ಹೊಸ ಸಂಪರ್ಕಕ್ಕೆ ಐಡಿಯಾ
ಐಡಿಯಾ ಸೆಲ್ಯುಲಾರ್ ತನ್ನ 3ಜಿ ಸೇವೆಗಳನ್ನು ಇಂಟ್ರಾ-ಸರ್ಕಲ್ ರೋಮಿಂಗ್ ಮೂಲಕ 10 ವೃತ್ತಗಳಿಗೆ ನೀಡಲಿದ್ದು ಇದರಿಂದ 1.37 ಕೋಟಿ ಚಂದಾದಾರ ಪೈಕಿ ಶೇ. 25ರಷ್ಟು ಮಂದಿ ಅತ್ಯಂತ ವೇಗದ 3ಜಿಯನ್ನು ತಮ್ಮ ಮೊಬೈಲ್ ಸಾಧನಗಳಲ್ಲಿ ಪಡೆಯಬಹುದಾಗಿದೆ. ಐಡಿಯಾದ 10 ವೃತ್ತಗಳ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಬಳಕೆದಾರರು 12345 ಕಸ್ಟಮರ್ ಕೇರ್ಗೆ ಕರೆಮಾಡಿ ಅಥವಾ ಹತ್ತಿರದ ಮೈ ಐಡಿಯಾ ಸ್ಟೋರ್ಗೆ ಭೇಟಿ ನೀಡಿ 3ಜಿ ಸೇವೆಯನ್ನು ಆಕ್ಟಿವೇಟ್ ಮಾಡಬಹುದು. ಪ್ರಿಪೇಯ್ಡ್ ಗ್ರಾಹಕರು 12345 ಸಂಖ್ಯೆಗೆ ಛ್ಛಡಿ3್ಜ ಎಂದು ಎಸ್ಎಂಎಸ್ ಮಾಡಿ ಕೂಡ ಕಳುಹಿಸಬಹುದು, ಐಡಿಯಾ ಚಂದಾದಾರರು 8 ರಿಂದ 5001ರವರೆಗೂ ಹತ್ತಿರದ ರೀಟೇಲರ್ ಅಥವಾ ಮೈ ಐಡಿಯಾ ಸ್ಟೋರ್ನಲ್ಲಿ ರೀಚಾರ್ಜ್ ಮಾಡಿಸಬಹುದು. ಹೊಸ ಬಳಕೆದಾರರು ಐಡಿಯಾ ಸಂಪರ್ಕ ಪಡೆಯಲು ಹೊಸ ಐಡಿಯಾ ಸಂಪರ್ಕ 3ಜಿ ರೀಚಾರ್ಜ್ ಪ್ಯಾಕ್ ಪಡೆಯಬಹುದು.
ಅಲೆನ್ ಸಾಲಿ ಚೀನೊಸ್
ಟ್ರೌಸರ್ ಬ್ರ್ಯಾಂಡ್ ಅಲೆನ್ ಸಾಲಿ ಚೀನೊಸ್ ಎಂಬ ಪುನರ್ಶೋಧಿತ ಹೊಸ ವಿನ್ಯಾಸದ ಕಾಟನ್ ಪ್ಯಾಂಟ್ಗಳನ್ನು ಪರಿಚಯಿಸಿದೆ. ಚೀನೊಗಳು ಸ್ಲಿಂ ಫಿಟ್ ಹಾಗೂ ಅದ್ಭುತ ವರ್ಣಗಳಿಂದ ಕೂಡಿದ್ದು ಡೆನಿಮ್ಗಳಿಗಿಂತ ಆಕರ್ಷಕ ಶೈಲಿಗಳನ್ನು ಹೊಂದಿದ್ದು ದೈನಂದಿನ ಔಪಚಾರಿಕ ಕೆಲಸಗಳಿಗೆ ಹಾಗೂ ವಾರದ ಕೊನೆಯಲ್ಲಿ ಹೊರಗೆ ಹೋಗುವ ಸಂದರ್ಭಗಳಲ್ಲಿಯೂ ಅತ್ಯಂತ ಆರಾಮದಾಯಕವಾಗಿರುತ್ತದೆ. ಕಸ್ಟಂ, ಸ್ಮಾರ್ಟ್ ಸ್ಲಿಂ, ಅಲ್ಟ್ರಾ ಸ್ಲಿಂ ಹಾದೂ ಟ್ರೆನಿಮ್ಸ್ ಹೀಗೆ ಅಲೆನ್ ಸಾಲಿ ಚೀನೊಗಳು 4 ವಿವಿಧ ಅಳತೆಗಳಲ್ಲಿ ಲಭ್ಯವಿದೆ.
