪನ ಮಾರುಕಟ್ಟೆಗೆ
ಬೇಸಿಗೆ ಬಿರು ಬಿಸಿಲಿನಿಂದ ಸೂಕ್ತ ರಕ್ಷಣೆಗಾಗಿ ಓರಿಫ್ಲೇಮ್ ನೂತನ ಸನ್ ಕೇರ್ ಉತ್ಪನಗಳನು ಹೊರ ತಂದಿದೆ. ಸೂರ್ಯನ ಕಿರಣಗಳಿಂದ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚು. ಇದರಿಂದ ಮೊಡವೆಗಳು, ಚರ್ಮ ಒಣಗುವಿಕೆಯಿಂದ ಚೈತನ್ಯ ಇಲ್ಲದಂತಾಗುತ್ತದೆ. ಆದರೆ, ಓರಿಫ್ಲೇಮ್ ಅಲ್ಟ್ರಾ ಮಾಡರ್ನ್ ಸನ್ ಝೋನ್ ಉತ್ಪನಗಳು ಸೆಲ್ಯೂಲರ್ ಪ್ರೊಟೆಕ್ಷನ್ ಟೆಕಾಲಜಿ ಒಳಗೊಂಡಿದೆ. ಯುವಿಎ ಫಿಲ್ಟರ್ಸ್, ಯುವಿಬಿ ಫಿಲ್ಟರ್ಸ್ ಹಾಗೂ ವಿಟಮಿನ್-ಇ ಸಮ್ಮಿಶ್ರಣ ಪಡೆಯಬಹುದು. ಯುವಿಎ ಫಿಲ್ಟರ್ಸ್ ಚರ್ಮ ವಯಸ್ಸಾಗುವಿಕೆ, ಸುಕ್ಕಿನಿಂದ ಉತ್ತಮ ರಕ್ಷಣೆ ನೀಡುತ್ತದೆ. ಯುವಿಬಿ ಫಿಲ್ಟರ್ಸ್ ಸನ್‌ಬರ್ನ್ ಹಾಗೂ ಮೊಡವೆಗಳಿಂದ ರಕ್ಷಣೆ ನೀಡುತ್ತದೆ. ಅಂದ ಹಾಗೇ ವಿಟಮಿನ್ ಇ ಸತ್ವವು ಚರ್ಮದ ಆರೋಗ್ಯವನು ಕಾಪಾಡುವುದರ ಜತೆಗೆ ತ್ವಚೆಯ ತೇವಾಂಶವನು ಹಿಡಿದಿಡುವಲ್ಲಿ ನೆರವಾಗುತ್ತದೆ.
ಶತಾಯು ಆಯುರ್ವೇದ ಸಂಸ್ಥೆ
16ನೇ ವೆಲ್‌ನೆಸ್ ಸೆಂಟರ್ ಆರಂಭ
ನೈಸರ್ಗಿಕ ವಸ್ತುಗಳು ಹಾಗೂ ಅಪ್ಪಟ ಆಯುರ್ವೇದಿಕ್ ಸಾಮಗ್ರಿಗಳಿಂದ ಕೂಡಿದ ಸೌಂದರ್ಯವರ್ಧಕಗಳು ಬಹಳ ಪರಿಣಾಮಕಾರಿ. ಹೀಗಾಗಿ ಇಂತಹ ವಸ್ತುಗಳನು ಮಹಿಳೆಯರು ಹೆಚ್ಚು ಬಳಸಬೇಕು ಎಂದು ನಟಿ ಶ್ವೇತಾ ಶ್ರೀವಾಸ್ತವ್ ಹೇಳಿದರು. ನಗರದ ಉತ್ತರಹಳ್ಳಿಯಲ್ಲಿರುವ ಶತಾಯು ಆಯುರ್ವೇದ ಸಂಸ್ಥೆ 16ನೇ ವೆಲ್‌ನೆಸ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ ಸೌಂದರ್ಯ ಚಿಕಿತ್ಸೆಗಳಿಗೆ ಮಾರು ಹೋಗಿರುವ ನಾನು ಕಳೆದೊಂದು ವರ್ಷದಿಂದ ನಿಯಮಿತವಾಗಿ ಈ ಚಿಕಿತ್ಸೆ ಪಡೆಯುತ್ತಿದ್ದೇನೆ. ಇದು ನನ ಸೌಂದರ್ಯ ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ಇದೇ ವೇಳೆ ಮಾತನಾಡಿದ ಶಾಸಕ ಎಂ.