ಸರ್ಕಾರಿ ಬ್ಯಾಂಕ್ಗಳ ಗೊಂದಲ
ಚುನಾವಣೆ ಫಲಿತಾಂಶದ ಪ್ರಕಟಣೆಗೆ ಎರಡೇ ದಿನಗಳಿರುವಾಗ, ರಿಸರ್ವ್ ಬ್ಯಾಂಕ್ ನೇಮಿಸಿದ್ದ ನಾಯಕ್ ಸಮಿತಿಯ ಶಿಫಾರಸುಗಳು ಪ್ರಕಟವಾಗಿದ್ದು ಉದ್ದೇಶಪೂರಿತವಾದ ಕ್ರಮವೇ ಇರಬೇಕು.
ಹೇಳಿ-ಕೇಳಿ ಆ ಸಮಿತಿ ಪರಿಶೀಲಿಸಿದ್ದು, (ಅದರ ಕೆಲಸವೇ ಹಾಗಿತ್ತು) ಸರ್ಕಾರಿ ಬ್ಯಾಂಕ್ಗಳ ಕೆಲಸ, ನೀತಿ ಹಾಗೂ ಸ್ವರೂಪವನ್ನು ಸಮಿತಿಯ ಶಿಫಾರಸುಗಳೆಲ್ಲವೂ ಸರ್ಕಾರಿ ಬ್ಯಾಂಕ್ಗಳಲ್ಲಿ ಸರ್ಕಾರದ (ರಾಜಕೀಯ-ಅಧಿಕಾರಿಗಳು) ನಿರ್ಣಾಯಕ ಪಾತ್ರವನ್ನು ಕಡಿಮೆ ಮಾಡುವುದಕ್ಕೆ ಸೀಮಿತವಾಗಿರುವಂತಿದೆ.
ಸರ್ಕಾರಿ ಬ್ಯಾಂಕ್ಗಳ ಈಗಿನ ನಿರ್ದೇಶಕರ ಮಂಡಳಿಗಳು ಇಂದೂ ಒಂದೇ ಇಲ್ಲದಿದ್ದರೂ ಒಂದೇ ಎನ್ನುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಿಸಿದೆ. ಈ ಪರಿಸ್ಥಿತಿ ಬದಲಾಗಿ, ಸರ್ಕಾರಿ ಬ್ಯಾಂಕ್ಗಳು ಗ್ರಾಹಕಸ್ನೇಹಿ, ಸಾರ್ವಜನಿಕ ಬ್ಯಾಂಕ್ಗಳಾಗಬೇಕೆನ್ನುವುದೇ ಸಮಿತಿಯ ಉದ್ದೇಶ.
ಸಹಜವಾಗಿಯೇ ಇದು ಷೇರು ಬಜಾರಿನ ಜನರಿಗೆ ಸಂತಸದ ಸುದ್ದಿ. ಇನ್ನೂ ವರದಿಯ ವಿಚಾರ ಪೂರ್ತಿಯಾಗಿ ಅರಿವಿಲ್ಲದೇ ಇದ್ದರೂ ಕಳೆದವಾರ ಸರ್ಕಾರಿ ಬ್ಯಾಂಕ್ಗಳ ಷೇರುಗಳ ಬೆಲೆ ಏರಿತ್ತು.
ಯಾವುದರ ಸಂಕೇತ?