ಇಂಗ್ಲಿಷ್ ತರಬೇತಿ
ಯುಕೆ ಹಾಗೂ ಯುಎಸ್ಎ ಉದ್ಯೋಗಾಕಾಂಕ್ಷಿಗಳ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಿಂಗ್ಸ್ ಲರ್ನಿಂಗ್ ಭಾರತದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಕೋರ್ಸ್ಗಳನ್ನು ಒದಗಿಸುವ ಮೂಲಕ ಇಂಗ್ಲಿಷ್ ಭಾಷೆ ಹಾಗೂ ವೃತ್ತಿ ಕೌಶಲ ತರಬೇತಿ ಕಾರ್ಯಕ್ರಮಗಳೊಂದಿಗೆ ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ನೆರವಾಗಲಿದೆ. ಕಿಂಗ್ಸ್ ಲರ್ನಿಂಗ್ ಯುಕೆಯಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಇಂಗ್ಲಿಷ್ ಭಾಷಾ ತರಬೇತಿ ಹಾಗೂ ಯುಕೆಯ ಅತ್ಯಂತ ದೊಡ್ಡ ಐಇಎಲ್ಟಿಎಸ್ ಪರೀಕ್ಷಾ ಕೇಂದ್ರವಾಗಿದೆ. ಕಿಂಗ್ಸ್ ಲರ್ನಿಂಗ್ನೊಂದಿಗೆ ಇದರ ಸಹಭಾಗಿತ್ವವು ಭಾರತೀಯ ವಿದ್ಯಾರ್ಥಿಗಳಿಗೆ ಪ್ರಸಿದ್ಧ ಭಾಷಾ ಶಾಲೆಗಳ ಅಭ್ಯಾಸ ಖಾತ್ರಿ ನೀಡಲಿದೆ. ಇದು ಲಭ್ಯತೆ ಹಾಗೂ ಉದ್ಯೋಗಾಕಾಂಕ್ಷಿಗಳ ನಡುವಿನ ಅಂತರವನ್ನು ತಗ್ಗಿಸಲಿದೆ. ಭಾರತದಲ್ಲಿ ಶೇ.75ಕ್ಕೂ ಹೆಚ್ಚು ಎಂಜಿನಿಯರಿಂಗ್ ಪದವೀಧರರು ಸಾಫ್ಟ್ ಸ್ಕಿಲ್ ಹಾಗೂ ಇಂಗ್ಲಿಷ್ ತರಬೇತಿಯ ಕೊರತೆಯಿಂದಾಗಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎನ್ನುವುದು ಕಿಂಗ್ಸ್ ಲರ್ನಿಂಗ್ ಅಭಿಮತ.