ಕೃಷ್ಣಪ್ಪ, ಆಯುರ್ವೇದ ಎಂದರೆ ಕೇರಳ ಎಂದುಕೊಳ್ಳುವವರೇ ಹೆಚ್ಚು. ಆದರೆ, ಕಳೆದ 112 ವರ್ಷಗಳಿಂದ ನಮ್ಮ ರಾಜ್ಯದಲ್ಲೇ ಆಯುರ್ವೇದ ಬಳಸಿ, ಪಾಲಿಸಿಕೊಂಡು ಬಂದಿರುವ ಶತಾಯು ಆಯುರ್ವೇದ ಸಂಸ್ಥೆ ಕಾರ್ಯ ಶ್ಲಾಘನೀಯ. ಹಲವು ವರ್ಷಗಳ ಸತತ ಸಂಶೋಧನೆ, ಮತ್ತು ಪ್ರಯತಗಳ ಫಲವಾಗಿ ಶತಾಯು ಆಯುರ್ವೇದ ಸಂಸ್ಥೆ ಅನುಸರಿಸುತ್ತಿರುವ ಚಿಕಿತ್ಸಾ ಪದ್ಧತಿಗಳು ಉತ್ತಮವಾಗಿವೆ ಎಂದರು.
ವೋಡಾಫೋನ್ 3ಜಿ
ರೋಮಿಂಗ್ ಸೇವೆ
3ಜಿ ರೋಮಿಂಗ್ ಸೇವೆ ಆರಂಭಿಸಲು ಮೊಬೈಲ್ ಸೇವಾ ಸಂಸ್ಥೆಗಳಿಗೆ ಟಿಡಿಎಸ್‌ಎಟಿ ಅನುಮತಿ ನೀಡಿರುವುದರಿಂದ ವೋಡಾಫೋನ್ ಈಗ ಕರ್ನಾಟಕದಲ್ಲಿ 3ಜಿ ರೋಮಿಂಗ್ ಸೇವೆ ಆರಂಭಿಸಿದೆ. 3ಜಿ 100 ಎಂಬಿಗೆ 100, 1ಜಿಬಿಗೆ 250, 2ಜಿಬಿಗೆ 450, 3 ಜಿಬಿಗೆ 650, 4 ಜಿಬಿಗೆ 750, 5 ಜಿಬಿಗೆ 850, 8 ಜಿಬಿಗೆ 1250 ಮತ್ತು 12 ಜಿಬಿಗೆ 1599 ನಿಗದಿಪಡಿಸಿದೆ. ಪೋಸ್ಟ್‌ಪೇಯ್ಡ್ ಗ್ರಾಹಕರು ಇದರ ಜತೆಗೆ ಆ್ಯಡ್ ಆನ್ ಸೇವೆಯಾಗಿ ಬೂಸ್ಟರ್ ಪ್ಯಾಕ್ಸ್‌ನು ಬಿಲ್‌ಸೈಕಲ್‌ವರೆಗೆ ಪಡೆಯಬಹುದು. ಇದರಲ್ಲಿ 300 ಎಂಬಿಗೆ 100, 1 ಜಿಬಿಗೆ 250, 2 ಜಿಬಿಗೆ450 ಇರಲಿದೆ. ಪ್ರಿಪೇಯ್ಡ್ ಪ್ಲಾನ್‌ಗಳು 30 ಎಂಬಿಗೆ 8ರಿಂದ ಆರಂಭವಾಗಲಿದ್ದು 1 ದಿನದ ಕಾಲಾವಧಿ ಇರುತ್ತದೆ. 10 ಜಿಬಿ 1502 ವರೆಗಿನ ಪ್ಲಾನ್‌ಗಳಿದ್ದು ಇದರ ಕಾಲಾವಧಿ 30 ದಿನಗಳು.
