ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಸ್ಮಾರ್ಟ್ಕಾರ್ಡ್ ರೀಡರ್

Lingaraj Badiger
Updated On : 19 May 2014, 3:49 am

ಸರ್ ನೀವು ಖರೀದಿಸಿದ ವಸ್ತುವಿನ ಬೆಲೆ 14,222.45 ರುಪಾಯಿ. ದಯವಿಟ್ಟು ಚೇಂಜ್ ಕೊಡಿ. ಇಲ್ಲದಿದ್ದರೆ ತುಂಬಾ ಕಷ್ಟ ಆಗುತ್ತೆ...
- ಇಂಥ ಮಾತುಗಳು ಅಂಗಡಿಗಳಲ್ಲಿ, ಫ್ಲಿಪ್ಕಾರ್ಟ್, ಝೋವಿ ಮೊದಲಾದ ವೆಬ್ಸೈಟ್ಗಳ ಮೂಲಕ ಖರೀದಿಸಿದ ವಸ್ತುಗಳಿಗೆ ಬಿಲ್ ಪಾವತಿಸುವಾಗ ಇಂಥ ಮಾತುಗಳನ್ನು ಕೇಳುತ್ತೇವೆ. ಹೀಗೆ ಚಿಲ್ಲರೆ ಕೊಡುವುದು ಅವುಗಳ ಮಾರಾಟಗಾರರಿಗೂ ಒಂದು ರೀತಿಯಲ್ಲಿ ತೊಂದರೆಯೇ. ಅದಕ್ಕಾಗಿ ಈಗ ಕೈಚೀಲದಲ್ಲಿ ತೆಗೆದುಕೊಂಡು ಹೋಗಬಹುದಾದ ಸ್ಮಾರ್ಟ್ಕಾರ್ಡ್ ರೀಡರ್ ವ್ಯವಸ್ಥೆ ಬಂದಿದೆ. ಇದರಿಂದ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಮೂಲಕ ಯಾವುದೇ ಅಡಚಣೆ ಇಲ್ಲದೆ 14,222.45 ರು.ಗಳನ್ನು ಪಾವತಿಸಬಹುದು. ಈ ಮೂಲಕ ಗ್ರಾಹಕರು ಮತ್ತು ಮಾರುವ ಸಿಬ್ಬಂದಿಗೆ ಮನಸ್ಸು ಮುರಿಸಿಕೊಳ್ಳದೆ ವ್ಯವಹಾರ ಮಾಡಬಹುದು. ಬೆಂಗಳೂರಿನಂಥ ನಗರಗಳ ಹೋಟೆಲ್ಗಳು, ಇತರ ಗ್ರಾಹಕೋಪಯೋಗಿ ಮಳಿಗೆಗಳಲ್ಲಿ ಇಂಥ ಮಷಿನ್ಗಳ ಬಳಕೆ ಹೆಚ್ಚುತ್ತಿದೆ.