ಹಾರ್ಮನ್ ಸೇವಾ ಕೇಂದ್ರ
ಹಾರ್ಮನ್ ಪ್ರೊಫೆಷನಲ್ ಇಂಡಿಯಾ ಹಾರ್ಮನ್ ಸೇವಾ ಕೇಂದ್ರವನ್ನು ನಗರದಲ್ಲಿ ಪ್ರಾರಂಭಿಸಿದೆ. ಉನ್ನತ ತರಬೇತಿಯನ್ನು ಹೊಂದಿದ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿರುವ ಈ ಕೇಂದ್ರ ಉನ್ನತವಾದ ತೊಂದರೆಗಳನ್ನು ಗುರುತಿಸುವ ಮತ್ತು ದುರಸ್ತಿ ಉಪಕರಣಗಳನ್ನು ಹೊಂದಿರುವ ಜತೆಗೆ ಬಿಡಿಭಾಗಗಳ ಸಂಗ್ರಹವನ್ನೂ ಒಳಗೊಂಡಿದೆ. ಎಲ್ಲಾ ಹಾರ್ಮನ್ ಪ್ರೊಫೆಷನರಿ ಬ್ರ್ಯಾಂಡ್ಗಳ ಗ್ರಾಹಕರಿಗೆ ಬೆಂಬಲ ನೀಡಲಿದೆ. ವಾಕ್ ಇನ್ ಗ್ರಾಹಕರಿಗೆ ಸುಲಭ ಸಂಪರ್ಕ ನೀಡುವುದು ಧ್ಯೇಯವಾಗಿದ್ದು ಇಲ್ಲಿ ಗ್ರಾಹಕರು ತಮ್ಮ ಹಾರ್ಮನ್ ಪ್ರೊಫೆಷನಲ್ ಉತ್ಪನ್ನಗಳ ಶ್ರೇಣಿಗಾಗಿ ಕೇವಲ ಬಿಡಿ ಭಾಗಗಳನ್ನು ಖರೀದಿಸುವುದು ಮಾತ್ರವಲ್ಲದೇ ತಮ್ಮ ದುರಸ್ತಿ ಚಟುವಟಿಕೆಗಳನ್ನು ನಡೆಸುವಾಗಲೇ ಉತ್ಪನ್ನಗಳ ಪಿಕ್ ಅಪ್ ಮತ್ತು ಡ್ರಾಪ್ ಆಫ್ ಸೌಲಭ್ಯ ಪಡೆಯಬಹುದು. ಇವುಗಳಲ್ಲಿ ಎಕೆಜಿ, ಬಿಎಸ್ಎಸ್ ಆಡಿಯೋ, ಕ್ರೌನ್, ಡಿಬಿಎಕ್ಸ್, ಜೆಬಿಎಲ್, ಲೆಕ್ಸಿಕಾನ್, ಸೌಂಡ್ಕ್ರಾಫ್ಟ್, ಮಾರ್ಟಿನ್ ಪ್ರೊಫೆಷನಲ್ ಶ್ರೇಣಿಯ ದೀಪಗಳ ಮತ್ತು ವೀಡಿಯೋ ಉಪಕರಣಗಳು ಸೇರಿವೆ. ಉತ್ಪನ್ನಗಳಲ್ಲಿನ ಗಂಭೀರ ತೊಂದರೆಗಳನ್ನು ಗುರುತಿಸಿ ಸಮಸ್ಯೆ ನಿಭಾಯಿಸಲು ನೆರವಾಗಲಿದೆ.