ಮನಸೂರೆಗೊಳಿಸುವ ಲಿವಾ ಬಟ್ಟೆಗಳು
ಭಾರತೀಯ ಮೇಳ ಪ್ರೇರೆಪಿತ ವಿನ್ಯಾಸ ಹಾಗೂ ಚಿತ್ತಾಕರ್ಷಕ ಲಿವಾ ಬಟ್ಟೆಯಿಂದ ತಯಾರಿಸಲ್ಪಟ್ಟ ಗ್ಲೋಬಲ್ ದೇಸಿ ಸ್ಪ್ರಿಂಗ್ ಸಮ್ಮರ್ 2014 ಸಂಗ್ರಹ ಶ್ರೇಣಿಯ ಉಡುಗೆಗಳು ಈ ಬೇಸಿಗೆ ಮಾಸದಲ್ಲಿ ಮನಸೂರೆಗೊಳಿಸಲಿವೆ. ಲಿವಾ, ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಗಳ ವತಿಯಿಂದ ನೈಸರ್ಗಿಕ ಫೈಬರ್‌ಗಳಿಂದ ತಯಾರಿಸಿದ ಹೊಸ ತಲೆಮಾರಿನ ಬಟ್ಟೆಯಾಗಿದೆ. ನೈಸರ್ಗಿಕ ನೂಲಿನಿಂದ ಹೆಣೆಯಲ್ಪಟ್ಟ ಫ್ಲೂಯಿಡ್ ಫ್ಯಾಬ್ರಿಕ್ ಲಿವಾ ಅತ್ಯಂತ ಮೃಧು ಹಾಗೂ ಆರಾಮದಾಯಕ ಅನುಭವ ನೀಡುತ್ತದೆ. ಜತೆಗೆ ನಿಮ್ಮ ಅಂಗಾಂಗಗಳು ಸುಲಭವಾಗಿ ಚಲಿಸುವುದು ಸಾಧ್ಯವಾಗುತ್ತದೆ. ನೈಸರ್ಗಿಕ ಫೈಬರ್‌ಗಳಿಂದ ತಯಾರಾದ ಲಿವಾ ಬೇಸಿಗೆ ಮಾಸದಲ್ಲಿ ಸರಿಯಾಗಿ ಗಾಳಿಯಾಡಲು ಅನುವು ಮಾಡುತ್ತದೆ. ಮಸ್ಟರ್ಡ್, ಟ್ಯಾಂಗ್ರಿನ್, ಡೀಪ್ ಬ್ಲೂ, ಲೈಂ ಗ್ರೀನ್ ಹಾಗೂ ಕೆಂಪು ವರ್ಣಗಳಲ್ಲಿ ಈ ಉಡುಗೆಗಳು ಲಭ್ಯವಿವೆ ಎಂದು ಕಂಪನಿ ತಿಳಿಸಿದೆ.
