ಟಾಟಾ ಸ್ಕೈ ಪ್ರೀಮಿಯಂ ಸೇವಾ ಶುಲ್ಕ ಹೆಚ್ಚಳ
ಡೈರೆಕ್ಟ್ ಟು ಹೋಮ್ ಸೇವೆ ನೀಡುವ ಟಾಟಾ ಸ್ಕೈ ತಾನು ನೀಡುವ ಪ್ರೀಮಿಯಂ ಸೇವೆಗಳ ಶುಲ್ಕದಲ್ಲಿ ಶೇ.8ರಷ್ಟು ಹೆಚ್ಚಳ ಮಾಡಿದೆ. ಏರ್ಟೆಲ್ ಟಿವಿ, ವಿಡಿಯೋಕಾನ್ನ ಡಿ2ಎಚ್, ಝೀಟಿವಿಯ ಡಿಟಿಎಚ್ ಸಂಸ್ಥೆಗಳು ಈಗಾಗಲೇ ತಮ್ಮ ಸೇವೆಗಳ ಶುಲ್ಕದಲ್ಲಿ ಏರಿಕೆ ಮಾಡಿವೆ. ಆದರೆ ಟಾಟಾ ಸ್ಕೈ, ಮಾಸಿಕ ಸೇವೆಗೆ ವಿಧಿಸಲಾಗುವ ಶುಲ್ಕದಲ್ಲಿ ( 220) ಯಾವುದೇ ಬದಲಾವಣೆ ಮಾಡಿಲ್ಲ ಎನ್ನುವುದು ಗಮನಾರ್ಹ. ಸುಪ್ರೀಂ ಸ್ಪೋರ್ಟ್ಸ್ ಮೊತ್ತವನ್ನು ರು. 3,150- 3,520ಕ್ಕೆ ಹೆಚ್ಚಿಸಿದೆ.