ಕೊಲ್ಕತ್ತಾ: ಬಹುರಾಷ್ಟ್ರೀಯ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಕಾಲೇಜ್ ಕ್ಯಾಂಪಸ್ಸಿನಿಂದಲೇ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಇನ್ನೂ ಒಂದು ತಿಂಗಳು ಬಾಕಿಯಿದ್ದು, ಐಐಟಿ ಕರಗ್ ಪುರ ವಿದ್ಯಾರ್ಥಿಗಳಿಗೆ ಆಗಲೇ ಉದ್ಯೋಗಾವಕಾಶಗಳ ದಂಡೇ ಒದಗಿದೆ.
ಐಐಟಿ ಅಧಿಕಾರಿಗಳ ಪ್ರಕಾರ ಆಗಲೇ ೧೨೫ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರೆತಿದ್ದು, ಹಿಂದಿನ ವರ್ಷಕ್ಕಿಂತ ಈ ವರ್ಷ ಅವರ ವಾರ್ಷಿಕ ವೇತನದಲ್ಲಿ ೨೦% ಹೆಚ್ಚಳ ಕಂಡಿದೆ ಎಂದಿದ್ದಾರೆ.
ಇಲ್ಲಿಯವರೆಗೂ ಅತಿ ಹೆಚ್ಚಿನ ಅಂದರೆ ೯೧ ಲಕ್ಷ ವಾರ್ಷಿಕ ವೇತನವನ್ನು ಒಬ್ಬ ವಿದ್ಯಾರ್ಥಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಗೂಗಲ್ ಮೌಂಟೈನ್ ವ್ಯೂ, ಫೇಸ್ ಬುಕ್ ಮುಂತಾದ ಸಂಸ್ಥೆಗಳಿಂದ ಅಂತರಾಷ್ಟ್ರೀಯ ಉದ್ಯೋಗಗಳ ಅವಕಾಶಗಳ ಮಹಾಪೂರವೇ ಹರಿದುಬರುತ್ತಿದ್ದು, ಡಿಸೆಂಬರ್ ೧ ರ ನಂತರ ಇದು ಹೆಚ್ಚಲಿದೆ ಎನ್ನುತ್ತಾರೆ.