ವಿಡಿಯೋಕಾನ್ ನೂತನ
ಏರ್ ಕಂಡಿಷನರ್ ಬಿಡುಗಡೆ
ವಿಡಿಯೋಕಾನ್ ಸಂಸ್ಥೆ ಕ್ರಾಂತಿಯುತ ಎಂಪಿಸಿಎಸ್ ತಂತ್ರಜ್ಞಾನ ಹೊಂದಿರುವ ನೂತನ ಏರ್ ಕಂಡೀಷನರ್‌ಗಳನು ಬಿಡುಗಡೆ ಮಾಡಿದೆ. ಮಲ್ಟಿ ಪಾಯಿಂಟ್ ಕೂಲಿಂಗ್ ಸಿಸ್ಟಮ್ ಹೊಂದಿರುವ ಹಾಗೂ ವಿದ್ಯುತ್ ಉಳಿತಾಯ ಮಾಡಬಲ್ಲ ಏರ್ ಕಂಡೀಷನರ್ ಇದಾಗಿದೆ. ಸ್ಪ್ಲಿಟ್ ಹಾಗೂ ವಿಂಡೋ ವಿಭಾಗದಲ್ಲಿನ 32 ನೂತನ ಮಾದರಿಗಳನು ಪರಿಚಯಿಸಲಾಗಿದೆ. ಸದ್ಯ ಇರುವ ಶೇ.10ರಷ್ಟು ಮಾರುಕಟ್ಟೆ ಶೇರುಗಳನು ದುಪ್ಪಟ್ಟುಗೊಳಿಸುವ ಗುರಿ ಹೊಂದಿದೆ. ಅಲ್ಲದೇ ಶೇ.50ರಷ್ಟು ಮಾರಾಟ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ನೂತನ ಎಂಪಿಸಿಎಸ್ ತಂತ್ರಜ್ಞಾನದಿಂದ ಅತ್ಯುತ್ತಮ ಕೂಲಿಂಗ್ ಲಭ್ಯ. ಈ ನಿಟ್ಟಿನಲ್ಲಿ ಉತ್ಪನದ ವಿನ್ಯಾಸದ ಮೇಲೆ ಹೆಚ್ಚಿನ ಒತ್ತು ನೀಡುವ ಮೂಲಕ ಉತ್ತಮ ತಂತ್ರಜ್ಞಾನ ಪಡೆದಿದೆ. ಸೂಪರ್ ಫಾಸ್ಟ್ ಕೂಲಿಂಗ್ ಜತೆಗೆ ವಿದ್ಯುತ್ ಉಳಿತಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. 32 ಮಾದರಿ ಎಸಿಗಳು ಬಿಳಿ, ಕೆಂಪು ಹಾಗೂ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಾಗಲಿವೆ. ಏಪ್ರಿಲ್ ಅಂತ್ಯದ ವೇಳೆಗೆ ಮೆಟ್ರೋ ನಗರಗಳಲ್ಲಿ ಲಭ್ಯವಾಗಲಿದ್ದು ನಂತರ ಟೈರ್ 2, 3 ನಗರಗಳಲ್ಲಿ ಮಾರುಕಟ್ಟೆಗೆ ಬರಲಿವೆ.
'ಟಿಯುವಿ ಎಸ್‌ಯುಡಿ' ಸಂಸ್ಥೆಯಿಂದ
ರಫ್ತು ವಸ್ತುಗಳಿಗೆ ಪ್ರಮಾಣಪತ್ರ
ಸಾಗರ ಉತ್ಪನಗಳು ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲು ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಚಟುವಟಿಕೆಯ ಸಮರ್ಥ ಸಂಸ್ಥೆಯೊಂದರ ಅಗತ್ಯ ಹೆಚ್ಚಿದೆ. ಹೀಗಾಗಿ 'ಟಿಯುವಿ ಎಸ್‌ಯುಡಿ' ಸಂಸ್ಥೆ ಭಾರತದಿಂದ ರಫ್ತಾಗುವ ಸಾಗರ ಉತ್ಪನಗಳಿಗೆ ಗುಣಮಟ್ಟದ ಪ್ರಮಾಣಪತ್ರ ಒದಗಿಸಲಿದೆ. ಇಲ್ಲಿ ವಿಶಾಲ ತಳಹದಿಯ ಪರೀಕ್ಷೆಗಳು, ಪ್ರಮಾಣಪತ್ರ ವಿತರಣೆ ಮತ್ತು ಸ್ಥಳ ಪರಿಶೀಲನೆ ಸೇವೆ ಒದಗಿಸಲಾಗುತ್ತದೆ. ಈ ಸೇವೆಗಳು ಅಂತರಾಷ್ಟ್ರೀಯ ಮಟ್ಟದ ಎಸ್‌ಎಸ್‌ಎಸ್‌ಎಐ, ಡಿಐಕೆಕೆಎಸ್, ಸೌದಿ ಅರೇಬಿಯಾ ಆಹಾರ ಮತ್ತು ಔಷಧಗಳ ಪ್ರಾಧಿಕಾರಿ, ಇಐಸಿ ಮತ್ತು ಬಿಐಎಸ್ ಸಂಸ್ಥೆಗಳಿಂದ ಮಾನ್ಯತೆ ಪಡೆದಿದೆ. ಹೀಗಾಗಿ ಟಿಯುವಿ ಎಸ್‌ಯುಡಿ ಪರಿಕ್ಷೆ ಮತ್ತು ಗುಣಮಟ್ಟ ಖಾತರಿ ಸೇವೆಗಳು ವತ್ತು ಆಹಾರ ರಫ್ತುದಾರರಿಗೆ ಜಾಗತಿಕ ಮಟ್ಟ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.