ಸರ್ಕಾರ- ಅಧಿಕಾರಿಗಳ ಹಸ್ತಕ್ಷೇಪ ಸರ್ಕಾರಿ ಬ್ಯಾಂಕ್ಗಳನ್ನು ಸೊರಗುವಂತೆ ಮಾಡಿದ್ದನ್ನು ಪೇಟೆ ಶಕ್ತಿಗಳು ವಿರೋಧಿಸುತ್ತಿರುವುದರ ಸಂಕೇತವೇ ಅಲ್ಲವೇ? ಸರ್ಕಾರ ಬ್ಯಾಂಕ್ಗಳ ಹಣದ ಜತೆ ಚೆಲ್ಲಾಟ ಮಾಡಿದೆ. ಆದರೆ ಬ್ಯಾಂಕ್ ನೌಕರಿಗೆ ಆ ವರದಿ ಹಿಡಿಸಿಲ್ಲ. ಅವರಿಗೆ ಈಗಿನ ವ್ಯವಸ್ಥೆಯಲ್ಲೇ ನಂಬಿಕೆ. ಜಗಳದ ಪ್ರಾರಂಭ. ಆದರೆ, ಮುಂದಿನ ಚಿಂತನೆಯ ಧಾಟಿಯನ್ನು ಈಗಲೇ ಗುರುತಿಸುವುದು ಕಷ್ಟ.
ದಲ್ಲಾಳಿಗಳಿಗೆ ಜಾಗವಿಲ್ಲ
ಈಗ ಷೇರುಪೇಟೆಯ ವ್ಯವಹಾರಗಳಲ್ಲಿ ದಲ್ಲಾಳಿಗಳ ಕಮಿಷನ್ ಕಡಿಮೆಯಾಗಿದೆ. ಅನೇಕ ಪ್ರಾದೇಶಿಕ ಸ್ಟಾಕ್ ಎಕ್ಸ್ಚೇಂಜ್ಗಳು ಬಂದ್ ಆಗಿವೆ. ಸಾಲದ್ದಕ್ಕೆ ಷೇರುಪೇಟೆಯ ವ್ಯವಹಾರಗಳಿಗೆ ಈಗ ವೈಯಕ್ತಿಕ ಷೇರು ವ್ಯವಹಾರಸ್ಥರು ದಲ್ಲಾಳಿಗಳನ್ನು ಅವಲಂಬಿಸುವುದೂ ಕಡಿಮೆ.
ಪೇಟೆಯ ವ್ಯವಹಾರದಲ್ಲಿನ ಬಹುಪಾಲು ಈಗ ವಾಯಿದಾ ಪೇಟೆಗೆ ವರ್ಗವಾಗಿರುವಂತಿದೆ. ಇದು ಆಧುನಿಕ, ದೊಡ್ಡ ಪ್ರಮಾಣದ ವ್ಯವಹಾರದ ಬಾಬತ್ತು. ಅಲ್ಲಿ ವ್ಯವಹಾರದ ಪ್ರಮಾಣ ಜಾಸ್ತಿ. ಶೇಕಡಾವಾರು ಲೆಕ್ಕದಲ್ಲಿ ಕಮಿಷನ್ ಕಡಿಮೆ. ಸಣ್ಣ ವ್ಯವಹಾರಸ್ಥರಾಗಿ ಬರುವುದಿಲ್ಲ. ಈ ಪರಿಸ್ಥಿತಿ ಅದನ್ನು ಗಮನಿಸಿದ ಸಾಧಾರಣ ಪ್ರಮಾಣದ ವ್ಯವಹಾರ ನಡೆಸುವ ದಲ್ಲಾಳಿಗಳು ತಮ್ಮ ದಂಧೆಗೆ ವಿದಾಯ ಹೇಳುತ್ತಿದ್ದಾರೆ.
