ನೇರ ನಗದು ವರ್ಗ ಯೋಜನೆ ಮರು ಜಾರಿ ಇಂದಿನಿಂದ
ಕರ್ನಾಟಕದ ತುಮಕೂರು, ಮೈಸೂರು ಸೇರಿದಂತೆ ದೇಶದ 54 ಜಿಲ್ಲೆಗಳಲ್ಲಿ...
ನವದೆಹಲಿ: ಕರ್ನಾಟಕದ ತುಮಕೂರು, ಮೈಸೂರು ಸೇರಿದಂತೆ ದೇಶದ 54 ಜಿಲ್ಲೆಗಳಲ್ಲಿ ನೇರ ನಗದ ವರ್ಗಾವಣೆ ಯೋಜನೆ (ಡಿಬಿಟಿಎಲ್) ಶನಿವಾರದಿಂದ ಮತ್ತೆ ಜಾರಿಯಾಗಲಿದೆ.
ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಗ್ರಾಹಕರ ಬ್ಯಾಂಕ್ ಖಾತೆಗೆ ಮೊತ್ತವನ್ನು ವರ್ಗಾಯಿಸಲಾಗುತ್ತದೆ. ನೇರ ನಗದು ವರ್ಗಾವಣೆ ಶನಿವಾರದಿಂದ ಮತ್ತೆ ಆರಂಭವಾಗಲಿದೆ.
ವೈಶಿಷ್ಟ್ಯ ಏನು?
- ಪರಿಷ್ಕೃತ ನಿಯಮದಲ್ಲಿ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗಿಲ್ಲ. ಆಧಾರ್ ಇಲ್ಲದವರ ಖಾತೆಗೂ ಸಬ್ಸಿಡಿ ವರ್ಗಾವಣೆಯಾಗಲಿದೆ. ಅವರು ಆಧಾರ್ ಹೊಂದಿದ ಬಳಿಕ ಅದನ್ನು ಸಬ್ಸಿಡಿ ಪಡೆಯಲು ಲಿಂಕ್ ಮಾಡಬೇಕಾಗುತ್ತದೆ.
- ಯೋಜನೆಗೆ ಹೊಂದಿಕೊಳ್ಳದವರಿಗೆ 3 ತಿಂಗಳ ಅವಕಾಶ ಕೊಡಲಾಗುತ್ತದೆ. ಈ ವೇಳೆಗೆ ಅವರಿಗೆ ಸಬ್ಸಿಡಿ ದರದಲ್ಲಿಯೇ ಸಿಲಿಂಡರ್ ನೀಡಲಾಗುತ್ತದೆ