ಎಕ್ಸ್‌ಟೆನ್ಶನ್ ಸ್ಕಲ್ಲರ್ಸ್ ಸ್ಫೋರ್ಟ್ಸ್
ಪ್ರಯಾಣ ಉಡುಗೆ ಬಿಡುಗಡೆ
ಈ ಸ್ಪ್ರಿಂಗ್ ಸಮ್ಮರ್ 2014ರಲ್ಲಿ ಸ್ಕಲ್ಲರ್ಸ್‌ನಿಂದ ಹೊಸ ಬ್ರ್ಯಾಂಡ್‌ನ ಎಕ್ಸ್‌ಟೆನ್ಶನ್ ಸ್ಕಲ್ಲರ್ಸ್ ಸ್ಫೋರ್ಟ್ಸ್ ಬಿಡುಗಡೆ ಮಾಡಿದೆ. ಸ್ಕಲ್ಲರ್ಸ್ ಸ್ಫೋರ್ಟ್ಸ್‌ನ ಕಡು ಬಣ್ಣದ ಬ್ಲಾಕ್‌ಗಳು ಗೆರೆಗಳುಳ್ಳ ಹಾಗೂ ವಿಲಾಸಿ ಜರತಾರಿ ಅಲಂಕಾರಗಳುಳ್ಳ ಉಡುಪುಗಳ ಮೂಲಕ ನಿಮ್ಮನು ನೀವು ಅಭಿವ್ಯಕ್ತಿಪಡಿಸಿ. ನಿಮ್ಮ ಬೇಸಿಗೆ ಉಡುಪಿನೊಂದಿಗೆ ಸಿ ವೀಡ್ ಹಸಿರು ಶಾರ್ಟ್ಸ್ ಮತ್ತು ಗೆರೆಗಳುಳ್ಳ, ನೆಯ್ಗೆ ಮಾಡಿದ ಮೇಲಿನ ಅಲಂಕಾರದ ಫೋಲೋ ಟೀ ಶರ್ಟ್ ಧರಿಸಬಹುದು. ಸಾಹಸ ಪ್ರೇಮಿಗಳ ತಂಡಕ್ಕಾಗಿ ಕ್ರೂನೆಕ್ ಪ್ರಿಂಟ್ ಇರುವ ಕಡು ಕಂಪು ಬಣ್ಣದ ಶಾರ್ಟ್ಸ್, ನೇಯ್ಗೆ ಮಾಡಿದ ಎಂಬ್ರಾಯಿಡರಿ ಇರುವ ಚೌಕುಳಿಯುಳ್ಳ ಶರ್ಟ್‌ನು ವಿನ್ಯಾಸಗೊಳಿಸಲಾಗಿದ್ದು ಇದರಲ್ಲಿ ಪ್ಲಾಕೆಟ್‌ಗಳು ಇವೆ.