ಕಳೆದವಾರ ಸೆಕ್ಯೂರಿಟೀಸ್ ಆ್ಯಂಡ್ ಎಕ್ಸ್ಚೇಂಜಸ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಪ್ರಕಟಣೆಯಲ್ಲಿ ವರ್ಷದಲ್ಲಿ 819 ದಲ್ಲಾಳಿಗಳು ವ್ಯವಹಾರವನ್ನು ಬಂದ್ ಮಾಡಿದ್ದಾರೆ. ಕಳೆದ ವರ್ಷದಲ್ಲಿ ಮೂರು ಪ್ರಾದೇಶಿಕ ಸ್ಟಾಕ್ ಎಕ್ಸ್ಚೇಂಜ್ಗಳು ಕೊಯಮತ್ತೂರು, ಸೌರಾಷ್ಟ್ರ ಮತ್ತು ಮಂಗಳೂರು ಬಂದ್ ಆದವು. ಈಗ ಇಡೀ ದೇಶದಲ್ಲಿರುವ ಷೇರು ದಲ್ಲಾಳಿಗಳ ಸಂಖ್ಯೆ 17,3379 ವಾಯಿದಾ ಪೇಟೆಯ ವ್ಯವಹಾರದ ಮೌಲ್ಯ ಸುಮಾರು 10,000 ಕೋಟಿ ರುಪಾಯಿಗಳು.
ನೀತಿ: ಉದಾರೀಕರಣದ ವ್ಯವಸ್ಥೆಯಲ್ಲಿ ಸಣ್ಣವರಿಗೆ ಜಾಗವಿಲ್ಲ. ಇದು ಕಂಪನಿಗಳ ಯುಗ.
ರಿಯಲ್ ಎಸ್ಟೇಟ್ ಗೊಂದಲ
ತಮಗೆ ಅನುಕೂಲಕರವಾದ ನೀತಿಯನ್ನು ಅನುಸರಿಸಬಹುದಾದ ನೂತನ ಸರ್ಕಾರದ ಆಗಮನವನ್ನು ನಿರೀಕ್ಷಿಸಿ ಕಳೆದ ಮೂರು ತಿಂಗಳಿಂದಲೂ ರಿಯಲ್ ಎಸ್ಟೇಟ್ ಕಂಪನಿಗಳ ಷೇರುಗಳ ಬೆಲೆ ಏರುತ್ತಲೇ ಇದೆ. ಆದರೆ ಆ ಏರಿಕೆಯ ಬೆಂಬಲವಾಗಬೇಕಾಗಿದ್ದ ವ್ಯವಹಾರದ ಪ್ರಮಾಣ ಕಂಡುಬರುತ್ತಿಲ್ಲ. ಬೃಹತ್ ಗೃಹ ಸಮುದಾಯಗಳಲ್ಲಿ ಈಗ ಸಾವಿರಾರು ಮನೆಗಳು ಮಾರಾಟವಾಗಿಲ್ಲ. ಅಲ್ಲಿ ಬಾಡಿಗೆಗೆ ಗಿರಾಕಿಗಳು ಸಿಗುತ್ತಿಲ್ಲವಂತೆ ನಿಜವೇ?
ಕೊನೆಮಾತು
ದೇಶಕ್ಕೊಂದು ಯೋಜನಾ ಆಯೋಗ ನಿಜವಾಗಲೂ ಬೇಕೆ? ಸೋನಿಯಾ ಗಾಂಧಿ ಕಾಲದಲ್ಲಿ ಸರ್ಕಾರದ ಅತ್ಯುನ್ನತ ಮಟ್ಟದ ಸಲಹಾ ಸಮಿತಿ (ಬಹುಮಟ್ಟಿಗೆ ಕೊಡುಗೆ ಸಂಗಾತಿಯ ಸಂಸ್ಥೆ) ರಾಷ್ಟ್ರೀಯ ಸಲಹಾ ಸಮಿತಿ, ಯೋಜನಾ ಆಯೋಗವನ್ನು ನಿರುಪಯೋಗಿ ಸಂಸ್ಥೆಯನ್ನಾಗಿ ಮಾಡಿತ್ತು. ಈಗ ಯೋಜನಾ ಬದ್ಧ ಪ್ರಗತಿಯ ಒಂದು ಕಾಲದ ಹರಿಕಾರ ಮನಮೋಹನಸಿಂಗ್ ಅವರೇ ಆಯೋಗದ ಸ್ವರೂಪ ಬದಲಾಗಬೇಕು ಎನ್ನುತ್ತಿದ್ದಾರೆ.
-ಸತ್ಯ