ಇದೆಲ್ಲ ಕಾರ್ಡ್ ಮಹಿಮೆ
ಇದೆಲ್ಲ ಸಾಧ್ಯವಾಗಿದ್ದು ತಂತ್ರಜ್ಞಾನದಿಂದ. ಸಣ್ಣ ಪ್ರಮಾಣದ ಕಾರ್ಡ್ ರೀಡರ್ಗಳ ಸಂಶೋಧನೆಯಿಂದ, ಅದನ್ನು ಸ್ಮಾರ್ಟ್ಫೋನುಗಳಿಗೆ ಅಟ್ಯಾಚ್ ಮಾಡುವ ಮೂಲಕ ಹಾಗೂ ಪಾವತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಪಾವತಿಸುವ ವ್ಯವಸ್ಥೆ ಬಂದಿರುವುದರಿಂದ ಚೇಂಜ್ ಕೊಡುವಂಥ ಸಮಸ್ಯೆಗಳಿಗೆ ಕೊಂಚ ಕಡಿವಾಣ ಬಿದ್ದಿದೆ ಎನ್ನಲಡ್ಡಿಯಿಲ್ಲ. ಈ ಮ್ಯಾಜಿಕ್ನಿಂದಾಗಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳ ಬಳಕೆಯೂ ಹೆಚ್ಚಾಗಿದೆ.
ಮೊಬೈಲಲ್ಲೂ ಮಾರ್ಪಾಡು
ಪೋರ್ಟಬಲ್ ರೀತಿಯ ಸ್ವೈಪಿಂಗ್ ಮಷಿನ್ ಬಂದಿರುವುದು ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನುಗಳೂ ಬಂದಿವೆ. ಅವುಗಳಲ್ಲೂ ಡೆಬಿಟ್ ಕಾರ್ಡಿನ ಮೂಲಕ ಹಣ ಪಾವತಿ ವ್ಯವಸ್ಥೆ ಕೈಗೊಳ್ಳಲಾಗಿದೆ. ಹೀಗಾಗಿ ಮಾತನಾಡುವ ಮೊಬೈಲೂ ಈಗ ಸ್ವೈಪಿಂಗ್ ಯಂತ್ರವಾಗಿದೆ. ಇದರಿಂದಾಗಿ ಆನ್ಲೈನ್ ವಹಿವಾಟುಗಳಿಗೆ ಹೆಚ್ಚಿನ ಇಂಬು ಕೊಟ್ಟಂತಾಗಿದೆ.
ಯಾವ ಕಂಪನಿಗಳು?
ಈಸ್ ಟ್ಯಾಪ್, ಪೇಮೇಟ್, ಮೋಸಾಂಬಿ ಮತ್ತು ಪ್ರಿಸ್ಮ ಪೇಮೆಂಟ್ (ಈಗ ಹಿಟಾಚಿ ಕಂಪನಿ ಖರೀದಿಸಿದೆ) ಕಂಪನಿಗಳ ಪೋರ್ಟಬಲ್ ಎಲೆಕ್ಟ್ರಾನಿಕ್ ಡಿವೈಸ್ಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತವೆ. ಹೊಸತಾಗಿ ಈ ಕ್ಷೇತ್ರಕ್ಕೆ ಕಾಲಿರಿಸಿರುವ ಮೋಸಾಂಬಿ ಈಗಾಗಲೇ 500 ಕಾರ್ಡ್ ರೀಡರ್ಗಳನ್ನು ಮಾರಾಟ ಮಾಡಿದೆ. ಮುಂಬರುವ ತಿಂಗಳುಗಳಲ್ಲಿ 5 ಸಾವಿರ ಕಾರ್ಡ್ ರೀಡರ್ಗಳನ್ನು ಮಾರುವ ಗುರಿ ಹಾಕಿಕೊಂಡಿದೆ. ದೇಶದಲ್ಲಿ 380 ಮಿಲಿಯ ಬ್ಯಾಂಕಿಂಗ್ ಕ್ಷೇತ್ರದ ಗ್ರಾಹಕರು, 120 ಸ್ಮಾರ್ಟ್ಫೋನ್ ಗ್ರಾಹಕರಿದ್ದಾರೆ. ಇದೂ ಈ ಕ್ಷೇತ್ರದ ವಹಿವಾಟು ವೃದ್ಧಿಸಲು ಸಹಕಾರಿಯಾಗಿದೆ.
ಜಾಗತಿಕವಾಗಿ...
ಅಮೆರಿಕ ಮೂಲದ ಪೇ ಪಾಲ್ ಪಾವತಿ ನಿರ್ವಹಣಾ ಸಂಸ್ಥೆ ಪೇ ಪಾಲ್ ಹಿಯರ್ ಎಂಬ ಕಾರ್ಡ್ ರೀಡರ್ ಅನ್ನು ಹೊಂದಿದೆ. ಇದು 143 ಮಿಲಿಯ ಖಾತೆಗಳನ್ನು ಹೊಂದಿದೆ. ಇದು 193 ಮಾರುಕಟ್ಟೆ ವಿಭಾಗಗಳನ್ನು 23 ಕರೆನ್ಸಿಗಳ ಮೂಲಕ ವಹಿವಾಟು ನಡೆಸುತ್ತಿದೆ.
ಸ್ವೀಡನ್ ಮೂಲದ ಐ ಝೆಟಲ್ ಕಾರ್ಡ್ ರೀಡರ್ ಮತ್ತು ಆಪ್ ಚಿಪ್ ಕಾರ್ಡ್ ಮತ್ತು ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್ಗಳಿಗೂ ಸಪೋರ್ಟ್ ಮಾಡುತ್ತದೆ.
ಆದರೆ...

