ಮುಂಬೈ: ದೇಶದ ಬೃಹತ್ ಟೆಲಿಕಾಂ ಆಪರೇಟರ್ ಏರ್‌ಟೆಲ್ ಪೋಸ್ಟ್‌ಪೇಡ್ ಪ್ಲಾನ್‌ನ ಮಾಸಿಕ ದರವನ್ನು ಶೇ. 12 ಹೆಚ್ಚಿಸಲು ನಿರ್ಧರಿಸಿದೆ. 2014 ಡಿಸೆಂಬರ್ 3 ರ ನಂತರ ಪರಿಷ್ಕೃತ ದರ ಜಾರಿಗೆ ಬರಲಿದೆ. ಈಗಿರುವ ಏರ್‌ಟೆಲ್ ಪೋಸ್ಟ್‌ಪೇಡ್ ಮಾಸಿಕ ದರ 199 ಆಗಿದ್ದು, ಮುಂದಿನ ತಿಂಗಳಿನಿಂದ ಇದು ತಿಂಗಳಿಗೆ ರು.224 ಆಗಲಿದೆ ಎಂದು ಏರ್‌ಟೆಲ್ ಗ್ರಾಹಕರಿಗೆ ಸಂದೇಶವನ್ನು ಕಳುಹಿಸಿದೆ.
ಕಡಿಮೆ ಮಾಸಿಕ ದರವಿರುವ ಪ್ಲಾನ್‌ಗಳಲ್ಲಿ ಏರ್‌ಟೆಲ್ ದರ ಏರಿಕೆ ಮಾಡಿದೆ ಎಂದು ಬಲ್ಲಮೂಲಗಳು ಹೇಳಿವೆ. ಏರ್‌ಟೆಲ್‌ಗೆ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರು ಸೇರಿ ಒಟ್ಟು 20 ಕೋಟಿಗಿಂತಲೂ ಗ್ರಾಹಕರಿದ್ದಾರೆ.
ಕಳೆದ ವಾರ, ಭಾರ್ತಿ ಏರ್‌ಟೆಲ್ ಸಪ್ಟೆಂಬರ್ ತಿಂಗಳ ತ್ರೈಮಾಸಿಕದಲ್ಲಿ ರು. 1, 383 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಹೇಳಿದೆ.
ಆದಾಗ್ಯೂ, ಕಳೆದ ಮೂರು ತಿಂಗಳ ಅವಧಿಯಲ್ಲಿ ಏರ್ ಟೆಲ್ ಎರಡು ಬಾರಿ ದರ ಏರಿಕೆ ಮಾಡಿದೆ.