ಸೌರ ವಿದ್ಯುತ್ ಉತ್ಪಾದನೆ ಆರಂಭಿಸಿದ ವೆಲ್ಸ್ಪಲ್
ವೆಲ್ಸ್ ಪನ್ ರಿನ್ಯೂವೆಬಲ್ಎನರ್ಜಿ ಪ್ರೈ ಲಿ. ಕರ್ನಾಟಕದಲ್ಲಿ ಅತಿಹೆಚ್ಚು 19ಎಂ ಡಬ್ಲೂ (ಡಿಸಿ) ಸೋಲಾರ್ ಸಾಮರ್ಥ್ಯವನ್ನು ಹೊಂದಿರುವ ಯೋಜನೆಗಳಲ್ಲೊಂದಾಗಿದೆ. ಚಿತ್ರದುರ್ಗದಲ್ಲಿ ಫೇಸ್ 1 ಮತ್ತು ಫೇಸ್ 2 ಹಂತದಲ್ಲಿ ಕರ್ನಾಟಕ ಸೌರಶಕ್ತಿ ನೀತಿ ಪ್ರಕಾರ ನಡೆಸಲಾದ ಬಿಡ್ಡಿಂಗ್ನಲ್ಲಿ 8ಎಂಡಬ್ಲೂ(ಡಿಸಿ) ಮತ್ತು 11 ಎಂಡಬ್ಲೂ(ಡಿಸಿ)ಯನ್ನು ಜನವರಿ 20, 2014ರಂದು ಸಹಿ ಮಾಡಿದ ನಂತರದಲ್ಲಿ 3ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಉತ್ಪಾದಿಸಿದೆ. ಒಟ್ಟಾರೆ ನಿಗದಿತ ಅವಧಿಗಿಂತ 10ತಿಂಗಳ ಮೊದಲೇ ಗುರಿಯನ್ನು ತಲುಪಿದೆ. ಕರ್ನಾಟಕವು ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದು ನಿಯಮಿತವಾಗಿ ಪವರ್ ಕಟ್ ಮಾಡಲಾಗುತ್ತಿದೆ. ಚಿತ್ರದುರ್ಗದಲ್ಲಿ ಸ್ಥಾಪಿಸಲಾದ ಈ ಪ್ರಾಜೆಕ್ಟ್ನಿಂದಾಗಿ ಜನರು ಬೇಸಿಗೆಯಲ್ಲಿ ಉಂಟಾಗುವ ವಿದ್ಯುತ್ ಸಮಸ್ಯೆಯಿಂದ ಹೊರಬರಬಹುದಾಗಿದೆ. ವೆಲ್ಸ್ಪನ್ ರಿನ್ಯೂವೆಬಲ್ ಎನರ್ಜಿ ಈಗಾಗಲೇ 328 ಎಂಡಬ್ಲೂ(ಡಿಸಿ) ವಿದ್ಯುತ್ ಉತ್ಪಾದಿಸಿದ್ದು 723.5 ಎಂಡಬ್ಲೂ ಸಾಮರ್ಥ್ಯದ ವಿದ್ಯುತ್ ಇನ್ನೂ ಉತ್ಪಾದನೆ ಹಂತದಲ್ಲಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.
ಮಾರಿಯಟ್ ಹೊಟೇಲ್ ಕೊಡುಗೆ
ಭಾರತದಲ್ಲಿ ತನ್ನ ಯಾವುದೇ ಹೊಟೇಲ್ನಲ್ಲಿ ಪ್ರವಾಸಿಗರು ಅಥವಾ ಪ್ರಯಾಣಿಕರು ಎರಡು ರಾತ್ರಿ ತಂಗಿದರೆ ಮೂರನೇ ರಾತ್ರಿ ಉಚಿತವಾಗಿ ತಂಗುವ ಅವಕಾಶವನ್ನು ಮಾರಿಯಟ್ ಹೊಟೇಲ್ ಏಪ್ರಿಲ್ 1ರಿಂದ ನೀಡುತ್ತಿದ್ದು ಆಗಸ್ಟ್ 31ರವರೆಗೆ ಚಾಲ್ತಿಯಲ್ಲಿರುತ್ತದೆ. ಈ ವ್ಯವಸ್ಥೆ ಸ್ಟ್ಯಾಂಡರ್ಡ್ ಶ್ರೇಣಿಯಲ್ಲಿ ಮಾತ್ರ ಬುಕಿಂಗ್ ಲಭ್ಯತೆಯ ಆಧಾರದ ಮೇಲೆ ಲಭ್ಯ. ಬುಕಿಂಗ್ ಲಭ್ಯತೆಯು ಯಾವುದೇ ಸಮಯದಲ್ಲಿ ಬದಲಾಗಬಹುದು. ಮಾಹಿತಿಗಾಗಿ-ಢಿಢಿಢಿ.ಟಛ್ಠ್ಠ್ಝ್ಟಡಿಡಿಟಿಜಢಿಡ್ಛಜಟಿಡಿಜ್ಠ.್ಛ್ಟಟ.