ಒಂದು ಮಹತ್ವದ ವಿಚಾರವೆಂದರೆ, ಈ ರೀತಿಯ ಆಧುನಿಕ ಪಾವತಿ ವ್ಯವಸ್ಥೆ ತಲುಪಿರುವುದು ಜಗತ್ತಿನ ಶೇ.7 ಮಂದಿಗೆ ಮಾತ್ರ. ಅದರಲ್ಲೂ ಸ್ಮಾರ್ಟ್ಫೋನುಗಳನ್ನು ಬಳಸುವ ಮಂದಿಗೆ ಮಾತ್ರ ಎನ್ನುತ್ತದೆ ಅಮೆರಿಕದ ಕನ್ಸಲ್ಟೆನ್ಸಿ ಸಂಸ್ಥೆ ಇವೈ (ಹಿಂದಿನ ಅರ್ನೆಸ್ಟ್ ಆ್ಯಂಡ್ ಯಂಗ್)

ಅನುಕೂಲಗಳೇನು?
ಕಾರ್ಡ್ ಸ್ವೈಪ್ ಮಾಡುವ ಯಂತ್ರಗಳಿಗೆ ಹೋಲಿಸಿದರೆ ಅವುಗಳ ನಿರ್ವಹಣೆ ಮತ್ತು ಶುಲ್ಕ ಕಡಿಮೆ.
ಮನೆಗಳಿಗೆ ತೆರಳಿ ವಿವಿಧ ಬಿಲ್ ಸಂಗ್ರಹಿಸುವವರಿಗೆ (ವಿದ್ಯುತ್, ನೀರು) ಇದು ಅನುಕೂಲಕರ.
ವಿವಿಧ ಉದ್ದಿಮೆ ವಲಯಕ್ಕೆ ಅನುಕೂಲವಾಗುವಂತೆ ಗ್ರಾಹಕರ ವಿವರಗಳನ್ನು ಸಂಗ್ರಹಿಸುವ ಸಮರ್ಥ ಬ್ಯಾಕ್ಅಪ್ ವ್ಯವಸ್ಥೆಯಿಂದ ಕ್ಷಿಪ್ರಗತಿಯಲ್ಲಿ ಹಣ ಸಂಗ್ರಹಿಸಲು ಅನುಕೂಲಕರವಾಗುತ್ತದೆ.


ಮೈನಸ್ ಪಾಯಿಂಟ್
ಉತ್ತಮ ಗುಣಮಟ್ಟದ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಅಗತ್ಯ.
ಕೆಲವು ಕ್ಷೇತ್ರಗಳ ಶುಲ್ಕ ಪಾವತಿಗೆ ಸಂಪೂರ್ಣವಾಗಿ ಬ್ಯಾಂಕಿಂಗ್ ಪರಿಹಾರ ಇನ್ನೂ ಸಿದ್ಧಗೊಂಡಿಲ್ಲ.
ಆಫ್ಲೈನ್ನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.

ಹೇಗೆ ಕೆಲಸ ಮಾಡುತ್ತದೆ?
ಸ್ಮಾರ್ಟ್ಫೋನುಗಳಿಗೆ ಅಟ್ಯಾಚ್ ಮಾಡಿದ ಸಣ್ಣ ಗಾತ್ರದ ಇ- ಕಾರ್ಡ್ ರೀಡರ್ಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಿಲ್ಗಳ ವಿವರಗಳನ್ನು ಓದುವಂತೆ ಮಾಡಲಾಗುತ್ತದೆ.
ಸ್ಮಾರ್ಟ್ಫೋನ್ ಆ್ಯಪ್ ಕಾರ್ಡ್ಗಳ ಬಿಲ್ಗಳನ್ನು ಸೂಕ್ತ ಕಾಲದಲ್ಲಿ ಓದಿ ಅವುಗಳನ್ನು ಪಾವತಿಗೆ ಅನುಕೂಲ ಮಾಡಿಕೊಡುತ್ತವೆ.
ಇದಕ್ಕಾಗಿ ವರ್ತಕರು ಮತ್ತು ಬ್ಯಾಂಕುಗಳು ಪ್ರತಿ ತಿಂಗಳು 150-250 ರು. ಮಾಸಿಕ ಶುಲ್ಕ ವಿಧಿಸುತ್ತವೆ.


ಎಲ್ಲಿ ಹೆಚ್ಚು ಬಳಕೆ?
    ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ.
    ಆಹಾರ, ಪಾನೀಯ ಮತ್ತು ಗ್ರಾಹಕ ಖರೀದಿ ವಸ್ತುಗಳ ಮಾರಾಟ ಕ್ಷೇತ್ರ.
    ರೆಸ್ಟೋರೆಂಟ್
    ವಿಮಾಕ್ಷೇತ್ರ
    ಆರೋಗ್ಯ ವಲಯ

-ಸದಾಶಿವ ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement